ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Rakshith Shetty: ಬೇಸರದ ವಿಚಾರಕ್ಕೆ ಪೋಸ್ಟ್ ಹಾಕಿದ ರಕ್ಷಿತ್ ಶೆಟ್ಟಿ

Rakshith shetty: ಸ್ಯಾಂಡಲ್​ವುಡ್ ನಟ ರಕ್ಷಿತ್ ಶೆಟ್ಟಿ ಅವರು ಇತ್ತೀಚಿನ ದಿನಗಳಲ್ಲಿ ಎಲ್ಲಿಯೂ ಕಾಣಿಸಿಕೊಳ್ಳುತ್ತಿಲ್ಲ. ಈ ಹಿಂದೆ ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ, ರಾಜ್ ಶೆಟ್ಟಿ ಮೂವರೂ ಒಬ್ಬರಿಗೊಬ್ಬರು ಪರಸ್ಪರ ಚಿತ್ರಗಳನ್ನು ಪ್ರೋತ್ಸಾಹಿಸುತ್ತಾ, ಪ್ರೀತಿಯ ಮಾತುಗಳನ್ನು ಆಡುತ್ತಾ ಸಾರ್ವಜನಿಕವಾಗಿ ಹೇಳಿಕೆಗಳನ್ನು ನೀಡುತ್ತಾ ಒಟ್ಟಾಗಿ ಕಾಣಿಸಿಕೊಳ್ಳುತ್ತಿದ್ದರು. ರಕ್ಷಿತ್‌ ಸಿನಿಮಾ ಅಪ್‌ಡೇಟ್‌ ವಿಚಾರವೂ ಈ ಹಿಂದೆ ಪ್ರಮೋದ್‌ ಶೆಟ್ಟಿ ಅವರು ಸಣ್ಣ ಹಿಂಟ್‌ ಕೊಟ್ಟಿದ್ದರೇ ಹೊರತು ರಕ್ಷಿತ್‌ ಯಾವುದೇ ಸುಳಿವು ನೀಡರಲಿಲ್ಲ. ಆದರೀಗ ಏಕಾಏಕಿ ಇನ್‌ಸ್ಟಾದಲ್ಲಿ ಬೇಸರದ ಪೋಸ್ಟ್‌ವೊಂದನ್ನು ಶೇರ್‌ ಮಾಡಿದ್ದಾರೆ.

ರಕ್ಷಿತ್‌ ಶೆಟ್ಟಿ

ಸ್ಯಾಂಡಲ್​ವುಡ್ ನಟ ರಕ್ಷಿತ್ ಶೆಟ್ಟಿ (rakshith shetty) ಅವರು ಇತ್ತೀಚಿನ ದಿನಗಳಲ್ಲಿ ಎಲ್ಲಿಯೂ ಕಾಣಿಸಿಕೊಳ್ಳುತ್ತಿಲ್ಲ. ಈ ಹಿಂದೆ ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ, ರಾಜ್ ಶೆಟ್ಟಿ ಮೂವರೂ ಒಬ್ಬರಿಗೊಬ್ಬರು ಪರಸ್ಪರ ಚಿತ್ರಗಳನ್ನು ಪ್ರೋತ್ಸಾಹಿಸುತ್ತಾ, ಪ್ರೀತಿಯ ಮಾತುಗಳನ್ನು ಆಡುತ್ತಾ ಸಾರ್ವಜನಿಕವಾಗಿ ಹೇಳಿಕೆಗಳನ್ನು ನೀಡುತ್ತಾ ಒಟ್ಟಾಗಿ ಕಾಣಿಸಿಕೊಳ್ಳುತ್ತಿದ್ದರು. ರಕ್ಷಿತ್‌ ಸಿನಿಮಾ ಅಪ್‌ಡೇಟ್‌ ವಿಚಾರವೂ ಈ ಹಿಂದೆ ಪ್ರಮೋದ್‌ ಶೆಟ್ಟಿ ಅವರು ಸಣ್ಣ ಹಿಂಟ್‌ ಕೊಟ್ಟಿದ್ದರೇ ಹೊರತು ರಕ್ಷಿತ್‌ ಯಾವುದೇ ಸುಳಿವು ನೀಡರಲಿಲ್ಲ. ಆದರೀಗ ಏಕಾಏಕಿ ಇನ್‌ಸ್ಟಾದಲ್ಲಿ ಬೇಸರದ ಪೋಸ್ಟ್‌ವೊಂದನ್ನು (rakshith shetty Post) ಶೇರ್‌ ಮಾಡಿದ್ದಾರೆ.

ಶರತ್‌ ಮಲ್ಲೇಶ್‌ಗೆ ಸಂತಾಪ ಸೂಚಿಸಿದ ನಟ

ಪರಂವಃ ಸ್ಟುಡಿಯೋಸ್ ಇದೀಗ ಪೋಸ್ಟ್‌ವೊಂದನ್ನು ಶೇರ್‌ ಮಾಡಿದೆ. ಸಹಾಯಕ ನಿರ್ದೇಶಕ ಮತ್ತು ಕಲಾ ನಿರ್ದೇಶಕ ಶರತ್‌ ಮಲ್ಲೇಶ್‌ ಅವರ ನಿಧನದಿಂದ ತೀವ್ರ ದುಃಖವಾಗಿದೆ. ಪರಂವಃ ಅವರೊಂದಿಗೆ ಅವರು ಅನೇಕ ಪ್ರಯಾಣಗಳಲ್ಲಿ ಭಾಗವಹಿಸಿದ್ದರು. ಆದರೀಗ ಬಾರದ ಲೋಕಕ್ಕೆ ಹೋಗಿದ್ದಾರೆ. ಅವರ ಕುಟುಂಬ ಮತ್ತು ಪ್ರೀತಿಪಾತ್ರರಿಗೆ ದೇವರು ಶಕ್ತಿ ನೀಡಲಿ. ಓಂ ಶಾಂತಿ, ಶಾಂತಿ ಸಿಗಲಿ ಎಂದು ಪೋಸ್ಟ್‌ ಮಾಡಿದೆ.

