ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಪ್ರಿಯಾಂಕಾ ಉಪೇಂದ್ರ ನಟನೆಯ ʻಸೆಪ್ಟೆಂಬರ್ 21ʼ ಚಿತ್ರದ ಟೀಸರ್‌ ರಿಲೀಸ್;‌ ಗಮನಸೆಳೆದ 22ರ ಹರೆಯದ ನಿರ್ದೇಶಕಿ ಕರೆನ್ ಕ್ಷಿತಿ ಸುವರ್ಣ

‘ಸೆಪ್ಟೆಂಬರ್ 21’ ಚಿತ್ರವು ಅಲ್ಝೈಮರ್ಸ್ (ಮರೆಗುಳಿತನ) ಕಾಯಿಲೆಯ ಸುತ್ತ ಹೆಣೆಯಲಾದ ಒಂದು ತೀವ್ರ ಭಾವನಾತ್ಮಕ ಕಥೆಯಾಗಿದೆ. 22 ವರ್ಷದ ಕರೆನ್ ಕ್ಷಿತಿ ಸುವರ್ಣ ನಿರ್ದೇಶನದ ಈ ಚಿತ್ರದಲ್ಲಿ ಪ್ರಿಯಾಂಕಾ ಉಪೇಂದ್ರ ಅವರು ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರವೀಣ್ ಸಿಂಗ್ ಸಿಸೋಡಿಯಾ ಮರೆಗುಳಿತನ ಪೀಡಿತ ವ್ಯಕ್ತಿಯಾಗಿ ನಟಿಸಿದ್ದಾರೆ. ಸದ್ಯ ಈ ಚಿತ್ರದ ಟೀಸರ್‌ ರಿಲೀಸ್‌ ಆಗಿದೆ.

ಪ್ರಿಯಾಂಕಾ ಉಪೇಂದ್ರ ನಟನೆಯ ‘ಸೆಪ್ಟೆಂಬರ್ 21’ ಚಿತ್ರದ ಟೀಸರ್ ರಿಲೀಸ್‌ ಆಗಿದೆ. ಕನ್ನಡ ಹಾಗೂ ಹಿಂದಿ ಭಾಷೆಗಳಲ್ಲಿ ಏಕಕಾಲಕ್ಕೆ ತಯಾರಾಗಿರುವ ಈ ಬಹುನಿರೀಕ್ಷಿತ ಚಿತ್ರಕ್ಕೆ ನಿರ್ದೇಶನ ಮಾಡಿರುವುದು ಕರೆನ್ ಕ್ಷಿತಿ ಸುವರ್ಣ! ಇವರ ವಯಸ್ಸು 22! ಇಷ್ಟು ಚಿಕ್ಕ ವಯಸ್ಸಿನಲ್ಲಿಯೇ ‘ಸೆಪ್ಟೆಂಬರ್ 21’ ಚಿತ್ರದ ಬಣ್ಣದ ಲೋಕಕ್ಕೆ ನಿರ್ದೇಶಕಿಯಾಗಿ ಎಂಟ್ರಿ ಕೊಟ್ಟಿರುವುದು ವಿಶೇಷ. ತಮ್ಮ ಚೊಚ್ಚಲ ನಿರ್ದೇಶನದ ಸಿನಿಮಾದಲ್ಲೇ ಅವರು ಅಲ್ಝೈಮರ್ಸ್ (ಮರೆಗುಳಿತನ) ಎಂಬ ಗಂಭೀರ ವಿಷಯದ ಪರಿಣಾಮಕಾರಿಯಾಗಿ ಹೇಳುವ ಪ್ರಯತ್ನ ಮಾಡಿದ್ದಾರೆ.

