ಕಾಯಿನ್‌ಸ್ವಿಚ್‌ಗೆ 2.5 ಕೋಟಿ ಬಳಕೆದಾರರನ್ನು ಹೊಂದಿದ ಭಾರತದ ಪ್ರಥಮ ಕ್ರಿಪ್ಟೋ ಪ್ಲಾಟ್‌ಫಾರಂ ಹೆಗ್ಗಳಿಕೆ
2017 ರಲ್ಲಿ ಸ್ಥಾಪನೆಯಾಗಿರುವ ಕಾಯಿನ್‌ಸ್ವಿಚ್ ನಿರಂತರವಾಗಿ ಭಾರತೀಯ ಹೂಡಿಕೆದಾರರಿಗೆ ಡಿಜಿಟಲ್ ಅಸೆಟ್‌ಗಳಲ್ಲಿ ಹೂಡಿಕೆ ಮಾಡುವ ವಿಧಾನವನ್ನು ಸುಲಭವಾಗಿಸುತ್ತಲೇ ಇದೆ. ಇಂದು 2.5 ಕೋಟಿ ಬಳಕೆದಾರರನ್ನು ಹೊಂದುವ ಮೂಲಕ ಭಾರತದ ಅತಿದೊಡ್ಡ ಪ್ಲಾಟ್‌ಫಾರಂ ಎಂಬ ಸ್ಥಾನ ವನ್ನು ಪಡೆದುಕೊಂಡಿದ್ದಲ್ಲದೆ, ಅತ್ಯಂತ ವಿಶ್ವಾಸಾರ್ಹ ಕ್ರಿಪ್ಟೋ ಪ್ಲಾಟ್‌ಫಾರಂ ಕೂಡ ಆಗಿದೆ. ಅಷ್ಟೇ ಅಲ್ಲ, ಮೊದಲ ಬಾರಿಗೆ ಹೂಡಿಕೆ ವಲಯಕ್ಕೆ ಪ್ರವೇಶಿಸುತ್ತಿರುವವರಿಗೆ ಆತ್ಮವಿಶ್ವಾಸವನ್ನೂ ಇದು ನೀಡುತ್ತಿದೆ.

-

ಬೆಂಗಳೂರು: ಭಾರತದ ಅತಿದೊಡ್ಡ ಕ್ರಿಪ್ಟೋ ಟ್ರೇಡಿಂಗ್ ಪ್ಲಾಟ್‌ಫಾರಂ ಕಾಯಿನ್‌ಸ್ವಿಚ್ ಇಂದು 2.5 ಕೋಟಿ ನೋಂದಾಯಿತ ಬಳಕೆದಾರರ ಗುರಿಯನ್ನು ತಲುಪಿದ್ದು, ಇಷ್ಟು ಸಂಖ್ಯೆಯ ಬಳಕೆದಾರ ರನ್ನು ಹೊಂದಿರುವ ಪ್ರಥಮ ಭಾರತೀಯ ಕ್ರಿಪ್ಟೋ ಪ್ಲಾಟ್‌ಫಾರಂ ಆಗಿದೆ.
ರಿಟೇಲ್ ಹೂಡಿಕೆದಾರರು ಅಪಾರ ಸಂಖ್ಯೆಯಲ್ಲಿ ಭಾಗವಹಿಸಿದ್ದರಿಂದಾಗಿ ಈ ಮೈಲಿಗಲ್ಲನ್ನು ನಾವು ಸಾಧಿಸಿದ್ದೇವೆ. ದೈನಂದಿನ ಸರಾಸರಿ ಸ್ಪಾಟ್ ಟ್ರೇಡಿಂಗ್ ಪ್ರಮಾಣವು 2025 ರಲ್ಲಿ 2.4 ಪಟ್ಟು ಏರಿಕೆ ಯಾಗುತ್ತಿದ್ದು, ಕಾಯಿನ್‌ಸ್ವಿಚ್‌ನ ಮಾರ್ಕೆಟ್ ನಾಯಕತ್ವವನ್ನು ಇದು ಸೂಚಿಸುತ್ತಿದೆ.
2017 ರಲ್ಲಿ ಸ್ಥಾಪನೆಯಾಗಿರುವ ಕಾಯಿನ್‌ಸ್ವಿಚ್ ನಿರಂತರವಾಗಿ ಭಾರತೀಯ ಹೂಡಿಕೆದಾರರಿಗೆ ಡಿಜಿಟಲ್ ಅಸೆಟ್‌ಗಳಲ್ಲಿ ಹೂಡಿಕೆ ಮಾಡುವ ವಿಧಾನವನ್ನು ಸುಲಭವಾಗಿಸುತ್ತಲೇ ಇದೆ. ಇಂದು 2.5 ಕೋಟಿ ಬಳಕೆದಾರರನ್ನು ಹೊಂದುವ ಮೂಲಕ ಭಾರತದ ಅತಿದೊಡ್ಡ ಪ್ಲಾಟ್‌ಫಾರಂ ಎಂಬ ಸ್ಥಾನವನ್ನು ಪಡೆದುಕೊಂಡಿದ್ದಲ್ಲದೆ, ಅತ್ಯಂತ ವಿಶ್ವಾಸಾರ್ಹ ಕ್ರಿಪ್ಟೋ ಪ್ಲಾಟ್‌ಫಾರಂ ಕೂಡ ಆಗಿದೆ. ಅಷ್ಟೇ ಅಲ್ಲ, ಮೊದಲ ಬಾರಿಗೆ ಹೂಡಿಕೆ ವಲಯಕ್ಕೆ ಪ್ರವೇಶಿಸುತ್ತಿರುವವರಿಗೆ ಆತ್ಮವಿಶ್ವಾಸವನ್ನೂ ಇದು ನೀಡುತ್ತಿದೆ.
