ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ragini Dwivedi: ಪ್ರಾಣ, ಪ್ರೀತಿ ಕೊಟ್ಟರೂ ಕನ್ನಡ ಚಿತ್ರರಂಗದಿಂದ ಸಪೋರ್ಟ್‌ ಸಿಗಲಿಲ್ಲ! ಕಣ್ಣೀರಿಟ್ಟ ರಾಗಿಣಿ ದ್ವಿವೇದಿ

Sandalwood: ನಟಿ ರಾಗಿಣಿ ದ್ವಿವೇದಿ ಕನ್ನಡದ ತುಪ್ಪದ ಬೆಡಗಿ ಎಂದೇ ಹೆಸರುವಾಸಿ. ರಾಗಿಣಿ ಸಿನಿಮಾರಂಗದಲ್ಲಿ 15 ವರ್ಷಗಳನ್ನು ಪೂರೈಸಿರುವ ಸಂಭ್ರಮದಲ್ಲಿದ್ದಾರೆ. ಕಾರ್ಯಕ್ರಮದಲ್ಲಿ ಮಾತನಾಡುವಾಗ, ಕನ್ನಡ ಚಿತ್ರರಂಗದ ಬಗ್ಗೆ ಬೇಸರದ ಮಾತುಗಳನ್ನಾಡಿದ್ದಾರೆ. ಸ್ಯಾಂಡಲ್‌ವುಡ್‌ನ ಡ್ರಗ್ಸ್‌ ಕೇಸ್‌ ಆರೋಪದಲ್ಲಿ ನಟಿ ರಾಗಿಣಿ ಜೈಲು ಸೇರಿದ್ದರು. ಬಳಿಕ ಜಾಮೀನು ಮೇಲೆ ಹೊರಬಂದಿದ್ದರು. ಇತ್ತೀಚೆಗಷ್ಟೇ ಈ ಪ್ರಕರಣದಲ್ಲಿ ರಾಗಿಣಿ ನಿರ್ದೋಷಿ ಎಂಬ ತೀರ್ಪು ಬಂದಿತ್ತು.

ರಾಗಿಣಿ ದ್ವಿವೇದಿ

ನಟಿ ರಾಗಿಣಿ ದ್ವಿವೇದಿ (Ragini Dwivedi) ಕನ್ನಡದ ತುಪ್ಪದ ಬೆಡಗಿ ಎಂದೇ ಹೆಸರುವಾಸಿ. ರಾಗಿಣಿ ಸಿನಿಮಾರಂಗದಲ್ಲಿ (Cinema Industry) 15 ವರ್ಷಗಳನ್ನು ಪೂರೈಸಿರುವ ಸಂಭ್ರಮದಲ್ಲಿದ್ದಾರೆ. ಕಾರ್ಯಕ್ರಮದಲ್ಲಿ ಮಾತನಾಡುವಾಗ, ಕನ್ನಡ ಚಿತ್ರರಂಗದ (Kannada Film Industry) ಬಗ್ಗೆ ಬೇಸರದ ಮಾತುಗಳನ್ನಾಡಿದ್ದಾರೆ.

ಒಳ್ಳೆಯ ಪ್ರೀತಿ ಸಿಕ್ಕಿಲ್ಲ!

ರಾಗಿಣಿ ಮಾತನಾಡಿ, ʻಯಾವ ರೀತಿ ಮಾತು ಶುರು ಮಾಡಬೇಕು ಗೊತ್ತಾಗ್ತಿಲ್ಲ. ಇವತ್ತು ನಿಜವಾಗಲೂ ಜರ್ನಿ ಬಗ್ಗೆ ಹೇಳಲು ಗೊತ್ತಾಗ್ತಿಲ್ಲ. ಹದಿನೈದು ವರ್ಷ ನಾನು ನಟಿ ಆಗುತ್ತೇನೆ ಅಂದುಕೊಂಡಿರಲಿಲ್ಲ. ಚಿಕ್ಕ ವಯಸ್ಸಿನಿಂದ ಒಳ್ಳೆಯ ಆಟಗಾರ್ತಿ ಆಗಬೇಕು ಅಂತ ಇದ್ದೆ. ಕನ್ನಡ ಇಂಡಸ್ಟ್ರಿ ಬಗ್ಗೆ ನನಗೆ ಗೊತ್ತೇ ಇರಲಿಲ್ಲ. ಸಡನ್‌ ಆಗಿ ಮಾಡೆಲಿಂಗ್‌ ಕ್ಷೇತ್ರಕ್ಕೆ ಬಂದೆ. ವೀರಮದಕರಿಗಿಂತ ಹೋಲಿ ನನ್ನ ಮೊದಲ ಸಿನಿಮಾʼ ಎಂದರು.

ಇದನ್ನೂ ಓದಿ: Bigg Boss Kannada 12: ಬೇಕು ಅಂತ ಟಾಸ್ಕ್‌ ಹಾಳು ಮಾಡ್ದೆ ಏನಿವಾಗ? ಅಶ್ವಿನಿ ಮಾತಿಗೆ ಗಿಲ್ಲಿ ಗರಂ!