ಮರೆಗುಳಿತನದ ಕಥಾಹಂದರ ಇರುವ ಸಿನಿಮಾ

ಸಾಮಾನ್ಯವಾಗಿ ಅಲ್ಝೈಮರ್ಸ್ ಬಗ್ಗೆ ಸಮಾಜದಲ್ಲಿ ಚರ್ಚೆಗಳಾಗುತ್ತವೆ. ಈ ಸಿನಿಮಾದಲ್ಲಿ ಅಂತಹ ಕಾಯಿಲೆಗೆ ತುತ್ತಾದವರ ಮತ್ತು ಅವರನ್ನು ಹಗಲಿರುಳು ಆರೈಕೆ ಮಾಡುವವರ ಒಳಗಿನ ತಳಮಳವನ್ನು ಅತ್ಯಂತ ನೈಜವಾಗಿ ಚಿತ್ರಿಸಲಾಗಿದೆಯಂತೆ. "ಈ ಟೀಸರ್ ಪ್ರೇಕ್ಷಕರಿಗೆ ಕೇವಲ ದೃಶ್ಯಗಳನ್ನು ತೋರಿಸುವುದಲ್ಲದೆ, ಕಳೆದುಹೋಗುತ್ತಿರುವ ನೆನಪುಗಳ ನೋವನ್ನು ಮೌನವಾಗಿ ಅನುಭವಿಸುವಂತೆ ಮಾಡುತ್ತದೆ. ಇದು ಕೇವಲ ಸಿನಿಮಾವಲ್ಲ, ಒಂದು ಭಾವನಾತ್ಮಕ ಪಯಣ ಎಂಬ ಭರವಸೆಯನ್ನು ನೀಡುತ್ತವೆ" ಎಂದು ಚಿತ್ರತಂಡ ಹೇಳಿಕೊಂಡಿದೆ.

Upendra: ಉಪೇಂದ್ರ- ಪ್ರಿಯಾಂಕಾ ದಂಪತಿಯ ಹಣ ಲಪಟಾಯಿಸಿದ್ದ ಬಿಹಾರ ಮೂಲದ ವಂಚಕ ಆರೆಸ್ಟ್!

ಈ ಚಿತ್ರದಲ್ಲಿ ಪ್ರವೀಣ್ ಸಿಂಗ್ ಸಿಸೋಡಿಯಾ ಅವರು ಮರೆಗುಳಿತನದಿಂದ ತನ್ನ ಅಸ್ತಿತ್ವವನ್ನೇ ಮರೆಯುತ್ತಿರುವ ವ್ಯಕ್ತಿಯ ಪಾತ್ರದಲ್ಲಿ ನಟಿಸಿದ್ದರೆ, ಅವರಿಗೆ ಆಸರೆಯಾಗಿ ನಿಲ್ಲುವ ಪಾಲಕಿಯಾಗಿ ಪ್ರಿಯಾಂಕಾ ಉಪೇಂದ್ರ ಅಭಿನಯಿಸಿದ್ದಾರೆ. "ಪ್ರಿಯಾಂಕಾ ಉಪೇಂದ್ರ ಅವರ ವೃತ್ತಿಜೀವನದಲ್ಲೇ ಇದು ಅತ್ಯಂತ ಸಂಯಮದ ಮತ್ತು ಮಾಗಿದ ಅಭಿನಯ ಎನ್ನಬಹುದು. ಯಾವುದೇ ನಾಟಕೀಯತೆ ಇಲ್ಲದೆ ಅತ್ಯಂತ ನೈಜವಾಗಿ ಈ ಪಾತ್ರಗಳು ಮೂಡಿಬಂದಿವೆ" ಎಂಬುದು ಚಿತ್ರತಂಡದ ಮಾತು.

ಪ್ರೇಕ್ಷಕರು ನೇರವಾಗಿ ಅನುಭವಿಸಬೇಕು

ನಿರ್ದೇಶಕಿ ಕರೆನ್ ಕ್ಷಿತಿ ಸುವರ್ಣ ಅವರ ಮೇಕಿಂಗ್ ಶೈಲಿ ವಿಭಿನ್ನವಾಗಿದ್ದು, ಅವರು ಅನಗತ್ಯ ಅಬ್ಬರಕ್ಕೆ ಮೊರೆಹೋಗದೆ ಕಥೆಯ ಭಾವಕ್ಕೆ ಹೆಚ್ಚಿನ ಒತ್ತು ನೀಡಿದ್ದಾರಂತೆ. "ನನ್ನ ಸಿನಿಮಾ ನೋಡುವಾಗ ಪ್ರೇಕ್ಷಕರು ಅಲ್ಝೈಮರ್ಸ್ ರೋಗಿಗಳ ಕುಟುಂಬ ಅನುಭವಿಸುವ ಆ ಮೌನ ಮತ್ತು ಭಾವನಾತ್ಮಕ ತೂಕವನ್ನು ನೇರವಾಗಿ ಅನುಭವಿಸಬೇಕು ಎಂಬುದು ನನ್ನ ಹಂಬಲವಾಗಿತ್ತು" ಎಂದು ಕರೆನ್ ಹೇಳಿಕೊಂಡಿದ್ದಾರೆ.

