ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

‌ʻಯಶ್ ಜೊತೆ ನಾನು ಸಿನಿಮಾ ಮಾಡೋದು ಫಿಕ್ಸ್, ಆದರೆ...ʼ; ಸಾವಿರಾರು ಜನರ ಎದುರು ತೆಲುಗು ಸ್ಟಾರ್‌ ನಿರ್ಮಾಪಕನ ಬಿಗ್‌ ಅನೌನ್ಸ್‌ಮೆಂಟ್!‌

ʻರಾಕಿಂಗ್‌ ಸ್ಟಾರ್‌ʼ ಯಶ್‌ ನಟನೆಯ 'ಟಾಕ್ಸಿಕ್' ಸಿನಿಮಾದ ತೆಲುಗು ಹಕ್ಕುಗಳನ್ನು ಖ್ಯಾತ ನಿರ್ಮಾಪಕ ದಿಲ್ ರಾಜು ಭಾರೀ ಮೊತ್ತಕ್ಕೆ ಖರೀದಿಸಿದ್ದಾರೆ. ಮುಂಬೈನಲ್ಲಿ ಚಿತ್ರದ ತುಣುಕುಗಳನ್ನು ವೀಕ್ಷಿಸಿ ಬೆರಗಾದ ಅವರು, ಈ ಸಿನಿಮಾ ಬರೋಬ್ಬರಿ ₹2000 ಕೋಟಿ ಗಳಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

'ಕೆಜಿಎಫ್' ಚಿತ್ರದ ಅಭೂತಪೂರ್ವ ಯಶಸ್ಸಿನ ನಂತರ ನಟ ಯಶ್ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದ್ದಾರೆ. ಇದೀಗ ಅವರ ಹೊಸ ಸಿನಿಮಾ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ತೆರೆಗೆ ಬರಲು ಸಜ್ಜಾಗಿದೆ. ಗೀತು ಮೋಹನ್‌ದಾಸ್ ನಿರ್ದೇಶನದ ಈ ಸಿನಿಮಾವನ್ನು ಕೆವಿಎನ್ ಪ್ರೊಡಕ್ಷನ್ಸ್ ಅದ್ದೂರಿಯಾಗಿ ನಿರ್ಮಾಣ ಮಾಡಿದೆ. ಸದ್ಯ ಈ ಚಿತ್ರದ ಪ್ರೀ-ರಿಲೀಸ್ ಇವೆಂಟ್ ಹೈದರಾಬಾದ್‌ನಲ್ಲಿ ನಡೆದಿದ್ದು, ಸಾವಿರಾರು ಮಂದಿ ಭಾಗಿಯಾಗಿದ್ದರು.

ಇದೇ ವೇಳೆ ಟಾಕ್ಸಿಕ್‌ ಸಿನಿಮಾದ ತೆಲುಗು ಅವತರಣಿಕೆಯ ಹಕ್ಕುಗಳನ್ನು ಖರೀದಿಸಿರುವ ಖ್ಯಾತ ನಿರ್ಮಾಪಕ ಹಾಗೂ ವಿತರಕ ‘ದಿಲ್’ ರಾಜು ಅವರು ಯಶ್ ಬಗ್ಗೆ ಮನಸಾರೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಯಶ್‌ಗೆ ಮನಸಾರೆ ಹೊಗಳಿದ ರಾಜು

ತೆಲುಗು ಚಿತ್ರರಂಗದಲ್ಲಿ ಮೂರು ದಶಕಗಳ ಸುದೀರ್ಘ ಪಯಣದಲ್ಲಿ ನೂರಾರು ಸಿನಿಮಾಗಳನ್ನು ವಿತರಿಸಿ, ಹಲವು ಯಶಸ್ವಿ ಚಿತ್ರಗಳನ್ನು ನಿರ್ಮಿಸಿರುವ ದಿಲ್ ರಾಜು, "ಕೆಜಿಎಫ್ ಸಿನಿಮಾ ಬ್ಲಾಕ್‌ಬಸ್ಟರ್ ಆದ ನಂತರ ಯಶ್ ಒಬ್ಬ ಪ್ರಯೋಗಾತ್ಮಕ ನಿರ್ದೇಶಕಿಯ ಜೊತೆ ಕೈಜೋಡಿಸಿದ್ದಾರೆ ಎಂದು ತಿಳಿದಾಗ ನನಗೆ ಆಶ್ಚರ್ಯವಾಗಿತ್ತು. ಆದರೆ ಮುಂಬೈನಲ್ಲಿ ನೋಡಿದ ಸಿನಿಮಾದ ರಶಸ್ ಮತ್ತು ದೃಶ್ಯಗಳು ನನ್ನ ಆಲೋಚನೆಯನ್ನೇ ಸಂಪೂರ್ಣವಾಗಿ ಬದಲಿಸಿದವು. ಯಶ್ ಅವರ ಚಿಂತನೆಗಳು ಕೇವಲ ಪ್ಯಾನ್-ಇಂಡಿಯಾ ಮಟ್ಟಕ್ಕಷ್ಟೇ ಸೀಮಿತವಾಗಿಲ್ಲ; ಭಾರತೀಯ ಸಿನಿಮಾವನ್ನು ಜಾಗತಿಕ ಮಟ್ಟದಲ್ಲಿ ಹೊಸ ಎತ್ತರಕ್ಕೆ ಕೊಂಡೊಯ್ಯುವ ಅವರ ದೃಢ ಸಂಕಲ್ಪ ಇದರಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ" ಎಂದು ಹೊಗಳಿದ್ದಾರೆ.

