ಈ ವಾರ ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಹಲವು ಹಿಟ್ ಸಿನಿಮಾಗಳ ಜೊತೆಗೆ ಬಹುನಿರೀಕ್ಷಿತ ವೆಬ್ ಸರಣಿಗಳು ಕೂಡ ರಿಲೀಸ್ ಆಗಲಿವೆ. ತಮಿಳಿನಲ್ಲಿ ತೆರೆಕಂಡು ಬ್ಲಾಕ್ ಬಸ್ಟರ್ ಹಿಟ್ ಎನಿಸಿಕೊಂಡಿರುವ ʻಬ್ಲಾಸ್ಟ್ʼ ಸಿನಿಮಾವು ಇದೇ ವಾರ ಒಟಿಟಿಗೆ ಆಗಮಿಸಿಲಿದೆ. ಜೊತೆಗೆ ʻಬಾಹುಬಲಿ: ದಿ ಟಾರ್ಚ್‌ಬೀರರ್ʼ ಹೆಸರಿನ ಡಾಕ್ಯುಮೆಂಟರಿ ಕೂಡ ಒಟಿಟಿಗೆ ಬರ್ತಿದೆ.
ಹೌಸ್ ಆಫ್ ದಿ ಡ್ರ್ಯಾಗನ್ - ಸೀಸನ್ 3
ಈ ವರ್ಷದ ಅತ್ಯಂತ ನಿರೀಕ್ಷಿತ ಹೌಸ್ ಆಫ್ ದಿ ಡ್ರ್ಯಾಗನ್ - ಸೀಸನ್ 3 ಇಂದಿನಿಂದ (ಜೂನ್ 22) ಸ್ಟ್ರೀಮಿಂಗ್ ಆರಂಭಿಸಿದೆ. ಎಮ್ಮಾ ಡಿ'ಆರ್ಸಿ, ಮ್ಯಾಟ್ ಸ್ಮಿತ್, ಒಲಿವಿಯಾ ಕುಕ್ ಮತ್ತು ಟಾಮ್ ಗ್ಲಿನ್-ಕಾರ್ನಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಸರಣಿಯು, ಐರನ್ ಥ್ರೋನ್ ನಿಯಂತ್ರಣಕ್ಕಾಗಿ ನಡೆಯುವ ಭೀಕರ ತಾರ್ಗೇರಿಯನ್ ಅಂತರ್ಯುದ್ಧದ ಕಥೆಯನ್ನು ಮುಂದುವರಿಸಲಿದೆ. ಇದನ್ನು ಜಿಯೋಹಾಟ್‌ಸ್ಟಾರ್ ನಲ್ಲಿ ತೆಲುಗು, ಇಂಗ್ಲಿಷ್ ಮತ್ತು ಇತರ ಪ್ರಾದೇಶಿಕ ಭಾಷೆಗಳಲ್ಲಿ ವೀಕ್ಷಣೆ ಮಾಡಬಹುದಾಗಿದೆ.
ಕರ್ನಾಟಕದಲ್ಲಿ 'ಧುರಂಧರ್ 2' ಸಿನಿಮಾ ಈವರೆಗೂ ಗಳಿಸಿದ್ದೆಷ್ಟು? 'ಬಾಹುಬಲಿ 2' ದಾಖಲೆ ಮುರಿಯಲು ಇನ್ನೆಷ್ಟು ಕೋಟಿ ಬೇಕು?
ಗ್ರಾಮ್ ಚಿಕಿತ್ಸಾಲಯ್ - ಸೀಸನ್ 2
ಸಾಧಾರಣ ಯಶಸ್ಸು ಕಂಡಿದ್ದ ಮೊದಲ ಸೀಸನ್‌ನ ನಂತರ, ಟಿವಿಎಫ್‌ನ ಗ್ರಾಮ್ ಚಿಕಿತ್ಸಾಲಯ್ ಕಾಮಿಡಿ-ಡ್ರಾಮಾ ಸರಣಿಯು ಎರಡನೇ ಸೀಸನ್‌ನೊಂದಿಗೆ ಬರುತ್ತಿದ್ದು, ಅಮೋಲ್ ಪರಾಶರ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಗ್ರಾಮೀಣ ಆರೋಗ್ಯ ರಕ್ಷಣೆಯ ಸವಾಲುಗಳನ್ನು ಎದುರಿಸುತ್ತಾ, ಹಳ್ಳಿಯ ಜೀವನಕ್ಕೆ ಹೊಂದಿಕೊಳ್ಳುವ ಯುವ ವೈದ್ಯನ ಕಥೆ ಇದರಲ್ಲಿದೆ. ಜೂನ್ 23ರಿಂದ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಹಿಂದಿ ಭಾಷೆಯಲ್ಲಿ ಸ್ಟ್ರೀಮಿಂಗ್ ಆಗಲಿದೆ.
