ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Arjun Sarja: ಶೂಟಿಂಗ್‌ನ ಮೊದಲ ದಿನವೇ ಅರ್ಜುನ್ ಸರ್ಜಾ ಕಪಾಳಕ್ಕೆ ಬಾರಿಸಿದ ರಾಜೇಂದ್ರ ಸಿಂಗ್ ಬಾಬು: ಕಾರಣವೇನು?

Rajendra Singh Babu: ರಾಜೇಂದ್ರ ಸಿಂಗ್ ಬಾಬು ಚಿತ್ರರಂಗಕ್ಕೆ ಬಂದು 50 ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.‌ ಈ ಸಂದರ್ಭದಲ್ಲಿ ಚಿತ್ರರಂಗದ ಗಣ್ಯರು ಅವರೊಂದಿಗಿನ ಅನುಭವಗಳನ್ನು ಹಂಚಿಕೊಂಡಿದ್ದಾರೆ. ನಟ ಅರ್ಜುನ್ ಸರ್ಜಾ‌ ತಮ್ಮ ಸಿನಿಮಾ ಜರ್ನಿ ಬಗ್ಗೆ, ರಾಜೇಂದ್ರಸಿಂಗ್ ಬಾಬು ಅವರ ವ್ಯಕ್ತಿತ್ವ ಬಗ್ಗೆ ಮಾತನಾಡಿದ್ದಾರೆ. ಅವರೇನು ಹೇಳಿದರು ಎನ್ನುವ ವಿವರ ಇಲ್ಲಿದೆ.

Arjun Sarja

ಬೆಂಗಳೂರು: ಕನ್ನಡ ಮೂಲದ ದಕ್ಷಿಣ ಭಾರತದ ಸ್ಟಾರ್ ನಟ ಅರ್ಜುನ್‌ ಸರ್ಜಾ (Arjun Sarja) ಹಲವು ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಕಾಲಿವುಡ್‌ ಸ್ಟಾರ್‌ ಆಗಿರುವ ಅವರು ಇದೀಗ ʼಸೀತಾ ಪಯಣʼ ಎಂಬ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಅರ್ಜುನ್ ಸರ್ಜಾ ಅವರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯ ಮಾಡಿದ್ದೇ ಖ್ಯಾತ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು. 1981ರಲ್ಲಿ ತೆರೆಕಂಡ ʼಸಿಂಹದ ಮರಿ ಸೈನ್ಯʼ ಚಿತ್ರದ ಮೂಲಕ ಅರ್ಜುನ್‌ ಸರ್ಜಾ ಸ್ಯಾಂಡಲ್‌ವುಡ್‌ಗೆ ಎಂಟ್ರಿ ನೀಡಿದರು. ಇದೀಗ ಸರ್ಜಾ‌ ಸಿನಿಮಾ ಜರ್ನಿ ಬಗ್ಗೆ, ರಾಜೇಂದ್ರಸಿಂಗ್ ಬಾಬು (Rajendra Singh Babu) ಕೊಟ್ಟ ಅವಕಾಶದ ಬಗ್ಗೆ ಕಾರ್ಯಕ್ರಮದಲ್ಲಿ ಮಾತಾಡಿದ್ದಾರೆ.

ರಾಜೇಂದ್ರ ಸಿಂಗ್ ಬಾಬು ಚಿತ್ರರಂಗಕ್ಕೆ ಬಂದು 50 ವರ್ಷಗಳನ್ನು ಪೂರೈಸಿದ ಕಾರಣ ಕಾರ್ಯಕ್ರಮವೊಂದನ್ನು ಹಮ್ಮಿಕೊಳ್ಳಲಾಗಿತ್ತು.‌ ಚಿತ್ರರಂಗದ ಗಣ್ಯರು ಅನುಭವಗಳನ್ನು ಹಂಚಿಕೊಂಡಿದ್ದಾರೆ. ಈ ವೇಳೆ ಅರ್ಜುನ್ ಸರ್ಜಾ‌ ತಮ್ಮ ಸಿನಿಮಾ ಜರ್ನಿ ಬಗ್ಗೆ, ರಾಜೇಂದ್ರ ಸಿಂಗ್ ಬಾಬು ಅವರ ವ್ಯಕ್ತಿತ್ವ ಬಗ್ಗೆ ಮಾತಾಡಿದ್ದಾರೆ. ರಾಜೇಂದ್ರ ಸಿಂಗ್ ಬಾಬು ತಮ್ಮ ಕಪಾಳಕ್ಕೆ ಹೊಡೆದ ವಿಚಾರವನ್ನು ಹಂಚಿಕೊಂಡಿದ್ದಾರೆ.

