ನಟ ಜಗ್ಗೇಶ್ ಅವರು ಆಗಾಗ ಸಾಮಾಜಿಕ ಜಾಲತಾಣದಲ್ಲಿ ಕೆಲವೊಂದು ವಿಶೇಷ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿರುತ್ತಿರುತ್ತಾರೆ. ಇದೀಗ ಕರ್ನಾಟಕದ ರಾಜ್ಯಸಭಾ ಸಂಸದರಾಗಿರುವ ಅವರು ತಮ್ಮ 2.5 ವರ್ಷಗಳ ಸಾಧನೆಯ ರಿಪೋರ್ಟ್ ಕಾರ್ಡ್ ಹಂಚಿಕೊಂಡಿದ್ದಾರೆ. ವಿಷಯ ಗೊತ್ತಿಲ್ಲದೇ ಮಾತನಾಡುವವರಿಗೆ ಈ ಪೋಸ್ಟ್ ಮೂಲಕ ಉತ್ತರ ನೀಡಿದ್ದಾರೆ. ಇದುವರೆಗೂ ಸಂಸತ್ತಿನಲ್ಲಿ ಕೇಳಲಾದ ಪ್ರಶ್ನೆಗಳ ಸಂಖ್ಯೆಗಳ ಮಾಹಿತಿಯನ್ನು ಶೇರ್ ಮಾಡುವುದರ ಜೊತೆಗೆ, "ಕೆಲ ವಿಷಯ ಅರಿಯದೆ ಮಾತಾಡುವ ಮಹನೀಯರಿಗೆ, ನನ್ನ ಸಂಸದ ಕಾರ್ಯದ ಬಗ್ಗೆ ಮಾಹಿತಿ" ಎಂದು ಬರೆದುಕೊಂಡಿದ್ದಾರೆ.
"ಶ್ರದ್ಧೆಯಿಂದ ಕಾರ್ಯಮಾಡಿ ದೇವರು ಮತ್ತು ದೇವರಿಗೆ ಸಮನಾದ ನಮ್ಮ ಜನರು ಮೆಚ್ಚುತ್ತಾರೆ ಹರಸುತ್ತಾರೆ. ಕಣ್ಣೀರು ಅಪಮಾನ ಅವಮಾನ ಸಹಿಸಿ ಕಷ್ಟಪಟ್ಟು ಹಳ್ಳಿಯ ಮಣ್ಣಿನಿಂದ ಎದ್ದು ಬಂದು ರಾಯರ ಕೃಪೆ ಹಾಗೂ ನನ್ನ ಶ್ರಮದಿಂದ ಜನರ ಚಪ್ಪಾಳೆಯಿಂದ ಜೀವನ ಗೆದ್ದವ ನಾನು. ಮೈಬಗ್ಗಿಸಿ ಕಾಯಕ ಕೈಲಾಸ ಎಂದು ದುಡಿದವ ಜನಮನ ಮೆಚ್ಚಿ ಜೀವನ ಗೆಲ್ಲುತ್ತಾನೆ, ಗೆಲ್ಲುತ್ತಲೆ ಇರುತ್ತಾನೆ" ಎಂದಿದ್ದಾರೆ ಜಗ್ಗೇಶ್.