ಅವತಾರ್: ಫೈರ್ ಅಂಡ್ ಆಶ್
ಜೇಮ್ಸ್ ಕ್ಯಾಮರೂನ್ ನಿರ್ದೇಶನದ ಬ್ಲಾಕ್‌ಬಸ್ಟರ್ ʻಅವತಾರ್: ಫೈರ್ ಅಂಡ್ ಆಶ್ʼ ಚಿತ್ರವು ಜೂನ್ 24ರಂದು ಜಿಯೋಹಾಟ್‌ಸ್ಟಾರ್ ನಲ್ಲಿ ತೆಲುಗು, ಇಂಗ್ಲಿಷ್, ಹಿಂದಿ ಮತ್ತು ತಮಿಳು ಭಾಷೆಗಳಲ್ಲಿ ಪ್ರೀಮಿಯರ್ ಆಗಲಿದೆ. ಸ್ಯಾಮ್ ವರ್ತಿಂಗ್ಟನ್, ಜೋ ಸಲ್ಡಾನಾ, ಸಿಗೌರ್ನಿ ವೀವರ್ ಮತ್ತು ಸ್ಟೀಫನ್ ಲ್ಯಾಂಗ್ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.
OTT This Week: ಈ ವಾರ ಒಟಿಟಿಗೆ ಬಂದಿವೆ ಸಖತ್ ಸಿನಿಮಾಗಳು, ಪಟ್ಟಿ ಇಲ್ಲಿದೆ
ಬ್ಲಾಸ್ಟ್
ಅರ್ಜುನ್ ಸರ್ಜಾ, ಪ್ರೀತಿ ಮುಕುಂದನ್ ಮತ್ತು ಅಭಿರಾಮಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ʻಬ್ಲಾಸ್ಟ್ʼ ಚಿತ್ರವು ಜೂನ್ 25 ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ. 'ಬ್ಲಾಸ್ಟ್' ಚಿತ್ರವು ಆಕ್ಷನ್, ಸಸ್ಪೆನ್ಸ್ ಮತ್ತು ಎಮೋಷನಲ್ ಡ್ರಾಮಾವಾಗಿದ್ದು, ತಮಿಳು, ಕನ್ನಡ, ತೆಲುಗು ಮತ್ತು ಇತರ ಭಾರತೀಯ ಭಾಷೆಗಳಲ್ಲಿ ವೀಕ್ಷಣೆ ಮಾಡಬಹುದಾಗಿದೆ.
ಬಾಹುಬಲಿ: ದಿ ಟಾರ್ಚ್‌ಬೀರರ್
ಬಾಹುಬಲಿ ಸರಣಿಯ ಅಭಿಮಾನಿಗಳಿಗೆ ಈ ವಾರ ಮತ್ತೊಂದು ವಿಶೇಷ ಕೊಡುಗೆ ಕಾಯುತ್ತಿದೆ. ʻಬಾಹುಬಲಿ: ದಿ ಟಾರ್ಚ್‌ಬೀರರ್ʼ ಡಾಕ್ಯುಮೆಂಟರಿ ಸರಣಿಯು ಎಸ್.ಎಸ್. ರಾಜಮೌಳಿ ಅವರ ಐತಿಹಾಸಿಕ 'ಬಾಹುಬಲಿ' ಸಿನಿಮಾ ಸೃಷ್ಟಿಯಾದ ಜರ್ನಿ ಮತ್ತು ಅದು ಭಾರತೀಯ ಚಿತ್ರರಂಗದಲ್ಲಿ ಹೇಗೆ ಒಂದು ಸಾಂಸ್ಕೃತಿಕ ವಿದ್ಯಮಾನವಾಗಿ ಬೆಳೆಯಿತು ಎಂಬುದನ್ನು ಪರಿಚಯಿಸಲಿದೆ. ಚಿತ್ರದ ನಿರ್ಮಾಪಕರು ಹಾಗೂ ಪ್ರಮುಖ ತಂತ್ರಜ್ಞರ ಒಳನೋಟಗಳನ್ನು ಒಳಗೊಂಡಿರುವ ಈ ಸರಣಿಯು ಜೂನ್ 26ರಿಂದ ನೆಟ್‌ಫ್ಲಿಕ್ಸ್ ನಲ್ಲಿ ತೆಲುಗು ಸೇರಿದಂತೆ ಇತರ ಭಾಷೆಗಳಲ್ಲಿ ಪ್ರಸಾರವಾಗಲಿದೆ.
