ಬೆಂಗಳೂರು, ಮಾ. 17: ಇಂದು ಮಾರ್ಚ್ 17, ದಿವಂಗತ ಪುನೀತ್ ರಾಜ್‌ಕುಮಾರ್ (Puneeth) ಅವರ ಜನ್ಮದಿನ. ಕನ್ನಡಿಗರ ಹೃದಯದಲ್ಲಿ ಅಜರಾಮರ ಆಗಿರುವ ರಾಜಕುಮಾರನನ್ನು ಕರುನಾಡೇ ನೆನಪಿಸಿಕೊಳ್ಳುತ್ತಿದೆ. ಅಭಿಮಾನಿಗಳು ಅಪ್ಪುವಿನ (Appu) ಜನ್ಮದಿನದ ನೆನಪಿನಲ್ಲಿ ಹಲವು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಪ್ರತಿ ವರ್ಷ ಮಾರ್ಚ್ 17 ಬಂತೆಂದರೆ ಸಾಕು, ಇಡೀ ಕರುನಾಡು ಸಂಭ್ರಮದ ಕಡಲಲ್ಲಿ ತೇಲುತ್ತದೆ. ಅದಕ್ಕೆ ಕಾರಣ "ಪುನೀತ್ ರಾಜ್‌ಕುಮಾರ್" (Puneeth Rajkumar Birthday) ಬರ್ತ್‌ಡೇ. ಬಾಲನಟನಾಗಿ ರಾಷ್ಟ್ರಮಟ್ಟದಲ್ಲಿ ಮಿಂಚಿ, ಮುಂದೆ 'ಪವರ್ ಸ್ಟಾರ್' (Power Star) ಆಗಿ ಬೆಳೆದು ಅವರ ಪಯಣ ರೋಚಕ ಹಾಗೂ ಸ್ಪೂರ್ತಿದಾಯಕ.
ಅಪ್ಪು ಅಭಿನಯವೇ ಚೆಂದ
ಪುನೀತ್ 'ಪ್ರೇಮದ ಕಾಣಿಕೆ' ಚಿತ್ರದ ಮೂಲಕ ತೆರೆಗೆ ಬಂದರು. 1985ರಲ್ಲಿ ತೆರೆಕಂಡ 'ಬೆಟ್ಟದ ಹೂವು' ಚಿತ್ರದಲ್ಲಿನ ರಾಮು ಪಾತ್ರವು ಅವರಿಗೆ ರಾಷ್ಟ್ರ ಪ್ರಶಸ್ತಿಯನ್ನು ತಂದುಕೊಟ್ಟಿತು. ಪುಟ್ಟ ವಯಸ್ಸಿನಲ್ಲೇ ಅಪ್ಪು ಅಭಿನಯ ಅಚ್ಚರಿ ಮೂಡಿಸಿತ್ತು.
ಆಸ್ಕರ್ ವೇದಿಕೆಯಲ್ಲಿ ಧರ್ಮೇಂದ್ರಗೆ ತಪ್ಪಿದ ಗೌರವ; ಅತ್ಯಂತ ನಾಚಿಕೆಗೇಡು ಎಂದ ಹೇಮಾ ಮಾಲಿನಿ
ಇತಿಹಾಸದಲ್ಲಿ ಒಂದು ಹೊಸ ಮೈಲಿಗಲ್ಲು
2002ರಲ್ಲಿ ತೆರೆಕಂಡ 'ಅಪ್ಪು' ಸಿನಿಮಾ ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಒಂದು ಹೊಸ ಮೈಲಿಗಲ್ಲು. ನಾಯಕಿ ರಕ್ಷಿತಾ ಮತ್ತು ಪುನೀತ್ ಅವರ ನಡುವಿನ ಕೆಮಿಸ್ಟ್ರಿ ಹಾಗೂ ಪ್ರೇಮಕಥೆ ಅಂದಿನ ಕಾಲಕ್ಕೆ ಹೊಸ ಸಂಚಲನ ಮೂಡಿಸಿತ್ತು.