ಇದನ್ನೂ ಓದಿ: Amruthadhaare Serial: ಮಲ್ಲಿ ಬದುಕಿನ ಸತ್ಯ ಅನಾವರಣ; ಸುನಿ ನಿರ್ಧಾರವನ್ನೇ ಬದಲಾಯಿಸುತ್ತಾ?

ಇದನ್ನೇ ರಿ ಪೋಸ್ಟ್‌ ಮಾಡಿರುವ ರಕ್ಷಿತ್‌ ಶೆಟ್ಟಿ, ನಿಮ್ಮ ಕೆಲಸ ಮತ್ತು ನಿಮ್ಮ ಪ್ರೀತಿ ನೀವು ಸಹಾಯ ಮಾಡಿದ ಕಥೆಗಳಲ್ಲಿ ಮತ್ತು ನಿಮ್ಮನ್ನು ತಿಳಿದವರ ಹೃದಯಗಳಲ್ಲಿ ಮುಂದುವರಿಯುತ್ತದೆ. ನಿಮ್ಮನ್ನು ಯಾವಾಗಲೂ ಸ್ಮರಿಸಲಾಗುವುದು ಶರತ್.

ಶಾಂತಿ ಸಿಗಲಿ. ಓಂ ಶಾಂತಿ! ಎಂದು ಬರೆದುಕೊಂಡಿದ್ದಾರೆ.



ಶರತ್‌ ಮಲ್ಲೇಶ್‌ ಅವರು ಅನೇಕ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಅದರಲ್ಲಿ 777 ಚಾರ್ಲಿ, ಕಾಂತಾರ ಚಾಪ್ಟರ್‌ 1, ಕಿರಿಕ್‌ ಪರ್ಟಿ, ಬ್ಯಾಚುಲರ್‌ ಪಾರ್ಟಿ ಮುಂತಾದ ಸಿನಿಮಾಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಮೂಲಗಳ ಪ್ರಕಾರ ಅನಾರೋಗ್ಯದ ಕಾರಣಗಳಿಂದಾಗಿ ನಿಧನರಾಗಿದ್ದಾರೆ ಎನ್ನಲಾಗಿದೆ.

ರಕ್ಷಿತ್‌ ಶೆಟ್ಟಿ ಸಿನಿಮಾ ಅಪ್‌ಡೇಟ್‌ ಏನು?

ರಕ್ಷಿತ್ ಶೆಟ್ಟಿಯವರು ರನ್ ಆಂಟನಿ ಚಿತ್ರದ ಕಥೆ ಬರೆದುಕೊಂಡು ಅಮೆರಿಕದಲ್ಲಿ ಕುಳಿತಿದ್ದಾರೆ ಎಂದು ಹೇಳಲಾಗುತ್ತಿತ್ತು. ಬಳಿಕ ಊರಿನ ನೇಮೋತ್ಸವದಲ್ಲಿ ಭಾಗಿಯಾಗಿದ್ದರು. ‘ಸಪ್ತ ಸಾಗರದಾಚೆ ಎಲ್ಲೊ’ ಸಿನಿಮಾದ ಬಳಿಕ ಒಮ್ಮೆಲೆ ಕಾಣೆ ಆಗಿಬಿಟ್ಟ ರಕ್ಷಿತ್ ಶೆಟ್ಟಿ ಕೆಲ ವರ್ಷಗಳ ಹಿಂದೆ ಘೋಷಿಸಿದ್ದ ‘ರಿಚರ್ಡ್ ಆಂಟೊನಿ’ ಸಿನಿಮಾದ ಚಿತ್ರಕತೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.

ಇದನ್ನೂ ಓದಿ: Anirudh Shastri: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಗಾಯಕ ಅನಿರುದ್ಧ್ ಶಾಸ್ತ್ರಿ

‘ರಿಚರ್ಡ್ ಆಂಟೊನಿ’ ಮತ್ತು ‘ಪುಣ್ಯಕೋಟಿ’ ಎರಡೂ ಸಿನಿಮಾಗಳ ಕೆಲಸ ಒಟ್ಟಿಗೆ ಪ್ರಾರಂಭ ಆಗಲಿವೆಯಂತೆ. ‘ಪುಣ್ಯಕೋಟಿ’ ಸಿನಿಮಾಕ್ಕೆ ಸಾಕಷ್ಟು ವಿಎಫ್​​ಎಕ್ಸ್ ಅವಶ್ಯಕತೆ ಇರುವುದರಿಂದ ವಿಎಫ್​ಎಕ್ಸ್ ಕೆಲಸಗಳನ್ನು ಈಗಿನಿಂದಲೇ ಆರಂಭಿಸುತ್ತಿದ್ದಾರೆ ಎಂದು ವರದಿಯಾಗಿದೆ.

Yashaswi Devadiga

View all posts by this author