ಬಾಲಿವುಡ್ನ ಖ್ಯಾತ ನಟಿ ಪ್ರಿಯಾಂಕಾ ಚೋಪ್ರಾ ಸದ್ಯ ‘ಬ್ಲೂಫ್ಲೈ’ (Bluefly) ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ‘ಪ್ರಿಡೇಟರ್ಸ್’ (Predators) ಚಿತ್ರದ ನಿರ್ದೇಶನದ ಮೂಲಕ ಜನಪ್ರಿಯರಾಗಿರುವ ನಿಮ್ರೋಡ್ ಆಂಟಲ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಪ್ರಿಯಾಂಕಾ ಜೊತೆಗೆ ಮೈಕೆಲ್ ಚಿಕ್ಲಿಸ್, ರಸೆಲ್ ಕ್ರೋವ್ ಹಾಗೂ ಡೇನಿಯಲ್ ಮ್ಯಾಕ್ಫರ್ಸನ್ ಸೇರಿದಂತೆ ಹಲವು ಖ್ಯಾತ ಕಲಾವಿದರು ಚಿತ್ರದಲ್ಲಿ ನಟಿಸುತ್ತಿದ್ದಾರೆ.
ಚಿತ್ರೀಕರಣದ ನಡುವೆಯೂ ಪ್ರಿಯಾಂಕಾ ತಮ್ಮ ಕುಟುಂಬದೊಂದಿಗೆ ಅಮೂಲ್ಯ ಸಮಯ ಕಳೆಯುತ್ತಿದ್ದಾರೆ. ಕಡಲತೀರದಲ್ಲಿ ವಾಕಿಂಗ್ ಮಾಡುವುದು, ತಾಯಿ ಡಾ. ಮಧು ಅಖೌರಿ ಚೋಪ್ರಾ ಹಾಗೂ ಮಗಳು ಮಲ್ತಿ ಮೇರಿ ಚೋಪ್ರಾ ಜೋನಸ್ ಜೊತೆ ಸಮಯ ಕಳೆಯುತ್ತಿರುವ ಸುಂದರ ಕ್ಷಣಗಳನ್ನು ಅವರು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ಮಗಳ ಜೊತೆ ಗಾಯತ್ರಿ ಮಂತ್ರ ಪಠಿಸಿದ ಪ್ರಿಯಾಂಕಾ ಚೋಪ್ರಾ
ಪ್ರಿಯಾಂಕಾ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಫೋಟೋ ಮತ್ತು ವಿಡಿಯೋಗಳ ಪೈಕಿ ಒಂದು ವಿಡಿಯೋ ಎಲ್ಲರ ಗಮನ ಸೆಳೆದಿದೆ. ಈ ವಿಡಿಯೋದಲ್ಲಿ ಪ್ರಿಯಾಂಕಾ ತಮ್ಮ ಮಗಳು ಮಾಲತಿಯನ್ನು ಮಡಿಲಿನಲ್ಲಿ ಕೂರಿಸಿಕೊಂಡಿದ್ದಾರೆ. ತಾಯಿ-ಮಗಳು ಇಬ್ಬರೂ ಪ್ರಾರ್ಥನೆ ಮಾಡುತ್ತಿರುವಂತೆ ಕಾಣಿಸುತ್ತಾರೆ.
ಇದನ್ನೂ ಓದಿ: Bigg Boss Kannada 13: ಇಬ್ಬರು ಯುವರಾಣಿಯರಲ್ಲಿ ಯಾರಾಗ್ತಾರೆ ಮಹಾರಾಣಿ?
