‘ಕರಾವಳಿ’ ಸಿನಿಮಾ ಟ್ರೈಲರ್ ರಿಲೀಸ್ ವೇಳೆ ಪ್ರಜ್ವಲ್ ದೇವರಾಜ್ ಗೈರಾಗಿದ್ದರು. ಈ ಕುರಿತು ಅಭಿಮಾನಿಗಳು ಪ್ರೆಸ್‌ಮೀಟ್‌ನಲ್ಲಿ ಗಲಾಟೆ ಮಾಡಿದ್ದರು. ಸದ್ಯ ಇದೇ ವಿಚಾರವಾಗಿ ಚೆರ್ಚೆಗಳು ನಡೆಯುತ್ತಿವೆ. ಪರ ವಿರೋಧದ ಮಾತುಗಳು ಕೇಳಿಬರುತ್ತಿವೆ. ಕರಾವಳಿ ಸಿನಿಮಾ (Karavali Movie) ಗಲಾಟೆ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಉಪ್ಪಾರ ಪೇಟೆ ಪೊಲೀಸ್ ಠಾಣೆಯಲ್ಲಿ (Upparpete) ಕೇಸ್ ದಾಖಲು ಆಗಿದೆ. ನಟ ಪ್ರಜ್ವಲ್ ದೇವರಾಜ್ (Prajwal Devaraj) ಅಭಿಮಾನಿಗಳು ಎಂದು ಹೇಳಿಕೊಂಡು ಗಲಾಟೆ ಮಾಡಿದ್ದವರ ವಿರುದ್ದ ಕೇಸ್ ದಾಖಲು ಆಗಿದೆ.
ಅವಾಚ್ಯ ಶಬ್ದಗಳಿಂದ ಬೆದರಿಕೆ
ಉದ್ದೇಶಪೂರ್ವಕವಾಗಿ ಟ್ರೇಲರ್ ರಿಲೀಸ್ ಮಾಡುವ ಸ್ಥಳಕ್ಕೆ ಬಂದಿದ್ದಾರೆ. ಗುಂಪುಸೇರಿಕೊಂಡು ನಿರ್ದೇಶಕ ನಿರ್ಮಾಪಕ ಹಾಗು ಅಲ್ಲಿದ್ದವರಿಗೆ ತೊಂದರೆ ಕೊಟ್ಟಿದ್ದಾರೆ. ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ ಬೆದರಿಕೆ ಹಾಕಿದ್ದಾರೆ ಎಂದು ಕೇಸ್ ದಾಖಲು ಆಗಿದೆ. ಸಿನಿಮಾದ ಕಾರ್ಯಕಾರಿ ನಿರ್ಮಾಪಕ ಅಂಕಿತ್ ನೀಡಿದ ದೂರಿನ ಅನ್ವಯ ಕೇಸ್ ದಾಖಲು ಆಗಿದೆ.
ಬಿ ಎನ್ ಎಸ್ ಕಾಯ್ದೆ 352, 292,,3(5) ಅಡಿಯಲ್ಲಿ ಕೇಸ್ ದಾಖಲು ಆಗಿದೆ. ದಿಲೀಪ್ , ಅವಿನಾಶ್, ಮತ್ತು ನಂದಕುಮಾರ್ ಎಂಬುವರ ವಿರುದ್ದ ಪ್ರಕರಣ ದಾಖಲು ಆಗಿದೆ.
ನಟ ಪ್ರಜ್ವಲ್ ದೇವರಾಜ್ ಉದ್ದೇಶ ಪೂರ್ವಕವಾಗಿ ಗಲಾಟೆ ಮಾಡಿಸಿದ್ದಾರೆ. ವ್ಯವಹಾರದಲ್ಲಿ ವ್ಯತ್ಯಾಸ ಆಗಿದ್ದಕ್ಕೆ ಗಲಾಟೆ ಮಾಡಿಸಿದ್ದಾರೆ. ಅಭಿಮಾನಿಗಳು ಎಂದು ಹೇಳಿಕೊಂಡು ಬಂದು ಗಲಾಟೆ ಮಾಡಿದವರು ಅಭಿಮಾನಿಗಳಲ್ಲ. ಬದಲಾಗಿ ಪ್ರಜ್ವಲ್ ದೇವರಾಜ್ ಅವರ ಜೊತೆಗೆ ಕೆಲಸ ಮಾಡುವವರು. ಅವರುಗಳ ಅಸಿಸ್ಟೆಂಟ್ ಆಗಿ ಕೆಲಸ ಮಾಡುವವರೆ ಗಲಾಟೆ ಮಾಡಿದ್ದು ಎಂಬುದು ಪತ್ತೆ ಆಗಿದೆ ಎನ್ನಲಾಗಿದೆ.
