INDW vs AUSW: ಎರಡನೇ ವೇಗದ ಶತಕ ಬಾರಿಸಿ ಇತಿಹಾಸ ಬರೆದ ಸ್ಮೃತಿ ಮಂಧಾನಾ!
ಆಸ್ಟ್ರೇಲಿಯಾ ವಿರುದ್ಧ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ಮಹಿಳಾ ತಂಡದ ಆರಂಭಿಕ ಬ್ಯಾಟರ್ ಸ್ಮೃತಿ ಮಂಧಾನಾ ಶತಕವನ್ನು ಬಾರಿಸಿದ್ದಾರೆ. ತಮ್ಮ ವೃತ್ತಿ ಜೀವನದ 12ನೇ ಏಕದಿನ ಶತಕವನ್ನು ಬಾರಿಸಿದ ಮಂಧಾನಾ ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ ವಿಶೇಷ ದಾಖಲೆಯನ್ನು ಬರೆದಿದ್ದಾರೆ.

ಆಸ್ಟ್ರೇಲಿಯಾ ಎದುರು ಎರಡನೇ ಏಕದಿನ ಪಂದ್ಯದಲ್ಲಿ ಶತಕ ಬಾರಿಸಿದ ಸ್ಮೃತಿ ಮಂಧಾನಾ. -

ನವದೆಹಲಿ: ಆಸ್ಟ್ರೇಲಿಯಾ(Australia) ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ(INDW vs AUSW) ಭಾರತ ಮಹಿಳಾ ತಂಡದ ಆರಂಭಿಕ ಬ್ಯಾಟರ್ ಸ್ಮೃತಿ ಮಂಧಾನಾ (Smriti Mandhana) ಅವರು ಶತಕವನ್ನು ಬಾರಿಸಿದ್ದಾರೆ. ಅವರು ತಮ್ಮ ಮಹಿಳಾ ಏಕದಿಕ ಕ್ರಿಕೆಟ್ ವೃತ್ತಿ ಜೀವನದಲ್ಲಿ 12ನೇ ಶತಕವನ್ನು ಪೂರ್ಣಗೊಳಿಸಿದ್ದಾರೆ. ಸ್ಪೋಟಕ ಬ್ಯಾಟ್ ಮಾಡಿದ ಇವರು ಕೇವಲ 77 ಎಸೆತಗಳಲ್ಲಿಯೇ ಶತಕವನ್ನು ಸಿಡಿಸಿದರು. ಆ ಮೂಲಕ ಭಾರತದ ಪರ ಏಕದಿನ ಕ್ರಿಕೆಟ್‌ನಲ್ಲಿ ಎರಡನೇ ವೇಗದ ಶತಕವನ್ನು ಪೂರ್ಣಗೊಳಿಸಿದ್ದಾರೆ. ಇದಕ್ಕೂ ಮುನ್ನ ಇವರು ಈ ವರ್ಷದಲ್ಲಿ ಐರ್ಲೆಂಡ್ ವಿರುದ್ಧ ಕೇವಲ 70 ಎಸೆತಗಳಲ್ಲಿ ಶತಕವನ್ನು ಬಾರಿಸಿದ್ದರು. ಇದೀಗ ಎರಡನೇ ವೇಗದ ಶತಕವನ್ನು ಕೂಡ ಇವರೇ ಬಾರಿಸಿದ್ದಾರೆ.
ಮುಲ್ಲಾನ್‌ಪುರದ ಯದವೀಂದ್ರ ಸಿಂಗ್ ಇಂಟರ್‌ನ್ಯಾಷನಲ್ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾದ ಭಾರತದ ಪರ ಇನಿಂಗ್ಸ್ ಆರಂಭಿಸಿದ ಸ್ಮೃತಿ ಮಂಧಾನಾ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದರು. ಅವರು ಆಡಿದ 91 ಎಸೆತಗಳಲ್ಲಿ 4 ಸಿಕ್ಸರ್ ಹಾಗೂ 14 ಬೌಂಡರಿಗಳೊಂದಿಗೆ 117 ರನ್‌ಗಳನ್ನು ಸಿಡಿಸಿದರು. ಆ ಮೂಲಕ ಭಾರತ ತಂಡ, 49.5 ಓವರ್‌ಗಳಲ್ಲಿ 292 ರನ್‌ಗಳನ್ನು ಕಲೆ ಹಾಕಲು ನೆರವು ನೀಡಿದ್ದರು.
Asia Cup 2025: ಬಾಂಗ್ಲಾ ವಿರುದ್ಧ ಸೋಲು; ಆಫ್ಘಾನ್ ಸೂಪರ್-4 ಲೆಕ್ಕಾಚಾರ ಹೇಗಿದೆ?