ಕಿಟಕಿಯ ಹೊರಗೆ ನೋಡುತ್ತಾ ಪುಟ್ಟ ಮಾಲತಿ ಗಾಯತ್ರಿ ಮಂತ್ರವನ್ನು ಪಠಿಸುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ. ಮಂತ್ರದ ಕೊನೆಯ ಸಾಲನ್ನು ಮುಗಿಸಿದ ತಕ್ಷಣ ಪ್ರಿಯಾಂಕಾ, "ಸೋ ಬ್ಯೂಟಿಫುಲ್" (So beautiful) ಎಂದು ಮಗಳನ್ನು ಮೆಚ್ಚಿಕೊಂಡಿದ್ದಾರೆ. ಮಗಳನ್ನು ಭಾರತೀಯ ಸಂಸ್ಕೃತಿ ಮತ್ತು ಸಂಪ್ರದಾಯಗಳ ಜೊತೆಗೆ ಬೆಳೆಸುತ್ತಿರುವ ಪ್ರಿಯಾಂಕಾ ಅವರ ಪ್ರಯತ್ನಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಮನೆಯಲ್ಲಿ ಪೂಜೆ ಮಾಡುವುದರಿಂದ ಹಿಡಿದು ಹೋಳಿ ಹಬ್ಬ ಆಚರಿಸುವವರೆಗೆ ಮಾಲತಿ ಭಾರತೀಯ ಸಂಸ್ಕೃತಿಯ ಪರಿಚಯ ಮಾಡಿಕೊಡುತ್ತಿದ್ದಾರೆ ಪ್ರಿಯಾಂಕಾ. ಅಯೋಧ್ಯೆಯ ರಾಮಮಂದಿರ ಹಾಗೂ ಸಿದ್ಧಿವಿನಾಯಕ ದೇವಸ್ಥಾನಕ್ಕೂ ಮಗಳನ್ನು ಕರೆದೊಯ್ದಿದ್ದಾರೆ. ಇದರ ಜೊತೆಗೆ ಕ್ರಿಸ್ಮಸ್, ಹ್ಯಾಲೋವೀನ್, ಈಸ್ಟರ್ ಮತ್ತು ಥ್ಯಾಂಕ್ಸ್ಗಿವಿಂಗ್ ಸೇರಿದಂತೆ ಪಾಶ್ಚಿಮಾತ್ಯ ಹಬ್ಬಗಳನ್ನೂ ಕುಟುಂಬದೊಂದಿಗೆ ಆಚರಿಸುತ್ತಿದ್ದಾರೆ.
‘ಬ್ಲೂಫ್ಲೈ’ ಶೂಟಿಂಗ್ನ ಸುಂದರ ಕ್ಷಣಗಳ ಫೋಟೋ ಡಂಪ್
ಪ್ರಿಯಾಂಕಾ ಹಂಚಿಕೊಂಡಿರುವ ‘ಬ್ಲೂಫ್ಲೈ’ ಫೋಟೋ ಡಂಪ್ನಲ್ಲಿ ಅವರ ಮೇಕಪ್ ಇಲ್ಲದ ಸೆಲ್ಫಿ ಮೊದಲಿಗೆ ಕಾಣಿಸಿಕೊಂಡಿದೆ. ನಂತರದ ಫೋಟೋಗಳಲ್ಲಿ ಮಲ್ತಿ ಕಡಲತೀರದಲ್ಲಿ ಮರಳಿನೊಂದಿಗೆ ಆಟವಾಡುತ್ತಿರುವುದು, ತಾಯಿಯ ಸಿನಿಮಾದ ಸ್ಕ್ರಿಪ್ಟ್ ಓದುತ್ತಿರುವುದು, ಬಣ್ಣಗಳಿಂದ ಚಿತ್ರ ಬಿಡಿಸುತ್ತಿರುವುದು ಹಾಗೂ ಟೀ ಕುಡಿಯುತ್ತಿರುವ ಕ್ಷಣಗಳಿವೆ.
ಸಿನಿಮಾ ಸೆಟ್ನಲ್ಲಿಯೂ ಮಲ್ತಿ ಸಮಯ ಕಳೆಯುತ್ತಿರುವ ಫೋಟೋಗಳನ್ನು ಪ್ರಿಯಾಂಕಾ ಹಂಚಿಕೊಂಡಿದ್ದಾರೆ. ಮತ್ತೊಂದು ಚಿತ್ರದಲ್ಲಿ ಅವರ ತಾಯಿ ಡಾ. ಮಧು ಅಖೌರಿ ಚೋಪ್ರಾ ಕಡಲತೀರದಲ್ಲಿ ವಿಶ್ರಾಂತಿ ಪಡೆಯುತ್ತಿರುವುದನ್ನು ಕಾಣಬಹುದು.
ಸ್ವತಂತ್ರ ಮತ್ತು ಧೈರ್ಯವಂತ ಮಗಳನ್ನು ಬೆಳೆಸುವ ಬಗ್ಗೆ ಪ್ರಿಯಾಂಕಾ ಸಲಹೆ ಇತ್ತೀಚೆಗೆ ‘ದಿ ಬ್ಲಫ್’ (The Bluff) ಸಿನಿಮಾದ ಪ್ರಚಾರದ ವೇಳೆ ಪ್ರಿಯಾಂಕಾ ಚೋಪ್ರಾ, ಯುವಾ (Yuvaa) ಸಂಸ್ಥೆಯ ನಿಖಿಲ್ ತನೇಜಾ ಅವರೊಂದಿಗೆ ನಡೆಸಿದ ಸಂದರ್ಶನದಲ್ಲಿ ಮಗಳನ್ನು ಹೇಗೆ ಬೆಳೆಸುತ್ತಿದ್ದಾರೆ ಎಂಬ ಬಗ್ಗೆ ಮನಬಿಚ್ಚಿ ಮಾತನಾಡಿದ್ದರು.
