Bollywood Gossip: ಮಗನ ಮದುವೆಗೇ ಬರ್ಲಿಲ್ವಾ ಬಾಲಿವುಡ್ ನಟ ರಾಜ್ ಬಬ್ಬರ್? ಸೊಸೆ ಏನಂತಾರೆ..?
ಬಾಲಿವುಡ್ ನ ಹಿರಿಯ ನಟ ಹಾಗೂ ರಾಜಕಾರಣಿ ರಾಜ್ ಬಬ್ಬರ್ ಅವರ ಪುತ್ರ ಪ್ರತಿಕ್ ಬಬ್ಬರ್ ನ ವಿವಾಹ ಪ್ರಿಯಾ ಜೊತೆ ಇತ್ತೀಚೆಗೆ ನಡೆದಿತ್ತು. ಈ ವಿವಾಹ ಸಮಾರಂಭದಲ್ಲಿ ವರನ ತಂದೆಯಾಗಿರುವ ರಾಜ್ ಬಬ್ಬರ್ ಅವರಿಗೇ ಆಹ್ವಾನ ನೀಡಿರಲಿಲ್ಲ ಎಂಬ ಗುಸು ಗುಸು ಒಂದು ಇದೀಗ ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ.

ಪ್ರತೀಕ್ ಬಬ್ಬರ್ ಮತ್ತು ಪ್ರಿಯಾ ಬ್ಯಾನರ್ಜಿ

ಮುಂಬಯಿ: ಬಾಲಿವುಡ್ (Bollywood) ನಟ ಹಾಗೂ ರಾಜಕಾರಣಿಯಾಗಿರುವ ರಾಜ್ ಬಬ್ಬರ್ (Raj Babbar) ಪುತ್ರ, ನಟ ಪ್ರತಿಕ್ ಬಬ್ಬರ್ (Prateik Babbar) ಮತ್ತು ಪ್ರಿಯಾ ಬ್ಯಾನರ್ಜಿ (Priya Banerjee) ಅವರ ವಿವಾಹ ಇತ್ತೀಚೆಗೆ ತಿರಾ ಖಾಸಗಿಯಾಗಿ ನಡೆದಿತ್ತು. ತಿರಾ ಸರಳವಾಗಿ ಮತ್ತು ಖಾಸಗಿಯಾಗಿ ನಡೆದಿದ್ದ ಈ ವಿವಾಹ ಸಮಾರಂಭ ಒಂದು ಅನಪೇಕ್ಷಿತ ಕಾರಣಕ್ಕೆ ಇದೀಗ ಸುದ್ದಿಯಾಗಿದ್ದು, ಇದಕ್ಕೆ ನಟ ಪ್ರತೀಕ್ ಸಷ್ಟನೆಯನ್ನೂ ಸಹ ನೀಡಿದ್ದಾರೆ. ಈ ಮದುವೆಯಲ್ಲಿ ಪ್ರತೀಕ್ ಬಬ್ಬರ್ ನ ತಂದೆ ರಾಜ್ ಬಬ್ಬರ್ ಹಾಗೂ ಪ್ರತಿಕ್ ಕುಟುಂಬಸ್ಥರಿಗೆ ಯಾರಿಗೂ ಆಹ್ವಾನ ನೀಡಲಾಗಿಲ್ಲವೆಂಬುದು ಬಹಳ ಸುದ್ದಿಯಾಗಿತ್ತು ಮತ್ತು ಇದು, ಪ್ರತೀಕ್ ಮತ್ತು ತಂದೆ ಹಾಗೂ ಕುಟುಂಬದ ನಡುವೆ ಒಡಕು ಮೂಡಿದೆ ಎಂಬ ಗುಸುಗುಸು ಎಲ್ಲೆಡೆ ಹಬ್ಬುವಂತಾಗಿತ್ತು.
ಆದರೆ ಇದಕ್ಕೀಗ ಪ್ರತೀಕ್ ಮತ್ತು ಪ್ರಿಯಾ ಸ್ಪಷ್ಟನೆ ನೀಡಿದ್ದಾರೆ. ಹಿಂದುಸ್ತಾನ್ ಟೈಮ್ಸ್ ಜೊತೆ ಮಾತನಾಡಿರುವ ಪ್ರಿಯಾ, ‘ನಮ್ಮ ಮದುವೆ ನಾವು ಅಂದುಕೊಂಡ ರಿತಿಯಲ್ಲೇ ನಡೆದಿದೆ. ನಾವು ಪ್ರೀತಿಸುವ ವ್ಯಕ್ತಿಗಳೆಲ್ಲರ ಸಮ್ಮುಖದಲ್ಲೇ ನಾವು ವಿವಾಹ ಬಂಧನಕ್ಕೊಳಗಾಗಿದ್ದೆವೆ.’ ಎಂದು ಪ್ರಿಯಾ ಹೇಳಿಕೊಂಡಿದ್ದಾರೆ. ಪ್ರತೀಕ್ ಅವರ ತಾಯಿ ಸ್ಮಿತಾ ಪಾಟೀಲ್ ಅವರ ರಾಕ್ ಕ್ಲಿಫ್ ಮನೆಯಲ್ಲೇ ಈ ವಿವಾಹ ಸಮಾರಂಭ ನಡೆದಿರುವುದಾಗಿ ಪ್ರಿಯಾ ಸ್ಪಷ್ಟಪಡಿಸಿದ್ದಾರೆ ಮತ್ತು ನಾವು ವಿವಾಹವಾಗುವ ಸಂದರ್ಭದಲ್ಲಿ ಅವರ ಇರುವಿಕೆಯ ಅನುಭವ ನಮಗಾಗಿದೆ ಎಂದು ಪ್ರಿಯಾ ಭಾವುಕರಾಗಿ ನುಡಿದಿದ್ದಾರೆ.
