ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Puneeth Birthday: ಸಹಾಯ ಮಾಡಿದ ಮೇಲೆ ಇದೊಂದು ಕಂಡಿಷನ್‌ ಹಾಕುತ್ತಿದ್ರಂತೆ ಪುನೀತ್ ! ಏನದು?

Puneeth Birthday: ಪುನೀತ್ ರಾಜ್​​ಕುಮಾರ್ ಅವರಿಗೆ ಇಂದು (ಮಾರ್ಚ್ 17) ಜನ್ಮದಿನ. ಕನ್ನಡ ಚಿತ್ರರಂಗದ ಧ್ರುವತಾರೆ, ಅಪ್ಪು ಎಂದೇ ಆಪ್ತವಾಗಿ ಕರೆಯಲ್ಪಡುವ ಪುನೀತ್ ರಾಜ್‌ಕುಮಾರ್ ಅವರನ್ನು ಇಂದಿಗೂ ಸ್ಮರಿಸುತ್ತಾರೆ ಫ್ಯಾನ್ಸ್‌. ಪುನೀತ್‌ ಅವರನ್ನು ಕೇವಲ ನಟನೆಗೆ ಮಾತ್ರವಲ್ಲ, ಅವರ ಸಮಾಜ ಸೇವೆ, ನಿರೂಪಣೆ, ಸೇರಿದಂತೆ ಅನೇಕ ವಿಚಾರಗಳಿಗೆ ಖ್ಯಾತಿ ಗಳಿಸಿದ್ದಾರೆ. ಕನ್ನಡದ ಕೋಟ್ಯಧಿಪತಿಯಲ್ಲಿ ನಿರೂಪಕರಾಗಿದ್ದರು. ಈ ವೇಳೆ ಅವರು ಹಲವರ ಸಹಾಯಕ್ಕೆ ನಿಂತಿದ್ದರು. ಈ ಬಗ್ಗೆ ಯಾರೊಬ್ಬರಿಗೂ ಅವರು ಹೇಳಿಕೊಳ್ಳುತ್ತಾ ಇರಲಿಲ್ಲ ಎಂಬುದು ವಿಶೇಷ. ಹಾಗಾದ್ರೆ ಸಹಾಯ ಮಾಡಿದ ಬಳಿಕ ಪುನೀತ್ ರಾಜ್​​ಕುಮಾರ್ ಹಾಕುತ್ತಿದ್ದ ಆ ಒಂದು ಕಂಡಿಷನ್‌ ಏನಾಗಿತ್ತು?

ಪುನೀತ್‌ ರಾಜ್‌ಕುಮಾರ್‌

ಪುನೀತ್ ರಾಜ್​​ಕುಮಾರ್ (Puneeth Rajkumar) ಅವರಿಗೆ ಇಂದು (ಮಾರ್ಚ್ 17) ಜನ್ಮದಿನ. ಕನ್ನಡ ಚಿತ್ರರಂಗದ ಧ್ರುವತಾರೆ, ಅಪ್ಪು (Appu) ಎಂದೇ ಆಪ್ತವಾಗಿ ಕರೆಯಲ್ಪಡುವ ಪುನೀತ್ ರಾಜ್‌ಕುಮಾರ್ ಅವರನ್ನು ಇಂದಿಗೂ ಸ್ಮರಿಸುತ್ತಾರೆ ಫ್ಯಾನ್ಸ್‌. ಪುನೀತ್‌ ಅವರನ್ನು ಕೇವಲ ನಟನೆಗೆ ಮಾತ್ರವಲ್ಲ, ಅವರ ಸಮಾಜ ಸೇವೆ, ನಿರೂಪಣೆ, ಸೇರಿದಂತೆ ಅನೇಕ ವಿಚಾರಗಳಿಗೆ ಖ್ಯಾತಿ ಗಳಿಸಿದ್ದಾರೆ. ಕನ್ನಡದ ಕೋಟ್ಯಧಿಪತಿಯಲ್ಲಿ ನಿರೂಪಕರಾಗಿದ್ದರು. ಈ ವೇಳೆ ಅವರು ಹಲವರ ಸಹಾಯಕ್ಕೆ ನಿಂತಿದ್ದರು. ಈ ಬಗ್ಗೆ ಯಾರೊಬ್ಬರಿಗೂ ಅವರು ಹೇಳಿಕೊಳ್ಳುತ್ತಾ ಇರಲಿಲ್ಲ ಎಂಬುದು ವಿಶೇಷ. ಹಾಗಾದ್ರೆ ಸಹಾಯ ಮಾಡಿದ ಬಳಿಕ ಪುನೀತ್ ರಾಜ್​​ಕುಮಾರ್ ಹಾಕುತ್ತಿದ್ದ ಆ ಒಂದು ಕಂಡಿಷನ್‌ (Condition) ಏನಾಗಿತ್ತು?

