ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಬ್ಲಾಕ್‌ ಬಸ್ಟರ್‌ ʻಪ್ರೇಮದ ಊರಲಿʼ ಸಿನಿಮಾ ಟೀಮ್‌ನಿಂದ ಬಂತು ದಿಢೀರ್‌ ಸ್ಪಷ್ಟನೆ; ವದಂತಿಗಳನ್ನು ನಂಬದಿರಿ!

Premada Oorali Movie: ರಾಜ್ಯಾದ್ಯಂತ ಬಾಕ್ಸ್ ಆಫೀಸ್ ಧೂಳೆಬ್ಬಿಸಿ ʻಪ್ರೇಮದ ಊರಲಿʼ ಸಿನಿಮಾವು 50 ಕೋಟಿ ಕ್ಲಬ್ ಸೇರಿ ಸಂಚಲನ ಮೂಡಿಸಿದೆ. ಚಿತ್ರಮಂದಿರಗಳಲ್ಲಿ ಯಶಸ್ವಿ 25ನೇ ದಿನದತ್ತ ಮುನ್ನುಗ್ಗುತ್ತಿರುವ ಬೆನ್ನಲ್ಲೇ ಹರಿದಾಡುತ್ತಿದ್ದ ಓಟಿಟಿ ಹಾಗೂ ಸ್ಯಾಟಲೈಟ್ ಪ್ರಸಾರದ ವದಂತಿಗಳಿಗೆ ಚಿತ್ರತಂಡ ಅಧಿಕೃತವಾಗಿ ತೆರೆಎಳೆದಿದೆ.

ರಂಗಾಯಣ ರಘು, ಶ್ರೀರಾಮ್, ರಮಿಕಾ ಶಿವು ಮುಂತಾದವರು ನಟಿಸಿರುವ ʻಪ್ರೇಮದ ಊರಲಿʼ ಸಿನಿಮಾವು ಬಾಕ್ಸ್‌ ಆಫೀಸ್‌ನಲ್ಲಿ ಬ್ಲಾಕ್‌ ಬಸ್ಟರ್‌ ಹಿಟ್‌ ಎನಿಸಿಕೊಂಡಿದೆ. ಈಗಾಗಲೇ ಈ ಸಣ್ಣ ಬಜೆಟ್‌ನ ಸಿನಿಮಾ 50 ಕೋಟಿ ರೂ. ಕ್ಲಬ್‌ ಸೇರಿದ್ದು 50ನೇ ದಿನದತ್ತ ಮುನ್ನುಗ್ಗಿದೆ. ಈ ಮಧ್ಯೆ ಚಿತ್ರದ ಕುರಿತು ಒಂದಷ್ಟು ವದಂತಿಗಳು ಹಬ್ಬಿದ್ದು, ಚಿತ್ರತಂಡ ಆ ಬಗ್ಗೆ ಸ್ಪಷ್ಟನೆ ನೀಡಿದೆ.

ಚಿತ್ರತಂಡ ಹಂಚಿಕೊಂಡ ಸ್ಪಷ್ಟನೆ ಏನು?

"ಪ್ರೇಕ್ಷಕರ ಅಪಾರ ಪ್ರೀತಿ, ಅಭಿಮಾನ ಹಾಗೂ ಬೆಂಬಲದೊಂದಿಗೆ 'ಪ್ರೇಮದ ಊರಲಿ' ಚಿತ್ರವು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಈ ಸಂದರ್ಭದಲ್ಲಿ ಚಿತ್ರದ ಡಿಜಿಟಲ್ (OTT) ಹಾಗೂ ಸ್ಯಾಟಲೈಟ್ (ಟಿವಿ) ಪ್ರಸಾರ ಹಕ್ಕುಗಳ ಕುರಿತು ಚಿತ್ರತಂಡದಿಂದ ಒಂದು ಮಹತ್ವದ ಸ್ಪಷ್ಟನೆ ನೀಡಲು ಬಯಸುತ್ತೇವೆ"

