Priyanka Chopra: ಖ್ಯಾತ ನಟನ ಜೊತೆ ನಟಿ ಪ್ರಿಯಾಂಕ ಚೋಪ್ರಾಗೆ ಇತ್ತಾ ಅಫೇರ್? ಈ ನಿರ್ದೇಶಕ ಹೇಳಿದ್ದೇನು?
Priyanka Chopra: ಮದುವೆಗೂ ಮುನ್ನವೇ ಬಾಲಿವುಡ್ ಖ್ಯಾತ ನಟ ಶಾರುಖ್ ಖಾನ್ ಜೊತೆಗೆ ನಟಿ ಪ್ರಿಯಾಂಕಾ ಅವರಿಗೆ ಅಫೇರ್ಸ್ ಇತ್ತು ಎಂಬ ಗಾಸಿಪ್ ಈ ಹಿಂದಿನಿಂದಲೂ ಹರಿದಾಡುತ್ತಿದೆ. ಇದೀಗ ನಿರ್ದೇಶಕ ಪ್ರಹ್ಲಾದ್ ಕಕ್ಕರ್ ಅವರು ನಟಿ ಪ್ರಿಯಾಂಕಾ ಚೋಪ್ರಾ ಮತ್ತು ನಟ ಶಾರುಖ್ ಖಾನ್ ಅವರಿಬ್ಬರ ಗಾಸಿಪ್ ನ ಬಗ್ಗೆ ಮಾತನಾಡಿದ್ದಾರೆ. ಅವರಿಬ್ಬರ ರಿಲೇಶನ್ ಶಿಪ್ ತುಂಬಾ ಸೀರಿಯಸ್ ಆಗಿತ್ತು ಎಂದು ಸಹ ಹೇಳಿದ್ದು, ಸದ್ಯ ಈ ವಿಚಾರ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

-

ಮುಂಬೈ: ತಮಿಳನ್, ಅಂದಾಜ್, ಮುಜ್ಸೆ ಶಾದಿ ಕರೋಗಿ, ಫ್ಯಾಷನ್ , ಡಾನ್ ಸಿನಿಮಾ ಮೂಲಕ ಖ್ಯಾತಿ ಪಡೆದ ನಟಿ ಪ್ರಿಯಾಂಕ ಚೋಪ್ರಾ (Priyanka Chopra) ಅವರಿಗೆ ತಮ್ಮ ಅದ್ಭುತ ಅಭಿನ ಯ ದಿಂದಲೇ ಸಿನಿಮಾ ಇಂಡಸ್ಟ್ರಿಯಲ್ಲಿ ಅಪಾರ ಅಭಿಮಾನಿ ಬಳಗ ಇದೆ ಎಂದೆ ಹೇಳಬಹುದು. ಬಾಲಿವುಡ್ ಮಾತ್ರವಲ್ಲದೆ ಹಾಲಿವುಡ್‌ನಲ್ಲಿಯೂ ಸಾಕಷ್ಟು ಸಿನಿಮಾ ಆಫರ್ಸ್ ಪ್ರಿಯಾಂಕಾಗೆ ಸಿಕ್ಕಿದೆ. ಅನೇಕ ಜಾಹೀರಾತಿನ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದ ಅವರು ನಟನೆ, ನಿರ್ಮಾಪಕಿಯಾಗಿಗೂ ಪ್ರಸಿದ್ಧಿ ಹೊಂದಿದ್ದಾರೆ. ಅದೇ ರೀತಿ ನಟಿ ಪ್ರಿಯಾಂಕಾ ಚೋಪ್ರಾ ಅವರಿಗೆ ವೈಯಕ್ತಿಕ ಬದುಕಿನ ಬಗ್ಗೆ ಈ ಹಿಂದೆ ಅನೇಕ ಗಾಸಿಪ್ ಹರಿದಾಡಿತ್ತು. ಮದುವೆಗೂ ಮುನ್ನವೇ ಬಾಲಿವುಡ್ ಖ್ಯಾತ ನಟ ಶಾರುಖ್ ಖಾನ್ ಜೊತೆಗೆ ನಟಿ ಪ್ರಿಯಾಂಕಾ ಅವರಿಗೆ ಅಫೇರ್ಸ್ ಇತ್ತು ಎಂಬ ಗಾಸಿಪ್ ಈ ಹಿಂದಿನಿಂದಲೂ ಹರಿದಾಡುತ್ತಿದೆ. ಇದೀಗ ನಿರ್ದೇಶಕ ಪ್ರಹ್ಲಾದ್ ಕಕ್ಕರ್ ಅವರು ನಟಿ ಪ್ರಿಯಾಂಕ ಚೋಪ್ರಾ ಮತ್ತು ನಟ ಶಾರುಖ್ ಖಾನ್ ಅವರಿಬ್ಬರ ಗಾಸಿಪ್ ನ ಬಗ್ಗೆ ಮಾತನಾಡಿದ್ದಾರೆ. ಅವರಿಬ್ಬರ ರಿಲೇಶನ್ ಶಿಪ್ ತುಂಬಾ ಸೀರಿಯಸ್ ಆಗಿತ್ತು ಎಂದು ಸಹ ಹೇಳಿದ್ದು ಸದ್ಯ ಈ ವಿಚಾರ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.