ಇದನ್ನೂ ಓದಿ: Naveen Sagar Column: ಪಾಕಿಸ್ತಾನ ಒಂದು ಹ್ಯಾಂಡ್ ಶೇಕ್ ಗಾಗಿ ಅಳುವಂತಾಯ್ತಲ್ಲ !
ಸುರಕ್ಷತೆ, ಅನುಸರಣೆ ಮತ್ತು ಪಾರದರ್ಶಕತೆಯ ಮೇಲೆ ಗಮನ ಹರಿಸಿದ್ದೇ ಈ ಬೆಳವಣಿಗೆಗೆ ಕಾರಣ ಎಂದು ಕಾಯಿನ್‌ಸ್ವಿಚ್ ಹೇಳುತ್ತದೆ. ಕಂಪನಿಯು ISO/IEC 27001:2022 ಪ್ರಮಾಣಿತವಾಗಿದೆ ಮತ್ತು ಫೈನಾನ್ಷಿಯಲ್ ಇಂಟಲಿಜೆನ್ಸ್ ಯುನಿಟ್ – ಭಾರತ (ಎಫ್‌ಐಯು-ಐಎನ್‌ಡಿ) ಇದರಲ್ಲಿ ನೋಂದಣಿ ಮಾಡಿಕೊಂಡಿದೆ. ಕಾರ್ಯಾಚರಣೆಯಲ್ಲಿ ವಿಶ್ವಾಸಕ್ಕೇ ಆದ್ಯತೆ ನೀಡಿರುವ ಕಾಯಿನ್‌ಸ್ವಿಚ್ ಉದ್ಯಮ ದಲ್ಲಿ ಹೂಡಿಕೆದಾರರಿಗೆ ಸುರಕ್ಷಿತ ಮತ್ತು ಪಾರದರ್ಶಕ ವಾತಾವರಣವನ್ನು ಒದಗಿಸಿದೆ.
ಕ್ರಿಪ್ಟೋ ಹೂಡಿಕೆಯನ್ನು ಜನರು ಅಳವಡಿಸಿಕೊಳ್ಳುತ್ತಿರುವಿಕೆ ಹೆಚ್ಚುತ್ತಿರುವುದರಿಂದ ಭಾರತದ ಹಣಕಾಸು ವ್ಯವಸ್ಥೆಯಲ್ಲಿ ಆಗುತ್ತಿರುವ ಬದಲಾವಣೆಯನ್ನು ಸೂಚಿಸುತ್ತದೆ. ಇತ್ತೀಚಿನ ಗೋಲ್ಡ್ ಮನ್ ಸ್ಯಾಕ್ಸ್ ವರದಿಯ ಪ್ರಕಾರ, ಮುಂದಿನ ದಶಕದಲ್ಲಿ 9.5 ಟ್ರಿಲಿಯನ್ ಡಾಲರ್ ಹಣಕಾಸು ಸ್ವತ್ತನ್ನು ಭಾರತದಲ್ಲಿನ ಕೌಟುಂಬಿಕ ಉಳಿತಾಯವು ಸೃಷ್ಟಿ ಮಾಡುತ್ತದೆ. ಇದಕ್ಕೆ ಮುಖ್ಯ ಕಾರಣವೇ ಜನರು ಭೌತಿಕ ಸ್ವತ್ತಿನಿಂದ ಹಣಕಾಸಿನ ಸ್ವತ್ತುಗಳಿಗೆ ಬದಲಾಗುತ್ತಿರುವುದಾಗಿದೆ. ಈ ಪೈಕಿ ದೊಡ್ಡ ಮೊತ್ತವು ಈಕ್ವಿಟಿ ಮತ್ತು ಇತರ ಅಸೆಟ್‌ಗಳಿಗೆ ಹರಿದು ಬರಲಿದ್ದು, ಆಧುನಿಕ ಭಾರತೀಯ ಹೂಡಿಕೆದಾರರಿಗೆ ಡಿಜಿಟಲ್ ಅಸೆಟ್‌ಗಳೂ ಹೆಚ್ಚು ಆಕರ್ಷಣೀಯವಾಗಿ ಕಾಣುತ್ತಿದೆ.