"ನನಗೆ ಏನಾದರೂ ಅಭಿಪ್ರಾಯವಿದ್ದರೆ, ತಂದೆ ತಮ್ಮ ಸ್ನೇಹಿತರ ಜೊತೆ ಕುಳಿತಿದ್ದರೂ ನನಗೆ ಮಾತನಾಡಲು ಅವಕಾಶ ಮಾಡಿಕೊಡುತ್ತಿದ್ದರು. ನಾನು ನಾನಾಗಿರಲು ಅವರು ನನಗೆ ಜಾಗ ನೀಡಿದ್ದರು," ಎಂದು ಪ್ರಿಯಾಂಕಾ ನೆನಪಿಸಿಕೊಂಡಿದ್ದಾರೆ. "ನನ್ನ ಜೀವನದ ಆರಂಭದಲ್ಲೇ ಅವರು ನನಗೆ ನನ್ನದೇ ಆದ ನಿರ್ಧಾರಗಳನ್ನು ತೆಗೆದುಕೊಳ್ಳುವ ಸ್ವಾತಂತ್ರ್ಯ ನೀಡಿದ್ದರು. ಅವರ ಈ ಗುಣವನ್ನು ನಾನು ತುಂಬಾ ಮೆಚ್ಚಿಕೊಂಡಿದ್ದೇನೆ," ಎಂದು ಹೇಳಿದ್ದಾರೆ.
ಇನ್ನು ನಿಕ್ ಜೋನಸ್ ಕೂಡ ತಮ್ಮ ಮಗಳು ಮಲ್ತಿ ಮೇರಿ ಕುರಿತಾದ ಮುದ್ದಾದ ಘಟನೆಯೊಂದನ್ನು ‘ದಿ ಜೋನಸ್ ಬ್ರದರ್ಸ್ ಪಾಡ್ಕಾಸ್ಟ್’ (The Jonas Brothers Podcast) ಸಂಚಿಕೆಯಲ್ಲಿ ಹಂಚಿಕೊಂಡಿದ್ದಾರೆ. ಒಮ್ಮೆ ಮಲ್ತಿ ತನ್ನೊಂದಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದಳು. ಆಕೆಗೆ ಇಷ್ಟವಾದ ಹಾಡುಗಳ ಜೊತೆಗೆ ಜೋನಸ್ ಬ್ರದರ್ಸ್ ತಂಡದ ಕೆಲವು ಹಾಡುಗಳನ್ನೂ ನಿಕ್ ಪ್ಲೇ ಮಾಡಿದ್ದರು. ತಮ್ಮ ಹಾಡುಗಳನ್ನು ಮಗಳಿಗೆ ಪರಿಚಯಿಸುವುದು ಅವರ ಉದ್ದೇಶವಾಗಿತ್ತು.
ಈ ವೇಳೆ ನಿಕ್ ಜೋನಸ್ ಅವರದ್ದೇ ಒಂದು ಹಾಡು ಪ್ಲೇ ಆಯಿತು. ಆಗ ಮಲ್ತಿ, "ಇದು ನೀವೇ ಹಾಡಿರುವುದಾ?" ಎಂದು ಅಪ್ಪನನ್ನು ಪ್ರಶ್ನಿಸಿದಳು.ದಕ್ಕೆ ನಿಕ್ ಹೌದು ಎಂದು ಉತ್ತರಿಸಿದರು. ತಕ್ಷಣ ಮಾಲತಿ, "ಹಾಗಾದರೆ ಹಾಡಿ" ಎಂದು ಹೇಳಿದಳಂತೆ!
ಇದನ್ನೂ ಓದಿ: Vijay Antony: ಮಗಳ ನೆನಪಲ್ಲಿ ಚಪ್ಪಲಿ ಧರಿಸುವುದನ್ನೇ ಬಿಟ್ಟ ವಿಜಯ್ ಆಂಟೋನಿ!
ಸಿನಿಮಾ ಕೆಲಸಗಳ ನಡುವೆ ಕುಟುಂಬದೊಂದಿಗೆ ಸಮಯ ಕಳೆಯುತ್ತಾ, ಮಗಳಿಗೆ ಭಾರತೀಯ ಸಂಸ್ಕೃತಿ, ಸಂಪ್ರದಾಯ ಹಾಗೂ ಸ್ವತಂತ್ರವಾಗಿ ಬದುಕುವ ಮೌಲ್ಯಗಳನ್ನು ಕಲಿಸುತ್ತಿರುವ ಪ್ರಿಯಾಂಕಾ ಚೋಪ್ರಾ ಅವರ ಕುಟುಂಬದ ಸುಂದರ ಕ್ಷಣಗಳು ಅಭಿಮಾನಿಗಳ ಮನಗೆದ್ದಿವೆ.