ಲಿಂಗಮ್
ಪ್ರಶಾಂತ್ ಪಾಂಡಿಯರಾಜ್ ನಿರ್ದೇಶನದ ಲಿಂಗಮ್ ಸಿನಿಮಾದಲ್ಲಿ ಕದಿರ್ ನಾಯಕರಾಗಿ ನಟಿಸಿದ್ದಾರೆ. ದಿವ್ಯಾ ಭಾರತಿ ಮತ್ತು ವಿಮಲ್ ಕೂಡ ನಟಿಸಿರುವ ಈ ಸಿನಿಮಾದ ಕಥೆಯು ಕಬಡ್ಡಿ ಆಟಗಾರನ ಜೀವನದ ಸುತ್ತ ಸಾಗುತ್ತದೆ. ಜೂನ್ 26ರಿಂದ ಜಿಯೋಹಾಟ್‌ಸ್ಟಾರ್ ನಲ್ಲಿ ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಸ್ಟ್ರೀಮ್ ಆಗಲಿದೆ.
ಪರ್ಫೆಕ್ಟ್ ಫ್ಯಾಮಿಲಿ - ಸೀಸನ್ 2
ಬದಲಾಗುತ್ತಿರುವ ಸಂಬಂಧಗಳು ಮತ್ತು ಪಾತ್ರಗಳು ಎದುರಿಸುವ ಹೊಸ ಸವಾಲುಗಳನ್ನು ಅನಾವರಣಗೊಳಿಸುವ ʻಪರ್ಫೆಕ್ಟ್ ಫ್ಯಾಮಿಲಿʼ ಕೌಟುಂಬಿಕ ಡ್ರಾಮಾ ಸರಣಿಯು ಹೊಸ ಸೀಸನ್‌ನೊಂದಿಗೆ ಬರುತ್ತಿದೆ. 2ನೇ ಸೀಸನ್ ಜೂನ್ 26ರಿಂದ ಸೋನಿಲಿವ್ ನಲ್ಲಿ ಹಿಂದಿ ಭಾಷೆಯಲ್ಲಿ ವೀಕ್ಷಣೆಗೆ ಲಭ್ಯವಿದೆ.
ರಾಜಾ ಶಿವಾಜಿ
ರಿತೇಶ್ ದೇಶ್‌ಮುಖ್, ಜೆನೆಲಿಯಾ ದೇಶ್‌ಮುಖ್, ಸಂಜಯ್ ದತ್, ಅಭಿಷೇಕ್ ಬಚ್ಚನ್ ಮತ್ತು ಭಾಗ್ಯಶ್ರೀ ತಾರಾಗಣವಿರುವ 'ರಾಜಾ ಶಿವಾಜಿ' ಚಿತ್ರವು ಛತ್ರಪತಿ ಶಿವಾಜಿ ಮಹಾರಾಜರ ಜೀವನವನ್ನು ಆಧರಿಸಿದೆ. ರಿತೇಶ್ ದೇಶ್‌ಮುಖ್ ನಿರ್ದೇಶನದ ಈ ಐತಿಹಾಸಿಕ ಚಿತ್ರವು ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಂಡಿತ್ತು. ಜೂನ್ 26ರಿಂದ ನೆಟ್‌ಫ್ಲಿಕ್ಸ್ ನಲ್ಲಿ ಪ್ರೀಮಿಯರ್ ಆಗಲಿದೆ.
ಲಾಕ್ ಅಪ್ - ಸೀಸನ್ 2
ಮೊದಲ ಸೀಸನ್‌ನ ಭರ್ಜರಿ ಜನಪ್ರಿಯತೆಯ ನಂತರ, 'ಲಾಕ್ ಅಪ್' ರಿಯಾಲಿಟಿ ಶೋ ಹೊಸ ಸ್ಪರ್ಧಿಗಳು, ಹೊಸ ಸವಾಲುಗಳು ಮತ್ತು ಹೈ-ಡ್ರಾಮಾ ಜಗಳಗಳೊಂದಿಗೆ ಮರಳುತ್ತಿದೆ. ಈ ಎರಡನೇ ಸೀಸನ್ ಜೂನ್ 27ರಿಂದ ನೆಟ್‌ಫ್ಲಿಕ್ಸ್ ನಲ್ಲಿ ಹಿಂದಿ ಭಾಷೆಯಲ್ಲಿ ಪ್ರಸಾರವಾಗಲು ಸಜ್ಜಾಗಿದೆ.