ತಮ್ಮ ನಟನೆಯಿಂದ ಗಮನ ಸೆಳೆಯುವ ನಟಿ ಪ್ರಿಯಾಂಕಾ ಚೋಪ್ರಾ ಅವರು ಎಲ್ಲ ರೀತಿಯ ಪಾತ್ರಗಳಲ್ಲಿಯೂ ನಟಿಸಿ ಜೀವ ತುಂಬಿದ್ದಾರೆ. ನಟಿ ಪ್ರಿಯಾಂಕಾ ಚೋಪ್ರಾ ಅವರು ಬಾಲಿವುಡ್ ನಲ್ಲಿ ಅನೇಕ ಸಿನಿಮಾದಲ್ಲಿ ದಿಗ್ಗಜ ನಟರೊಂದಿಗೆ ನಟಿಸಿದ್ದರೂ ಅವರ ಹೆಸರು ಹೆಚ್ಚು ಶಾರುಖ್ ಖಾನ್ ಜೊತೆಗೆ ಗಾಸಿಪ್ ವಿಚಾರದಲ್ಲಿ ಈ ಹಿಂದೆ ಕೇಳಿ ಬಂದಿತ್ತು. ಆದರೆ ಈ ಬಗ್ಗೆ ಪ್ರಿಯಾಂಕ ಯಾವುದೇ ಸ್ಪಷ್ಟನೆ ನೀಡದೆ ಸುಮ್ಮನಾಗಿದ್ದರು. ಆದರೆ ಈಗ ಜಾಹೀರಾತು ನಿರ್ದೇಶಕ ಪ್ರಹ್ಲಾದ್ ಕಕ್ಕರ್ ಅವರು ಪ್ರಿಯಾಂಕಾ ಅವರ ಅಫೇರ್ಗಳ ಬಗ್ಗೆ ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ.
ಪ್ರಹ್ಲಾದ್ ಕಕ್ಕರ್ ಅವರು ಇತ್ತೀಚಿನ ಸಂದರ್ಶನ ಒಂದರಲ್ಲಿ ಭಾಗಿಯಾಗಿ ನಟಿ ಪ್ರಿಯಾಂಕಾ ಬಗ್ಗೆ ಅನೇಕ ವಿಷಯ ರಿವೀಲ್ ಮಾಡಿದ್ದಾರೆ. ಪ್ರಿಯಾಂಕಾ ಅವರು ಬಾರ್ಬಿ ಡಾಲ್ ಇದ್ದಂತೆ. ತುಂಬಾನೇ ಮಹತ್ವಾಕಾಂಕ್ಷೆ ಹೊಂದಿರುವ ನಟಿ ಅವರಾಗಿದ್ದು ಕೆಲಸಕ್ಕೆ ಹೆಚ್ಚಿನ ಮಹತ್ವ ನೀಡುತ್ತಾರೆ. ಯಾವುದೇ ಕೆಲಸಕ್ಕೂ ಹೆಚ್ಚು ಏಕಾಗ್ರತೆ ಶ್ರದ್ಧೆ ಇಟ್ಟು ಅದನ್ನು ಮಾಡುತ್ತಾರೆ. ಹೀಗಾಗಿ ಯಾವುದೇ ಪಾತ್ರವಾದರೂ ಬಹಳ ಸುಲಭಕ್ಕೆ ತಮ್ಮನ್ನು ತಾವು ಸಮರ್ಪಿಸಿಕೊಂಡು ಅವರು ಅಭಿನಯಿಸುತ್ತಾರೆ ಎಂದಿದ್ದಾರೆ.
