ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

'ಮಿರ್ಜಾಪುರ್' ಬಾಕ್ಸ್ ಆಫೀಸ್ ಕಲೆಕ್ಷನ್: ಸೋಮವಾರದ ಪರೀಕ್ಷೆಯಲ್ಲಿ ಪಂಕಜ್ ತ್ರಿಪಾಠಿ ಪಾಸ್! ನಾಲ್ಕು ದಿನಗಳ ಗಳಿಕೆ ಎಷ್ಟು?

Mirzapur Movie Collection: 'ಮಿರ್ಜಾಪುರ್' ಸಿನಿಮಾವು ಮೊದಲ ಸೋಮವಾರದ (ಸೆ.7) ಗಲ್ಲಾಪೆಟ್ಟಿಗೆ ಪರೀಕ್ಷೆಯಲ್ಲಿ ಭರ್ಜರಿ ಯಶಸ್ಸು ಕಂಡಿದೆ. ಭಾರತದಲ್ಲಿ ನಾಲ್ಕನೇ ದಿನ 17.10 ಕೋಟಿ ರೂಪಾಯಿ ಗಳಿಸಿ, ಒಟ್ಟಾರೆ ಜಾಗತಿಕವಾಗಿ 154.05 ಕೋಟಿ ರೂಪಾಯಿ ಬಾಚಿಕೊಂಡಿದೆ.

'ಮಿರ್ಜಾಪುರ್' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ತನ್ನ ಅಬ್ಬರವನ್ನು ಮುಂದುವರಿಸಿದೆ. ಮೊದಲ ವಾರಾಂತ್ಯದಲ್ಲಿ ಭರ್ಜರಿ ಕಲೆಕ್ಷನ್‌ ಮಾಡಿದ ಈ ಚಿತ್ರ, ಮೊದಲ ಸೋಮವಾರದ ಬಾಕ್ಸ್ ಆಫೀಸ್ ಪರೀಕ್ಷೆಯನ್ನೂ ಯಶಸ್ವಿಯಾಗಿ ಪಾಸ್ ಮಾಡಿದೆ. ಯಶ್ ನಟನೆಯ ‘ಟಾಕ್ಸಿಕ್’ ಚಿತ್ರವು ತನ್ನ ಮೊದಲ ಸೋಮವಾರ ಗಳಿಸಿದ್ದಕ್ಕಿಂತ ಎರಡರಷ್ಟು ಮೊತ್ತವನ್ನು 'ಮಿರ್ಜಾಪುರ್' ಬಾಚಿಕೊಂಡಿದೆ. ಈ ಕ್ರೈಮ್ ಥ್ರಿಲ್ಲರ್ ಸಿನಿಮಾ ವಿಶ್ವಾದ್ಯಂತ ಈಗಾಗಲೇ 150 ಕೋಟಿ ರೂಪಾಯಿಗಳ ಗಡಿಯನ್ನು ದಾಟಿದೆ.

4ನೇ ದಿನ ಮಿರ್ಜಾಪುರ್ ಗಳಿಸಿದ್ದೆಷ್ಟು?

ಸ್ಯಾಕ್ನಿಲ್ಕ್ (Sacnilk) ವರದಿ ಪ್ರಕಾರ, ಸೋಮವಾರದಂದು 'ಮಿರ್ಜಾಪುರ್' ಭಾರತದಲ್ಲಿ 10,570 ಪ್ರದರ್ಶನಗಳಿಂದ ಒಟ್ಟು 17.10 ಕೋಟಿ ರೂಪಾಯಿ ನಿವ್ವಳ ಗಳಿಕೆ ದಾಖಲಿಸಿದೆ. ಇದರೊಂದಿಗೆ ಚಿತ್ರದ ದೇಶೀಯ ಒಟ್ಟು ಕಲೆಕ್ಷನ್ 113.95 ಕೋಟಿ ರೂಪಾಯಿಗೆ ತಲುಪಿದೆ. ಇನ್ನು ಚಿತ್ರದ ವಿಶ್ವಾದ್ಯಂತ ಒಟ್ಟು ಗಳಿಕೆ 154.05 ಕೋಟಿ ರೂಪಾಯಿಗಳಷ್ಟಾಗಿದೆ.

ಸೋಮವಾರ 'ಮಿರ್ಜಾಪುರ್' ಚಿತ್ರ ಹಿಂದಿ ಮಾರುಕಟ್ಟೆಯಲ್ಲಿ ಒಟ್ಟಾರೆ ಶೇ. 38.65ರಷ್ಟು ಚಿತ್ರಮಂದಿರ ಆಕ್ಯುಪೆನ್ಸಿ ಕಂಡಿದೆ. ಬೆಳಗಿನ ಪ್ರದರ್ಶನಗಳು ಶೇ. 20.15ರಷ್ಟು ಆಕ್ಯುಪೆನ್ಸಿಯೊಂದಿಗೆ ಆರಂಭವಾದರೂ, ದಿನ ಕಳೆದಂತೆ ಸ್ಥಿರ ಏರಿಕೆ ಕಂಡಿತು. ಮಧ್ಯಾಹ್ನ ಶೇ. 35.38, ಸಂಜೆ ಶೇ. 38.38 ಹಾಗೂ ರಾತ್ರಿಯ ಪ್ರದರ್ಶನಗಳಲ್ಲಿ ಶೇ. 60.69ರಷ್ಟು ದಾಖಲಾಗಿದೆ.

