ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಪ್ರಶಾಂತ್‌ ನೀಲ್‌ ಸಿನಿಮಾಕ್ಕಾಗಿ ಕಟ್ಟುಮಸ್ತಾಗಿ ಅಖಾಡಕ್ಕಿಳಿದ ಜೂ.‌ ಎನ್‌ಟಿಆರ್; ಒಂದು ಫೋಟೋ ಮೂಲಕ ಎಲ್ಲಾ ವದಂತಿಗಳಿಗೆ ಫುಲ್‌ ಸ್ಟಾಪ್!‌

ಪ್ರಶಾಂತ್‌ ನೀಲ್‌ ಜೊತೆಗಿನ ಹೊಸ ಸಿನಿಮಾದ ಶೂಟಿಂಗ್ ವಿಳಂಬವಾಗುತ್ತಿದೆ ಎಂಬ ವದಂತಿಗಳಿಗೆ ಜೂ. ಎನ್‌ಟಿಆರ್ ತಮ್ಮ ದೇಹದಾರ್ಢ್ಯದ ಫೋಟೋ ಹಂಚಿಕೊಳ್ಳುವ ಮೂಲಕ ತೆರೆ ಎಳೆದಿದ್ದಾರೆ. ಪ್ರಶಾಂತ್ ನೀಲ್ ಸಿನಿಮಾದ ತಮ್ಮ ಪಾತ್ರಕ್ಕಾಗಿ ಭಾರಿ ವರ್ಕೌಟ್ ನಡೆಸಿರುವ ತಾರಕ್, ಸ್ಲಿಮ್ ಮತ್ತು ಮಸ್ಕ್ಯುಲರ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಮಾಡುತ್ತಿದೆ.

ಪ್ರಶಾಂತ್‌ ನೀಲ್‌ ಮತ್ತು ಜೂನಿಯರ್‌ ಎನ್‌ಟಿಆರ್‌ ಕಾಂಬಿನೇಷನ್‌ನ ಹೊಸ ಸಿನಿಮಾಗೆ ಬಿರುಸಿನ ಶೂಟಿಂಗ್‌ ನಡೆಯುತ್ತಿದೆ. ಆದಷ್ಟು ಬೇಗ ಈ ಸಿನಿಮಾವನ್ನು ಪ್ರೇಕ್ಷಕರ ಮುಂದೆ ತರಬೇಕು ಎಂಬುದು ಚಿತ್ರತಂಡದ ಪ್ಲ್ಯಾನ್ ಆಗಿದೆ. ಆದರೆ ಅಂದುಕೊಂಡಂತೆ ಕೆಲವೊಂದು ಕೆಲಸಗಳು ಸಾಗುತ್ತಿಲ್ಲ. ಈ ನಡುವೆ ವದಂತಿಗಳ ಕಾಟ ಚಿತ್ರತಂಡಕ್ಕೆ ಕಿರಿ ಕಿರಿ ಉಂಟು ಮಾಡಿತ್ತು. ಸದ್ಯ ಜೂನಿಯರ್‌ ಎನ್‌ಟಿಆರ್‌ ಅವರು ಶೇರ್‌ ಮಾಡಿರುವ ಒಂದು ಫೋಟೋ ಎಲ್ಲಾ ಅಂತೆಕಂತೆಗಳಿಗೂ ಫುಲ್‌ ಸ್ಟಾರ್‌ ಇಟ್ಟಿದೆ.

ಇತ್ತೀಚೆಗಷ್ಟೇ ಎನ್‌ಟಿಆರ್‌ ಅವರ ಲುಕ್‌ಗೆ ಸಂಬಂಧಿಸಿದಂತೆ ನಿರ್ದೇಶಕರಿಗೆ ಗೊಂದಲವಿದೆ, ಎನ್‌ಟಿಆರ್‌ ಲುಕ್‌ ಪ್ರಶಾಂತ್‌ ನೀಲ್‌ಗೆ ಇಷ್ಟವಾಗಿಲ್ಲ ಮತ್ತು ಇದರಿಂದಾಗಿ ಶೂಟಿಂಗ್ ಮುಂದೂಡಲಾಗಿದೆ ಎಂಬ ಪುಕಾರುಗಳು ಕೇಳಿಬಂದಿದ್ದವು. ಈ ಎಲ್ಲಾ ವದಂತಿಗಳಿಗೆ ಬ್ರೇಕ್ ಹಾಕಲು ಎನ್‌ಟಿಆರ್ ಸಾಮಾಜಿಕ ಜಾಲತಾಣದಲ್ಲಿ ಒಂದು ಫೋಟೋ ಹಂಚಿಕೊಂಡಿದ್ದಾರೆ.

