ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Vijay and Trisha Krishnan: ತ್ರಿಷಾ ಬಗ್ಗೆ ಬಹಿರಂಗ ವೇದಿಕೆಯಲ್ಲೇ ನಿರ್ದೇಶಕ ಪಾರ್ತಿಬನ್ ವ್ಯಂಗ್ಯ!

Vijay and Trisha Krishnan: ನಟ ಮತ್ತು ಟಿವಿಕೆ ಮುಖ್ಯಸ್ಥ ವಿಜಯ್ ಮತ್ತು ತ್ರಿಶಾ ಕೃಷ್ಣನ್ ಇತ್ತೀಚೆಗೆ ಚೆನ್ನೈನಲ್ಲಿ ನಡೆದ ವಿವಾಹ ಆರತಕ್ಷತೆಯಲ್ಲಿ ಭಾಗವಹಿಸಿದ್ದಾಗಿನಿಂದ ಭಾರಿ ಚರ್ಚೆಗಳು ಆಗುತ್ತಿವೆ. ವಿಜಯ್‌ ಪತ್ನಿ ಸಂಗೀತಾ ಸೊರ್ನಲಿಂಗಂ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ನಂತರ ಈ ಬೆಳವಣಿಗೆ ಆಗಿದ್ದು ವಿವಾದ ಸಷ್ಟಿಸಿದೆ. ನಟ, ನಿರ್ದೇಶಕ ಸಮುದ್ರಖನಿ ಬಳಿಕ ಇದೀಗ ಮತ್ತೊಬ್ಬ ನಟ, ನಿರ್ದೇಶಕ ಪಾರ್ತಿಬನ್ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಹಿರಂಗ ವೇದಿಕೆಯಲ್ಲೇ ತಿರುಗೇಟು ಕೊಟ್ಟಿದ್ದಾರೆ.

ನಿರ್ದೇಶಕ ಪಾರ್ತಿಬನ್

ನಟ ಮತ್ತು ಟಿವಿಕೆ ಮುಖ್ಯಸ್ಥ ವಿಜಯ್ (Vijay) ಮತ್ತು ತ್ರಿಶಾ ಕೃಷ್ಣನ್ (Trisha Krishnan) ಇತ್ತೀಚೆಗೆ ಚೆನ್ನೈನಲ್ಲಿ ನಡೆದ ವಿವಾಹ ಆರತಕ್ಷತೆಯಲ್ಲಿ ಭಾಗವಹಿಸಿದ್ದಾಗಿನಿಂದ ಭಾರಿ ಚರ್ಚೆಗಳು ಆಗುತ್ತಿವೆ. ವಿಜಯ್‌ ಪತ್ನಿ ಸಂಗೀತಾ ಸೊರ್ನಲಿಂಗಂ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ನಂತರ ಈ ಬೆಳವಣಿಗೆ ಆಗಿದ್ದು ವಿವಾದ ಸಷ್ಟಿಸಿದೆ. ನಟ, ನಿರ್ದೇಶಕ ಸಮುದ್ರಖನಿ ಬಳಿಕ ಇದೀಗ ಮತ್ತೊಬ್ಬ ನಟ, ನಿರ್ದೇಶಕ ಪಾರ್ತಿಬನ್ ( R Parthiban) ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಹಿರಂಗ ವೇದಿಕೆಯಲ್ಲೇ ತಿರುಗೇಟು ಕೊಟ್ಟಿದ್ದಾರೆ.

ನಿರ್ದೇಶಕ, ನಟ ಪಾರ್ತಿಬನ್ ಬಹಿರಂಗ ವೇದಿಕೆಯಲ್ಲೇ ತ್ರಿಶಾ ಬಗ್ಗೆ ವ್ಯಂಗ್ಯವಾಡಿದ್ದಾರೆ.ಇತ್ತೀಚೆಗೆ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ, ಪಾರ್ತಿಬನ್ ಅವರಿಗೆ ತ್ರಿಶಾ ಬಗ್ಗೆ ಒಂದು ಪ್ರಶ್ನೆ ಕೇಳಲಾಯಿತು. ಮಣಿರತ್ನಂ ಅವರ ಪೊನ್ನಿಯಿನ್ ಸೆಲ್ವನ್ ಚಿತ್ರಗಳಲ್ಲಿ, ತ್ರಿಶಾ ಕುಂಡವೈ ಪಾತ್ರವನ್ನು ನಿರ್ವಹಿಸಿದರೆ, ಪಾರ್ತಿಬನ್ ಎರಡನೇ ಚಿತ್ರದಲ್ಲಿ ಚಿನ್ನ ಪಜುವೆಟ್ಟರಾಯರ್ ಪಾತ್ರವನ್ನು ನಿರ್ವಹಿಸಿದರು.

