ಜೀ ಕನ್ನಡ ವಾಹಿನಿಯಲ್ಲಿ (Zee Kannada Serial) ಪ್ರಸಾರವಾಗುತ್ತಿರುವ ಹಿರಿಯ ನಟಿ ಉಮಾಶ್ರೀ (Umashree) ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವವ ಪುಟ್ಟಕ್ಕನ ಮಕ್ಕಳು ಧಾರವಾಹಿ ಕೊನೆಯ ದಿನದ ಚಿತ್ರೀಕರಣ ಮುಕ್ತಾಯವಾಗಿದೆ. ಪುಟ್ಟಕ್ಕನ ಮಕ್ಕಳು (Puttakkana Makkalu) ಧಾರವಾಹಿ 1200 ಸಂಚಿಕೆಗಳನ್ನು ಪೂರ್ತಿ ಮಾಡಿದ ಖ್ಯಾತಿ ಸೀರಿಯಲ್ ಇದೆ. ಈ ಧಾರವಾಹಿಯಲ್ಲಿ ಏಕಾಂಗಿಯಾಗಿ ತನ್ನ ನಾಲ್ವರು ಹೆಣ್ಣು ಮಕ್ಕಳನ್ನು ಬೆಳೆಸಿ ಸ್ವಾವಲಂಬಿಯಾಗಿ ಬದುಕುವ ಪುಟ್ಟಕ್ಕ ಎಂಬ ಛಲಗಾತಿ ಮಹಿಳೆಯ ಕತೆಯಿದೆ.
ಪುಟ್ಟಕ್ಕನ ಹಿರಿಯ ಮಗಳು ಸಹನಾ ಖ್ಯಾತಿಯ ನಟಿ ಅಕ್ಷರಾ ಸೋಶಿಯಲ್ ಮೀಡೀಯಾದಲ್ಲಿ ಶೂಟಿಂಗ್ ಸೆಟ್ ನ ಮಧುರ ನೆನಪಿನ ಫೋಟೊಗಳನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: Border 2: ಅಡ್ವಾನ್ಸ್ ಬುಕಿಂಗ್‌ನಲ್ಲಿ ʻಧುರಂಧರ್ʼ ರೆಕಾರ್ಡ್ ಬ್ರೇಕ್ ಮಾಡಿದ 'ಬಾರ್ಡರ್ 2'! ಇಂದು ರಿಲೀಸ್
ಈ ಸುಂದರ ಪ್ರಯಾಣ
ಪುಟ್ಟಕ್ಕನ ಮಕ್ಕಳು — 4 ಮರೆಯಲಾಗದ ವರ್ಷಗಳ ನಂತರ, ಈ ಸುಂದರ ಪ್ರಯಾಣ ಕೊನೆಗೂ ಅಂತ್ಯಗೊಂಡಿದೆ.
ಈ ಅನುಭವ ನನಗೆ ಏನನ್ನು ಅರ್ಥೈಸಿದೆ ಎಂಬುದನ್ನು ಪದಗಳಲ್ಲಿ ಹೇಳುವುದು ಕಷ್ಟ. ಪ್ರತಿ ಕ್ಷಣ, ಪ್ರತಿ ಪಾಠ, ಪ್ರತಿ ನೆನಪು ಶಾಶ್ವತವಾಗಿ ನನ್ನ ಹೃದಯಕ್ಕೆ ಹತ್ತಿರವಾಗಿರುತ್ತದೆ. ನಾನು ಇದನ್ನು ಜೀವಮಾನವಿಡೀ ಪಾಲಿಸುತ್ತೇನೆ. ಸಹನಾ ಆಗಿರುವುದು ನನ್ನ ಜೀವನದ ಅತ್ಯಂತ ವಿಶೇಷ ಅಧ್ಯಾಯಗಳಲ್ಲಿ ಒಂದಾಗಿದೆ.