ಇದನ್ನೂ ಓದಿ: Rashmika Mandanna: ಹಳದಿ ಶಾಸ್ತ್ರದ ಫೋಟೊ ಹಂಚಿಕೊಂಡ ವಿರೋಶ್‌; ಜೋಡಿ ಸಂಭ್ರಮ ಹೀಗಿತ್ತು

ಸದ್ದಿಲ್ಲದೆ ಒಳ್ಳೆಯ ಕಾರ್ಯ

ದೊಡ್ಮನೆ ಕುಟುಂಬದಲ್ಲಿ ಹುಟ್ಟಿದರೂ ಪುನೀತ್ ರಾಜ್‌ಕುಮಾರ್ ಎಂದಿಗೂ ಅಹಂಕಾರ ತೋರಿಸಿಲ್ಲ. ಅಪ್ಪು ಅವರು ಬದುಕಿದ್ದಾಗ ಮಾಡಿದ್ದ ದಾನ ಧರ್ಮಗಳು ಬೆಳಕಿಗೆ ಬಂದಿದ್ದೇ ಅವರು ನಮ್ಮನ್ನು ಅಗಲಿದ ಮೇಲೆ ಬಡ ಮಕ್ಕಳ ಶಿಕ್ಷಣಕ್ಕೆ ನೆರವು ನೀಡುವುದು, ವೃದ್ಧಾಶ್ರಮಗಳಿಗೆ ಸಹಾಯ ಮಾಡುವುದು ಸೇರಿದಂತೆ ಅನೇಕ ಕಾರ್ಯಗಳನ್ನು ಸದ್ದಿಲ್ಲದೆ ಮಾಡುತ್ತಿದ್ದರು.



ಕನ್ನಡದ ಕೋಟ್ಯಧಿಪತಿಯಲ್ಲಿ ನಿರೂಪಕರಾದಾಗ ಹಲವು ಜನರಿಗೆ ಸಹಾಯ ಮಾಡುತ್ತಿದ್ದರಂತೆ. ಯಾರಾದ್ರೂ ಕಷ್ಟದಲ್ಲಿ ಇರೋರು ಸೋತಿದ್ದರೆ ಅವರಿಗೆ ಸಹಾಯ ಮಾಡಿರುವ ಅದೆಷ್ಟೋ ಉದಾಹರಣೆಗಳು ಇವೆಯಂತೆ. ಈ ಬಗ್ಗೆ ಯಾರೊಬ್ಬರಿಗೂ ಹೇಳದಂತೆ ಅವರು ಕಂಡೀಷನ್ ಹಾಕುತ್ತಿದ್ದರಂತೆ.

ಇಂದು ಕುಟುಂಬದವರು ಪುನೀತ್ ಸಮಾಧಿಗೆ ಪೂಜೆ ಸಲ್ಲಿಸಲಿದ್ದಾರೆ. ಇಡೀ ಕುಟುಂಬ ಕಂಠೀರವ ಸ್ಟುಡಿಯೋದಲ್ಲಿರೋ ಸಮಾಧಿ ಬಳಿ ತೆರಳಲಿದೆ. ಫಿಟ್ನೆಸ್ ವಿಷಯದಲ್ಲಿ ಪುನೀತ್ ರಾಜ್‌ಕುಮಾರ್ ಅವರು ಎಂದಿಗೂ ರಾಜಿ ಮಾಡಿಕೊಂಡವರಲ್ಲ. ಪುನೀತ್ ರಾಜ್‌ಕುಮಾರ್ ನಮ್ಮನ್ನು ದೈಹಿಕವಾಗಿ ಅಗಲಿದ್ದರೂ, ಅವರು ಬಿಟ್ಟುಹೋದ ಗುಣಗಳು ಇಂದಿಗೂ ಹಲವರನ್ನ ಸರಿದಾರಿಗೆ ತರುತ್ತಿದೆ.

ಇದನ್ನೂ ಓದಿ: Actor Upendra: ಸಿಲಿಂಡರ್‌ಗೂ ನನಗೂ ಲಿಂಕ್‌ ಇಲ್ಲ; ಮತ್ತೆ ತಲೆಗೆ ಹುಳ ಬಿಟ್ಟ ನಟ ಉಪೇಂದ್ರ

ಪುನೀತ್ ರಾಜ್‌ಕುಮಾರ್ 51 ನೇ ಜನ್ಮ ದಿನವನ್ನ ಈ ಸಲ ಸೆಲೆಬ್ರೇಟ್ ಮಾಡಲಾಗುತ್ತಿದೆ. ಎಂದಿನಂತೆ ಅಭಿಮಾನಿಗಳು ಅಪ್ಪು ಹುಟ್ಟುಹಬ್ಬಕ್ಕೆ ತಯಾರಿ ಮಾಡಿಕೊಂಡಿದ್ದಾರೆ. ಅಪ್ಪು ಸಮಾಧಿ ಬಳಿ ಬಂದು ಹುಟ್ಟುಹಬ್ಬವನ್ನು ಸೆಲೆಬ್ರೇಟ್ ಮಾಡುತ್ತಾರೆ. ಹಾಗೆ ಅಪ್ಪು ಜನ್ಮ ದಿನಕ್ಕೆ ಕಂಠೀರವ ಸ್ಟುಡಿಯೋದಲ್ಲಿ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳೂ ಬರುತ್ತಾರೆ. ಈ ಸಲವೂ ಅದು ಇದ್ದೇ ಇರುತ್ತದೆ.

Yashaswi Devadiga

View all posts by this author