ಇದನ್ನೂ ಓದಿ: CM Vijay: ‘ಜನ ನಾಯಗನ್’ ಚಿತ್ರಕ್ಕೆ ʻಎʼ ಸರ್ಟಿಫಿಕೇಟ್! ವಿಜಯ್ ಫ್ಯಾನ್ಸ್ ಖುಷ್
ಅಭಿಮಾನಿಗಳು ಎಂದು ಹೇಳಿಕೊಂಡು ಬಂದು ಗಲಾಟೆ ಮಾಡಿದ್ದವರು ಕರಾವಳಿ ಸಿನಿಮಾದಲ್ಲಿ ಸಹ ಕೆಲಸ ಮಾಡಿದ್ದಾರೆ. ಸಿನಿಮಾದ ಶೂಟಿಂಗ್ ವೇಳೆ ಪ್ರಜ್ವಲ್ ದೇವರಾಜ್ ಗೆ ಅಸಿಸ್ಟೆಂಟ್ ಆಗಿ ಕೆಲಸ ಮಾಡಿದ್ದಾರೆ ಎಂದಿದ್ದಾರೆ. ಸದ್ಯ ಉಪ್ಪಾರಪೇಟೆ ಪೊಲೀಸರು ತನಿಖೆ ನಡೆಸಿದ್ದಾರೆ.
ತನಿಖೆ ವೇಳೆ ಪ್ರಜ್ವಲ್ ದೇವರಾಜ್ ಅಸಿಸ್ಟೆಂಟ್ ಗಳೆ ಫ್ಯಾನ್ಸ್ ರೀತಿ ಬಂದು ಗಲಾಟೆ ಮಾಡಿದ್ದಾರೆ ಎಂಬುದಕ್ಕೆ ಸಾಕ್ಷಿಗಳು ಪತ್ತೆ ಆಗಿದೆ.
ಆರೋಪ ಏನು?
ನಟ ಪ್ರಜ್ವಲ್ ದೇವರಾಜ್ ಅವರು ಉದ್ದೇಶಪೂರ್ವಕವಾಗಿಯೇ ಈ ಗಲಾಟೆ ಮಾಡಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಚಿತ್ರದ ವ್ಯವಹಾರಕ್ಕೆ ಸಂಬಂಧಿಸಿದಂತೆ ನಿರ್ಮಾಣ ತಂಡ ಹಾಗೂ ನಟನ ನಡುವೆ ಉಂಟಾದ ಭಿನ್ನಾಭಿಪ್ರಾಯವೇ ಈ ಗಲಾಟೆಗೆ ಮೂಲ ಕಾರಣ ಎನ್ನಲಾಗುತ್ತಿದೆ. ವ್ಯವಹಾರದಲ್ಲಿ ವ್ಯತ್ಯಾಸವಾಗಿದ್ದಕ್ಕೆ ಪ್ರಜ್ವಲ್ ಅವರೇ ಈ ವ್ಯಕ್ತಿಗಳನ್ನು ಕಳುಹಿಸಿ ತೊಂದರೆ ಕೊಟ್ಟಿದ್ದಾರೆ ಎಂದು ಆರೋಪಿಸಲಾಗಿದೆ.
ಟ್ರೇಲರ್ ಗಿಂತ ಟ್ರೇಲರ್ ಬಿಡುಗಡೆಗೆ ಬಾರದ ನಾಯಕ ನಟ ಪ್ರಜ್ವಲ್ ದೇವರಾಜ್ ಸುದ್ದಿ ಮಾಡಿದ್ದಾರೆ. ಸಂಭಾವನೆ ಬಾಕಿ ಉಳಿದ ಕಾರಣದಿಂದ ಡಬ್ಬಿಂಗ್ ಮಾಡಿರಲಿಲ್ಲ ಎಂದು ಅವರು ಹೇಳಿದ್ದಾರೆ. ಟ್ರೇಲರ್ ನಲ್ಲಿ ಪ್ರಜ್ವಲ್ ದೇವರಾಜ್ ಧ್ವನಿಯೇ ಇಲ್ಲದೆ ಬೇರೆಯುವರಿಂದ ಡಬ್ಬಿಂಗ್ ಮಾಡಿ ಬಿಡುಗಡೆ ಮಾಡಲಾಗಿದೆ.
ಇದನ್ನೂ ಓದಿ: Sohail Khan: ವಿಚ್ಛೇದನದ ಬಳಿಕವೂ ಪರಸ್ಪರ ಗೌರವ ಕಾಯ್ದುಕೊಂಡ ಬಾಲಿವುಡ್ ಖ್ಯಾತ ಜೋಡಿ!
ಈ ಬಗ್ಗೆ ಪ್ರಜ್ವಲ್ ಬೇಸರ ವ್ಯಕ್ತಪಡಿಸಿದ್ದಾರೆ ಮತ್ತು ಅದೇ ಕಾರಣದಿಂದ ಸಿನಿಮಾ ಟ್ರೇಲರ್ ಬಿಡುಗಡೆಗೆ ಬರಲಿಲ್ಲ ಎಂದು ತಿಳಿಸಿದ್ದಾರೆ. ಆದರೆ ನಿರ್ದೇಶಕ ಗುರುದತ್ ಗಾಣಿಗ ಅವರು ಬೇರೆಯೇ ವಿಚಾರ ಹೇಳುತ್ತಿದ್ದಾರೆ.