'ಪ್ರೇಮದ ಊರಲಿ' ( Premada Oorali) ಚಿತ್ರ ಬಿಡುಗಡೆಯಾಗಿ 3ನೇ ವಾರಕ್ಕೆ ಕಾಲಿಟ್ಟಿದ್ದರೂ ಪ್ರೇಕ್ಷಕರ ಉತ್ಸಾಹ ಹಾಗೂ ಹೌಸ್‌ಫುಲ್ ಶೋಗಳ ಸಂಖ್ಯೆ ಕಿಂಚಿತ್ತೂ ಕಡಿಮೆಯಾಗಿಲ್ಲ. ಬುಕ್‌ಮೈಶೋನಲ್ಲಿ ಟಿಕೆಟ್ ಸುನಾಮಿ ಆಗುತ್ತಿದ್ದು, ಪ್ರತಿ ಗಂಟೆಗೆ 15,000ಕ್ಕೂ ಹೆಚ್ಚು ಟಿಕೆಟ್‌ಗಳು (Tocket) ಮಾರಾಟವಾಗುತ್ತಿವೆ. ಆನ್‌ಲೈನ್ ಬುಕಿಂಗ್‌ನಲ್ಲಿ (Online Booking) ಸಿನಿಮಾ ಹೊಸ ದಾಖಲೆ ಬರೆಯುತ್ತಿದೆ.
ವೀಕೆಂಡ್‌ನಲ್ಲಿ ಹೌಸ್‌ಫುಲ್ ಬೋರ್ಡ್‌ಗಳು ಬೀಳುತ್ತಿವೆ. ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಮಲ್ಟಿಪ್ಲೆಕ್ಸ್ ಹಾಗೂ ಸಿಂಗಲ್ ಸ್ಕ್ರೀನ್‌ಗಳಲ್ಲಿ ವೀಕೆಂಡ್ ಪ್ರದರ್ಶನಗಳು ಕ್ಷಣಾರ್ಧದಲ್ಲಿ ಸೋಲ್ಡ್ ಔಟ್ ಆಗುತ್ತಿವೆ.ಈ ಸಿನಿಮಾಕ್ಕೆ ಸಿಕ್ಕಿರುವ ಅತ್ಯುತ್ತಮ 'ಮೌತ್ ಟಾಕ್' (Word of mouth) ಫಲವಾಗಿ ಮೂರನೇ ವಾರದಲ್ಲೂ ಫ್ಯಾಮಿಲಿ ಆಡಿಯನ್ಸ್ ಚಿತ್ರಮಂದಿರಗಳತ್ತ ಲಗ್ಗೆ ಇಡುತ್ತಿದ್ದಾರೆ.
ಹೊಸ ಚಿತ್ರಗಳು ರಿಲೀಸ್ ಆಗುತ್ತಿದ್ದರೂ, ಜನರ ಮೊದಲ ಆಯ್ಕೆಯಾಗಿ ‘ಪ್ರೇಮದ ಊರಲಿ’ ತನ್ನ ಅಧಿಪತ್ಯವನ್ನು ಮುಂದುವರಿಸಿ ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಗಳಿಕೆ ಕಾಣುತ್ತಿದೆ.
ಇದನ್ನೂ ಓದಿ: Bigg Boss kannada 13: ನೀವು ಯಾವಾಗಲೂ ಗಗನ್ ಪಕ್ಕ ಇರೋ ತಾಂಡವ್! ಗಾನವಿ ಕೌಂಟರ್
ಸಿನಿಮಾ ಈಗಾಗಲೇ ಕರ್ನಾಟಕದಲ್ಲಿ 40 ಕೋಟಿಗೂ ಹೆಚ್ಚು ಗಳಿಕೆ ಮಾಡಿದೆ. ತೆಲುಗಿನಲ್ಲಿ ಸಹ ಇತ್ತೀಚೆಗಷ್ಟೆ ಇದೇ ಸಿನಿಮಾ ಬಿಡುಗಡೆ ಆಗಿದ್ದು, ಅಲ್ಲಿಯೂ ಸಹ ಸಿನಿಮಾ ಭರ್ಜರಿ ಗಳಿಕೆ ಮಾಡುತ್ತಿದೆ. ಮಾತ್ರವಲ್ಲದೆ, ಅಲ್ಲಿ ಸ್ಟಾರ್ ನಟ ನಾನಿಯ ಭಾರಿ ಬಜೆಟ್ ಸಿನಿಮಾ ‘ದಿ ಪ್ಯಾರಡೈಸ್’ ಅನ್ನು ಸಹ ಟಿಕೆಟ್ ಮಾರಾಟದಲ್ಲಿ ಹಿಂದಿಕ್ಕಿದೆ.
ಮನೋಜ್ ಕುಮಾರ್ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರವು ಅಪ್ಪಟ ರೊಮ್ಯಾಂಟಿಕ್ ಫ್ಯಾಮಿಲಿ ಡ್ರಾಮಾವಾಗಿದೆ. ಹಳ್ಳಿಯ ಸೊಗಡಿನ ಹಿನ್ನೆಲೆಯಲ್ಲಿ ಸಾಗುವ ಕಥೆಯು ಸಂಪ್ರದಾಯಸ್ಥ ಕುಟುಂಬವೊಂದಕ್ಕೆ ಸೊಸೆಯಾಗಿ ಕಾಲಿಡುವ ವಿದೇಶದಿಂದ ಮರಳುವ ಯುವತಿಯ ಬದುಕಿನ ಸುತ್ತ ಸುತ್ತುತ್ತದೆ. ಹೊಸ ವಾತಾವರಣಕ್ಕೆ ಹೊಂದಿಕೊಳ್ಳಲು ಆಕೆ ಪಡುವ ಪಾಡು, ತಲೆಮಾರುಗಳ ನಡುವಿನ ಅಂತರ, ತಂದೆ-ಮಗನ ನಡುವಿನ ಭಾವನಾತ್ಮಕ ಸಂಬಂಧ ಹಾಗೂ ಕೌಟುಂಬಿಕ ಸವಾಲುಗಳನ್ನು ಮನಮುಟ್ಟುವಂತೆ ಕಟ್ಟಿಕೊಡಲಾಗಿದೆ.
ಇದನ್ನೂ ಓದಿ: Bigg Boss Kannada 13: ಮಂಜುನಾಥ್‌ಗೆ ಕೊನೆಯ ಕಿವಿಮಾತು
ಪ್ರೀತಿ, ತಿಳಿವಳಿಕೆ ಮತ್ತು ವಿಭಿನ್ನ ಜೀವನಶೈಲಿಗಳ ನಡುವಿನ ಹೊಂದಾಣಿಕೆಯೇ ಚಿತ್ರದ ಮುಖ್ಯ ತಿರುಳಾಗಿದ್ದು, ಇದು ಪ್ರತಿಯೊಬ್ಬ ಕುಟುಂಬಸ್ಥರನ್ನೂ ಸೆಳೆಯುತ್ತಿದೆ.