ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಶಾಕಾಹಾರಿ ಆಹಾರ, ಬೆಳ್ಳಂಬೆಳಗ್ಗೆಯೇ ವರ್ಕ್‌ಔಟ್; ʻಪೆದ್ದಿʼ ಚಿತ್ರದ ಪೈಲ್ವಾನ್ ಲುಕ್‌ಗಾಗಿ ರಾಮ್ ಚರಣ್ 8 ತಿಂಗಳ ಶ್ರಮ

Ram Charan Peddi Movie: ನಟ ರಾಮ್ ಚರಣ್ ಅವರು ಪೆದ್ದಿ ಚಿತ್ರದ ಪೈಲ್ವಾನ್‌ ಪಾತ್ರಕ್ಕಾಗಿ ಕಳೆದ 8 ತಿಂಗಳುಗಳಿಂದ ಕಠಿಣ ಪರಿಶ್ರಮ ಪಟ್ಟಿದ್ದಾರೆ. ಅಯ್ಯಪ್ಪ ದೀಕ್ಷೆಯ ಅವಧಿಯಲ್ಲೇ ಕಟ್ಟುನಿಟ್ಟಾದ ಶಾಖಾಹಾರಿ ಆಹಾರ ಸೇವಿಸಿ, ಪ್ರತಿದಿನ ಬೆಳಿಗ್ಗೆ 5:30ಕ್ಕೆ ವರ್ಕ್‌ಔಟ್ ಮಾಡುವ ಮೂಲಕ ಪೈಲ್ವಾನ್ ಮೈಕಟ್ಟು ಪಡೆದಿದ್ದಾರೆ.

`ಗ್ಲೋಬಲ್ ಸ್ಟಾರ್' ರಾಮ್ ಚರಣ್ ನಟಿಸುತ್ತಿರುವ ಬಹುನಿರೀಕ್ಷಿತ `ಪೆದ್ದಿ' ಸಿನಿಮಾದ ಸ್ಪೆಷಲ್ ಗ್ಲಿಂಪ್ಸ್ ಈಚೆಗೆ ರಿಲೀಸ್‌ ಆಗಿತ್ತು. ರಾಮ್ ಚರಣ್ ಹುಟ್ಟುಹಬ್ಬದ (ಮಾ..27) ಪ್ರಯುಕ್ತ ಬಿಡುಗಡೆಯಾದ ಗ್ಲಿಂಪ್ಸ್‌ನಲ್ಲಿ ದೇಹ ಹುರಿಗೊಳಿಸಿ ಖಡಕ್ ಪೈಲ್ವಾನ್ ಅವತಾರದಲ್ಲಿ ರಾಮ್ ಚರಣ್ ಕಾಣಿಸಿಕೊಂಡಿದ್ದರು. ಇದನ್ನ ಕಂಡವರು ವಾವ್‌ ಎಂದು ಉದ್ಘರಿಸಿದ್ದರು. ಅದರಲ್ಲೂ ರಾಮ್‌ ಚರಣ್ ಅವರ ಈ ಪೈಲ್ವಾನ್ ಅವತಾರ ಎಲ್ಲರಿಗೂ ಶಾಕ್‌ ನೀಡಿತ್ತು. ಅಂದಹಾಗೆ, ಅದಕ್ಕಾಗಿ ರಾಮ್‌ ಚರಣ್ ಅವರು ಸಾಕಷ್ಟು ಎಫರ್ಟ್‌ ಹಾಕಿದ್ದಾರೆ.

ಶಾಖಾಹಾರಿ ಆಹಾರ ಸೇವನೆ

ಹೌದು, ಇದೊಂದು ಪೈಲ್ವಾನ್‌ ಲುಕ್ ಪಡೆಯುವುದಕ್ಕಾಗಿ ಕಳೆದ ಎಂಟು ತಿಂಗಳುಗಳಿಂದ ಪ್ರತಿದಿನವೂ ಕಠಿಣ ತರಬೇತಿಯನ್ನು ಪಡೆದುಕೊಂಡಿದ್ದರಂತೆ ರಾಮ್‌ ಚರಣ್. ವಿಶೇಷವೆಂದರೆ, ಅವರು ಅಯ್ಯಪ್ಪ ದೀಕ್ಷೆ ಪಾಲನೆ ಮಾಡುವ ಅವಧಿಯಲ್ಲೇ ಈ ರೀತಿ ದೇಹವನ್ನು ಬೆಳೆಸಿದ್ದಾರೆ. ಈ ಅವಧಿಯಲ್ಲಿ ಅವರು ಕಟ್ಟುನಿಟ್ಟಾದ ಶಾಖಾಹಾರಿ ಆಹಾರವನ್ನು ಸೇವಿಸುತ್ತಿದ್ದರು ಮತ್ತು ಪ್ರತಿದಿನ ಬೆಳಿಗ್ಗೆ 5:30ಕ್ಕೆ ಎದ್ದು ವರ್ಕ್‌ಔಟ್ ಮಾಡುತ್ತಿದ್ದರು. ತಮ್ಮ ಸಾಂಪ್ರದಾಯಿಕ ಮೌಲ್ಯಗಳನ್ನು ಬಿಟ್ಟುಕೊಡದೆಯೇ ಪಾತ್ರಕ್ಕೆ ಬೇಕಾದ ಮೈಕಟ್ಟು ಪಡೆಯುವಲ್ಲಿ ಅವರು ಯಶಸ್ವಿಯಾಗಿದ್ದಾರೆ ಎಂಬುದು ಚಿತ್ರತಂಡದಿಂದ ಕೇಳಿಬಂದ ಮೆಚ್ಚುಗೆ ಮಾತು.