ಈ ಮೈಲಿಗಲ್ಲಿನ ಬಗ್ಗೆ ಮಾತನಾಡಿದ ಕಾಯಿನ್‌ಸ್ವಿಚ್‌ನ ಸಹಸಂಸ್ಥಾಪಕ ಆಶೀಶ್ ಸಿಂಘಾಲ್ “ಮೊದಲ ದಿನದಿಂದಲೂ, ಎಲ್ಲರಿಗೂ ಸಂಪತ್ತು ಸೃಷ್ಟಿಯ ಅವಕಾಶ ಸಿಗಬೇಕು ಎಂಬುದು ನಮ್ಮ ಗುರಿಯಾಗಿತ್ತು. ಹಣಕಾಸು ಪ್ರಯಾಣವನ್ನು ಆರಂಭಿಸುವವರಿಗೆ ಒಂದು ಸರಳ ಆಪ್ ಒದಗಿಸುವು ದಾಗಿರಲಿ ಅಥವಾ ಪರಿಣಿತ ಟ್ರೇಡರ್‌ಗಳಿಗೆ ಸುಧಾರಿತ ಟೂಲ್‌ಗಳನ್ನು ಒದಗಿಸುವುದಾಗಲೀ, ನಾವು ಮಾಡುವ ಎಲ್ಲ ಕೆಲಸದಲ್ಲೂ ಭಾರತೀಯ ಬಳಕೆದಾರರನ್ನು ಗಮನದಲ್ಲಿಟ್ಟುಕೊಳ್ಳುತ್ತೇವೆ. 2.5 ಕೋಟಿ ಬಳಕೆದಾರರನ್ನು ಗಳಿಸುವುದು ದೊಡ್ಡ ಮೈಲಿಗಲ್ಲಾಗಿದ್ದು, ಇದನ್ನು ಇನ್ನಷ್ಟು ವಿಶೇಷ ವಾಗಿಸುವ ಸಂಗತಿಯೇನೆಂದರೆ, ಈ ಪೈಕಿ ಬಹುತೇಕರು ನಮ್ಮಲ್ಲೇ ಮೊದಲ ಬಾರಿ ಕ್ರಿಪ್ಟೋ ಬಳಕೆ ಮಾಡಿದ್ದಾರೆ. ಇದು ನಮಗೆ ಅತ್ಯಂತ ವಿಶೇಷವಾಗಿದೆ.
ಈ ಅವಧಿಯಲ್ಲಿ ನಾವು ಭಾರತಕ್ಕೆ ವಿಶಿಷ್ಟ ಸಮಸ್ಯೆಗಳನ್ನು ಪರಿಹರಿಸುವುದರ ಮೇಲೆ ಗಮನ ಹರಿಸಿದ್ದೇವೆ. ರೂಪಾಯಿ ಆಧರಿತ ಉತ್ಪನ್ನಗಳನ್ನು ಒದಗಿಸುವುದು, ಕ್ರಿಪ್ಟೋದಿಂದ ಗಳಿಸಿದಾಗ ತೆರಿಗೆ ಫೈಲ್ ಮಾಡುವುದನ್ನು ಸರಳವಾಗಿಸುವುದು ಇತ್ಯಾದಿಯನ್ನು ನಾವು ಒದಗಿಸಿದ್ದೇವೆ. ಮುಂದಿನ ದಿನಗಳಲ್ಲಿ ಈ ಹೊಸ ಅಸೆಟ್ ಅನ್ನು ಸುರಕ್ಷಿತವಾಗಿ, ಜವಾಬ್ದಾರಿಯುತವಾಗಿ ಮತ್ತು ಹೆದರಿಕೆ ಇಲ್ಲದೇ ಆತ್ಮವಿಶ್ವಾಸದಿಂದ ಬಳಸುವ ವ್ಯವಸ್ಥೆಯನ್ನು ಒದಗಿಸುವ ನಮ್ಮ ಧ್ಯೇಯಕ್ಕೆ ನಾವು ಬದ್ಧವಾಗಿರುತ್ತೇವೆ” ಎಂದಿದ್ದಾರೆ.
“ಎಲ್ಲರಿಗೂ ಹಣ ಗಳಿಸುವ ಅವಕಾಶ ಸಮಾನವಾಗಿದೆ” ಎಂಬ ಧ್ಯೇಯವನ್ನು ಕಾಯಿನ್‌ಸ್ವಿಚ್ ಮುಂದುವರಿಸುತ್ತದೆ. ಕ್ರಿಪ್ಟೋ ಮುಖ್ಯವಾಹಿನಿಯ ಅಸೆಟ್ ಕ್ಲಾಸ್ ಆಗಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳುತ್ತಿರುವ ಕಂಪನಿಯು ಅನ್ವೇಷಣೆ, ಶಿಕ್ಷಣ ಮತ್ತು ಬಳಕೆದಾರರಿಗೆ ಆದ್ಯತೆಯ ಕಾರ್ಯವಿಧಾನದ ಮೂಲಕ ತಮ್ಮ ಪೋರ್ಟ್‌ಫೋಲಿಯೋಗೆ ಹೊಸ ಹೂಡಿಕೆಯನ್ನು ಸೇರಿಸಿ ಕೊಳ್ಳಲು ಪ್ರತಿ ಭಾರತೀಯ ಹೂಡಿಕೆದಾರರಿಗೂ ಅವಕಾಶ ಕಲ್ಪಿಸುತ್ತದೆ.