ಎನ್‌ಟಿಆರ್‌ ಫಿಟ್‌ನೆಸ್‌ಗೆ ಫ್ಯಾನ್ಸ್‌ ಫಿದಾ

ಪ್ರಶಾಂತ್ ನೀಲ್ ಅವರ ಈ ಸಿನಿಮಾದಲ್ಲಿ ಎನ್‌ಟಿಆರ್ ಹೊಸ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದಕ್ಕಾಗಿ ಅವರು ಹಿಂದಿಗಿಂತಲೂ ಹೆಚ್ಚು ಸ್ಲಿಮ್ ಆಗಿದ್ದಾರೆ. ಜಿಮ್‌ನಲ್ಲಿ ನಿರಂತರವಾಗಿ ಕಠಿಣ ವರ್ಕೌಟ್ ಮಾಡುತ್ತಿರುವ ಅವರು, ಕಟ್ಟುನಿಟ್ಟಾದ ಡಯಟ್ ಕೂಡ ಪಾಲಿಸುತ್ತಿದ್ದಾರೆ. ಇದೀಗ ತಮ್ಮ ದೇಹದಾರ್ಢ್ಯವನ್ನು ಪ್ರದರ್ಶಿಸುವ ಫೋಟೋವೊಂದನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿರುವ ತಾರಕ್, "ಇದು ನಿರ್ಮಿಸಿಕೊಂಡಿದ್ದು.. ಖರೀದಿಸಿದ್ದಲ್ಲ" ಎಂದು ಕ್ಯಾಪ್ಷನ್ ನೀಡಿದ್ದಾರೆ.

ಇದರಲ್ಲಿ ಅವರು ಬಲಿಷ್ಠವಾದ ಸ್ನಾಯುಗಳೊಂದಿಗೆ 'ಬೀಸ್ಟ್ ಮೋಡ್'ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಫೋಟೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, "ಡ್ರ್ಯಾಗನ್ ಮೋಡ್ ಆನ್" ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.

ಎನ್‌ಟಿಆರ್‌ ಹಂಚಿಕೊಂಡ ಪೋಟೋ ಇಲ್ಲಿದೆ



ಈ ಹೊಸ ಫೋಟೋದಲ್ಲಿ ತಾರಕ್‌ ಅವರ ಬ್ರಾಡ್ ಶೋಲ್ಡರ್ ಮತ್ತು ಬ್ಯಾಕ್ ಡಬಲ್ ಬೈಸೆಪ್ಸ್ ನೋಡಿದರೆ ಅವರು ಎಷ್ಟು ಕಷ್ಟಪಟ್ಟಿದ್ದಾರೆ ಎಂಬುದು ಅರ್ಥವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ತಾರಕ್ ಲುಕ್ ಬಗ್ಗೆ ಟ್ರೋಲ್ ಮಾಡುತ್ತಿದ್ದವರಿಗೆ ಈ ಫೋಟೋ ಸಖತ್‌ ಆಗಿಯೇ ತಿರುಗೇಟು ನೀಡಿದಂತಿದೆ.

ಕೆಜಿಎಫ್, ಕೆಜಿಎಫ್ 2 ಮತ್ತು ಸಲಾರ್ ಚಿತ್ರಗಳ ಮೂಲಕ ಸದ್ದು ಮಾಡಿರುವ ಪ್ರಶಾಂತ್ ನೀಲ್, ಈಗ ಜೂನಿಯರ್‌ ಎನ್‌ಟಿಆರ್‌ ಜೊತೆಗೆ ಕೈಜೋಡಿಸಿರುವುದರಿಂದ ದೊಡ್ಡ ನಿರೀಕ್ಷೆ ಹುಟ್ಟಿಕೊಂಡಿದೆ. ಅಭಿಮಾನಿಗಳು ಈ ಲುಕ್‌ ಕಂಡು ಇನ್ನಷ್ಟು ಖುಷಿಯಾಗಿದ್ದಾರೆ. ಹೈ ಇಂಟೆನ್ಸ್ ಎಮೋಷನಲ್ ಆಕ್ಷನ್ ಡ್ರಾಮಾ ಆಗಿರು ಈ ಚಿತ್ರದಲ್ಲಿ ತಾರಕ್‌ಗೆ ಜೋಡಿಯಾಗಿ ರುಕ್ಮಿಣಿ ವಸಂತ್ ನಟಿಸುತ್ತಿದ್ದಾರೆ. ಬಾಲಿವುಡ್ ನಟ ಅನಿಲ್ ಕಪೂರ್ ಪ್ರಮುಖ ಪಾತ್ರವೊಂದನ್ನು ನಿರ್ವಹಿಸುತ್ತಿದ್ದಾರೆ. ಎನ್‌ಟಿಆರ್ ಆರ್ಟ್ಸ್ ಸಹಯೋಗದೊಂದಿಗೆ ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್ ಅಡಿಯಲ್ಲಿ ಈ ಸಿನಿಮಾ ನಿರ್ಮಾಣಗೊಳ್ಳುತ್ತಿದೆ.