ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Rakshit Shetty: ರಕ್ಷಿತ್ ಶೆಟ್ಟಿ ಅವರ ‘ರಿಚರ್ಡ್ ಆಂಟೊನಿ’ಯಿಂದ ಹೊರಬಿತ್ತು ಬಿಗ್‌ ಅಪ್‌ಡೇಟ್‌!

Pramod shetty: ರಕ್ಷಿತ್ ಶೆಟ್ಟಿ ಈ ಹಿಂದೆ ರಿಚರ್ಡ್ ಆಂಟನಿ ಸಿನಿಮಾ ಮಾಡುವುದಾಗಿ ಹೇಳಿದ್ದರು. ಆದರೆ ಈ ಸಿನಿಮಾ ಘೋಷಣೆ ಮಾಡಿಯೇ ಈಗ 4ವರ್ಷ ಕಳೆದಿದೆ. ಆ ಲೆಕ್ಕದಲ್ಲಿ ಈಗಾಗಲೇ ಈ ಸಿನಿಮಾ ತೆರೆ ಮೇಲೆ ಬರಬೇಕಿತ್ತು. ರಕ್ಷಿತ್ ಶೆಟ್ಟಿ ಅವರು ಕೂಡ ಸಿನಿಮಾ ಇಂಡಸ್ಟ್ರಿಯಲ್ಲಿ ಕಿರಿಕ್ ಪಾರ್ಟಿ, ಚಾರ್ಲಿ ಹಾಗೂ ಸಪ್ತಸಾಗರದಾಚೆ ಸಿನಿಮಾ ಮೂಲಕ ಖ್ಯಾತಿ ಪಡೆದಿದ್ದರು. ಆದರೆ ಬಳಿಕ ಅವರ ಅಭಿನಯದ ಯಾವ ಸಿನಿಮಾ ಕೂಡ ಬಂದಿಲ್ಲ.

ರಕ್ಷಿತ್‌ ಶೆಟ್ಟಿ

ರಕ್ಷಿತ್ ಶೆಟ್ಟಿ (Rakshit Shetty) ಈ ಹಿಂದೆ ರಿಚರ್ಡ್ ಆಂಟನಿ (Richard Antony ) ಸಿನಿಮಾ ಮಾಡುವುದಾಗಿ ಹೇಳಿದ್ದರು. ಆದರೆ ಈ ಸಿನಿಮಾ ಘೋಷಣೆ ಮಾಡಿಯೇ ಈಗ 4ವರ್ಷ ಕಳೆದಿದೆ. ಆ ಲೆಕ್ಕದಲ್ಲಿ ಈಗಾಗಲೇ ಈ ಸಿನಿಮಾ ತೆರೆ ಮೇಲೆ ಬರಬೇಕಿತ್ತು. ರಕ್ಷಿತ್ ಶೆಟ್ಟಿ (Rakshit Shetty) ಅವರು ಕೂಡ ಸಿನಿಮಾ ಇಂಡಸ್ಟ್ರಿಯಲ್ಲಿ ಕಿರಿಕ್ ಪಾರ್ಟಿ, ಚಾರ್ಲಿ ಹಾಗೂ ಸಪ್ತಸಾಗರದಾಚೆ ಸಿನಿಮಾ ಮೂಲಕ ಖ್ಯಾತಿ ಪಡೆದಿದ್ದರು. ಆದರೆ ಬಳಿಕ ಅವರ ಅಭಿನಯದ ಯಾವ ಸಿನಿಮಾ ಕೂಡ ಬಂದಿಲ್ಲ. ಆದರೆ ರಕ್ಷಿತ್ ಶೆಟ್ಟಿ ಈ ಹಿಂದೆ ರಿಚರ್ಡ್ ಆಂಟನಿ ಸಿನಿಮಾ ಮಾಡುವುದಾಗಿ ಹೇಳಿದ್ದರು. ಇದೀಗ ಈ ಸಿನಿಮಾದ ಪ್ರಮುಖ ಅಪ್​​ಡೇಟ್ (Update) ಒಂದು ಹೊರಬಿದ್ದಿದೆ.

