ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಯುಗಾದಿ ಹಬ್ಬಕ್ಕೆ ಎರಡು ಗುಡ್‌ ನ್ಯೂಸ್‌ ನೀಡಿದ ʻಸಾರಥಿʼ, ʻಲ್ಯಾಂಡ್‌ಲಾರ್ಡ್ʼ‌ ನಿರ್ಮಾಪಕರು; ದರ್ಶನ್‌ ಫ್ಯಾನ್ಸ್‌ ಖುಷಿಗೂ ಇಲ್ಲಿದೆ ಕಾರಣ!

ನಿರ್ಮಾಪಕ ಕೆ.ವಿ. ಸತ್ಯಪ್ರಕಾಶ್ ಯುಗಾದಿ ಹಬ್ಬಕ್ಕೆ ದರ್ಶನ್ ಅಭಿಮಾನಿಗಳಲ್ಲಿ ಸಂಚಲನ ಮೂಡಿಸಿದ್ದಾರೆ. 15 ವರ್ಷಗಳ ಹಿಂದೆ ಬಾಕ್ಸ್ ಆಫೀಸ್ ಧೂಳೀಪಟ ಮಾಡಿದ್ದ 'ಸಾರಥಿ' ಸಿನಿಮಾ ಮತ್ತೆ ರೀ-ರಿಲೀಸ್‌ ಮಾಡಲು ಸಜ್ಜಾಗಿದ್ದಾರೆ. ಇದರ ಜೊತೆಗೆ ನಿರ್ದೇಶಕ ಪಿ. ಸಿ. ಶೇಖರ್ ಅವರೊಂದಿಗೆ ಸತ್ಯಪ್ರಕಾಶ್ ಹೊಸ ಸಿನಿಮಾವನ್ನು ಘೋಷಿಸಿದ್ದು, ಈ ಚಿತ್ರದ ಬಗ್ಗೆ ಶೀಘ್ರದಲ್ಲೇ ಹೆಚ್ಚಿನ ಮಾಹಿತಿ ನೀಡಲಿದ್ದಾರೆ.

ʻಚಾಲೆಂಜಿಂಗ್‌ ಸ್ಟಾರ್‌ʼ ದರ್ಶನ್‌ ಅಭಿನಯದ ʻಸಾರಥಿʼ ಸಿನಿಮಾವನ್ನು ನಿರ್ಮಾಣ ಮಾಡಿದ್ದ ನಿರ್ಮಾಪಕ ಕೆ ವಿ ಸತ್ಯಪ್ರಕಾಶ್‌ ಅವರು ಈಚೆಗೆ ʻದುನಿಯಾʼ ವಿಜಯ್‌ ನಾಯಕತ್ವದ ʻಲ್ಯಾಂಡ್‌ಲಾರ್ಡ್ʼ‌ ಸಿನಿಮಾವನ್ನು ನಿರ್ಮಿಸಿದ್ದರು. ಇದೀಗ ಯುಗಾದಿ ಹಬ್ಬದ ಕೊಡುಗೆಯಾಗಿ ಎರಡು ಗುಡ್‌ ನ್ಯೂಸ್‌ಗಳನ್ನು ಅವರು ಹಂಚಿಕೊಂಡಿದ್ದಾರೆ. ಅದೇನು? ಮುಂದೆ ಓದಿ.

ರೀ-ರಿಲೀಸ್ ಆಗಲಿದೆ ಸಾರಥಿ ಸಿನಿಮಾ

ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅಭಿನಯದ ಸಾರಥಿ ಸಿನಿಮಾವು 15 ವರ್ಷಗಳ ಹಿಂದೆ ತೆರೆಕಂಡು ಬಾಕ್ಸ್‌ ಆಫೀಸ್‌ನಲ್ಲಿ ಅಬ್ಬರ ಮಾಡಿತ್ತು. ಇದೀಗ ಆ ಚಿತ್ರವನ್ನು ಪುನಃ ರಿಲೀಸ್‌ ಮಾಡಲು ನಿರ್ಮಾಪಕ ಕೆ ವಿ ಸತ್ಯಪ್ರಕಾಶ್‌ ಮುಂದಾಗಿದ್ದಾರೆ. ಯುಗಾದಿ ಹಬ್ಬದ ಪ್ರಯುಕ್ತ ಈ ವಿಚಾರವನ್ನು ಅವರು ಹಂಚಿಕೊಂಡಿದ್ದಾರೆ. ಇದು ಡಿ ಬಾಸ್‌ ಅಭಿಮಾನಿಗಳಿಗೆ ಖುಷಿಯನ್ನು ನೀಡಿದೆ.

