ನಟ ರಕ್ಷಿತ್ ಶೆಟ್ಟಿ (Rakshith Shetty) ಇತ್ತೀಚೆಗೆ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಮುಂಬರುವ ಸಿನಿಮಾಗಳ ಸ್ಕ್ರಿಪ್ಟ್ ಕೆಲಸದಲ್ಲಿ ರಕ್ಷಿತ್ ಶೆಟ್ಟಿ ಅವರು ಬ್ಯುಸಿಯಾಗಿದ್ದಾರೆ. ಇದೀಗ . ಉಡುಪಿ (Udupi) ತಾಲೂಕಿನ ಅಲೆವೂರಿನ ಕಲ್ಯಾಣ ನಗರದಲ್ಲಿ ನೇಮೋತ್ಸವ ನಡೆದಿದೆ. ಅಲೆವೂರು ದೊಡ್ಡಮನೆ ಮನೆತನದವರು ನಿರ್ವಹಿಸುವ ನೇಮೋತ್ಸವದಲ್ಲಿ (nemotsava ) ಭಾಗಿಯಾಗಿದ್ದಾರೆ. ವೈದ್ಯನಾಥ ಬಬ್ಬು ಸ್ವಾಮಿ ದೈವದ ನೇಮೋತ್ಸವದಲ್ಲಿ ಪಾಲ್ಗೊಂಡಿದ್ದಾರೆ. ಈ ವಿಡಿಯೋಗಳು ವೈರಲ್ ಆಗಿವೆ.
ಕುಟುಂಬದವರ ಜೊತೆ ಭಾಗಿ
ಈ ವೈದ್ಯನಾಥ ಬಬ್ಬು ಸ್ವಾಮಿ ದೈವದ ನೇಮೋತ್ಸವವನ್ನು ಅಲೆವೂರು ದೊಡ್ಡಮನೆ ಮನೆತನದವರು ನಿರ್ವಹಿಸುತ್ತಾರೆ. ನಟ ರಕ್ಷಿತ್ ಶೆಟ್ಟಿಯವರು ಅಲೆವೂರು ದೊಡ್ಡಮನೆ ಕುಟುಂಬದ ಕುಡಿ. ಈ ಬಾರಿಯೂ ನೇಮೋತ್ಸವದಲ್ಲಿ ಪಾಲ್ಗೊಂಡ ನಟ ರಕ್ಷಿತ್ ಶೆಟ್ಟಿಯವರು, ತಂದೆ ತಾಯಿ ಕುಟುಂಬದವರ ಜೊತೆ ರಾತ್ರಿ ನಡೆದ ನೇಮೋತ್ಸವದಲ್ಲಿ ಭಾಗಿಯಾಗಿದ್ದರು.
ಇದನ್ನೂ ಓದಿ: 777 Charlie Movie: ಚೀನಾದಲ್ಲಿ ಸದ್ದು ಮಾಡುತ್ತಿದೆ ರಕ್ಷಿತ್ ಶೆಟ್ಟಿಯ ʼ777 ಚಾರ್ಲಿʼ ಚಿತ್ರ; ಕನ್ನಡತಿಯ ಪೋಸ್ಟ್ ವೈರಲ್
ರಕ್ಷಿತ್ ಶೆಟ್ಟಿಯವರು ರನ್ ಆಂಟನಿ ಚಿತ್ರದ ಕಥೆ ಬರೆದುಕೊಂಡು ಅಮೆರಿಕದಲ್ಲಿ ಕುಳಿತಿದ್ದಾರೆ ಎಂದು ಹೇಳಲಾಗುತ್ತಿತ್ತು. ಇದೀಗ ಅವರು ಊರಿನ ನೇಮೋತ್ಸವದಲ್ಲಿ ಭಾಗಿಯಾಗಿದ್ದಾರೆ.ಬಹಳ ಹೊತ್ತು ನೇಮೋತ್ಸವದಲ್ಲಿ ಕುಳಿತ ಬಳಿಕ ರಕ್ಷಿತ್ ಶೆಟ್ಟಿ ನಂತರ ವಾಪಸ್ಸಾದರು.