ಇದನ್ನೂ ಓದಿ: Allu Arjun: ವಿವಾಹ ವಾರ್ಷಿಕೋತ್ಸವಕ್ಕೆ ಪತ್ನಿ ಸ್ನೇಹಾಗೆ ದುಬಾರಿ ಕಾರು ಗಿಫ್ಟ್‌ ಕೊಟ್ಟ ಅಲ್ಲು ಅರ್ಜುನ್

"ನಿಮ್ಮ ಕುಂಡವೈ ಬಗ್ಗೆ ನಿಮ್ಮ ಅಭಿಪ್ರಾಯವೇನು?" ಎಂದು ಕೇಳಿದಾಗ ಅವರು ತಕ್ಷಣ ವ್ಯಂಗ್ಯವಾಡಿದರು, "ಈ ಕುಂಡವೈಯನ್ನು ಕೆಲವು ದಿನಗಳವರೆಗೆ ಮನೆಯಲ್ಲಿ ಇಡಬೇಕು. ಅದು ಒಳ್ಳೆಯದು. ಅವರನ್ನು ಹೊರಗೆ ಬರಲು ಬಿಡಬೇಡಿ."ಎಂದು ವ್ಯಂಗ್ಯವಾಡಿದ್ದಾರೆ. ಈ ವಿಡಿಯೋ ವೈರಲ್ ಆಗ್ತಿದೆ. ಕೆಲ ಹಿಟ್ ಸಿನಿಮಾಗಳನ್ನು ಕಟ್ಟಿಕೊಟ್ಟಿರುವ ಪಾರ್ತಿಬನ್ ಇತ್ತೀಚೆಗೆ ನಟರಾಗಿ ಹೆಚ್ಚು ಗುರ್ತಿಸಿಕೊಂಡಿದ್ದಾರೆ.



ಮೌನ ಮುರಿದ ವಿಜಯ್‌

ಶನಿವಾರ ಟಿವಿಕೆ ಆಯೋಜಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ವಿಜಯ್ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡುತ್ತಾ, "ಇತ್ತೀಚಿನ ದಿನಗಳಲ್ಲಿ ಕೆಲವು ಸಮಸ್ಯೆಗಳು ಶುರುವಾಗಿವೆ, ಅಲ್ಲವೇ? ನೀವೆಲ್ಲರೂ ಆ ಆರೋಪಗಳ ವಿರುದ್ಧ ಹೋರಾಡುವುದರ ಬಗ್ಗೆ ನಾನು ನೋಡುತ್ತಿದ್ದೇನೆ. ಇದೆಲ್ಲ ನೋಡಿದಾಗ ನನಗೆ ನೋವಾಗುತ್ತದೆ. ಅದನ್ನೆಲ್ಲಾ ನಾನು ನೋಡಿಕೊಳ್ಳುತ್ತೇನೆ. ಜನರ ಸಮಸ್ಯೆಗಳಲ್ಲಿ ಭಾಗಿಯಾಗೋಣ. ಆ ಸಮಸ್ಯೆಯ ಬಗ್ಗೆ ನೋಯಿಸಿಕೊಳ್ಳಬೇಡಿ - ಅದರ ಬಗ್ಗೆ ತಲೆಕೆಡಿಸಿಕೊಳ್ಳುವುದು ಯೋಗ್ಯವಲ್ಲ. ಆತ್ಮವಿಶ್ವಾಸದಿಂದಿರಿ ಎಂದು ಹೇಳಿದರು.

'ದಾದಾ ಈಸ್ ಬ್ಯಾಕ್' ಎಂಬ ಕನ್ನಡ ಚಿತ್ರದಲ್ಲಿ ಕೂಡ ಪಾರ್ತಿಬನ್ ನಟಿಸಿದ್ದರು. ಕಳೆದ ವರ್ಷ ಬಂದ 'ಇಡ್ಲಿ ಕಡೈ' ಚಿತ್ರದಲ್ಲಿ ಪೊಲೀಸ್ ಆಫೀಸರ್ ಪಾತ್ರದಲ್ಲಿ ಮಿಂಚಿದ್ದರು. ಒಟ್ಟಾರೆ ಸಿನಿಮಾ ತಾರೆಯರೇ ವಿಜಯ್ ಹಾಗೂ ತ್ರಿಶಾ ಸಂಬಂಧದ ಬಗ್ಗೆ ಮಾತನಾಡುತ್ತಿರುವುದು ಭಾರೀ ಚರ್ಚೆ ಹುಟ್ಟಾಕ್ಕಿದೆ.

ಇದನ್ನೂ ಓದಿ: Suvarna Sakhi: ಮಹಿಳಾ ಆಟೋ ಡ್ರೈವರ್ಸ್‌ ಗೌರವಿಸಿದ ಸ್ಟಾರ್‌ ಸುವರ್ಣ ; ಏನಿದು ʻಸುವರ್ಣಮಹಿಳಾ ಸಖಿʼ?

ನಟ, ನಿರ್ದೇಶಕ ಸಮುದ್ರಖನಿ ಬಳಿಕ ಇದೀಗ ಮತ್ತೊಬ್ಬ ನಟ, ನಿರ್ದೇಶಕ ಪಾರ್ತಿಬನ್ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಹಿರಂಗ ವೇದಿಕೆಯಲ್ಲೇ ತಿರುಗೇಟು ಕೊಟ್ಟಿದ್ದಾರೆ.

Yashaswi Devadiga

View all posts by this author