ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Prakash Belawadi : ರಿಷಿ-ಪ್ರಕಾಶ್ ಬೆಳವಾಡಿ ಚಿತ್ರಕ್ಕೆ ಟೈಟಲ್‌ ಫಿಕ್ಸ್‌; ಪೋಸ್ಟರ್ ಔಟ್‌, ಏನಿದು ಸಿನಿಮಾ ಕಥೆ?

Rishi: ಅಧ್ಯಕ್ಷ, ವಿಕ್ಟರಿ, ರನ್ನ, ಪೊಗರು , ತೀರ್ಥರೂಪ ತಂದೆಯವರಿಗೆ, ಅಣ್ಣ ಫ್ರಂ ಮೆಕ್ಸಿಕೋ ಸಿನಿಮಾಗಳಿಗೆ ಸಖತ್ತಾಗಿರೋ ಡೈಲಾಗ್‌ ಬರೆದು ಸೈ ಎನ್ನಿಸಿಕೊಂಡಿದ್ದ ರೈಟರ್‌ ಪ್ರಶಾಂತ್‌ ರಾಜಪ್ಪ ನಿರ್ದೇಶನದ ಚೊಚ್ಚಲ ಸಿನಿಮಾದ ಟೈಟಲ್‌ ರಿವಿಲ್‌ ಆಗಿದೆ. ಪ್ರಶಾಂತ್‌ ರಾಜಪ್ಪ ನಿರ್ದೇಶನದ ಮೊದಲ ಸಿನಿಮಾಗೆ ಅನಂತ ಪದ್ಮನಾಭ ಎಂದು ಹೆಸರಿಡಲಾಗಿದೆ. . ರಿಷಿ ಹಾಗೂ ಪ್ರಕಾಶ್ ಬೆಳವಾಡಿ ಮುಖ್ಯ ಪಾತ್ರಗಳಲ್ಲಿ ನಟಿಸಿರುವ ಈ ಕಾಮಿಡಿ ಡ್ರಾಮಾ ಸಿನಿಮಾ ಟ್ರಾವೆಲ್ ಕಥೆಯನ್ನು ಒಳಗೊಂಡಿದೆ.

ರಿಷಿ-ಪ್ರಕಾಶ್ ಬೆಳವಾಡಿ ಚಿತ್ರ

ಅಧ್ಯಕ್ಷ, ವಿಕ್ಟರಿ, ರನ್ನ, ಪೊಗರು , ತೀರ್ಥರೂಪ ತಂದೆಯವರಿಗೆ, ಅಣ್ಣ ಫ್ರಂ ಮೆಕ್ಸಿಕೋ ಸಿನಿಮಾಗಳಿಗೆ ಸಖತ್ತಾಗಿರೋ ಡೈಲಾಗ್‌ ಬರೆದು ಸೈ ಎನ್ನಿಸಿಕೊಂಡಿದ್ದ ರೈಟರ್‌ ಪ್ರಶಾಂತ್‌ ರಾಜಪ್ಪ (Prashanth Rajappa) ನಿರ್ದೇಶನದ ಚೊಚ್ಚಲ ಸಿನಿಮಾದ ಟೈಟಲ್‌ ರಿವಿಲ್‌ ಆಗಿದೆ. ಪ್ರಶಾಂತ್‌ ರಾಜಪ್ಪ ನಿರ್ದೇಶನದ ಮೊದಲ ಸಿನಿಮಾಗೆ ಅನಂತ ಪದ್ಮನಾಭ (Anant Padmanabh) ಎಂದು ಹೆಸರಿಡಲಾಗಿದೆ. . ರಿಷಿ ಹಾಗೂ ಪ್ರಕಾಶ್ ಬೆಳವಾಡಿ (Prakash Belawadi) ಮುಖ್ಯ ಪಾತ್ರಗಳಲ್ಲಿ ನಟಿಸಿರುವ ಈ ಕಾಮಿಡಿ ಡ್ರಾಮಾ ಸಿನಿಮಾ ಟ್ರಾವೆಲ್ ಕಥೆಯನ್ನು ಒಳಗೊಂಡಿದೆ. ಟೈಟಲ್ ಪೋಸ್ಟರ್ (Title Poster) ಮೂಲಕ ಸಿನಿಮಾ ಮೇಲಿನ ಕುತೂಹಲ ಹೆಚ್ಚಿದೆ.

ಕಥೆ ಏನು?