ಯಶ್ ಜೊತೆಗೆ ಸಿನಿಮಾ ಯಾವಾಗ?

ಈ ಹಿಂದೆ ಯಶ್ ಕಾಲ್‌ಶೀಟ್ ನೀಡಿದರೆ, ಬರೋಬ್ಬರಿ 100 ಕೋಟಿ ರೂ. ಸಂಭಾವನೆ ನೀಡಲು ಸಿದ್ಧ ಎಂದು ಹೇಳಿಕೆ ನೀಡುವ ಮೂಲಕ ದಿಲ್ ರಾಜು ಸುದ್ದಿಯಾಗಿದ್ದರು. ಈಗಲೂ ಅವರಿಬ್ಬರ ಕಾಂಬಿನೇಷನ್‌ನಲ್ಲಿ ಯಾವಾಗ ಸಿನಿಮಾ ಮೂಡಿಬರಲಿದೆ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಕಾಡುತ್ತಲೇ ಇದೆ.

Yash-Radhika Pandit: ರಾಕಿ ಭಾಯ್‌‌ಗೆ ಮದುವೆ ಆನಿವರ್ಸರಿ ಸಂಭ್ರಮ; ಯಶ್-ರಾಧಿಕಾ ಜೋಡಿ ದಾಂಪತ್ಯ ಜೀವನಕ್ಕೆ ಈಗ ಎಂಟರ ನಂಟು!

ಆ ಕುರಿತು ಸ್ಪಷ್ಟನೆ ನೀಡಿರುವ ದಿಲ್ ರಾಜು, "ನಮ್ಮ ಬ್ಯಾನರ್‌ನಲ್ಲಿ ಯಶ್ ಅವರೊಂದಿಗೆ ಸಿನಿಮಾ ಬರುವುದು ನೂರಕ್ಕೆ ನೂರು ಪ್ರತಿಶತ ಖಚಿತ. ಇಬ್ಬರಿಗೂ ಸರಿಹೊಂದುವಂತಹ ಬಲಿಷ್ಠ ಕಥೆ ಸಿಕ್ಕ ಕೂಡಲೇ ಈ ಪ್ರಾಜೆಕ್ಟ್ ಸೆಟ್ಟೇರಲಿದೆ ಎಂದು ಸ್ವತಃ ಯಶ್ ಅವರೇ ತಿಳಿಸಿದ್ದಾರೆ" ಎಂದಿದ್ದಾರೆ. ಈ ಪ್ರಾಜೆಕ್ಟ್ ಯಾವಾಗ ಆರಂಭವಾಗಲಿದೆ ಎಂಬುದು ಇನ್ನೂ ಅಂತಿಮವಾಗದಿದ್ದರೂ, ಇವರಿಬ್ಬರ ಕಾಂಬಿನೇಷನ್‌ನಲ್ಲಿ ಸಿನಿಮಾ ಸೆಟ್ಟೇರುವುದು ಮಾತ್ರ ಗ್ಯಾರಂಟಿ ಎಂಬುದು ಖಚಿತವಾಗಿದೆ.

Yash-Radhika Pandit: ಯಶ್​ ಮನೆಯಲ್ಲಿ ಕ್ರಿಸ್​ಮಸ್ ಸೆಲೆಬ್ರೇಷನ್​! ಚೆಂದದ ವಿಡಿಯೊ ಶೇರ್ ಮಾಡಿದ​ ರಾಧಿಕಾ ಪಂಡಿತ್

"ಟಾಕ್ಸಿಕ್ ಚಿತ್ರದ ಮೇಲಿನ ನಂಬಿಕೆಯಿಂದಲೇ ತೆಲುಗು ರಾಜ್ಯಗಳ ಥಿಯೇಟ್ರಿಕಲ್ ಹಕ್ಕುಗಳನ್ನು ಯಾವುದೇ ಹಿಂಜರಿಕೆಯಿಲ್ಲದೆ, ಕ್ಷಣಾರ್ಧದಲ್ಲೇ ನಿರ್ಮಾಪಕರು ಕೇಳಿದ ಮೊತ್ತ ನೀಡಿ ಖರೀದಿಸಿದ್ದೇನೆ. ಈ ಚಿತ್ರದ ಸಂಗೀತ ನಿರ್ದೇಶಕ ವಿಶಾಲ್ ಮಿಶ್ರಾ ಅವರೊಂದಿಗೆ ಮಾತನಾಡುತ್ತಿದ್ದಾಗ, ಬಾಕ್ಸ್ ಆಫೀಸ್‌ನಲ್ಲಿ ಬರೋಬ್ಬರಿ ₹2,000 ಕೋಟಿ ರೂಪಾಯಿ ಗಳಿಸುವ ಸಾಮರ್ಥ್ಯವಿರುವ ಅದ್ಭುತ ಸಿನಿಮಾ ಇದಾಗಲಿದೆ ಎಂದು ಅವರು ನನಗೆ ತಿಳಿಸಿದರು" ಎಂದು ದಿಲ್ ರಾಜು ವಿಶ್ವಾಸ ವ್ಯಕ್ತಪಡಿಸಿದ್ದಾರೆ.