ನಟ ರಕ್ಷಿತ್ ಶೆಟ್ಟಿ ಅವರು ʻಸಪ್ತ ಸಾಗರದಾಚೆ ಎಲ್ಲೋʼ ಸಿನಿಮಾ ತೆರೆಕಂಡು 3 ವರ್ಷಗಳಾಗುತ್ತಿವೆ. ಆದರೂ ರಕ್ಷಿತ್ ಯಾವುದೇ ಹೊಸ ಸಿನಿಮಾಗಳನ್ನು ಘೋಷಿಸಿಲ್ಲ. ಐದು ವರ್ಷಗಳ ಹಿಂದೆ ʻರಿಚರ್ಡ್ ಆಂಟನಿʼ ಸಿನಿಮಾ ಅನೌನ್ಸ್ ಆಗಿತ್ತಾದರೂ, ಆ ಬಗ್ಗೆ ಮಾಹಿತಿ ಸಿಕ್ಕಿರಲಿಲ್ಲ. ರಕ್ಷಿತ್ ಶೆಟ್ಟಿ ಕೂಡ ಎಲ್ಲರಿಂದ ದೂರ ಉಳಿದು, ಯಾರ ಸಂಪರ್ಕಕ್ಕೂ ಸಿಕ್ಕಿರಲಿಲ್ಲ. ಹಾಗಾಗಿ, ರಕ್ಷಿತ್ ಫ್ಯಾನ್ಸ್‌ಗೆ ಬೇಸರವಾಗಿತ್ತು. ಆದರೆ ಅಭಿಮಾನಿಗಳು ಖುಷಿಯಾಗುವಂತಹ ಮಾಹಿತಿ ಹೊರಬಿದ್ದಿದೆ.
ರೆಡಿಯಾಯ್ತು ಐದು ಸ್ಕ್ರಿಪ್ಟ್‌ಗಳು
ಹೌದು, ಮೂರು ವರ್ಷ ಸದ್ದಿಲ್ಲದೇ ರಕ್ಷಿತ್ ಶೆಟ್ಟಿ ಅವರು ಸ್ಕ್ರಿಪ್ಟ್‌ಗಳ ಮೇಲೆ ವರ್ಕ್ ಮಾಡಿದ್ದಾರೆ. ಅದು ಒಂದಲ್ಲಾ ಎರಡಲ್ಲಾ ಐದು ಸ್ಕ್ರಿಪ್ಟ್‌ಗಳ ಮೇಲೆ ರಕ್ಷಿತ್ ಶೆಟ್ಟಿ ಕೆಲಸ ಮಾಡಿದ್ದು, ಈಗ 5 ಸ್ಕ್ರಿಪ್ಟ್‌ಗಳು ಕೂಡ ರೆಡಿಯಾಗಿದ್ದು, ಎಲ್ಲಾ ಶೂಟಿಂಗ್‌ಗೆ ಸಿದ್ಧವಾಗಿವೆ. ಮೊದಲು ರಿಚರ್ಡ್ ಆಂಟನಿ ಸಿನಿಮಾವನ್ನು ರಕ್ಷಿತ್ ಶೆಟ್ಟಿ ಕೈಗೆತ್ತಿಕೊಳ್ಳಲಿದ್ದಾರೆ. ಮಾರ್ಚ್‌ನಿಂದ ಪ್ರೀ-ಪ್ರೊಡಕ್ಷನ್ ಕೆಲಸಗಳು ಆರಂಭವಾಗಲಿದ್ದು, ಮೇ ನಂತರ ಶೂಟಿಂಗ್ ಆರಂಭವಾಗಲಿದೆ.
Rakshit Shetty: ರಕ್ಷಿತ್ ಶೆಟ್ಟಿ ಅವರ ‘ರಿಚರ್ಡ್ ಆಂಟೊನಿ’ಯಿಂದ ಹೊರಬಿತ್ತು ಬಿಗ್ ಅಪ್‌ಡೇಟ್!