ಲ್ಯಾಂಡ್‌ಲಾರ್ಡ್‌ ಬಳಿಕ ಹೊಸ ಸಿನಿಮಾ ಘೋಷಣೆ

ಈಚೆಗಷ್ಟೇ ಲ್ಯಾಂಡ್‌ಲಾರ್ಡ್‌ ಸಿನಿಮಾವನ್ನು ನಿರ್ಮಾಣ ಮಾಡಿದ್ದ ಕೆ ವಿ ಸತ್ಯ ಪ್ರಕಾಶ್‌ ಈಗ ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ನಿರ್ದೇಶಕ ಪಿಸಿ ಶೇಖರ್‌ ಜೊತೆಗೆ ಕೆ ವಿ ಸತ್ಯ ಪ್ರಕಾಶ್‌ ಹೊಸ ಸಿನಿಮಾ ಅನೌನ್ಸ್‌ ಮಾಡಿದ್ದಾರೆ. ಈಗಾಲೇ ಸಿನಿಮಾದ ಎಲ್ಲಾ ತಯಾರಿಗಳು ಮುಗಿದಿದ್ದು, ಶೀಘ್ರದಲ್ಲೇ ಈ ಚಿತ್ರ ಸೆಟ್ಟೇರಬೇಕಿದೆ. ಸದ್ಯ ಮಹಾನ್ ಸಿನಿಮಾದ ಕೊನೆಯ ಹಂತದ ಚಿತ್ರೀಕರಣದಲ್ಲಿ ಬ್ಯುಸಿ ಇರುವ ಪಿ ಸಿ ಶೇಖರ್ ಆ ಸಿನಿಮಾದ ರಿಲೀಸ್‌ಗೂ ಮೊದಲೇ ಮತ್ತೊಂದು ಸಿನಿಮಾಗೆ ಸಜ್ಜಾಗಿದ್ದಾರೆ.

Landlord Review: ಉಳ್ಳವರ ಮೇಲೆ ಇಲ್ಲದವರ ಹೋರಾಟ; ಲ್ಯಾಂಡ್‌ಲಾರ್ಡ್‌ನಲ್ಲಿ ರಾಚಯ್ಯನ ಹೊಡೆದಾಟ!

ದೊಡ್ಡಮಟ್ಟದಲ್ಲಿ ಸಿನಿಮಾ ನಿರ್ಮಾಣ

"ಸಾರಥಿ, ಲ್ಯಾಂಡ್‌ಲಾರ್ಡ್ ರೀತಿಯ ದೊಡ್ಡ ಸಿನಿಮಾಗಳನ್ನು ಮಾಡಿರುವ ನಿರ್ಮಾಪಕರು ನನಗೆ ಅವಕಾಶ ಕೊಟ್ಟಿದ್ದು ತುಂಬಾ ಖುಷಿಯಾಗುತ್ತೆ. ಸದ್ಯದಲ್ಲೇ ಸಿನಿಮಾದ ಟೈಟಲ್ ಮತ್ತು ಸ್ಟಾರ್ ಕಾಸ್ಟ್ ಬಗ್ಗೆ ರಿವೀಲ್ ಮಾಡುತ್ತೇವೆ. ದೊಡ್ಡ ಮಟ್ಟದಲ್ಲಿ ಈ ಸಿನಿಮಾ ತಯಾರಾಗಲಿದೆ" ಎಂದು ಪಿ ಸಿ ಶೇಖರ್ ಹೇಳಿದ್ದಾರೆ.

ನಟ/ನಿರ್ಮಾಪಕ ಮಿತ್ರ ಅವರು ಈ ಸಿನಿಮಾದಲ್ಲಿ ಕಾರ್ಯಕಾರಿ ನಿರ್ಮಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ಪಿ ಸಿ ಶೇಖರ್ ಅವರ ರಾಗಾ ಚಿತ್ರದಲ್ಲಿ ಮಿತ್ರ ಅವರು ಹೀರೋ ಆಗಿ ಕಾಣಿಸಿಕೊಂಡಿದ್ದರು. ಆದರೆ ಈ ಸಿನಿಮಾದಲ್ಲಿ ಕಾರ್ಯಕಾರಿ ನಿರ್ಮಾಪಕರಾಗಿ ಕ್ಯಾಮರಾ ಹಿಂದೆ ಕೆಲಸ ಮಾಡುತ್ತಿರುವುದು ವಿಶೇಷ. ಸದ್ಯದಲ್ಲೇ ಸಿನಿಮಾದ ಬಗ್ಗೆ ಹೆಚ್ಚಿನ ಮಾಹಿತಿ ಹಂಚಿಕೊಳ್ಳಲಿದೆ ಸಿನಿಮಾತಂಡ.