25ನೇ ಸಿನಿಮಾ ಅನೌನ್ಸ್ ಮಾಡಿದ ʻಬಿಗ್‌ ಬಾಸ್‌ʼ ಖ್ಯಾತಿಯ ಧರ್ಮ ಕೀರ್ತಿರಾಜ್;‌ ಸಾಥ್‌ ನೀಡಿದ ವಿನೋದ್‌ ಪ್ರಭಾಕರ್‌ - ಪ್ರಿಯಾಂಕಾ ಉಪೇಂದ್ರ

‘ಸೆಪ್ಟೆಂಬರ್ 21’ ಚಿತ್ರದಲ್ಲಿ ಪ್ರಿಯಾಂಕಾ ಉಪೇಂದ್ರ ಮತ್ತು ಪ್ರವೀಣ್ ಸಿಂಗ್ ಸಿಸೋಡಿಯಾ ಜೊತೆಗೆ ಹಿರಿಯ ನಟಿ ಜರೀನಾ ವಹಾಬ್, ಅಮಿತ್ ಬೆಹ್ಲ್, ಅಜಿತ್ ಶಿಧಾಯೆ, ಸಚಿನ್ ಪಟೇಕರ್ ಮತ್ತು ರಿಕಿ ರುದ್ರ ಅವರಂತಹ ಘಟಾನುಘಟಿ ಕಲಾವಿದರಿದ್ದಾರೆ. ಮೇ ತಿಂಗಳಿನಲ್ಲಿ ಈ ಸಿನಿಮಾವನ್ನು ತೆರೆಕಾಣಿಸುವ ಉದ್ದೇಶ ಚಿತ್ರತಂಡಕ್ಕಿದೆ.

ಚಲನಚಿತ್ರೋತ್ಸವದಲ್ಲಿ ಮೆಚ್ಚುಗೆ

‘ಸೆಪ್ಟೆಂಬರ್ 21’ ಚಿತ್ರವನ್ನು ಬಾಲಿವುಡ್‌ನ ಖ್ಯಾತ ನಿರ್ದೇಶಕ ಇಮ್ತಿಯಾಜ್‌ ಅಲಿ ಅವರ ಪತ್ನಿ ಪ್ರೀತಿ ಅಲಿ ಒಡೆತನದ ಹುಮಾರಾ ಮೂವಿ, ವಿಸಿಕಾ ಫಿಲ್ಮ್ಸ್ ಮತ್ತು ಎಫ್.ಎಂ.ಡಿ ಪ್ರೊಡಕ್ಷನ್ಸ್ ಜಂಟಿಯಾಗಿ ನಿರ್ಮಿಸಿದ್ದು, ಫಿಲ್ಮ್ಸ್ ಮ್ಯಾಕ್ಸ್ ಸಹ-ನಿರ್ಮಾಣದ ಜವಾಬ್ದಾರಿ ಹೊತ್ತಿದೆ. ರಾಜ್‌ಶೇಖರ್ ಅವರ ಸ್ಕ್ರಿಪ್ಟ್‌ ಮತ್ತು ವಿನಯ್ ಚಂದ್ರ ಅವರ ಸಂಗೀತ ಈ ಚಿತ್ರಕ್ಕಿದೆ.

ಅಂತಾರಾಷ್ಟ್ರೀಯ ಆಯಾಮ ನೀಡಲು ವಿದೇಶಿ ನಟ ಫ್ರೆಡೆರಿಕ್ ಡಿ ವೋಸ್ ಅವರು ಸಹ-ನಿರ್ಮಾಪಕರಾಗಿ ತಂಡವನ್ನು ಸೇರಿಕೊಂಡಿದ್ದಾರೆ. ಚಿತ್ರವು ಈಗಾಗಲೇ 56ನೇ ಐಎಫ್‌ಎಫ್‌ಐ ಚಲನಚಿತ್ರೋತ್ಸವದ ವರ್ಕ್‌ ಇನ್‌ ಪ್ರೊಗ್ರೆಸ್‌ ವಿಭಾಗದಲ್ಲಿ ಪ್ರದರ್ಶನ ಕಂಡು ಮೆಚ್ಚುಗೆ ಪಡೆದಿದೆ.