ಈ ಚಿತ್ರವನ್ನು 2027ರ ಡಿಸೆಂಬರ್‌ನಲ್ಲಿ ತೆರೆಕಾಣಿಸುವುದಕ್ಕೆ ರಕ್ಷಿತ್ ಪ್ಲ್ಯಾನ್ ಮಾಡಿಕೊಂಡಿದ್ದಾರಂತೆ ರಕ್ಷಿತ್ ಶೆಟ್ಟಿ. 2013ರಲ್ಲಿ ತೆರೆಗೆ ಬಂದ ʻಉಳಿದವರು ಕಂಡಂತೆʼ ಚಿತ್ರದ ಮುಂದುವರಿದ ಭಾಗವಾಗಿ ʻರಿಚರ್ಡ್ ಆಂಟನಿʼ ಸಿನಿಮಾ ಮೂಡಿಬರುತ್ತಿದೆ. ʻಉಳಿದವರು ಕಂಡಂತೆʼ ಚಿತ್ರಕ್ಕೆ ದೊಡ್ಡ ಅಭಿಮಾನಿ ವರ್ಗವಿದ್ದು, ಇದೀಗ ಸಿನಿಪ್ರಿಯರು ʻರಿಚರ್ಡ್ ಆಂಟನಿʼ ಚಿತ್ರದ ಮೇಲೆ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ.
Rakshit Shetty: ರಕ್ಷಿತ್ ಶೆಟ್ಟಿಯ ರಿಚರ್ಡ್ ಆಂಟನಿ ಸಿನಿಮಾ ಬಗ್ಗೆ ರಿಷಬ್ ಶೆಟ್ಟಿ ಕೊಟ್ರು ಬಿಗ್ ಅಪ್ಡೇಟ್!
ನಂತರ ಪುಣ್ಯಕೋಟಿ ಮೇಲೆ ರಕ್ಷಿತ್ ಗಮನ
ʻರಿಚರ್ಡ್ ಆಂಟನಿʼ ಸಿನಿಮಾವನ್ನು ಮುಗಿಸಿದ ಕೂಡಲೇ ʻಪುಣ್ಯಕೋಟಿʼ ಚಿತ್ರವನ್ನು ರಕ್ಷಿತ್ ಕೈಗೆತ್ತಿಕೊಳ್ಳಲಿದ್ದಾರೆ. ಈ ಚಿತ್ರಕ್ಕೆ ವಿಎಫ್‌ಎಕ್ಸ್ ಕೆಲಸಗಳು ಜಾಸ್ತಿ ಇರುವುದರಿಂದ ʻರಿಚರ್ಡ್ ಆಂಟನಿʼ ಜೊತೆಗೆಯೇ ʻಪುಣ್ಯಕೋಟಿʼ ಚಿತ್ರದ ವಿಎಫ್‌ಎಕ್ಸ್ ಕೆಲಸಗಳು ಸಾಗಲಿವೆಯಂತೆ. ಇದೆಲ್ಲದರ ನಡುವೆ ಮತ್ತೆ ಮೂರು ಹೊಸ ಸಿನಿಮಾಗಳ ಸ್ಕ್ರಿಪ್ಟ್‌ಗಳನ್ನು ರಕ್ಷಿತ್ ಶೆಟ್ಟಿ ಬರೆದುಕೊಂಡಿದ್ದಾರೆ. ಈ ಎಲ್ಲಾ ಸಿನಿಮಾಗಳ ನಿರ್ದೇಶನವನ್ನು ರಕ್ಷಿತ್ ಶೆಟ್ಟಿ ಅವರೇ ಮಾಡಲಿದ್ದು, ನಿರ್ಮಾಣದ ಹೊಣೆ ಕೂಡ ಬಹುತೇಕ ಅವರದ್ದೇ ಆಗಿರಲಿದೆ.
ಇಷ್ಟು ದಿನ ರಕ್ಷಿತ್ ಶೆಟ್ಟಿ ಅವರನ್ನು ಮಿಸ್ ಮಾಡಿಕೊಂಡಿದ್ದ ಫ್ಯಾನ್ಸ್‌ಗೆ ಇದು ಗುಡ್ ನ್ಯೂಸ್ ಆಗಿದೆ. ಸದ್ಯ ಅಧಿಕೃತ ಮಾಹಿತಿಗಳು ರಕ್ಷಿತ್ ಶೆಟ್ಟಿ ತಂಡದಿಂದ ಹೊರಬೀಳಬೇಕಿದೆ.