ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Pavithra Gowda: ರೇಣುಕಾ ಸ್ವಾಮಿ ಕೊಲೆ ಆರೋಪಿ ಪವಿತ್ರಾ ಗೌಡ ಮಾಜಿ ಪತಿ ಬಗ್ಗೆ ಕೇಳಿಬಂತು ಬ್ರೇಕಿಂಗ್‌ ನ್ಯೂಸ್!‌ ಸಂಜಯ್‌ ಸಿಂಗ್‌ಗೆ ಏನಾಯ್ತು?

Pavithra Gowda: ಕಳೆದ 10 ವರ್ಷಗಳಿಂದ ನಟ ದರ್ಶನ್ ಮತ್ತು ಪವಿತ್ರಾ ಗೌಡ ಸಂಬಂಧ ಹೊಂದಿದ್ದಾರೆ. ಹಾಗಂತ ಸ್ವತಃ ಪವಿತ್ರಾ ಗೌಡ ಅವರೇ ಸೋಷಿಯಲ್ ಮೀಡಿಯಾದಲ್ಲಿ ಫೋಟೋಗಳ ಸಮೇತ ರಿವೀಲ್ ಮಾಡಿದ್ದರು. ಅಸಲಿಗೆ, 2007ರಲ್ಲಿಯೇ ಪವಿತ್ರಾ ಗೌಡಗೆ ಮದುವೆ ಆಗಿತ್ತು. ಅದೂ ಉತ್ತರ ಪ್ರದೇಶ ಮೂಲದ ಸಂಜಯ್ ಸಿಂಗ್ ಎಂಬುವರೊಂದಿಗೆ. ಸಂಜಯ್ ಸಿಂಗ್ (Sanjay Singh) ಎಂಬುವರನ್ನ ಪ್ರೀತಿಸಿ ಪವಿತ್ರಾ ಗೌಡ ವಿವಾಹವಾಗಿದ್ದರು.

ಪವಿತ್ರಾ ಗೌಡ

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ (Renukaswamy Case) ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಪವಿತ್ರಾ ಗೌಡ ಅವರ ಮಾಜಿ ಪತಿ ಸಂಜಯ್ ಸಿಂಗ್ (Sanjay Singh) ನಿಧನರಾಗಿದ್ದಾರೆ ಎಂದು ವರದಿ ಆಗಿದೆ. ಕಳೆದ 10 ವರ್ಷಗಳಿಂದ ನಟ ದರ್ಶನ್ ಮತ್ತು ಪವಿತ್ರಾ ಗೌಡ ಸಂಬಂಧ ಹೊಂದಿದ್ದಾರೆ. ಹಾಗಂತ ಸ್ವತಃ ಪವಿತ್ರಾ ಗೌಡ ಅವರೇ ಸೋಷಿಯಲ್ ಮೀಡಿಯಾದಲ್ಲಿ ಫೋಟೋಗಳ ಸಮೇತ ರಿವೀಲ್ ಮಾಡಿದ್ದರು. ಅಸಲಿಗೆ, 2007ರಲ್ಲಿಯೇ ಪವಿತ್ರಾ ಗೌಡಗೆ ಮದುವೆ ಆಗಿತ್ತು. ಅದೂ ಉತ್ತರ ಪ್ರದೇಶ ಮೂಲದ ಸಂಜಯ್ ಸಿಂಗ್ ಎಂಬುವರೊಂದಿಗೆ. ಸಂಜಯ್ ಸಿಂಗ್ (Sanjay Singh) ಎಂಬುವರನ್ನ ಪ್ರೀತಿಸಿ ಪವಿತ್ರಾ ಗೌಡ ವಿವಾಹವಾಗಿದ್ದರು.