ನಾವು ಯಾವುದೇ ಒಪ್ಪಂದ ಮಾಡಿಕೊಂಡಿಲ್ಲ

"ನಮ್ಮ ಮೊದಲ ಆದ್ಯತೆ ಚಿತ್ರಮಂದಿರಗಳೇ.. ಪ್ರೇಕ್ಷಕರು 'ಪ್ರೇಮದ ಊರಲಿ' ಚಿತ್ರವನ್ನು ದೊಡ್ಡ ಪರದೆಯ ಮೇಲೆ ವೀಕ್ಷಿಸಿ, ಅದರ ಪ್ರೀತಿ, ಭಾವನೆ ಹಾಗೂ ಅನುಭವವನ್ನು ಸಂಪೂರ್ಣವಾಗಿ ಆಸ್ವಾದಿಸಬೇಕು ಎಂಬುದೇ ನಮ್ಮ ಆಶಯ. 'ಪ್ರೇಮದ ಊರಲಿ' ಚಿತ್ರದ OTT ಅಥವಾ ಟಿವಿ ಪ್ರಸಾರ ಹಕ್ಕುಗಳಿಗೆ ಸಂಬಂಧಿಸಿದಂತೆ ಇದುವರೆಗೂ ಯಾವುದೇ ಸಂಸ್ಥೆ ಅಥವಾ ವೇದಿಕೆಯೊಂದಿಗೆ ಒಪ್ಪಂದ ಮಾಡಿಕೊಂಡಿಲ್ಲ ಹಾಗೂ ಯಾವುದೇ ರೀತಿಯ ಅಧಿಕೃತ ಬದ್ಧತೆಯನ್ನೂ ನೀಡಿಲ್ಲ"

ಚಿತ್ರತಂಡ ಹಂಚಿಕೊಂಡಿರುವ ಸ್ಪಷ್ಟನೆ



ಚಿತ್ರತಂಡವೇ ನೇರವಾಗಿ ಹೇಳಲಿದೆ

"ಸದ್ಯಕ್ಕೆ ಚಿತ್ರದ OTT ಅಥವಾ ಟಿವಿ ಪ್ರಸಾರಕ್ಕೆ ಸಂಬಂಧಿಸಿದಂತೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಈ ಕುರಿತು ಮುಂದಿನ ದಿನಗಳಲ್ಲಿ ಯಾವುದೇ ಅಧಿಕೃತ ಮಾಹಿತಿ ಇದ್ದಲ್ಲಿ ಅದನ್ನು ಚಿತ್ರತಂಡವೇ ನೇರವಾಗಿ ಪ್ರಕಟಿಸಲಿದೆ. 'ಪ್ರೇಮದ ಊರಲಿ' ಚಿತ್ರವನ್ನು ಚಿತ್ರಮಂದಿರಗಳಲ್ಲಿ ನೋಡಿ, ಪ್ರೀತಿಸಿ, ಬೆಂಬಲಿಸುತ್ತಿರುವ ಪ್ರತಿಯೊಬ್ಬ ಪ್ರೇಕ್ಷಕರಿಗೂ ನಮ್ಮ ಹೃದಯಪೂರ್ವಕ ಧನ್ಯವಾದಗಳು. ನಿಮ್ಮ ಪ್ರೀತಿಯೇ ನಮ್ಮ ಚಿತ್ರದ ನಿಜವಾದ ಗೆಲುವು" ಎಂದು ಚಿತ್ರತಂಡ ಸ್ಪಷ್ಟನೆ ನೀಡಿದೆ.

Premada Oorali movie: ಗಂಟೆಗೆ 15 ಸಾವಿರ ಟಿಕೆಟ್ ಮಾರಾಟ; ‘ಪ್ರೇಮದ ಊರಲಿ’ ಸಿನಿಮಾ ಭರ್ಜರಿ ಗಳಿಕೆ

50 ಕೋಟಿ ರೂ. ಕ್ಲಬ್‌ಗೆ ʻಪ್ರೇಮದ ಊರಲಿʼ

ಸೆ.25ರಂದು ಅದ್ಧೂರಿಯಾಗಿ ತೆರೆಕಂಡ ʻಪ್ರೇಮದ ಊರಲಿʼ ಸಿನಿಮಾ, ಮೊದಲ ದಿನದಿಂದಲೇ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿತ್ತು. ದಿನದಿಂದ ದಿನಕ್ಕೆ ಮೌತ್‌ ಪಬ್ಲಿಸಿಟಿ ಹೆಚ್ಚಾಗುತ್ತಾ ಸಾಗಿದ್ದು, 17ನೇ ದಿನ ಅತೀ ಹೆಚ್ಚು, ಎಂದರೆ 8 ಕೋಟಿ ರೂ. ಗಳಿಕೆ ಮಾಡಿದೆ. ಈ ಮೂಲಕ ಭಾರತದಲ್ಲಿ ಈ ಸಿನಿಮಾದ ಒಟ್ಟಾರೆ ಗಳಿಕೆಯು 50 ಕೋಟಿ ರೂ. ದಾಟಿದೆ.