ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಭರ್ಜರಿ ಫಸ್ಟ್‌ ಲುಕ್‌ ಜೊತೆಗೆ ರಿಲೀಸ್‌ ಡೇಟ್‌ ಘೋಷಿಸಿದ ʻಫೌಜಿʼ ಟೀಮ್‌ʼ; ʻಡಾರ್ಲಿಂಗ್ʼ ಪ್ರಭಾಸ್‌ ಫ್ಯಾನ್ಸ್‌ಗಂತೂ ಹಬ್ಬವೋ ಹಬ್ಬ!

ನಟ ಪ್ರಭಾಸ್ ಅಭಿನಯದ ಬಹುನಿರೀಕ್ಷಿತ 'ಫೌಜಿ' ಸಿನಿಮಾ ಇದೇ ವರ್ಷದ ಡಿಸೆಂಬರ್ 3 ರಂದು ಜಾಗತಿಕವಾಗಿ ಬಿಡುಗಡೆಯಾಗಲಿದೆ. ರಕ್ತಸಿಕ್ತ ಮಿಲಿಟರಿ ಉಡುಪಿನಲ್ಲಿ ಪ್ರಭಾಸ್ ಕಾಣಿಸಿಕೊಂಡಿರುವ ರಗಡ್ ಪೋಸ್ಟರ್ ಲಾಂಚ್ ಆಗಿದ್ದು, ಇದು ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆಯಲ್ಲೇ ಅತ್ಯಂತ ದುಬಾರಿ ವೆಚ್ಚದ ಚಿತ್ರವಾಗಿದೆ.

ನಟ ಪ್ರಭಾಸ್ ಅಭಿನಯದ, ನಿರ್ದೇಶಕ ಹನು ರಾಘವಪುಡಿ ಅವರ ಮಹತ್ವಾಕಾಂಕ್ಷೆಯ ಪ್ಯಾನ್-ಇಂಡಿಯಾ ಸಿನಿಮಾ 'ಫೌಜಿ'ಯ ಬಿಡುಗಡೆ ದಿನಾಂಕವು ಅಧಿಕೃತವಾಗಿ ಘೋಷಣೆಯಾಗಿದೆ. ಚಿತ್ರತಂಡವು ಅತ್ಯಂತ ರಗಡ್ ಆದ ಹೊಸ ಪೋಸ್ಟರ್ ಅನ್ನು ಬಿಡುಗಡೆ ಮಾಡುವ ಮೂಲಕ, ಈ ಬಿಗ್ ಬಜೆಟ್ ಚಿತ್ರವು ಇದೇ ವರ್ಷದ ಡಿಸೆಂಬರ್ 3 ರಂದು ವಿಶ್ವಾದ್ಯಂತ ಅದ್ಧೂರಿಯಾಗಿ ತೆರೆಗೆ ಬರಲಿದೆ ಎಂದು ಖಚಿತಪಡಿಸಿದೆ.

ಎಲ್ಲರ ಗಮನಸೆಳೆದ ಫಸ್ಟ್‌ ಲುಕ್

'ಅಜ್ಞಾತಪರ್ವ ಎಂಡ್ಸ್' ಎಂಬ ಕುತೂಹಲಕಾರಿ ಘೋಷಣೆಯೊಂದಿಗೆ ಚಿತ್ರದ ಪ್ರಚಾರ ಆರಂಭಿಸಿರುವ ನಿರ್ಮಾಪಕರು, ಪೋಸ್ಟರ್‌ನಲ್ಲಿ 'ದಿ ರೆಬೆಲಿಯನ್ ಬಿಗಿನ್ಸ್' ಎಂದು ಹೇಳಿದ್ದಾರೆ. ಈ ಒನ್‌ಲೈನರ್ ಘೋಷಣೆಯು ಬಿಡುಗಡೆಗೂ ಮುನ್ನವೇ ಪ್ರೇಕ್ಷಕರಲ್ಲಿ ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ. ನಟ ಪ್ರಭಾಸ್ ಅವರು ತಮ್ಮ ಅಧಿಕೃತ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ಹಂಚಿಕೊಂಡಿರುವ ಈ ಪೋಸ್ಟರ್, ಸಿನಿಮಾದ ತೀವ್ರತೆ ಮತ್ತು ಕಥೆಯ ಗಾಂಭೀರ್ಯವನ್ನು ಎತ್ತಿ ತೋರಿಸುತ್ತದೆ. ರಕ್ತಸಿಕ್ತವಾದ ಮಿಲಿಟರಿ ಉಡುಪಿನಲ್ಲಿ, ಸುತ್ತಲೂ ಬಿದ್ದಿರುವ ಶವಗಳ ನಡುವೆ ಕಲ್ಲಿನ ಮೇಲೆ ಗಂಭೀರವಾಗಿ ಕುಳಿತು ಕೈಯಲ್ಲಿ ಗನ್ ಹಿಡಿದಿರುವ ಪ್ರಭಾಸ್ ಅವರ ಈ ಮಾಸ್ ಲುಕ್‌, ಅಭಿಮಾನಿಗಳಲ್ಲಿ ರೋಮಾಂಚನ ಮೂಡಿಸಿದ್ದು, ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