ಬಳಿಕ ಮಾತನಾಡಿ, ಅವರು ಯಾರೊಂದಿಗೂ ತುಂಬಾ ನಿಕಟ ಸಂಬಂಧ ಹೊಂದಿಲ್ಲ. ಆದರೆ ಅವರ ಬಗ್ಗೆ ಗಾಸಿಪ್ ಹರಿದಾಡುತ್ತಿತ್ತು. ಆದರೆ ಅವರು ಯಾವುದನ್ನು ಸ್ಪಷ್ಟೀಕರಿಸಲು ಬಯಸಲಿಲ್ಲ. ಬದಲಾಗಿ ಮೌನದಿಂದಲೇ ಎಲ್ಲವನ್ನು ಸರಿ ಮಾಡಲು ಬಯಸಿದ್ದರು. ಶಾರುಖ್ ಜೊತೆಗೆ ಅವರು ಹೊಂದಿದ್ದ ಸಂಬಂಧವು ಕ್ಷುಲಕ ಸಂಬಂಧವಾಗಿರಲಿಲ್ಲ,ಆದರೆ ಅದು ಬಹಳ ಗಂಭೀರವಾಗಿತ್ತು. ಹೀಗಾಗಿ ಅವರು ಅದರ ಬಗ್ಗೆ ಮಾತನಾಡುವುದನ್ನು ಕೂಡ ಇಷ್ಟ ಪಡುತ್ತಿರಲಿಲ್ಲ ಎಂದು ನಿರ್ದೇಶಕ ಪ್ರಹ್ಲಾದ್ಅವರು ಹೇಳಿದ್ದಾರೆ.
ಇದನ್ನು ಓದಿ:Brat Movie: ಡಾರ್ಲಿಂಗ್ ಕೃಷ್ಣ ನಟನೆಯ ಬ್ರ್ಯಾಟ್ ಚಿತ್ರದ ʼಗಂಗಿ ಗಂಗಿʼ ಹಾಡು ರಿಲೀಸ್
ನಟಿ ಪ್ರಿಯಾಂಕಾ ಚೋಪ್ರಾ ಅವರಿಗೆ ಬಾಲಿವುಡ್ ಸಿನಿಮಾ ಇಂಡಸ್ಟ್ರಿಯಲ್ಲಿ ಸಾಲು ಸಾಲು ಸಿನಿಮಾ ಆಫರ್ ಬರುತ್ತಿದ್ದ ಕಾಲಘಟ್ಟದಲ್ಲಿ 2006ರಲ್ಲಿ ನಟ ಶಾರುಖ್ ಖಾನ್ ಅವರ ಜೊತೆ ಡಾನ್ ಹೆಸರಿನ ಸಿನಿಮಾ ಆಫರ್ ಸಿಕ್ಕಿತ್ತು. ಈ ಸಿನಿಮಾದಲ್ಲಿ ಅವರಿಬ್ಬರು ಅದ್ಭುತವಾಗಿ ನಟಿಸಿ ಪ್ರೇಕ್ಷಕರ ಮನ ಗೆದ್ದಿದ್ದರು. ಬಳಿಕ ಇದೇ ಪೇರ್ ಕಾಂಬೀನೇಶನ್ ನಲ್ಲಿ 2011ರಲ್ಲಿ ಡಾನ್ 2 ಸಿನಿಮಾ ರಿಲೀಸ್ ಮಾಡಲಾಯಿತು. ಈ ವೇಳೆ ಇಬ್ಬರ ಮಧ್ಯೆ ಅಫೇರ್ ಇತ್ತು ಎಂದು ಆ ಕಾಲದಲ್ಲಿ ಗಾಸಿಪ್ ಹರಿದಾಡಿತ್ತು. ಆದರೆ ಶಾರುಖ್ ಖಾನ್ ಅವರಿಗೆ ಈಗಾಗಲೇ ವಿವಾಹ ಆಗಿತ್ತು. ಆದರೂ ಪ್ರಿಯಾಂಕಾ ಜೊತೆ ರಿಲೇಶನ್ ಶಿಪ್ ಹೊಂದಿದ್ದರು ಎಂದು ಹೇಳಲಾಗಿತ್ತು. ಸದ್ಯ ಪ್ರಿಯಾಂಕ ಅವರು ನಿಕ್ ಜೋನಸ್ ಅವರನ್ನು ಮದುವೆಯಾಗಿ ವಿದೇಶದಲ್ಲಿ ನೆಲೆಸಿದ್ದು ಹಾಲಿವುಡ್ ಸಿನಿಮಾ ಮತ್ತು ವೆಬ್ ಸೀರಿಸ್ ನಲ್ಲಿ ಅಭಿನಯಿಸುತ್ತಿದ್ದಾರೆ.