ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ʻವಾರಣಾಸಿʼ ಸಿನಿಮಾದ OTT ಹಕ್ಕುಗಳು ದಾಖಲೆ ಮೊತ್ತಕ್ಕೆ ಮಾರಾಟ; ರಾಜಮೌಳಿ - ಮಹೇಶ್ ಬಾಬು ಕಮಾಲ್!

Varanasi movie OTT: ʻವಾರಣಾಸಿʼ ಸಿನಿಮಾದ ಡಿಜಿಟಲ್‌ ಹಕ್ಕುಗಳನ್ನು ನೆಟ್‌ಫ್ಲಿಕ್ಸ್ ಸಂಸ್ಥೆಯು ದಾಖಲೆಯ 650 ಕೋಟಿ ರೂ.ಗಳನ್ನ ನೀಡಿದ ಖರೀದಿ ಮಾಡಿದೆ ಎಂಬ ಸುದ್ದಿ ಸಂಚಲನ ಮೂಡಿಸಿದೆ. ರಾಜಮೌಳಿ ನಿರ್ದೇಶನದ, ಮಹೇಶ್ ಬಾಬು ನಟನೆಯ ಈ ಪ್ಯಾನ್-ವರ್ಲ್ಡ್ ಸಿನಿಮಾ 2027ರಲ್ಲಿ ತೆರೆಗೆ ಬರಲಿದೆ.

ಭಾರತ ಮಾತ್ರವಲ್ಲ, ವಿಶ್ವ ಸಿನಿ ಜಗತ್ತು ಅತ್ಯಂತ ಕುತೂಹಲದಿಂದ ನಿರೀಕ್ಷಿಸುತ್ತಿರುವ ಪ್ರಾಜೆಕ್ಟ್‌ಗಳ ಪಟ್ಟಿಯಲ್ಲಿ ರಾಜಮೌಳಿ ಮತ್ತು ಮಹೇಶ್ ಬಾಬು ಕಾಂಬಿನೇಷನ್‌ನ ‘ವಾರಣಾಸಿ’ ಸಿನಿಮಾ ಕೂಡ ಒಂದು. ಮಹೇಶ್ ಬಾಬು ವೃತ್ತಿಜೀವನದಲ್ಲೇ ಅತಿ ಹೆಚ್ಚು ಬಜೆಟ್‌ನಲ್ಲಿ ತಯಾರಾಗುತ್ತಿರುವ 'ಪ್ಯಾನ್-ವರ್ಲ್ಡ್' ಸಿನಿಮಾ ಇದಾಗಿದ್ದು, ನಿರ್ದೇಶಕ ರಾಜಮೌಳಿ ಈ ಸಿನಿಮಾ ಘೋಷಣೆ ಮಾಡಿದಾಗಿನಿಂದಲೇ ಭಾರೀ ನಿರೀಕ್ಷೆಗಳು ಹುಟ್ಟಿಕೊಂಡಿವೆ. ಈ ಮಧ್ಯೆ ಒಟಿಟಿ ವಿಚಾರಕ್ಕೆ ವಾರಣಾಸಿ ಸದ್ದು ಮಾಡಿದೆ.

650 ಕೋಟಿ ರೂ. ಗಳಿಗೆ ಡೀಲ್‌ ಆಯ್ತಾ?

ಮೂಲಗಳ ಪ್ರಕಾರ, ಪ್ರಮುಖ ಒಟಿಟಿ ದಿಗ್ಗಜ ಎನಿಸಿಕೊಂಡಿರುವ ನೆಟ್‌ಫ್ಲಿಕ್ಸ್ (Netflix) ವಾರಣಾಸಿ ಸಿನಿಮಾದ ಡಿಜಿಟಲ್ ಹಕ್ಕುಗಳಿಗಾಗಿ ಬರೋಬ್ಬರಿ 650 ಕೋಟಿ ರೂ. ಆಫರ್ ನೀಡಿದೆಯಂತೆ. ಎಲ್ಲಾ ಭಾಷೆಗಳ ಡಿಜಿಟಲ್ ಹಕ್ಕುಗಳನ್ನು ಒಳಗೊಂಡ ಈ ಆಫರ್, ಭಾರತೀಯ ಸಿನಿಮಾಗಳಲ್ಲೇ ಇಲ್ಲಿಯವರೆಗಿನ ಅತ್ಯಧಿಕ ಹೆಚ್ಚಿನ ಮೊತ್ತದ ಒಟಿಟಿ ಡೀಲ್ ಎಂದು ಹೇಳಲಾಗುತ್ತಿದೆ. ನಿರ್ಮಾಪಕರು ಈ ಡೀಲ್‌ನ ಒಪ್ಪಿಕೊಂಡಿದ್ದಾರಾ? ಅಥವಾ ಇನ್ನೂ ಜಾಸ್ತಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರಾ ಎಂಬ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಆದರೆ ಒಂದು ಮೂಲದ ಪ್ರಕಾರ, 650 ಕೋಟಿ ರೂ. ಡೀಲ್‌ಗೆ ರಾಜಮೌಳಿ ಟೀಮ್‌ ಗ್ರೀನ್‌ ಸಿಗ್ನಲ್‌ ನೀಡಿದೆಯಂತೆ.

