ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Pawan Wadeyar: ವಿಜಯ ರಾಘವೇಂದ್ರ ಸಿನಿಮಾಗೆ ಪವನ್ ಒಡೆಯರ್ ಸಾಥ್!

Vijay Raghavendra: ನಿರ್ದೇಶನ‌ ಜೊತೆಗೆ ನಿರ್ಮಾಣದಲ್ಲಿಯೂ ಬ್ಯುಸಿಯಾಗಿರುವ ಪವನ್ ಒಡೆಯರ್ ಈಗ ಸಿನಿಮಾಗಳ ಪ್ರೆಸೆಂಟ್ ಕೈ ಹಾಕಿದ್ದಾರೆ. ಅದರ ಮೊದಲ ಭಾಗವೆಂಬಂತೆ ಸೆಕೆಂಡ್ ಕೇಸ್ ಆಫ್ ಸೀತಾರಾಮ್ ಸಿನಿಮಾವನ್ನು ಪ್ರೆಸೆಂಟ್ ಮಾಡಲು ಮುಂದಾಗಿದ್ದಾರೆ.ಜೊತೆಗೆ ಪವನ್ ನಿರ್ಮಾಣದಲ್ಲಿಯೂ ಹೆಸರು ಮಾಡಿದ್ದಾರೆ. ಹೊಸ ಪ್ರತಿಭೆಗಳಿಗೆ ಸಿನಿಮಾ ನಿರ್ಮಾಣ‌ ಮಾಡುತ್ತಿರುವ ಅವರೀಗ ಹೊಸ ಹೆಜ್ಜೆ ಇಟ್ಟಿದ್ದಾರೆ.

ಪವನ್‌ ಒಡೆಯರ್‌

ಸ್ಯಾಂಡಲ್‌ವುಡ್‌ನ ಯಶಸ್ವಿ ನಿರ್ದೇಶಕರ ಪಟ್ಟಿಯಲ್ಲಿ ಸ್ಥಾನ ಪಡೆದವರ ಪೈಕಿ ಪವನ್‌ ಒಡೆಯರ್‌ (pawan wadeyar) ಒಬ್ಬರು. ಅವರು ಗೂಗ್ಲಿ, ರಣವಿಕ್ರಮ, ಗೋವಿಂದಾಯ ನಮಃ ಸೇರಿದಂತೆ ಹಲವು ಸೂಪರ್ ಹಿಟ್ ಚಿತ್ರಗಳನ್ನು ಕೊಟ್ಟಿದ್ದಾರೆ. ಜೊತೆಗೆ ಪವನ್ ನಿರ್ಮಾಣದಲ್ಲಿಯೂ ಹೆಸರು ಮಾಡಿದ್ದಾರೆ. ಹೊಸ ಪ್ರತಿಭೆಗಳಿಗೆ ಸಿನಿಮಾ ನಿರ್ಮಾಣ‌ ಮಾಡುತ್ತಿರುವ ಅವರೀಗ ಹೊಸ ಹೆಜ್ಜೆ ಇಟ್ಟಿದ್ದಾರೆ. ಪವನ್ ಒಡೆಯರ್ ಸಿನಿಮಾ ಪ್ರೆಸೆಂಟ್‌ಗೆ ( Presenter) ಇಳಿದಿದ್ದಾರೆ.

ನಿರ್ದೇಶನ‌ ಜೊತೆಗೆ ನಿರ್ಮಾಣದಲ್ಲಿಯೂ ಬ್ಯುಸಿಯಾಗಿರುವ ಪವನ್ ಒಡೆಯರ್ ಈಗ ಸಿನಿಮಾಗಳ ಪ್ರೆಸೆಂಟ್ ಕೈ ಹಾಕಿದ್ದಾರೆ. ಅದರ ಮೊದಲ ಭಾಗವೆಂಬಂತೆ ಸೆಕೆಂಡ್ ಕೇಸ್ ಆಫ್ ಸೀತಾರಾಮ್ ಸಿನಿಮಾವನ್ನು ಪ್ರೆಸೆಂಟ್ ಮಾಡಲು ಮುಂದಾಗಿದ್ದಾರೆ.

ಇದನ್ನೂ ಓದಿ: OTT Releases This Week: ಮಾರ್ಕ್‌, 45 ಸೇರಿದಂತೆ ಈ ವಾರ ಒಟಿಟಿಯಲ್ಲಿ ಸೌತ್‌ ಸಿನಿಮಾಗಳದ್ದೇ ಹಬ್ಬ! ಯಾವೆಲ್ಲ ಮೂವೀಸ್‌ ಎಂಟ್ರಿ?

ಪವನ್ ಒಡೆಯರ್ ಥ್ರಿಲ್

2021ರಲ್ಲಿ ತೆರೆಕಂಡ ವಿಜಯ ರಾಘವೇಂದ್ರ ನಟನೆಯ ‘ಸೀತಾರಾಮ್‌ ಬಿನೋಯ್‌’ ಸಿನಿಮಾ ಸೀಕ್ವೆಲ್‌ ಆಗಿರುವ 'ಸೆಕೆಂಡ್‌ ಕೇಸ್‌ ಆಫ್‌ ಸೀತಾರಾಮ್‌’ ನೋಡಿ ಪವನ್ ಒಡೆಯರ್ ಥ್ರಿಲ್ ಆಗಿದ್ದಾರೆ. ‌ಸೀಟಿನ ತುದಿಗೆ ಪ್ರೇಕ್ಷಕರನ್ನು‌ ಕುರಿಸುವ ಈ‌‌ ಚಿತ್ರವನ್ನು ತಾವೇ‌ ಪ್ರೆಸೆಂಟ್ ಮಾಡುವುದಾಗಿ ಘೋಷಣೆ ಮಾಡಿದ್ದಾರೆ.



ವಿಜಯ್ ರಾಘವೇಂದ್ರ ಈ ಚಿತ್ರದಲ್ಲಿ ಹೀರೋ ಆಗಿ ನಟಿಸಿದ್ದಾರೆ. ದೇವಿಪ್ರಸಾದ್‌ ಶೆಟ್ಟಿ ಈ ಸಿನಿಮಾದ ಕಥೆ ಬರೆದಿದ್ದು, ನಿರ್ದೇಶನ‌ ಮಾಡಿದ್ದಾರೆ.‌ಜೊತೆಗೆ ಸಾತ್ವಿಕ್‌ ಹೆಬ್ಬಾರ್‌ ಜೊತೆ ನಿರ್ಮಾಣದಲ್ಲೂ ಕೈಜೋಡಿಸಿದ್ದಾರೆ.

ಇದನ್ನೂ ಓದಿ: Mark OTT: ಒಟಿಟಿಗೆ ಬರುತ್ತಿದೆ ಕಿಚ್ಚನ ‘ಮಾರ್ಕ್‌’ ಸಿನಿಮಾ; ಸ್ಟ್ರೀಮಿಂಗ್‌ ಎಲ್ಲಿ?

ಸೆಕೆಂಡ್ ಕೇಸ್ ಆಫ್ ಸೀತಾರಾಮ್ ಸಿನಿಮಾಗೆ ಹೇಮಂತ್ ಆಚಾರ್ ಛಾಯಾಗ್ರಹಣ, ನವನೀತ್ ಶ್ಯಾಮ್ ಸಂಗೀತ ನಿರ್ದೇಶನ, ಶಶಾಂಕ್ ನಾರಾಯಣ್ ಸಂಕಲನ, ಭವಾನಿ ಶಂಕರ್‌ ಕಲಾ ನಿರ್ದೇಶನದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.

Yashaswi Devadiga

View all posts by this author