ಬೆಂಬಲಿಸುವುದನ್ನು ಮುಂದುವರಿಸಿ
ನೀವು ನನ್ನ ಮೇಲೆ ಸುರಿಸಿದ ಅಪಾರ ಪ್ರೀತಿ, ಬೆಂಬಲ ಮತ್ತು ಪ್ರೋತ್ಸಾಹಕ್ಕಾಗಿ ನನ್ನ ಹೃದಯದ ಕೆಳಗಿನಿಂದ ಧನ್ಯವಾದಗಳು . ದಯವಿಟ್ಟು ನನ್ನೊಂದಿಗೆ ನಿಂತು ನನ್ನ ಮುಂದಿನ ಯೋಜನೆಗಳಲ್ಲಿಯೂ ನನ್ನನ್ನು ಬೆಂಬಲಿಸುವುದನ್ನು ಮುಂದುವರಿಸಿ. ನನ್ನ ನಿರ್ಮಾಣ ಸಂಸ್ಥೆ ಆರೂರು ಜಗದೀಶ್ ಸೇರಿದಂತೆ ಎಲ್ಲರಿಗೂ ಕೃತಜ್ಞತೆಗಳುಮತ್ತು ನನ್ನ ಎಲ್ಲಾ ಸಹ-ಕಲಾವಿದರು ಮತ್ತು ತಂತ್ರಜ್ಞರಿಗೆ ಶಾಶ್ವತವಾಗಿ ಕೃತಜ್ಞರಾಗಿರುತ್ತೇನೆ ಎಂದು ಬರೆದುಕೊಂಡಿದ್ದಾರೆ.
ಗಟ್ಟಿಗಿತ್ತಿ ಪುಟ್ಟಕ್ಕನ ಕಥೆ
ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಹಿರಿಯ ನಟಿ ಉಮಾಶ್ರೀ, ಧನುಷ್ ಗೌಡ, ಮಂಜುಭಾಷಿಣಿ, ಅಕ್ಷರಾ, ರಮೇಶ್ ಪಂಡಿತ್, ಸಂಜನಾ ಬುರ್ಲಿ, ಹಂಸಾ, ಶಿಲ್ಪಾ, ಅನಿರಿಶ್, ರಮ್ಯಾ ರಾಜು ಸೇರಿ ಹಲವು ಹಿರಿಯ ಕಿರಿಯ ಕಲಾವಿದರು ನಟಿಸಿದ್ದಾರೆ. ಉಮಾಶ್ರೀಯವರು ತಾಯಿಯಾಗಿ ಅದ್ಭುತವಾಗಿ ಅಭಿನಯಿಸಿದ್ದಾರೆ.
ಇದನ್ನೂ ಓದಿ: Oscars 2026 : ಆಸ್ಕರ್ ರೇಸ್‌ನಿಂದ ಭಾರತದ ಹೋಮ್‌ಬೌಂಡ್ ಔಟ್; ಕನ್ನಡ ಸಿನಿಮಾಗಳಿಗೂ ನಿರಾಸೆ
ತಂದೆ ದೂರವಾಗಿ ತಬ್ಬಲಿಯಾದ ಮೂವರು ಹೆಣ್ಣು ಮಕ್ಕಳನ್ನು ಸಾಕಿ ಸಲಹಿ ಅವರಿಗೆ ಬದುಕಿನ ದಾರಿ ತೋರಿಸಲು ಹೋರಾಡುವ ಗಟ್ಟಿಗಿತ್ತಿ ಪುಟ್ಟಕ್ಕನ ಕಥೆ ಇದು. ತೆಲುಗಿನ ರಾಧಮ್ಮ ಕೂತುರು ಧಾರಾವಾಹಿ ರೀಮೆಕ್ ಆಗಿದ್ದರೂ ಕನ್ನಡದ ನೇಟಿವಿಟಿಗೆ ತಕ್ಕಂತೆ ಬದಲಿಸಿಕೊಂಡು ಕಥೆಯನ್ನು ಬೆಳೆಸಲಾಗಿತ್ತು. 2021, ಡಿಸೆಂಬರ್ 13ರಂದು ಪುಟ್ಟಕ್ಕನ ಮಕ್ಕಳು ಧಾರಾವಾಹಿ ಪ್ರಸಾರ ಆರಂಭವಾಗಿತ್ತು. ಅಲ್ಲಿಂದ ಒಂದು ಹಂತದ ವರೆಗೆ ಈ ಧಾರಾವಾಹಿ ನಂಬರ್ ಒನ್ ಪಟ್ಟದಲ್ಲಿತ್ತು.