ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ನಿರ್ಮಾಪಕ ಭಾ.ಮಾ. ಹರೀಶ್‌ ಪುತ್ರ ಹೃದಯಾಘಾತದಿಂದ ನಿಧನ; ಟ್ರೆಕ್ಕಿಂಗ್‌ ವೇಳೆ ಕೊಡಚಾದ್ರಿಯಲ್ಲಿ ಅವಘಡ

Ullas Gowda Passed Away: ಸ್ಯಾಂಡಲ್‌ವುಡ್‌ಗೆ ಮತ್ತೊಂದು ಆಘಾತ ಎದುರಾಗಿದೆ. ಹಿರಿಯ ನಿರ್ಮಾಪಕ ಭಾ.ಮಾ. ಹರೀಶ್‌ ಅವರ ಪುತ್ರ ಉಲ್ಲಾಸ್‌ ಗೌಡ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಅವರಿಗೆ 30 ವರ್ಷ ವಯಸ್ಸಾಗಿತ್ತು. ಶಿವಮೊಗ್ಗ ಜಿಲ್ಲೆಯ ಕೊಡಚಾದ್ರಿ ಬೆಟ್ಟಕ್ಕೆ ಟ್ರೆಕ್ಕಿಂಗ್‌ ಹೋದ ವೇಳೆ ಹೃದಯಘಾತವಾಗಿದೆ ಎಂದು ಮೂಲಗಳು ತಿಳಿಸಿವೆ.

ಉಲ್ಲಾಸ್‌ ಗೌಡ (ಸಂಗ್ರಹ ಚಿತ್ರ)

ಶಿವಮೊಗ್ಗ, ಜೂ. 27: ಸ್ಯಾಂಡಲ್‌ವುಡ್‌ಗೆ ಮತ್ತೊಂದು ಆಘಾತ ಎದುರಾಗಿದೆ. ಹಿರಿಯ ನಿರ್ಮಾಪಕ ಭಾ.ಮಾ. ಹರೀಶ್‌ (Ba Ma Harish) ಅವರ ಪುತ್ರ ಉಲ್ಲಾಸ್‌ ಗೌಡ (Ullas Gowda) ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಅವರಿಗೆ 28 ವರ್ಷ ವಯಸ್ಸಾಗಿತ್ತು. ಶಿವಮೊಗ್ಗ ಜಿಲ್ಲೆಯ ಕೊಡಚಾದ್ರಿ ಬೆಟ್ಟಕ್ಕೆ ಟ್ರೆಕ್ಕಿಂಗ್‌ ಹೋದ ವೇಳೆ ಹೃದಯಘಾತವಾಗಿದೆ. ಉಲ್ಲಾಸ್‌ ಗೌಡ ಸ್ನೇಹಿತರೊಂದಿಗೆ ಶಿವಮೊಗ್ಗ ಜಿಲ್ಲೆಯ ಪ್ರಸಿದ್ದ ಪ್ರವಾಸಿ ತಾಣ ಕೊಡಚಾದ್ರಿ ಬೆಟ್ಟಕ್ಕೆ ಟ್ರಕ್ಕಿಂಗ್‌ಗಾಗಿ ತೆರಳಿದ್ದರು. ಈ ವೇಳೆ ನಿಧನ ಹೊಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ದುರಂತ ಎಂದರೆ ಉಲ್ಲಾಸ್‌ ಗೌಡ ಅವರಿಗೆ ಕೆಲವೇ ದಿನಗಳ ಹಿಂದೆಯಷ್ಟೇ ಮದುವೆ ನಿಶ್ಚಯವಾಗಿತ್ತು. ಚಂದನಾ ಗೌಡ ಎಂಬವರೊಂದಿಗೆ ಉಲ್ಲಾಸ್‌ ಅವರ ನಿಶ್ಚಿತಾರ್ಥ ಅದ್ದೂರಿಯಾಗಿ ನೆರವೇರಿತ್ತು. ಹೊಸ ಜೀವನಕ್ಕೆ ಹೆಜ್ಜೆ ಇಡಲು ಸಜ್ಜಾಗುತ್ತಿದ್ದ ಜೋಡಿಯ ಫೋಟೊ ಸೋಶಿಯಲ್‌ ಮೀಡಿಯಾಗಳಲ್ಲಿ ವೈರಲ್‌ ಆಗಿ, ಚಿತ್ರರಂಗದ ಗಣ್ಯರು ಶುಭ ಹಾರೈಸಿದ್ದರು. ಅದಾಗಿ ಕೆಲವೇ ದಿನಗಳಲ್ಲಿ ಈ ಸುದ್ದಿ ಬರಸಿಡಿಲಿನಂತೆ ಬಂದೆರಗಿದೆ. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಈ ವರ್ಷಾಂತ್ಯದೊಳಗೆ ಉಲ್ಲಾಸ್‌ ಮತ್ತು ಚಂದನಾ ಹಸೆಮಣೆಗೇರಬೇಕಿತ್ತು.