ಇದನ್ನು ಓದಿ:OTT Entry Movie: ಕಾಂತಾರ ಸಿನಿಮಾದ ಜೊತೆಗೆ ಸಾಲು ಸಾಲು ಹಿಟ್ ಸಿನಿಮಾ ಒಟಿಟಿಗೆ ಎಂಟ್ರಿ: ಯಾವುದೆಲ್ಲ ಗೊತ್ತಾ?

''ಶಂಕರ್ ನಾಗ್ ಅಭಿನಯದ 'ಕಾಳಿಂಗ ಸರ್ಪ' ಸಿನಿಮಾದ ಶೂಟಿಂಗ್ ಆಗುತ್ತಿದ್ದ ಸಂದರ್ಭ ಬಾಬು ಸರ್‌ ನನ್ನ ಹತ್ತಿರ ಸಿನಿಮಾ ಮಾಡುತ್ತೀಯಾ ಅಂತ ಕೇಳಿದರು. ತಲೆ ಅಲ್ಲಾಡಿಸಿದ ಕೂಡಲೆ ತಂದೆ ಬಳಿ ನಾನು ಮಾತನಾಡುತ್ತೇನೆ ಎಂದಿದ್ದರು. ಹಾಗಾಗಿ ನಾನು ಸಿನಿಮಾ ಒಪ್ಪಿಕೊಂಡೆ. ಅದೇ 'ಸಿಂಹದ ಮರಿ ಸೈನ್ಯ' ಸಿನಿಮಾ ಆಗಿತ್ತು. ಶೂಟಿಂಗ್‌ಗೆ ಹೋದ ಸಂದರ್ಭದಲ್ಲಿ ಅಲ್ಲಿ ಅಂಬರೀಶ್‌ ಸರ್‌ ಕೂಡ ಇದ್ದರು.‌ ʼಸಿಂಹದ ಮರಿ ಸೈನ್ಯʼ ಸಿನಿಮಾದಲ್ಲಿ ಶವದ ಮುಂದೆ ಅಳೋ ಮೊದಲ ಸೀನ್ ಇತ್ತು. ನಾನು ಎಷ್ಟೇ ಅಳಬೇಕು ಅಂದರೂ ಅಳು ಬರುತ್ತಿರಲಿಲ್ಲ. ಫಸ್ಟ್ ಡೇನೇ ಕ್ಲೈಮ್ಯಾಕ್ಸ್... ಆಕ್ಟಿಂಗ್ ಗೊತ್ತಿಲ್ಲ. ಅದರಲ್ಲೂ ಅಳೋ ಸೀನ್ ಎಷ್ಟೇ ಪ್ರಯತ್ನ ಪಟ್ಟರೂ ಅಳು ಬಂದಿಲ್ಲ. ಎಷ್ಟೇ ಗ್ಲಿಸರಿನ್ ಹಾಕಿದ್ರೂ ಪರ್ಫೆಕ್ಟ್ ಆಗಿಲ್ಲ. ಆಗ ಸಿಟ್ಟಾದ ಬಾಬು ಸರ್‌ ಅಲ್ಲೇ ಕಪಾಳಕ್ಕೆ ಹೊಡೆದರು. ಆಗ ಕಣ್ಣೀರು ಬಂತು. ಕಣ್ಣೀರು ಬರುವುದನ್ನು ನೋಡಿ ತಗೋಳಿ ಈ ಶಾಟ್ ಎಂದು ಸೂಚಿಸಿದರು. ಅವತ್ತು ಬಾಬು ಸರ್ ಅವಕಾಶ ಕೊಟ್ಟಿದ್ದಕ್ಕೆ ನಾನು ಹೀಗೆ ಇದ್ದೀನಿʼʼ ಎಂದು ಅರ್ಜುನ್ ಸರ್ಜಾ ಹಳೆ ನೆನಪು ಮೆಲುಕು ಹಾಕಿದರು.