ಸ್ಟಾರ್ ನಟರ ಅಬ್ಬರವಿಲ್ಲದಿದ್ದರೂ, 'ಮಿರ್ಜಾಪುರ್' ಗಲ್ಲಾಪೆಟ್ಟಿಗೆಯಲ್ಲಿ ಗಟ್ಟಿಯಾಗಿ ನೆಲೆನಿಂತಿದೆ. ಭಾನುವಾರದ ಗಳಿಕೆಗೆ (36 ಕೋಟಿ ರೂ.) ಹೋಲಿಸಿದರೆ ಸೋಮವಾರದ ಗಳಿಕೆಯಲ್ಲಿ ಶೇ. 55.6ರಷ್ಟು ಕುಸಿತ ಕಂಡಿದ್ದರೂ, ಚಿತ್ರಮಂದಿರಗಳಲ್ಲಿ ತನ್ನ ಮೊದಲ ಸೋಮವಾರ ಕೇವಲ 7.65 ಕೋಟಿ ರೂ. ಗಳಿಸಿದ್ದ ‘ಟಾಕ್ಸಿಕ್’ ಚಿತ್ರಕ್ಕಿಂತ 'ಮಿರ್ಜಾಪುರ್' ಗಣನೀಯವಾಗಿ ಉತ್ತಮ ಪ್ರದರ್ಶನ ನೀಡಿದೆ.

ಜಮೀನಿಗಾಗಿ ಕಿರಿಕ್;‌ ಬಾಲಿವುಡ್‌ ನಟ ಪಂಕಜ್ ತ್ರಿಪಾಠಿ ಸಹೋದರನ ಮೇಲೆ ಮಾರಣಾಂತಿಕ ಹಲ್ಲೆ, ಆರೋಪಿ ಅರೆಸ್ಟ್‌!‌

‘ಭೂತ್ ಬಂಗ್ಲಾ’ ಚಿತ್ರವನ್ನು ಹಿಂದಿಕ್ಕಿದ ಪಂಕಜ್ ತ್ರಿಪಾಠಿ ಸಿನಿಮಾ

ನಿರ್ದೇಶಕ ಪ್ರಿಯದರ್ಶನ್ ಸಾರಥ್ಯದ, ಅಕ್ಷಯ್ ಕುಮಾರ್ ನಟನೆಯ ‘ಭೂತ್ ಬಂಗ್ಲಾ’ (6.75 ಕೋಟಿ ರೂ.) ಚಿತ್ರಕ್ಕಿಂತಲೂ 'ಮಿರ್ಜಾಪುರ್' ಮೊದಲ ಸೋಮವಾರ ಕಲೆಕ್ಷನ್ ಮಾಡಿದೆ. ಆದಾಗ್ಯೂ, ವರ್ಷದ ಅತಿ ದೊಡ್ಡ ಬಾಲಿವುಡ್ ಹಿಟ್ ಚಿತ್ರಗಳಾದ ನಿರ್ದೇಶಕ ಆದಿತ್ಯ ಧರ್ ಅವರ ‘ಧುರಂಧರ್: ದಿ ರಿವೆಂಜ್’ (65 ಕೋಟಿ ರೂ.) ಹಾಗೂ ಅನುರಾಗ್ ಸಿಂಗ್ ಅವರ ‘ಬಾರ್ಡರ್ 2’ (59 ಕೋಟಿ ರೂ.) ಮೊದಲ ಸೋಮವಾರದ ದಾಖಲೆಯನ್ನು ಸರಿಗಟ್ಟಲು 'ಮಿರ್ಜಾಪುರ್' ಚಿತ್ರಕ್ಕೆ ಸಾಧ್ಯವಾಗಲಿಲ್ಲ.

ಗುರುಮೀತ್ ಸಿಂಗ್ ನಿರ್ದೇಶನದ ಈ ಚಿತ್ರದಲ್ಲಿ ಪಂಕಜ್ ತ್ರಿಪಾಠಿ, ಅಲಿ ಫಜಲ್, ದಿವ್ಯೇಂದು, ಜಿತೇಂದ್ರ ಕುಮಾರ್, ರವಿ ಕಿಶನ್ ಮತ್ತು ರಸಿಕಾ ದುಗಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಜನಪ್ರಿಯ 'ಮಿರ್ಜಾಪುರ್' ವೆಬ್ ಸರಣಿಗೆ ಈ ಬಾರಿ ಸಿನಿಮಾ ರೂಪ ನೀಡಿ, ಚಿತ್ರತಂಡ ದೊಡ್ಡ ಗೆಲುವನ್ನೇ ದಾಖಲಿಸಿದೆ.