2 ವರ್ಷ ಪೂರೈಸಿದ ‘ಬ್ರಹ್ಮಗಂಟು’ ಸೀರಿಯಲ್; ನಟ‌ ದಿಲೀಪ್‌ ರಾಜ್‌ರನ್ನು ನೆನದು ಭಾವುಕರಾದ ನಟಿ ದಿಯಾ ಪಾಲಕ್ಕಲ್

ಕೆಲವು ದಿನಗಳ ಹಿಂದೆಯಷ್ಟೇ ಸ್ಯಾಂಡಲ್‌ವುಡ್‌-ಕಿರುತೆರೆ ನಟ, ನಿರ್ಮಾಪಕ ದಿಲೀಪ್‌ ರಾಜ್‌ ಹೃದಯಾಘಾತದಿಂದ ಮೃತಪಟ್ಟಿದ್ದರು. ಆ ಘಟನೆಯ ಕಹಿ ನೆನಪು ಮರೆಯಾಗುವ ಮುನ್ನ ಮತ್ತೊಂಡು ದುರಂತ ನಡೆದಿದೆ. ಸ್ಯಾಂಡಲ್‌ವುಡ್‌ ಕಲಾವಿದರು ಕಂಬನಿ ಮಿಡಿದಿದ್ದಾರೆ.

ಹೃದಯಾಘಾತದಿಂದ ಉಲ್ಲಾಸ್‌ ಗೌಡ ನಿಧನ:



ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ನಾಯಕನಾಗಿ ಮೊದಲ ಬಾರಿ ಕಾಣಿಸಿಕೊಂಡಿದ್ದ, 2002 ತೆರೆಕಂಡ ʼಮೆಜೆಸ್ಟಿಕ್‌ʼ ಚಿತ್ರವನ್ನು ಭಾ.ಮಾ. ಹರೀಶ್‌ ನಿರ್ಮಿಸಿದ್ದರು. ಪಿ.ಎನ್‌. ಸತ್ಯ ನಿರ್ದೇಶನದ ಈ ಚಿತ್ರ ಸ್ಯಾಂಡಲ್‌ವುಡ್‌ನಲ್ಲಿ ಸೂಪರ್‌ ಹಿಟ್‌ ಎನಿಸಿಕೊಂಡಿದ್ದಷ್ಟೇ ಅಲ್ಲ ಕನ್ನಡ ಚಿತ್ರರಂಗಕ್ಕೆ ಹೊಸ ಆ್ಯಕ್ಷನ್‌ ಹೀರೋನನ್ನು ಪರಿಚಯಿಸಿತು. ಭಾ.ಮಾ. ಹರೀಶ್‌ ಫಿಲ್ಮ್‌ ಚೇಂಬರ್‌ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಈ ವರ್ಷ ನಡೆದ ಫಿಲ್ಮ್‌ ಚೇಂಬರ್‌ ಅಧ್ಯಕ್ಷ ಗಾದಿಯ ಚುನಾವಣೆಯಲ್ಲೂ ಭಾ.ಮಾ. ಹರೀಶ್‌ ಸ್ಪರ್ಧಿಸಿದ್ದರು. ಆದರೆ ಹಿರಿಯ ನಟಿ ಜಯಮಾಲಾ ವಿರುದ್ಧ ಸೋತಿದ್ದರು.

2 ತಿಂಗಳ ಅಂತರದಲ್ಲಿ 2ನೇ ದುರಂತ

ಮೇ 13ರಂದು ಸ್ಯಾಂಡಲ್‌ವುಡ್‌ ನಟ ದಿಲೀಪ್‌ ರಾಜ್‌ ಹೃದಯಾಘಾತದಿಂದ ಮೃತಪಟ್ಟಿದ್ದರು. ಅವರಿಗೆ 48 ವರ್ಷ ವಯಸ್ಸಾಗಿತ್ತು. ಇತ್ತೀಚೆಗೆ ಯುವ ಜನತೆಯಲ್ಲಿ ಹೆಚ್ಚುತ್ತಿರುವ ಹೃದಯಾಘಾತ ಪ್ರಕರಣ ಹಲವರ ಚಿಂತೆಗೆ ಕಾರಣವಾಗಿದೆ.

Ramesh Ballamoole

View all posts by this author