Varanasi: 'ವಾರಣಾಸಿ' ಚಿತ್ರದ ಪ್ರಚಾರಕ್ಕೆ ವಿಶಿಷ್ಟ ತಂತ್ರ ! ಟೈಟಲ್ ಹಾಕದೆ ರಿಲೀಸ್ ದಿನಾಂಕ ಘೋಷಣೆ?

2027ರ ಏಪ್ರಿಲ್‌ 7ರಂದು ಬಿಡುಗಡೆಯಾಗಲಿರುವ ಈ ಚಿತ್ರವು ಈಗಿನಿಂದಲೇ ಭಾರತೀಯ ಚಿತ್ರರಂಗದ ಅತ್ಯಂತ ಬೃಹತ್ ಪ್ರಾಜೆಕ್ಟ್ ಆಗಿ ಗಮನ ಸೆಳೆಯುತ್ತಿದೆ. ರಾಜಮೌಳಿ ಈ ಸಿನಿಮಾದ ವಿಶುವಲ್ಸ್ ಅನ್ನು ಒಂದು ಕಾನ್ಸೆಪ್ಟ್ ಮಟ್ಟದಲ್ಲಿ ತೋರಿಸಿದ್ದು, ಸಿನಿಮಾದ ಮೇಲಿನ ನಿರೀಕ್ಷೆಗಳನ್ನು ಮತ್ತಷ್ಟು ಹೆಚ್ಚಿಸಿದೆ. ಸಾಹಸ, ಪುರಾಣ ಮತ್ತು ಎಪಿಕ್ ಆಕ್ಷನ್ ಎಲ್ಲವನ್ನೂ ಸೇರಿಸಿ ಹೊಸದೇನನ್ನೋ ತೋರಿಸಲಿದ್ದೇನೆ ಎಂಬ ಸುಳಿವನ್ನು ರಾಜಮೌಳಿ ನೀಡಿದ್ದಾರೆ. ಈ ಚಿತ್ರದಲ್ಲಿ ಪೃಥ್ವಿರಾಜ್ ಸುಕುಮಾರನ್ ವಿಲನ್‌ ಆದರೆ, ಪ್ರಿಯಾಂಕಾ ಚೋಪ್ರಾ ನಾಯಕಿಯಾಗಿದ್ದಾರೆ. ಎಂ.ಎಂ. ಕೀರವಾಣಿ ಸಂಗೀತ ಸಂಯೋಜನೆ ಈ ಸಿನಿಮಾಕ್ಕಿದೆ.

Varanasi Release Date: ಈ ದಿನದಂದು ರಾಜಮೌಳಿ–ಮಹೇಶ್ ಬಾಬು ‘ವಾರಣಾಸಿ’ ರಿಲೀಸ್‌?

ಪಾರ್ಟ್‌ 2 ಇರೋದಿಲ್ಲ!

ಹೌದು, ವಾರಣಾಸಿ ಸಿನಿಮಾವನ್ನು ಒಂದೇ ಭಾಗದಲ್ಲಿ ತೋರಿಸುವುದಕ್ಕೆ ರಾಜಮೌಳಿ ನಿರ್ಧಾರ ಮಾಡಿದ್ದಾರೆ. ಆರಂಭದಲ್ಲಿ ‘ವಾರಣಾಸಿ’ ಸಿನಿಮಾವನ್ನು ಎರಡು ಪಾರ್ಟ್‌ನಲ್ಲಿ ಮಾಡಬೇಕು ಎಂಬುದು ಚಿತ್ರತಂಡದ ಆಲೋಚನೆಯಾಗಿತ್ತು. ಆದರೆ, ಅದನ್ನು ಕೈಬಿಟ್ಟು ಒಂದೇ ಪಾರ್ಟ್‌ನಲ್ಲಿ ಸಿನಿಮಾ ಮಾಡಲು ಪ್ಲ್ಯಾನ್‌ ಮಾಡಿದ್ದಾರಂತೆ ರಾಜಮೌಳಿ. ‘ವಾರಣಾಸಿ’ ಸಿನಿಮಾದ ಅವಧಿ 3 ಗಂಟೆಗೂ ಅಧಿಕವಾಗಿರಲಿದೆಯಂತೆ. ಆದರೂ ಎಲ್ಲವನ್ನೂ ಒಂದೇ ಪಾರ್ಟ್ನಲ್ಲಿ ಹೇಳುವ ನಿರ್ಧಾರಕ್ಕೆ ರಾಜಮೌಳಿ ಬಂದಿದ್ದಾರೆ.