ಪ್ರಭಾಸ್‌ ಕರಿಯರ್‌ನ ದೊಡ್ಡ ಪ್ರಾಜೆಕ್ಟ್

'ಬಾಹುಬಲಿ' ಸರಣಿಯ ಅದ್ಭುತ ಯಶಸ್ಸಿನ ನಂತರ, ಪ್ರಭಾಸ್ ಮತ್ತೊಮ್ಮೆ ಒಂದು ಬೃಹತ್ ಪೀರಿಯಡ್ ಆಕ್ಷನ್ ಡ್ರಾಮಾ ಕಥೆಯೊಂದಿಗೆ ಪ್ರೇಕ್ಷಕರ ಮುಂದೆ ಮರಳುತ್ತಿದ್ದಾರೆ. "ಎ ಬೆಟಾಲಿಯನ್‌ ಹೂ ಫೈಟ್ಸ್‌ ಅಲೋನ್‌" (A Battalion who fights alone) ಎಂಬ ಟ್ಯಾಗ್‌ಲೈನ್ ಹೊಂದಿರುವ ಈ ಚಿತ್ರವು, ಭಾವನಾತ್ಮಕ ಎಳೆಯನ್ನು ಒಳಗೊಂಡಿದ್ದು, ಭಾರತೀಯ ಸಿನಿಮಾ ಇತಿಹಾಸದಲ್ಲೇ ಅತ್ಯುನ್ನತ ದೃಶ್ಯ ವೈಭವದ ಅನುಭವವನ್ನು ನೀಡುವ ಭರವಸೆ ನೀಡಿದೆ. ಯೋಧರ ಹಿನ್ನೆಲೆಯುಳ್ಳ ಈ ಚಿತ್ರವು ಪ್ರಭಾಸ್ ಅವರ ವೃತ್ತಿಜೀವನದಲ್ಲಿ ಅತ್ಯಂತ ಮಹತ್ವದ, ವಿಭಿನ್ನ ಮತ್ತು ಅತ್ಯಂತ ದೊಡ್ಡ ಪ್ರಾಜೆಕ್ಟ್ ಎನಿಸಿಕೊಂಡಿದೆ.‌

Kalki 2: ಪ್ರಭಾಸ್ ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌; ‘ಕಲ್ಕಿ 2’ ನಿರ್ದೇಶಕರು ಹೇಳಿದ್ದೇನು?

ಅತೀ ದುಬಾರಿ ಸಿನಿಮಾ

ಈ ಹೈ-ವೋಲ್ಟೇಜ್ ಸಿನಿಮಾದ ಮತ್ತೊಂದು ಪ್ರಮುಖ ವಿಶೇಷತೆ ಏನೆಂದರೆ, ಇದು ದಕ್ಷಿಣ ಭಾರತದ ಖ್ಯಾತ ಪ್ರಮುಖ ನಿರ್ಮಾಣ ಸಂಸ್ಥೆಯಾದ ಮೈತ್ರಿ ಮೂವಿ ಮೇಕರ್ಸ್ ಮತ್ತು ಕ್ಲಾಸಿಕ್ ಹಿಟ್ ನಿರ್ದೇಶಕ ಹನು ರಾಘವಪುಡಿ ಅವರ ಮೊದಲ ಕಾಂಬಿನೇಷನ್‌ನ ಸಿನಿಮಾ. ಇದುವರೆಗೆ ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಚಿತ್ರಗಳಲ್ಲೇ ಅತ್ಯಂತ ದುಬಾರಿ, ಹೈ-ಬಜೆಟ್ ಮತ್ತು ಅದ್ದೂರಿ ಚಿತ್ರ ಫೌಜಿ ಆಗಿದೆ.

'ಬಾಹುಬಲಿ' ಬ್ಲಾಕ್‌ಬಸ್ಟರ್‌ ಹಿಟ್‌ ಆದ್ಮೇಲೆ 2-3 ವರ್ಷ ನಿದ್ದೆ ಮಾಡಲು ಒದ್ದಾಡಿದ್ದ ನಟ ಪ್ರಭಾಸ್! ಅಂಥದ್ದೇನಾಗಿತ್ತು?

ಇನ್ನೂ 5 ತಿಂಗಳು ಕಾಯಬೇಕು!

ವಿಶ್ವದಾದ್ಯಂತ ಹಲವು ಭಾಷೆಗಳಲ್ಲಿ ಏಕಕಾಲಕ್ಕೆ ತೆರೆಕಾಣಲಿರುವ ಈ ಚಿತ್ರವನ್ನು ಮೈತ್ರಿ ಮೂವಿ ಮೇಕರ್ಸ್‌ನ ನವೀನ್ ಯರ್ನೇನಿ ಮತ್ತು ವೈ. ರವಿ ಶಂಕರ್ ಅವರು, ಬಾಲಿವುಡ್‌ನ ಪ್ರಸಿದ್ಧ ಟಿ-ಸೀರೀಸ್ ಫಿಲ್ಮ್ಸ್‌ನ ಭೂಷಣ್ ಕುಮಾರ್ ಅವರೊಂದಿಗೆ ಜಂಟಿಯಾಗಿ ಅದ್ದೂರಿ ವೆಚ್ಚದಲ್ಲಿ ನಿರ್ಮಿಸಿದ್ದಾರೆ. ತಾಂತ್ರಿಕವಾಗಿ ಮತ್ತು ಮೇಕಿಂಗ್ ವಿಚಾರದಲ್ಲಿ ಅತ್ಯುನ್ನತ ಅಂತರರಾಷ್ಟ್ರೀಯ ಗುಣಮಟ್ಟವನ್ನು ಹೊಂದಿರುವ ಈ ಚಿತ್ರವು ಸದ್ಯ ಬಿಡುಗಡೆಯ ಕೊನೆಯ ಹಂತದ ಕೆಲಸಗಳಲ್ಲಿದ್ದು, ಪ್ರೇಕ್ಷಕರು ಈ ಐತಿಹಾಸಿಕ ಮತ್ತು ಭಾವನಾತ್ಮಕ ಯುದ್ಧದ ಪ್ರಯಾಣವನ್ನು ಕಣ್ತುಂಬಿಕೊಳ್ಳಲು ಡಿಸೆಂಬರ್ 3 ರವರೆಗೆ ಕಾಯಬೇಕಿದೆ.