ಇಂದು (ಮಾ.17) ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಜನ್ಮ ದಿನ. ಅವರು ನಮ್ಮೊಂದಿಗೆ ಇದ್ದಿದ್ದರೆ 51ನೇ ಹುಟ್ಟುಹಬ್ಬವನ್ನು ಫ್ಯಾನ್ಸ್ ಅದ್ದೂರಿಯಾಗಿ ಆಚರಣೆ ಮಾಡುತ್ತಿದ್ದರು. ದೈಹಿಕವಾಗಿ ಅಪ್ಪು ಇಲ್ಲವಾಗಿದ್ದರೂ, ಅಭಿಮಾನಿಗಳ ಅಂತರಾಳದಲ್ಲಿ ಸೇರಿಹೋಗಿದ್ದಾರೆ. ಇಂದು ಅಭಿಮಾನಿಗಳು ಕಂಠೀರವ ಸ್ಟುಡಿಯೋದಲ್ಲಿರುವ ಅಪ್ಪು ಸಮಾಧಿಗೆ ಭೇಟಿ ನೀಡಿ, ಪೂಜೆ ಸಲ್ಲಿಸುತ್ತಿದ್ದಾರೆ. ಈ ಮಧ್ಯೆ ಶಿವರಾಜ್‌ಕುಮಾರ್ ಕೂಡ ಪ್ರೀತಿಯ ತಮ್ಮನಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.
ಶಿವಣ್ಣ ಹಂಚಿಕೊಂಡ ಪೋಸ್ಟ್‌ನಲ್ಲಿ ಏನಿದೆ?
ಇನ್‌ಸ್ಟಾಗ್ರಾಮ್‌ನಲ್ಲಿ ಸ್ಟೋರಿ ಹಂಚಿಕೊಂಡಿರುವ ಶಿವಣ್ಣ, "ಆಕಾಶದಾಚೆ ಎಲ್ಲೋ ದೇವರಿಲ್ಲವೋ, ಇದು ಆಗ ಕೇಳಿದಾಗ ಎಷ್ಟು ನಿಜ ಅನ್ಸಿತ್ತು... ಈಗಲೂ ಹಾಗೇ ಇದೆ. ನಿನ್ನನ್ನು ಆಕಾಶದಾಚೆ ಹುಡುಕುವ ಅವಶ್ಯಕತೆ ಇಲ್ಲವೇ ಇಲ್ಲ. ಇಡೀ ಕರ್ನಾಟಕದಲ್ಲಿ ಎಲ್ಲೇ ಹೋದರೂ ಜನ ನಿನ್ನನ್ನು ಪ್ರತಿ ದಿನ ಸಂಭ್ರಮಿಸುತ್ತಾರೆ. ನಿನ್ನ ಹುಟ್ಟುಹಬ್ಬ ನಮ್ಮೆಲ್ಲರಿಗೂ ಹಬ್ಬ. ನಿನ್ನ ಹೆಸರು ಹೇಳಿದೊಡನೆ ಮೂಡುವ ನಗು, ನೀನು ಎಲ್ಲರಿಗೂ ಕೊಟ್ಟಿರುವ ಉಡುಗೊರೆ. ಹುಟ್ಟುಹಬ್ಬದ ಶುಭಾಶಯಗಳು ಅಪ್ಪು.. ನಿನ್ನ ಶಿವಣ್ಣ.." ಎಂದು ಬರೆದುಕೊಂಡಿದ್ದಾರೆ.
Puneeth Birthday: ಸಹಾಯ ಮಾಡಿದ ಮೇಲೆ ಇದೊಂದು ಕಂಡಿಷನ್ ಹಾಕುತ್ತಿದ್ರಂತೆ ಪುನೀತ್ ! ಏನದು?
ಅಪರೂಪದ ಫೋಟೋಗಳನ್ನು ಹಂಚಿಕೊಂಡ ನಿವೇದಿತಾ
ಶಿವರಾಜ್‌ಕುಮಾರ್ ಅವರ ಪುತ್ರಿ ನಿವೇದಿತಾ ಅವರು ಪುನೀತ್ ರಾಜ್‌ಕುಮಾರ್ ಅವರ ಅಪರೂಪದ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಬಾಲ್ಯದಲ್ಲಿ ತಮ್ಮ ಚಿಕ್ಕಪ್ಪ ಅಪ್ಪು ಅವರ ಜೊತೆಗೆ ಡ್ಯಾನ್ಸ್ ಮಾಡುತ್ತಿರುವ ಫೋಟೋಗಳನ್ನು ಹಂಚಿಕೊಂಡು, ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ ನಿರ್ಮಾಪಕಿ ನಿವೇದಿತಾ.
ನಿವೇದಿತಾ ಶೇರ್ ಮಾಡಿದ ಫೋಟೋಗಳಿವು
Puneeth Rajkumar Birthday: ಇಂದು ಪುನೀತ್ ರಾಜ್‌ಕುಮಾರ್ ಜನ್ಮದಿನ; ಅಪ್ಪು ಪ್ರಯಾಣವೇ ಸ್ಫೂರ್ತಿದಾಯಕ
ವಿಶ್ ಮಾಡಿದ ರಶ್ಮಿಕಾ
ನಟ ಪುನೀತ್ ರಾಜ್‌ಕುಮಾರ್ ಅವರ ಹುಟ್ಟುಹಬ್ಬಕ್ಕೆ ರಶ್ಮಿಕಾ ವಿಶ್ ಮಾಡಿದ್ದಾರೆ. ಪುನೀತ್ ಅವರ ಫೋಟೋವನ್ನು ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಶೇರ್ ಮಾಡಿರುವ ರಶ್ಮಿಕಾ, "ಹ್ಯಾಪಿ ಬರ್ತಡೇ ಅಪ್ಪು ಸರ್.." ಎಂದು ಬರೆದುಕೊಂಡಿದ್ದಾರೆ. ಅಂದಹಾಗೆ, ಪುನೀತ್ ರಾಜ್‌ಕುಮಾರ್ ಅವರ ಜೊತೆಗೆ ʻಅಂಜನಿಪುತ್ರʼ ಚಿತ್ರದಲ್ಲಿ ರಶ್ಮಿಕಾ ನಟಿಸಿದ್ದರು. ಇದು ಅವರ 2ನೇ ಕನ್ನಡ ಸಿನಿಮಾವಾಗಿತ್ತು.