ರಿಚರ್ಡ್ ಆ್ಯಂಟೋನಿ ಚಿತ್ರೀಕರಣ
ಸಪ್ತ ಸಾಗರದಾಚೆ ಎಲ್ಲೋ ಸೈಡ್ ಎ ಮತ್ತು ಬಿ ರಿಲೀಸ್ ಆದ ನಂತರ ಕಣ್ಮರೆಯಾಗಿರುವ ನಟ ರಕ್ಷಿತ್ ಶೆಟ್ಟಿ ಅವರು ತಮ್ಮ ಮುಂದಿನ ಬಹುನಿರೀಕ್ಷಿತ ರಿಚರ್ಡ್ ಆ್ಯಂಟೋನಿ ಚಿತ್ರೀಕರಣವನ್ನು ಯಾವಾಗ ಪ್ರಾರಂಭಿಸುತ್ತಾರೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.
ಮುಂಬರುವ ಹಲವಾರು ಯೋಜನೆಗಳಲ್ಲಿ ರಕ್ಷಿತ್ ಬ್ಯುಸಿಯಾಗಿದ್ದು, 'ರಿಚರ್ಡ್ ಆ್ಯಂಟೋನಿ, ಪುಣ್ಯಕೋಟಿ ಮತ್ತು ಮಿಡ್‌ವೇ ಟು ಮೋಕ್ಷನಂತಹ ಚಿತ್ರಗಳು ಶೀಘ್ರದಲ್ಲೇ ನಿರ್ಮಾಣವನ್ನು ಪ್ರಾರಂಭಿಸುವ ನಿರೀಕ್ಷೆಯಿದೆ. ಅವರು ಶೀಘ್ರದಲ್ಲೇ ಚಿತ್ರೀಕರಣಕ್ಕೆ ಮರಳಲು ಉತ್ಸುಕರಾಗಿದ್ದಾರೆ
ರಕ್ಷಿತ್ ಶೆಟ್ಟಿ ಸಿನಿಮಾ ಅಂದರೆ ಆ ಸಿನಿಮಾ ಒಂದಿಲ್ಲೊಂದು ವಿಶೇಷ ಕತೆಯ ಅನಾವರಣವಿರುತ್ತೆ.ಇನ್ನು ತಾವು ನಟ ಮಾತ್ರವಲ್ಲ ನಿರ್ದೇಶಕನೂ ಹೌದು ಅನ್ನೋ ಮೂಲಕ ಉಳಿದವರು ಕಂಡಂತೆ ಸಿನಿಮಾದಲ್ಲಿ ತಮ್ಮದೇ ಆದ ಸ್ಟೈಲ್ ನಲ್ಲಿ ನಟಿಸಿ ನಿರ್ದೇಶಿಸಿ ಗೆದ್ದ ಸಿಂಪಲ್ ಹುಡುಗ ಆ ನಂತರ ಕಿರಿಕ್ ಪಾರ್ಟಿಯ ಮೂಲಕ ಎರಡು ಶೇಡ್ ನಲ್ಲಿ ನಟಿಸಿಯು ಸೈ ಅನ್ನಿಸಿಕೊಂಡವರು.
ಇದನ್ನೂ ಓದಿ: Bigg Boss Kannada 12: ಕೊನೇ ಹಂತದಲ್ಲಿ ಕೈ ಕೊಟ್ಟ ಲಕ್! ಬಿಗ್ ಬಾಸ್ನಿಂದ ರಾಶಿಕಾ ಶೆಟ್ಟಿ ಔಟ್
ಸಾನ್ವಿ ಅನ್ನೋ ಪಾತ್ರದ ಮೂಲಕ ನ್ಯಾಷನಲ್ ಕ್ರಶ್ನ ಪ್ಯಾನ್ ಇಂಡಿಯಕ್ಕೆ ಪರಿಚಯಿಸಿದ ರಕ್ಷಿತ್ ಶೆಟ್ಟಿ ಚಾರ್ಲಿ ಮೂಲಕ ತಮ್ಮ ಪ್ರಾಣಿ ಪ್ರೀತಿಯನ್ನ ತೋರಿಸಿದ್ದರು. ಸಿನಿಮಾ ಅತ್ಯತ್ತಮ ರಾಷ್ಟ್ರೀಯ ಪ್ರಶಸ್ತಿಯನ್ನ ಕೂಡ ತನ್ನದಾಗಿಸಿಕೊಂಡಿತ್ತು.