ಈ ಚಿತ್ರವು ಕರ್ನಾಟಕದಾದ್ಯಂತ 200ಕ್ಕೂ ಹೆಚ್ಚು ದಿನಗಳ ಕಾಲ ಯಶಸ್ವಿಯಾಗಿ ಪ್ರದರ್ಶನ ಕಂಡು ದಾಖಲೆ ಬರೆಯಿತು. ಪುನೀತ್ ರಾಜ್‌ಕುಮಾರ್ ಅವರ ಕೊನೆಯ ಸಿನಿಮಾ 'ಗಂಧದ ಗುಡಿ'. ಇದು ಕರ್ನಾಟಕದ ಪ್ರಕೃತಿ ಮತ್ತು ವನ್ಯಜೀವಿಗಳ ಕುರಿತಾದ ಒಂದು ಅದ್ಭುತ ಸಾಕ್ಷ್ಯಚಿತ್ರ. ಕರ್ನಾಟಕ ಸರ್ಕಾರವು ಪುನೀತ್ ರಾಜ್‌ಕುಮಾರ್ ಅವರಿಗೆ ಮರಣೋತ್ತರವಾಗಿ ರಾಜ್ಯದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ 'ಕರ್ನಾಟಕ ರತ್ನ' ನೀಡಿದೆ.
ಸಮಾಜ ಸೇವೆಯಿಂದ ಹೆಸರುವಾಸಿ
ಪುನೀತ್ ರಾಜ್‌ಕುಮಾರ್ ತಮ್ಮ ನಟನೆ, ನೃತ್ಯದಿಂದ ಅಷ್ಟೇ ಅಲ್ಲದೆ ತಮ್ಮ ಸಮಾಜ ಸೇವೆಯಿಂದ ಹೆಸರುವಾಸಿಯಾಗಿದ್ದರು. ಪುನೀತ್ ರಾಜ್‌ಕುಮಾರ್ ಅವರು ಬದುಕಿರುವಷ್ಟೂ ದಿನ ಲಕ್ಷ ಲಕ್ಷ ಮಂದಿಗೆ ಸಹಾಯ ಹಸ್ತ ಚಾಚಿದ್ದರು. ಎಡಗೈಯಲ್ಲಿ ಕೊಟ್ಟಿದ್ದು, ಬಲಗೈಗೆ ತಿಳಿಯದಂತೆ ಸಹಾಯ ಮಾಡುತ್ತಿದ್ದರು. ಪುನೀತ್ ಅವರು ತಮ್ಮ ತಂದೆ ತಾಯಿಯ ಹೆಸರಿನಲ್ಲಿ ಟ್ರಸ್ಟ್ ಸ್ಥಾಪಿಸಿ ಅನೇಕ ಜನರಿಗೆ ಸಹಾಯ ಮಾಡಿದ್ದರು.
ಪುನೀತ್ ಅವರ ಅಗಲಿಕೆಯವರೆಗೂ ಅವರು ಮಾಡಿದ್ದ ಈ ಕಾರ್ಯಗಳು ಯಾರಿಗೂ ತಿಳಿದಿರಲಿಲ್ಲ. ಪುನೀತ್ ರಾಜ್‌ಕುಮಾರ್ ಅವರು ಸಮಾಜ ಸೇವೆಗಾಗಿ ಕೋಟಿ ಕೋಟಿ ಹಣವನ್ನು ವೆಚ್ಚ ಮಾಡಿದ್ದರು. ಸಮಾಜ ಸೇವೆಯನ್ನೇ ತಮ್ಮ ಉಸಿರಾಗಿಸಿಕೊಂಡಿದ್ದರು.
ಸಿಲಿಂಡರ್‌ಗೂ ನನಗೂ ಲಿಂಕ್ ಇಲ್ಲ; ಮತ್ತೆ ತಲೆಗೆ ಹುಳ ಬಿಟ್ಟ ನಟ ಉಪೇಂದ್ರ
ಪುನೀತ್ ರಾಜ್‌ಕುಮಾರ್ 2021ರ ಅಕ್ಟೋಬರ್ 29ರಂದು ನಿಧನ ಹೊಂದಿದರು. ಅವರಿಗೆ 46 ವರ್ಷ ವಯಸ್ಸು ಆಗಿತ್ತು. ಹೃದಯಾಘಾತದಿಂದ ಅಪ್ಪು ನಿಧನ ಹೊಂದಿದರು.