ಎರಡು ಜನರೇಷನ್‌ ಬಗ್ಗೆ ಇರೋ ಕಥೆಯನ್ನು ಚಿತ್ರ ಹೊಂದಿದೆ ಎನ್ನಲಾಗಿದೆ. ಸಿನಿಮಾದಲ್ಲಿ ರಿಷಿ ಹಾಗೂ ಪ್ರಕಾಶ್‌ ಬೆಳವಾಡಿ ಲೀಡ್‌ ಆಗಿ ಕಾಣಿಸಿಕೊಳ್ತಿದ್ದಾರೆ. ಈಗಾಗಲೇ ಟೈಟಲ್‌ ಬಿಡುಗಡೆ ಮಾಡುವ ಮುನ್ನ ವಿಡಿಯೋ ಕಂಟೆಂಟ್‌ ಬಿಟ್ಟು ಸಿನಿಮಾ ಬಗ್ಗೆ ಕ್ಯೂರಿಯಾಸಿಟಿ ಮೂಡಿಸಿದ್ದ ಡೈರೆಕ್ಟರ್‌ ಸದ್ಯ ಡಿಫ್ರೆಂಟ್‌ ಆಗಿರೋ ಟೈಟಲ್‌ ಮೂಲಕ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ.

ಇದನ್ನೂ ಓದಿ: Padma Vibhushan: ಪ್ರಶಸ್ತಿ ಬಹಳ ವರ್ಷಗಳ ಹಿಂದೆಯೇ ಸಿಗಬೇಕಿತ್ತು; ಧರ್ಮೇಂದ್ರ ಪದ್ಮವಿಭೂಷಣ ಬಗ್ಗೆ ಹೇಮಾಮಾಲಿನಿ ಮಾತು

ರಿಷಿ ನಾಯಕನಾಗಿ ಅಭಿನಯ ಮಾಡ್ತಿರೋ ಅನಂತ ಪದ್ಮನಾಭ ಸಿನಿಮಾದಲ್ಲಿ ಪ್ರಕಾಶ್‌ ಬೆಳವಾಡಿ ಅವರದ್ದು ವಿಶೇಷ ಪಾತ್ರ ಇನ್ನು ನಾಯಕಿಯಾಗಿ ಅಂಜಲಿ ಅನೀಶ್‌ ಕಾಣಸಿಕೊಂಡಿದ್ದಾರೆ.



ಜೀವನದ ಮೌಲ್ಯಗಳ ಬಗ್ಗೆ

ಎರಡು ಜನರೇಷನ್‌ ಬಗ್ಗೆ ಇರೋ ಈ ಕಥೆಯಲ್ಲಿ ಜೀವನದ ಮೌಲ್ಯಗಳ ಬಗ್ಗೆಯೂ ಹೇಳಿದ್ದಾರಂತೆ ನಿರ್ದೇಶಕರು ಕಾಮಿಡಿ ಡ್ರಾಮ ಇರೋ ಅನಂತ ಪದ್ಮನಾಭ ಸಿನಿಮಾವನ್ನ ಅಮ್ರೇಜ್‌ ಸೂರ್ಯವಂಶಿ ನಿರ್ಮಾಣ ಮಾಡಿದ್ದಾರೆ .

ಸದ್ಯ ಟೈಟಲ್‌ ಪೋಸ್ಟರ್‌ ರಿಲೀಸ್‌ ಮಾಡಿರೋ ಸಿನಿಮಾತಂಡ ಇನ್ನು ಎರಡು ಹಾಡುಗಳ ಚಿತ್ರೀಕರಣವನ್ನ ಬಾಕಿ ಉಳಿಸಿಕೊಂಡಿದೆ.

ಇದನ್ನೂ ಓದಿ: Raghavendra Chitravani: ರಾಘವೇಂದ್ರ ಚಿತ್ರವಾಣಿಗೆ 50ರ ಸಡಗರ; ಲೋಗೋ ಲಾಂಚ್

ಅನಂತ ಪದ್ಮನಾಭ ಸಿನಿಮಾವನ್ನ ಬೆಂಗಳೂರು, ಸಾಗರ, ತೀರ್ಥಹಳ್ಳಿ ಸುತ್ತಾ ಮುತ್ತಾ ಚಿತ್ರೀಕರಣ ಮಾಡಿದ್ದಾರೆ. ಪ್ರಶಾಂತ್‌ ರಾಜಪ್ಪ ನಿರ್ದೇಶನದ ಅನಂತ ಪದ್ಮನಾಭ ಸಿನಿಮಾಗೆ ಅಶ್ವಿನ್‌ ಪಿ ಕುಮಾರ್‌ ಸಂಗೀತ ನೀಡಿದ್ದು, ವೀನಸ್‌ ನಾಗರಾಜ್‌ ಮೂರ್ತಿ ಕ್ಯಾಮೆರಾ ವರ್ಕ್‌ ಮಾಡಿದ್ದಾರೆ. ಸದ್ಯ ಟೈಟಲ್‌ ಮೂಲಕ ಸದ್ದು ಮಾಡ್ತಿರೋ ಅನಂತ ಪದ್ಮನಾಭ ಸಿನಿಮಾ ಶೀಘ್ರದಲ್ಲೇ ತೆರೆಗೆ ಬರಲಿದೆ.

Yashaswi Devadiga

View all posts by this author