ಪ್ರತೀಕ್ ಅವರ ತಾಯಿಯ ಸಹೋದರಿಯರು ಮತ್ತು ಅಜ್ಜಿ ತಾತಂದಿರು ಈ ಮದುವೆಯಲ್ಲಿ ಭಾಗಿಯಾಗಿದ್ದರು, ಆದರೆ ತಂದೆ, ನಟ ರಾಜ್ ಬಬ್ಬರ್ ಅವರ ಗೈರು ಎದ್ದು ಕಾಣುತ್ತಿತ್ತು ಎನ್ನಲಾಗಿದೆ.
ಈ ವಿಚಾರಕ್ಕೆ ಸಂಬಂಧಿಸಿದಂತೆಯೂ ಸ್ಪಷ್ಟನೆಯನ್ನು ನೀಡಿರುವ ನವ ವಧು ಪ್ರಿಯಾ, ‘ನಮ್ಮ ಮದುವೆ ಕಾರ್ಯಕ್ರಮ ಮತ್ತು ಬಳಿಕದ ಸಂಭ್ರಮದ ಕ್ಷಣಗಳಲ್ಲಿ ನಮ್ಮ ಕುಟುಂಬದ ಯಾರೊಬ್ಬರೂ ಮಿಸ್ ಆಗಿದ್ದಾರೆಂದು ನನಗನ್ನಿಸುವುದಿಲ್ಲ. ಆದರೆ ಈ ಕುರಿತಾಗಿ ಯಾಕೆ ಗಾಳಿ ಸುದ್ದಿಗಳು ಹರಡುತ್ತಿವೆಯೋ ನನಗೆ ಗೊತ್ತಿಲ್ಲ..’ ಎಂದು ಅವರು ಬೇಸರದಿಂದ ಹೇಳಿದ್ದಾರೆ. ‘ಕುಟುಂಬ ಸದಸ್ಯರು’ ಗೈರಾಗಿದ್ದರು ಎಂಬ ಮಾತುಗಳಲ್ಲಿ ಸತ್ಯವಿಲ್ಲ. ನನ್ನ ತಂದೆ-ತಾಯಿಗಳಿದ್ದರು, ಪ್ರತೀಕ್ ನನ್ನು ಸಾಕಿ ಬೆಳೆಸಿದ ಆತನ ಆಂಟಿಯಂದಿರಿದ್ದರು, ಅವರ ಅಜ್ಜ-ಅಜ್ಜಿ ಇದ್ದರು ಮತ್ತು ಈ ಶುಭ ಸಂದರ್ಭದಲ್ಲಿ ಯಾರೆಲ್ಲಾ ಉಪಸ್ಥಿತರಿದ್ದು ನಮಗೆ ಆಶೀರ್ವದಿಸಿ, ಹರಸಬೇಕಿತ್ತೋ ಅವರೆಲ್ಲರೂ ಆ ದಿನ ನಮ್ಮ ಜೊತೆಗೇ ಇದ್ದರು ಎಂದು ಪ್ರಿಯಾ ಸ್ಪಷ್ಟನೆ ನೀಡಿದ್ದಾರೆ. ಹಾಗಾಗಿ ನಮ್ಮ ಕುಟುಂಬ ಎಂದು ನಾವೆಂದುಕೊಂಡಿರುವ ಯಾರೂ ಈ ಕಾರ್ಯಕ್ರಮವನ್ನು ಮಿಸ್ ಮಾಡ್ಕೊಂಡಿಲ್ಲ ಎಂದೂ ಅವರು ಸ್ಪಷ್ಟನೆ ನೀಡಿದ್ದಾರೆ.
‘ಏಕ್ ದಿವಾನಾ ಥಾ’, ‘ಫೋರ್ ಮೋರ್ ಶಾಟ್ಸ್ ಪ್ಲೀಸ್’ ಸೇರಿದಂತೆ ಹಲವಾರು ಚಿತ್ರಗಳಲ್ಲಿ ನಟಿಸಿರುವ ಪ್ರತೀಕ್ ಅವರು ಬಾಲಿವುಡ್ ನ ಹೆಸರಾಂತ ನಟ ರಾಜ್ ಬಬ್ಬರ್ ಹಾಗೂ ದಿವಂಗತ ಸ್ಮಿತಾ ಪಾಟೀಲ್ ಅವರ ಪುತ್ರ. ನಟಿಯೂ ಆಗಿದ್ದ ಸ್ಮಿತಾ ಪಾಟೀಲ್ ಅವರು ಹೆರಿಗೆ ಸಂದರ್ಭದಲ್ಲಿ ಕಾಣಿಸಿಕೊಂಡ ಸಮಸ್ಯೆಗಳಿಂದ ಮೃತಪಟ್ಟಿದ್ದರು. ನಟಿಯ ಸಾವಿನ ಬಳಿಕ ಪ್ರತೀಕ್ ನನ್ನು ಆತನ ಅಜ್ಜ-ಅಜ್ಜಿ ಬೆಳೆಸಿದ್ದರು.
ಸ್ಮಿತಾ ಅವರನ್ನು ವಿವಾಹವಾಗುವುದಕ್ಕೂ ಮೊದಲು ರಾಜ್ ಬಬ್ಬರ್ ನಾದಿರಾ ಅವರನ್ನು ವಿವಾಹವಾಗಿದ್ದರು, ಇವರಿಗೆ ಆರ್ಯ ಮತ್ತು ಜೂಹಿ ಬಬ್ಬರ್ ಎಂಬ ಇಬ್ಬರು ಮಕ್ಕಳಿದ್ದಾರೆ.