ʻತುಂಬಾ ಕಷ್ಟಗಳನ್ನು ನೋಡಿದ್ದೆ. ಆದ್ರೆ ನನ್ನ ಪಕ್ಕ ಆಗ ಯಾರೂ ಇಲ್ಲ. ಜೀವನದಲ್ಲಿ ಒಳ್ಳೆಯ ದಿನ ಹಾಗೂ ಕಷ್ಟಗಳು ದಿನಗಳು ಇರುತ್ತೆ. ನನಗೆ ಕನ್ನಡ ಇಂಡಸ್ಟ್ರಿ ಮನೆ ಥರ. ಬೇರೆ ಇಂಡಸ್ಟ್ರಿ ಥರ ಪ್ರೀತಿ ಇಲ್ಲಿ ಸಿಕ್ಕಿಲ್ಲ. ಪ್ರಾಣ, ಪ್ರೀತಿ, ಹೆಸರು ಎಲ್ಲವನ್ನೂ ಕೊಟ್ಟಿದ್ದೆ. ಇವತ್ತು ಕೂಡ ಬೇರೆ ಕಡೆ ಹೋದರೆ ಸ್ಯಾಂಡಲ್‌ವುಡ್‌ ಪ್ರಮೋಟ್‌ ಮಾಡ್ತಾ ಇದ್ದೀನಿʼ ಎಂದು ಭಾವುಕರಾದರು.



ಕಷ್ಟದ ಸಮಯದಲ್ಲಿ ಯಾರೂ ಇರಲಿಲ್ಲ

ನಾನು ಕನ್ನಡದವಳು ಅಲ್ಲದಿದ್ದರೂ ಕನ್ನಡ ಕಲಿತಿದ್ದೇನೆ ಎಂದು ಹೇಳಿರುವ ರಾಗಿಣಿ ದ್ವಿವೇದಿ ಇಲ್ಲಿ ಒಳ್ಳೆಯ ದಿನಗಳೂ ಇದ್ದವು, ಆದರೆ ಕೆಟ್ಟ ದಿನಗಳಲ್ಲಿ ನನಗೆ ಯಾರೂ ಇರಲಿಲ್ಲ ಎಂದು ನೊಂದುಕೊಂಡಿದ್ದಾರೆ. ನಾನು ತುಂಬಾ ಕಷ್ಟದ ಸಮಯ ನೋಡಿಕೊಂಡು ಬಂದೆ. ಹೀಗಾಗಿ ನಾನು ಹೆಚ್ಚಾಗಿ ನೆಗೆಟಿವ್‌ಗಿಂತ ಪಾಸಿಟಿವ್‌ ವಿಚಾರಗಳನ್ನು ಹೆಚ್ಚಾಗಿ ತೆಗೆದುಕೊಳ್ಳುತ್ತೇನೆ. ನಮ್ಮ ಜೀವನದಲ್ಲಿ ನೆಗೆಟಿವ್‌ಗಳನ್ನ ಒಪ್ಪಿಕೊಂಡು ಹೋದಷ್ಟು ಮುಖ್ಯವಾಗುತ್ತೆ ಎಂದು ಹೇಳಿರುವ ರಾಗಿಣಿ, ನಿಜ ಹೇಳಬೇಕು ಅಂದ್ರೆ ಆ ಕಷ್ಟದ ಸಮಯದಲ್ಲಿ ಯಾರೂ ಇರಲಿಲ್ಲ .

ನನಗೆ ಯಾಕೆ ಇಷ್ಟು ಅಳು ಬಂತು ಅಂದರೆ, ಜೀವನದಲ್ಲಿ ನಮ್ಮ ಶಕ್ತಿ ತೋರಿಸುವುದು ಎಷ್ಟು ಮುಖ್ಯವೋ, ಬಲಹೀನತೆ ತೋರಿಸುವುದು ಕೂಡ ಅಷ್ಟೇ ಮುಖ್ಯವಾಗುತ್ತೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Bigg Boss Kannada 12: ರಾಶಿಕಾ ತಾಯಿಗೆ ಬೇಸರ ಮಾಡಿದ್ರಾ ಗಿಲ್ಲಿ? ಅಮ್ಮನನ್ನು ಕಂಡು ಸೂರಜ್‌ ಭಾವುಕ

ಸ್ಯಾಂಡಲ್‌ವುಡ್‌ನ ಡ್ರಗ್ಸ್‌ ಕೇಸ್‌ ಆರೋಪದಲ್ಲಿ ನಟಿ ರಾಗಿಣಿ ಜೈಲು ಸೇರಿದ್ದರು. ಬಳಿಕ ಜಾಮೀನು ಮೇಲೆ ಹೊರಬಂದಿದ್ದರು. ಇತ್ತೀಚೆಗಷ್ಟೇ ಈ ಪ್ರಕರಣದಲ್ಲಿ ರಾಗಿಣಿ ನಿರ್ದೋಷಿ ಎಂಬ ತೀರ್ಪು ಬಂದಿತ್ತು.

Yashaswi Devadiga

View all posts by this author