ಒಂದೇ ಮಾತಿಗೆ 40 ಲಕ್ಷ ರೂ. ಕಳುಹಿಸಿಕೊಟ್ಟಿದ್ದ ನಟ ರಾಮ್‌ ಚರಣ್;‌ ಚಿರು ಪುತ್ರನ ಉದಾರತೆಯನ್ನು ಕೊಂಡಾಡಿದ ಡ್ಯಾನ್ಸ್‌ ಮಾಸ್ಟರ್‌

ಆರಂಭದಲ್ಲಿ ರಾಮ್‌ ಚರಣ್‌ ಅವರ ಪಾತ್ರಕ್ಕೆ ಕ್ರಿಕೆಟ್ ಹಿನ್ನೆಲೆ ಇರುವುದು ಗೊತ್ತಾಗಿತ್ತು. ಆದರೆ ಈಗಿನ ಝಲಕ್‌ಗಳಲ್ಲಿ ಅವರು ಕುಸ್ತಿ ತರಬೇತಿ ಪಡೆಯುತ್ತಿರುವುದು ಕಂಡುಬಂದಿದೆ. ಸಿನಿಮಾದಲ್ಲಿ ಅವರು ಯಾವ ಮುಖ್ಯ ಕ್ರೀಡೆಯಲ್ಲಿ ಭಾಗಿಯಾಗುತ್ತಾರೆ ಎಂಬುದೇ ಈಗ ನಿಗೂಢವಾಗಿದ್ದು, ಬೆಳ್ಳಿತೆರೆಯ ಮೇಲೆ ಎಲ್ಲದಕ್ಕೂ ಉತ್ತರ ಸಿಗಲಿದೆ.‌

Peddi Pehelwan Glimpse: ʻಪೆದ್ದಿʼ ಹೊಸ ಗ್ಲಿಂಪ್ಸ್ ಔಟ್‌; ರಾಮ್‌ ಚರಣ್‌ ರಗಡ್‌ ಲುಕ್‌ಗೆ ಫ್ಯಾನ್ಸ್‌ ಫಿದಾ

ಎ. ಆರ್. ರೆಹಮಾನ್ ಸಂಗೀತ ನೀಡಿರುವ 'ಪೆದ್ದಿ' ಚಿತ್ರದ ಹಾಡುಗಳು ಈಗಾಗಲೇ ಜಾಗತಿಕ ಮಟ್ಟದಲ್ಲಿ ಹಿಟ್ ಆಗಿದ್ದು, ಏಪ್ರಿಲ್ 30 ಈ ಸಿನಿಮಾ ತೆರೆಕಾಣಲು ಸಜ್ಜಾಗಿದೆ. ಬುಚ್ಚಿ ಬಾಬು ಸನಾ ನಿರ್ದೇಶನದ, ವೆಂಕಟ ಸತೀಶ್ ಕಿಲಾರು ನಿರ್ಮಾಣದ ಈ ಕ್ರೀಡಾ ಆಧಾರಿತ ಮಹತ್ವಾಕಾಂಕ್ಷಿ ಚಿತ್ರದಲ್ಲಿ ಜಾಹ್ನವಿ ಕಪೂರ್‌ ನಾಯಕಿಯಾಗಿದ್ದಾರೆ. ಶಿವರಾಜ್‌ಕುಮಾರ್ ಅವರು ಸ್ಪೆಷಲ್ ರೋಲ್ ಪ್ಲೇ ಮಾಡಿದ್ದು, ಇನ್ನುಳಿದಂತೆ, ಜಗಪತಿ ಬಾಬು, ದಿವೇಂದು ಶರ್ಮಾ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ಮೈತ್ರಿ ಮೂವೀ ಮೇಕರ್ಸ್ ಮತ್ತು ಸುಕುಮಾರ್ ರೈಟಿಂಗ್ಸ್ ಬ್ಯಾನರ್‌ಗಳು ಚಿತ್ರಕ್ಕೆ ಬೆಂಬಲವಾಗಿ ನಿಂತಿವೆ. ಆರ್. ರತ್ನವೇಲು ಛಾಯಾಗ್ರಹಣ ಮಾಡುತ್ತಿದ್ದಾರೆ.