ತಮ್ಮ ಸ್ಪೋಟಕ ಇನಿಂಗ್ಸ್‌ನ ಮೂಲಕ ಸ್ಮೃತಿ ಮಂಧಾನಾ ಅವರು ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ರನ್ ಕಲೆ ಹಾಕಿದ ಭಾರತ ಮಹಿಳಾ ತಂಡದ ಬ್ಯಾಟರ್ ಎಂಬ ನೂತನ ದಾಖಲೆಯನ್ನು ಬರೆದಿದ್ದಾರೆ. ಆ ಮೂಲಕ ತಮ್ಮ ಸಹ ಆಟಗಾರ್ತಿ ದೀಪ್ತಿ ಶರ್ಮಾ ಅವರ ದಾಖಲೆಯನ್ನು ಮುರಿದಿದ್ದಾರೆ. 2017ರಲ್ಲಿ ದೀಪ್ತಿ ಶರ್ಮಾ 20 ಪಂದ್ಯಗಳಿಂದ 787 ರನ್‌ಗಳನ್ನು ಸಿಡಿಸಿದ್ದರು.
Century and going strong 💪
— BCCI Women (@BCCIWomen) September 17, 2025
Elegance and class from the #TeamIndia vice-captain! ✨
Updates ▶️ https://t.co/LvgKs0weye#INDvAUS | @IDFCFIRSTBank | @mandhana_smriti pic.twitter.com/Q2lfBXu7GL
ಎಲೈಟ್ ಲಿಸ್ಟ್ ಸೇರಿದ ಸ್ಮೃತಿ ಮಂಧಾನಾ
ಆಸ್ಟ್ರೇಲಿಯಾ ವಿರುದ್ಧ ಅತಿ ಹೆಚ್ಚು ಶತಕಗಳನ್ನು ಭಾರಿಸಿದ ಏಷ್ಯಾದ ಮೊದಲ ಬ್ಯಾಟ್ಸ್‌ವುಮೆನ್ ಎಂಬ ದಾಖಲೆಯನ್ನು ಸ್ಮೃತಿ ಮಂಧಾನಾ ಬರೆದಿದ್ದಾರೆ. ಅಷ್ಟೇ ಅಲ್ಲದೆ ಆಸೀಸ್ ವಿರುದ್ಧ ಹೆಚ್ಚು ಶತಕ ಸಿಡಿಸಿದವರ ಒಟ್ಟಾರೆ ಪಟ್ಟಿಯಲ್ಲಿ ಕಿವೀಸ್‌ನ ಸೂಜಿ ಬೇಟ್ಸ್ ಅವರ ಮೊತೆ ಜಂಟಿ ಸ್ಥಾನವನ್ನು ಅಲಂಕರಿಸಿದ್ದಾರೆ. ಈ ಸಾಧಕಿಯರ ಪಟ್ಟಿಯಲ್ಲಿ ಇಂಗ್ಲೆಂಡ್ ನಾಯಕಿ ಸೀವರ್ ಬ್ರಂಟ್ ಇದ್ದಾರೆ. ಇವರು ಆಸ್ಟ್ರೇಲಿಯಾ ಎದುರು ಆಡಿದ 26 ಪಂದ್ಯಗಳಿಂದ 1113 ರನ್‌ಗಳನ್ನು ದಾಖಲಿಸಿದ್ದಾರೆ. ಇವರು ನಾಲ್ಕು ಶತಕಗಳು ಹಾಗೂ ನಾಲ್ಕು ಅರ್ಧಶತಕಗಳನ್ನು ಬಾರಿಸಿದ್ದಾರೆ.
ಮಹಿಳಾ ಏಕದಿನ ಪಂದ್ಯಗಳಲ್ಲಿ ಆಸ್ಟ್ರೇಲಿಯಾ ವಿರುದ್ಧ ಅತಿ ಹೆಚ್ಚು ಶತಕಗಳು
ನ್ಯಾಟ್ ಸೀವರ್-ಬ್ರಂಟ್ (ಇಂಗ್ಲೆಂಡ್) - 4 ಶತಕಗಳು
ಸ್ಮೃತಿ ಮಂಧಾನಾ (ಭಾರತ) - 3 ಶತಕಗಳು
ಸುಜಿ ಬೇಟ್ಸ್ (ನ್ಯೂಜಿಲೆಂಡ್) - 3 ಶತಕಗಳು
ಚಮರಿ ಅಟಪಟ್ಟು (ಶ್ರೀಲಂಕಾ) - 2 ಶತಕಗಳು
ರೆಬೆಕ್ಕಾ ರೋಲ್ಸ್ (ನ್ಯೂಜಿಲೆಂಡ್) - 2 ಶತಕಗಳು
ಆಮಿ ಸೌಥರ್‌ವೈಟ್ (ನ್ಯೂಜಿಲೆಂಡ್) - 2 ಶತಕಗಳು
ಕ್ಲೇರ್ ಟೇಲರ್ (ಇಂಗ್ಲೆಂಡ್) - 2 ಶತಕಗಳು
ಸಾರಾ ಟೇಲರ್ (ಇಂಗ್ಲೆಂಡ್) - 2 ಶತಕಗಳು