ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಹುಬ್ಬಳ್ಳಿಯಲ್ಲಿ ಪುನೀತ್‌ ರಾಜ್‌ಕುಮಾರ್‌ ಭೇಟಿ ಮಾಡಿದ್ದ ಅಭಿಮಾನಿ ಗೌರಮ್ಮ ಇನ್ನಿಲ್ಲ

ಪುನೀತ್‌ ರಾಜ್‌ಕುಮಾರ್ ಅವರ ಕಟ್ಟಾ ಅಭಿಮಾನಿಯಾಗಿದ್ದ ಹುಬ್ಬಳ್ಳಿಯ ವೀರಾಪೂರ ಓಣಿಯ ನಿವಾಸಿ ಗೌರಮ್ಮ ಮಲ್ಲೇಶಪ್ಪ ಕಂಬಳಿ (94) ಬುಧವಾರ ನಿಧನರಾದರು. ತಮ್ಮ ಅಪ್ಪಟ ಅಭಿಮಾನಿಯನ್ನು ಕಾಣಲು ಸ್ವತಃ ಪುನೀತ್ ರಾಜ್‌ಕುಮಾರ್ ಅವರೇ ಹಿಂದೆ ಗೌರಮ್ಮ ಅವರ ಮನೆಗೆ ಭೇಟಿ ನೀಡಿ ಸಮಯ ಕಳೆದಿದ್ದರು.

ಹುಬ್ಬಳ್ಳಿ: ʻಕರ್ನಾಟಕ ರತ್ನʼ ಡಾ. ಪುನೀತ್‌ ರಾಜ್‌ಕುಮಾರ್ ಅಭಿಮಾನಿಯಾಗಿದ್ದ ಹುಬ್ಬಳ್ಳಿ ವೀರಾಪೂರ ಓಣಿ ನಿವಾಸಿ‌, ವೃದ್ಧೆ ಗೌರಮ್ಮ ಮಲ್ಲೇಶಪ್ಪ ಕಂಬಳಿ (94) ಬುಧವಾರ (ಡಿ.31) ನಿಧನರಾದರು. ಗೌರಮ್ಮ ಅವರು ಪುನೀತ್‌ ರಾಜ್‌ಕುಮಾರ್‌ ಅವರಿಗೆ ದೊಡ್ಡ ಅಭಿಮಾನಿಯಾಗಿದ್ದರು. ಕೆಲ ದಿನಗಳಿಂದ ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ಗೌರಮ್ಮ, ಡಿಸೆಂಬರ್ 31ರಂದು ಸಂಜೆ ಕೊನೆಯುಸಿರೆಳೆದರು.

ಮನೆಗೆ ಭೇಟಿ ನೀಡಿದ್ದ ಪುನೀತ್‌ ರಾಜ್‌ಕುಮಾರ್‌

ಗೌರಮ್ಮ ಅವರು ತಮ್ಮ ಮೇಲೆ ಇಟ್ಟಿರುವ ಅಭಿಮಾನ ಕಂಡು, ಪುನೀತ್‌ ರಾಜ್‌ಕುಮಾರ್‌ ಅವರು ಒಮ್ಮೆ ಗೌರಮ್ಮ ಅವರ ಮನೆಗೆ ಭೇಟಿ ನೀಡಿದ್ದರು. ಹೌದು, ಕೆಲ ವರ್ಷಗಳ ಹಿಂದೆ ಹುಬ್ಬಳ್ಳಿಗೆ ಆಗಮಿಸಿದ್ದ ಪುನೀತ್‌ ಆ ಸಂದರ್ಭದಲ್ಲಿ ಗೌರಮ್ಮ ಅವರ ಮನೆಗೆ ಭೇಟಿ ನೀಡಿ, ಮಾತನಾಡಿದ್ದರು. ಗೌರಮ್ಮ ಅವರ ಜೊತೆಗೆ ಕೆಲಸ ಸಮಯ ಕಾಲ ಕಳೆದಿದ್ದರು. ಮೃತ ಗೌರಮ್ಮ ಅವರಿಗೆ ಓರ್ವ ಪುತ್ರ ಹಾಗೂ ಪತ್ರಕರ್ತ ಮಹಾಂತೇಶ ಕಂಬಳಿ ಸೇರಿದಂತೆ ಮೊಮ್ಮಕ್ಕಳನ್ನು ಅಗಲಿದ್ದಾರೆ.

Dhurandhar: ಅಕ್ಷಯ್ ಖನ್ನಾ ರೀತಿ ಪುನೀತ್‌ ರಾಜ್‌ಕುಮಾರ್‌ ಎಂಟ್ರಿ ಕೊಟ್ರೆ ಹೇಗಿರತ್ತೆ? ವೈರಲ್‌ ಆಯ್ತು ವಿಡಿಯೊ

ಎಲ್ಲಾ ವಯಸ್ಸಿನ ಅಭಿಮಾನಿಗಳು

ಪುನೀತ್‌ ರಾಜ್‌ಕುಮಾರ್‌ ಅವರಿಗೆ ಎಲ್ಲಾ ವರ್ಗದ ಅಭಿಮಾನಿಗಳಿದ್ದರು. ಮಕ್ಕಳಿಂದ ಹಿಡಿದು ವಯೋವೃದ್ಧರ ತನಕ ಪುನೀತ್‌ ಅವರನ್ನು ಪ್ರೀತಿಸುತ್ತಿದ್ದರು. ಪುನೀತ್‌ ರಾಜ್‌ಕುಮಾರ್‌ ಅವರ ನಿಧನರಾದಾಗ ಇಡೀ ರಾಜ್ಯವೇ ಕಣ್ಣೀರಿಟ್ಟಿದ್ದನ್ನು ನಾವು ನೋಡಿದ್ದೇವೆ.

ಹುಬ್ಬಳ್ಳಿಗೆ ಆಗಮಿಸಿದ್ದ ಪುನೀತ್‌

ಪುನೀತ್‌ ಅವರು ಆಗಾಗ ಹುಬ್ಬಳ್ಳಿಗೆ ಆಗಮಿಸುತ್ತಿದ್ದರು. ಅವರ ನೆಚ್ಚಿನ ನಗರಗಳಲ್ಲಿ ಹುಬ್ಬಳ್ಳಿ ಕೂಡ ಒಂದು. ಪುನೀತ್‌ ರಾಜ್‌ಕುಮಾರ್‌ ನಟಿಸಿದ್ದ ʻದೊಡ್ಮನೆ ಹುಡ್ಗʼ ಸಿನಿಮಾದ ಬಹುತೇಕ ಚಿತ್ರೀಕರಣ ಹುಬ್ಬಳ್ಳಿಯಲ್ಲಿಯೇ ನಡೆದಿತ್ತು.