ಇದನ್ನೂ ಓದಿ: Hombale Films : ಹೊಂಬಾಳೆಯ ʻಶಿವ ಶಂಭೋ ಸ್ವಯಂಭೋ' ಟ್ರೆಂಡಿಂಗ್; ನಾಳೆ ಹಾಡು ಬಿಡುಗಡೆ

ಸಿನಿಮಾದ ಚಿತ್ರೀಕರಣ ಸಹ ಪ್ರಾರಂಭ

ಪ್ರಮೋದ್ ಶೆಟ್ಟಿ ಇತ್ತೀಚೆಗೆ ತಮ್ಮ ನಟನೆಯ ‘ಶೇಷ’ ಸಿನಿಮಾದ ಪ್ರಚಾರ ಕಾರ್ಯಕ್ರಮದಲ್ಲಿ ‘ರಿಚರ್ಡ್ ಆಂಟೊನಿ’ ಸಿನಿಮಾದ ಬಗ್ಗೆ ಮಾತನಾಡಿದರು. ‘ರಿಚರ್ಡ್ ಅಂಟೊನಿ’ ಸಿನಿಮಾದ ಚಿತ್ರಕತೆ ರೆಡಿ ಆಗುತ್ತಿದೆ. ನಾವು ಶೀಘ್ರವೇ ಪ್ರೀ ಪ್ರೊಡಕ್ಷನ್ ಕಾರ್ಯಗಳಲ್ಲಿ ತೊಡಗಿಕೊಳ್ಳಲಿದ್ದೇವೆ. ಇನ್ನು ಎರಡು ಮೂರು ತಿಂಗಳಲ್ಲಿ ಸಿನಿಮಾದ ಚಿತ್ರೀಕರಣ ಸಹ ಪ್ರಾರಂಭ ಆಗಲಿದೆ’ ಎಂದಿದ್ದಾರೆ ಪ್ರಮೋದ್ ಶೆಟ್ಟಿ. ಮಾತ್ರವಲ್ಲದೆ, ‘ರಿಚರ್ಡ್ ಆಂಟೊನಿ’ ಸಿನಿಮಾನಲ್ಲಿ ತಾವು ಸಹ ರಕ್ಷಿತ್ ಶೆಟ್ಟಿ ಜೊತೆಗೆ ನಟಿಸುತ್ತಿರುವುದಾಗಿಯೂ ಹೇಳಿದ್ದಾರೆ.

ರಕ್ಷಿತ್‌, ಕತೆ ಬರೆದುಕೊಂಡು ಕೂತಿದ್ದ, ಇನ್ನೇನು ಮೂರು ತಿಂಗಳಲ್ಲಿ ಶೂಟಿಂಗ್‌ ಶುರು ಮಾಡ್ತಾನೆ. ಎಲ್ಲರೂ ವೈಯಕ್ತಿಕವಾಗಿ ಬ್ಯುಸಿಯಿದ್ದಾರೆ. ಎಲ್ಲಾ ಸಿನಿಮಾ ಕೂಡ ಒಟ್ಟಿಗೆ ಮಾಡ್ತಾ ಇದ್ರೆ ಜನಕ್ಕೆ ಬೋರ್‌ ಆಗುತ್ತೆ’ ಎಂದಿದ್ದಾರೆ.



ನಟ ರಕ್ಷಿತ್ ಶೆಟ್ಟಿ ಅವರು ನಟನೆ ಮಾತ್ರವಲ್ಲದೆ ನಿರ್ಮಾಣ ಹಾಗೂ ನಿರ್ದೇಶನದಲ್ಲಿಯೂ ಕೂಡ ಪ್ರಸಿದ್ಧರಾಗಿದ್ದಾರೆ‌. ಅಂತೆಯೇ ಅವರು ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದ ಎರಡು ಪಾರ್ಟ್ ರಿಲೀಸ್ ಆದ ಬಳಿಕ ರಿಚರ್ಡ್ ಆಂಟನಿ ಸಿನಿಮಾ ಮಾಡುವುದಾಗಿ ಘೋಷಿಸಿದ್ದರು.

ಇದನ್ನೂ ಓದಿ: Ranbir Kapoor : ಲವ್ & ವಾರ್ ಪೋಸ್ಟ್‌ಪೋನ್‌? ರಣಬೀರ್ ಕಪೂರ್ ಮೂವಿ ಕುರಿತು ಬಿಗ್‌ ಅಪ್‌ಡೇಟ್

'ಉಳಿದವರು ಕಂಡಂತೆ' ಚಿತ್ರದ ಸೀಕ್ವೆಲ್ ಭಾಗವನ್ನು ಇಟ್ಟುಕೊಂಡು ಈ ಸಿನಿಮಾ ಮಾಡಲಾಗುತ್ತಿದ್ದು ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಈ ಚಿತ್ರಕ್ಕೆ ನಿರ್ಮಾಣ ಮಾಡುತ್ತಿದೆ. ಹೀಗಾಗಿ ಕಾಂತಾರ‌ ಚಾಪ್ಟರ್ 1 ಬೆನ್ನಲ್ಲೆ ರಕ್ಷಿತ್ ಅಭಿನಯದ ರಿಚರ್ಡ್ ಆಂಟನಿ ಸಿನಿಮಾ ತೆರೆ ಮೇಲೆ ಅಬ್ಬರಿಸುತ್ತದೆ ಎಂದೇ ಹೇಳಲಾಗಿತ್ತು.

Yashaswi Devadiga

View all posts by this author