Dr Rajkumar ಜೊತೆಗಿನ ಅಪರೂಪದ ಫೋಟೋ ಶೇರ್ ಮಾಡಿದ ಜಗ್ಗೇಶ್; 'ಈ ಚಿತ್ರ ನೋಡಿ ಭಾವುಕನಾಗಿಬಿಟ್ಟೆ' ಎಂದ ನವರಸ ನಾಯಕ
"ಏನು ಸಾಧಿಸದೆ ಅನ್ಯರ ಬದುಕು ಅನ್ಯರ ಜೀವನ, ಅನ್ಯರ ಸಾಧನೆ ಕಂಡು ಹಂಗಿಸಲೆ ನಾನು ಹುಟ್ಟಿರುವ ಎಂದು ಬಾಳುವವ ಇದ್ದಲ್ಲೇ ಇರುವ, ಮುಂದೆ ಸಾಗದೆ ಎನ್ನುತ್ತದೆ ಹಿರಿಯರು ಹೇಳಿದ ನಾಣ್ನುಡಿ. ನಾವೆಲ್ಲಾ ಯುವಕರಾಗಿದ್ದಾಗ ನಮ್ಮ ಕಾಲದ ಸಾಧಕರ ಕಂಡು ಅವರ ಬೆಳವಣಿಗೆಗೆ ಬಳಸಿದ ಶ್ರದ್ಧೆಯ ಕಥೆ ಕೇಳಿ ಹರಿನಾಮದಂತೆ ಮೈಗೂಡಿಸಿಕೊಂಡು ಬಂದ ಬೆಂಕಿಯಲ್ಲಿ ಅರಳಿದ ಕಾಡು ಹೂವು ನಾವು. ಓ ನನ್ನ ಆತ್ಮೀಯ ಬಂಧುಗಳೇ ನೀವು ಬೆಳೆದು ಜೀವನ ಗೆದ್ದು ಸಾಧಕರಾಗಿ. ಅನ್ಯರ ಚಿಂತೆ ಬಿಟ್ಟು ನಿಮ್ಮ ಗೆಲುವಿನ ಚಿಂತೆ ಮಾಡುತ್ತೀರಿ ಹೆದ್ದಾರಿ ಸಿಗುತ್ತೆ ಗೆದ್ದು ಬೀಗಿ ಬದುಕಲ್ಲಿ ನಿಮ್ಮಗಳ ಯಶಸ್ಸಿಗೆ ನಾನು ಪ್ರಾರ್ಥಿಸುವೆ" ಎಂದಿದ್ದಾರೆ ಜಗ್ಗೇಶ್.
ಜಗ್ಗೇಶ್ ಪೋಸ್ಟ್
ಮತ್ತೊಂದು ಫೋಟೋದಲ್ಲಿ ಏನಿದೆ?
ಮತ್ತೊಂದು ಫೋಟೋವನ್ನು ಜಗ್ಗೇಶ್ ಹಂಚಿಕೊಂಡಿದ್ದು, ಅದರಲ್ಲಿ, "ರಾಜ್ಯಸಭಾ ಸಂಸದರಾಗಿ ಜಗ್ಗೇಶ್ ಅವರ ಕಾರ್ಯಕ್ಷಮತೆಯನ್ನು ನೋಡಲು ನಿಮಗೆ ವಿವರಗಳು ಬೇಕಿದ್ದರೆ, ದಯವಿಟ್ಟು ರಾಜ್ಯಸಭಾ ಪೋರ್ಟಲ್‌ಗೆ ಭೇಟಿ ನೀಡಿ ಮತ್ತು ಸಂಸದರ ಹೆಸರನ್ನು (MP NAME) ಟೈಪ್ ಮಾಡಿ. ಅಲ್ಲಿ ನೀವು ಅವರ ಭಾಷಣಗಳು ಮತ್ತು ಇತರ ವಿವರಗಳನ್ನು ನೋಡಬಹುದು. ಕರ್ನಾಟಕದಿಂದ ಆಯ್ಕೆಯಾಗಿ, ಕಳೆದ 2.5 ವರ್ಷಗಳಿಂದ ಅಧಿಕಾರದಲ್ಲಿರುವ ಸಂಸದ ಜಗ್ಗೇಶ್ ಅವರ ಕಾರ್ಯಕ್ಷಮತೆ ಇದು..." ಎಂದು ಬರೆದಿದೆ.
ನವರಸ ನಾಯಕ ಜಗ್ಗೇಶ್ ಅವರಿಗೆ ಹುಟ್ಟುಹಬ್ಬದ ಸಂಭ್ರಮ
ಜಗ್ಗೇಶ್ ಅವರು ಒಟ್ಟು 10 ಅಧಿವೇಶನಗಳಲ್ಲಿ ಸುಮಾರು 268 ಪ್ರಶ್ನೆಗಳನ್ನು ಕೇಳಿದ್ದಾರೆ. ಶೂನ್ಯ ವೇಳೆ ಮತ್ತು ವಿಶೇಷ ಉಲ್ಲೇಖಗಳಲ್ಲಿ 11 ಬಾರಿ ಭಾಗವಹಿಸಿದ್ದಾರೆ. ಇತ್ತೀಚಿನ 'ಶಾಂತಿ' ಮಸೂದೆ 2025 ಸೇರಿ ಸರ್ಕಾರಿ ಮಸೂದೆಗಳ ಚರ್ಚೆ ಎರಡು ಪ್ರಮುಖ ಮಸೂದೆಗಳ ಚರ್ಚೆಯಲ್ಲಿ ಪಾಲ್ಗೊಂಡಿದ್ದಾರೆ.