ಹೈದರಾಬಾದ್: ಬಾಲಿವುಡ್ನ ಹಲವು ಚಿತ್ರಗಳಲ್ಲಿ ನಟಿಸಿರುವ ಬಹುಭಾಷಾ ನಟಿ ಪೂಜಾ ಹೆಗ್ಡೆ (Pooja Hegde)ದಕ್ಷಿಣ ಭಾರತದ ಸಿನಿಮಾಗಳಲ್ಲಿಯೂ ಟಾಪ್ ನಾಯಕಿಯರಲ್ಲಿ ಒಬ್ಬರು ಎನಿಸಿಕೊಂಡಿದ್ದಾರೆ. ಒಂದು ಕಾಲದಲ್ಲಿ ಅವರು ಯಶಸ್ವಿ ಸಿನಿಮಾಗಳನ್ನು ನೀಡಿ ಟಾಪ್ ಒನ್ ಸ್ಥಾನದಲ್ಲಿದ್ದರು. ಆದರೆ ಇತ್ತೀಚೆಗೆ ಅವರು ದಕ್ಷಿಣ ಭಾರತದ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವುದನ್ನು ಕಡಿಮೆ ಮಾಡಿದ್ದರು. ಈಗ ಮತ್ತೆ ಅವರು ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ.ಇತ್ತೀಚೆಗೆ ಸೂಪರ್‌ಸ್ಟಾರ್ ರಜನಿಕಾಂತ್ ನಟಿಸಿದ್ದ 'ಕೂಲಿ' ತಮಿಳು ಸಿನಿಮಾದ ʼಮೋನಿಕಾʼ ಹಾಡಿನಲ್ಲಿ ಕಾಣಿಸಿಕೊಂಡಿದ್ದ ಪೂಜಾ ಹೆಗ್ಡೆ ಹೊಸ ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ. ದುಲ್ಕರ್ ಸಲ್ಮಾನ್‌ಗೆ ಜೋಡಿಯಾಗಿ ತೆಲುಗು ಚಿತ್ರರಂಗಕ್ಕೆ ಮರಳುತ್ತಿದ್ದಾರೆ. ಸದ್ಯ ಈ ವಿಚಾರ ತಿಳಿದು ಫ್ಯಾನ್ಸ್ ಎಕ್ಸೈಟ್ ಆಗಿದ್ದಾರೆ.
ಮಲಯಾಳಂ ನಟ ದುಲ್ಖರ್ ಸಲ್ಮಾನ್‌ಗೆ ನಾಯಕಿಯಾಗಿ ಪೂಜಾ ಹೆಗ್ಡೆ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ತಾತ್ಕಾಲಿಕವಾಗಿ 'DQ41' ಎಂದು ಹೆಸರಿಡಲಾಗಿದೆ. ಚಿತ್ರದ ಅಧಿಕೃತ ಘೋಷಣೆಯನ್ನು ವಿಶೇಷ ವಿಡಿಯೊ ಮೂಲಕ ಶೇರ್ ಮಾಡಲಾಗಿದೆ. SLV ಸಿನಿಮಾಸ್ ತಮ್ಮ ಎಕ್ಸ್ ಖಾತೆಯಲ್ಲಿ ಮೇಕಿಂಗ್ ವಿಡಿಯೊವನ್ನು ಶೇರ್ ಮಾಡಿದ್ದು ಪೂಜಾ ಹೆಗ್ಡೆಯನ್ನು ಸ್ವಾಗತಿಸಿದೆ. ವಿಡಿಯೊದಲ್ಲಿ ದುಲ್ಖರ್ ಸಲ್ಮಾನ್, ಪೂಜಾ ಹೆಗ್ಡೆ ಹಾಗೂ ಶೂಟಿಂಗ್ ಸೆಟ್‌ನ ಕೆಲವು ದೃಶ್ಯಗಳನ್ನು ತೋರಿಸಲಾಗಿದೆ. ಪೂಜಾ ಹೆಗ್ಡೆ DQ41 ಸಿನಿಮಾದ ನಾಯಕಿಯಾಗಿ ನಟಿಸಲಿದ್ದಾರೆ ಎಂದು ಚಿತ್ರತಂಡ ಕೂಡ ಕನ್ಫರ್ಮ್ ಮಾಡಿದೆ.
ಈ ಚಿತ್ರವನ್ನು ಹೊಸ ಪ್ರತಿಭೆ ರವಿ ನೆಲಕುದಿತಿ ನಿರ್ದೇಶನ ಮಾಡಲಿದ್ದು 'ದಸರಾ' ಚಿತ್ರ ನಿರ್ಮಿ ಸಿದ್ದ ಸುಧಾಕರ್ ಚೆರುಕುರಿ SLV ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ಇನ್ನು ಈ ಚಿತ್ರಕ್ಕೆ ಜಿ.ವಿ ಪ್ಕಾ .ಶ್ ಕುಮಾರ್ ಸಂಗೀತ ಸಂಯೋಜಿಸುತ್ತಿದ್ದು, ಅನಯ್ ಓಂ ಗೋಸ್ವಾಮಿ ಅವರ ಛಾಯಾಗ್ರಹಣ ಇದೆ. ಈ ಸಿನಿಮಾವು ಪ್ಯಾನ್-ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗಲಿದ್ದು, ತೆಲುಗು, ಮಲಯಾಳಂ, ತಮಿಳು, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.
ಇದನ್ನು ಓದಿ:Kantara Movie: ಆಸ್ಟ್ರೇಲಿಯಾ, ನ್ಯೂಜಿಲೆಂಡ್‌ನಲ್ಲೂ ರಿಲೀಸ್ ಆಗಲಿದೆ ʼಕಾಂತಾರ ಚಾಪ್ಟರ್ 1ʼ
ಅದರಲ್ಲೂ ದುಲ್ಕರ್ ಸಲ್ಮಾನ್ ಹಾಗೂ ಪೂಜಾ ಹೆಗ್ಡೆ ಪೇರ್ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಮೂಡಿದೆ. ಇತ್ತೀಚೆಗೆ ಪೂಜಾ ಹೆಗ್ಡೆ ನಟಿಸಿದ ಹೆಚ್ಚಿನ ಸಿನಿಮಾಗಳು ಫ್ಲಾಪ್ ಆಗಿದ್ದವು. ಹೀಗಾಗಿ ಈ ಸಿನಿಮಾ ಪೂಜಾಗೆ ಸಕ್ಸಸ್ ನೀಡುತ್ತಾ ಅನ್ನೋದನ್ನು ಕಾದು ನೋಡಬೇಕಿದೆ.