ಪವಿತ್ರಾ ಗೌಡ ಮಾಜಿ ಗಂಡ ಇನ್ನಿಲ್ಲ

2009ರಲ್ಲಿ ಸಂಜಯ್ ಸಿಂಗ್ - ಪವಿತ್ರಾ ಗೌಡ ದಂಪತಿಗೆ ಹೆಣ್ಣು ಮಗು ಜನಿಸಿತು. 2013ರಲ್ಲಿ ಪವಿತ್ರಾ ಗೌಡ - ಸಂಜಯ್ ಸಿಂಗ್ ವಿಚ್ಛೇದನ ಪಡೆದರು. 7-8 ತಿಂಗಳ ಹಿಂದೆಯೇ ಅವರು ಮೃತರಾಗಿದ್ದು, ವಿಷಯ ಮಾತ್ರ ತಡವಾಗಿ ಬೆಳಕಿಗೆ ಬಂದಿದೆ ಎನ್ನಲಾಗುತ್ತಿದೆ. ಹಲವಾರು ವರ್ಷಗಳಿಂದ ಅನಾರೋಗ್ಯ ತುತ್ತಾಗಿದ್ದ ಅವರು, ಚಿಕಿತ್ಸೆ ಫಲಕಾರಿಯಾಗದೇ ರಾಜಸ್ಥಾನದಲ್ಲಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಪವಿತ್ರಾ ಗೌಡ ಬಂಧನವಾದಾಗ, ಸಂಜಯ್ ಸಿಂಗ್ ಬೆಂಗಳೂರಿಗೆ ಬಂದಿದ್ದರು.

ಇದನ್ನೂ ಓದಿ: Spirit release : ಪ್ರಭಾಸ್‌ ʻಸ್ಪಿರಿಟ್ʼ ಪೋಸ್ಟ್‌ಪೋನ್‌? ಏನಿದು ಗಾಸಿಪ್‌?

ಪ್ರಕರಣ ಸಂದರ್ಭದಲ್ಲಿ ಸಂಜಯ್‌ ಸಿಂಗ್‌ ಮಾಧ್ಯಮಗಳೊಂದಿಗೆ ಮಾತನಾಡಿದ್ದರು. ಪವಿತ್ರಾ ಗೌಡ ಮಾಜಿ ಪತಿ ಸಂಜಯ್ ಸಿಂಗ್ ಪ್ರತಿಕ್ರಿಯೆ ಹೀಗಿದೆ. " ಹೌದು.. ನಾನು ಯುಪಿಯ ಹುಡುಗ. 2002ರಲ್ಲಿ ಬೆಂಗಳೂರಿಗೆ ಬಂದಿದ್ದೆ.

ಆ ಟೈಮ್‌ನಲ್ಲಿ ನನಗೆ ಪವಿತ್ರಾ ಗೌಡ ಪರಿಚಯ ಆಗಿ, ಪ್ರೀತಿ ಆಗಿ, ಮದುವೆ ಆಗಿರೋದು. ಮಗಳ ಜೊತೆ ವರ್ಷಕ್ಕೆ ಒಂದು ಸಾರಿನೋ.. ಎರಡು ವರ್ಷಕ್ಕೆ ಒಂದು ಸಾರಿನೋ ಫೋನ್‌ನಲ್ಲಿ ಮಾತಾಡುತ್ತೀನಿ. ಆದರೆ, ಡೈರೆಕ್ಟ್ ಆಗಿ ಮಾತಾಡೋಕೆ ಆಗಲ್ಲ.

ಇದನ್ನೂ ಓದಿ: Samantha Ruth Prabhu: ಬೇಬಿಮೂನ್ ಟ್ರಿಪ್‌ನಲ್ಲಿ ಸಮಂತಾ ದಂಪತಿ; ಫೋಟೊ ಭಾರಿ ವೈರಲ್

ಯಾಕಂದ್ರೆ ಅವಳ ಫೋನ್‌ ನಂಬರ್ ನನ್ನ ಬಳಿ ಡೈರೆಕ್ಟ್ ಆಗಿಲ್ಲ. ನಮ್ಮ ಅತ್ತೆ ಮಾವನಿಗೆ ಫೋನ್ ಮಾಡಿದರೆ, ಮಗಳ ಬಳಿ ಮಾತಾಡಬಹುದು." ಎಂದು ಹೇಳಿದ್ದರು.

Yashaswi Devadiga

View all posts by this author