ಅಂಡರ್‌ವರ್ಲ್ಡ್ ಕ್ರೈಮ್ ಥ್ರಿಲ್ಲರ್ ಸಿನಿಮಾಗಳನ್ನು ಮಾಡುವುದರಲ್ಲಿ ನಿರ್ದೇಶಕ ರಾಮ್ ಗೋಪಾಲ್ ವರ್ಮ (RGV) ಪರಿಣತರು. ಸದ್ಯ ಅವರು ಮುಂಬೈನ ಭೂಗತ ಲೋಕದ ಇತಿಹಾಸಕ್ಕೆ ಸಂಬಂಧಿಸಿದ ಮತ್ತೊಂದು ಕ್ರೈಮ್ ಡ್ರಾಮಾವನ್ನು ಕೈಗೆತ್ತಿಕೊಳ್ಳಲು ಸಜ್ಜಾಗುತ್ತಿದ್ದಾರೆ. ಚಿತ್ರರಂಗದ ಮೂಲಗಳ ಪ್ರಕಾರ, ಮುಂಬೈನ ಪ್ರಸಿದ್ಧ ಎನ್‌ಕೌಂಟರ್ ಸ್ಪೆಷಲಿಸ್ಟ್ ದಯಾ ನಾಯಕ್ ಅವರ ಜೀವನ ಆಧಾರಿತ ಬಯೋಪಿಕ್ ನಿರ್ದೇಶಿಸಲು ರಾಮ್ ಗೋಪಾಲ್ ವರ್ಮಾ ಮಾತುಕತೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಚಿತ್ರದ ನಿರ್ಮಾಣ ಯಾರು ಮಾಡಲಿದ್ದಾರೆ?
ಸದ್ಯ ಈ ಪ್ರಾಜೆಕ್ಟ್ ಇನ್ನೂ ಆರಂಭಿಕ ಹಂತದಲ್ಲಿದ್ದು, ಚಿತ್ರಕಥೆ ಬರವಣಿಗೆ ಮತ್ತು ಕಥೆಯನ್ನು ಯಾವ ಆಂಗಲ್‌ನಲ್ಲಿ ಹೇಳಬೇಕು ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಅಲ್ಲದೆ, ಪ್ರಮುಖ ನಿರ್ಮಾಣ ಸಂಸ್ಥೆಯೊಂದು ಈ ಚಿತ್ರಕ್ಕೆ ಬಂಡವಾಳ ಹೂಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ದಯಾ ನಾಯಕ್ ಅವರ ಬಯೋಪಿಕ್ ಮಾಡುವ ಆಲೋಚನೆ ಹಲವು ದಿನಗಳಿಂದ ಇತ್ತಾದರೂ, ಇತ್ತೀಚೆಗೆ ಅದಕ್ಕೆ ವೇಗ ಸಿಕ್ಕಿದೆ ಎಂದು ಆರ್‌ಜಿವಿ ಅವರ ಆಪ್ತ ಮೂಲಗಳು ತಿಳಿಸಿವೆ.
Ram Gopal Varma : ಎ ಆರ್ ರೆಹಮಾನ್ 'ಕೋಮುವಾದಿ' ಹೇಳಿಕೆ; ಈ ಬಗ್ಗೆ ರಾಮ್ ಗೋಪಾಲ್ ವರ್ಮಾ ಹೇಳಿದ್ದೇನು?
ಸ್ಕ್ರಿಪ್ಟ್ ಬರೆಯುವುದೇ ಮೊದಲ ಆದ್ಯತೆ
"ಈ ಐಡಿಯಾ ಬಹಳ ದಿನಗಳಿಂದ ಇತ್ತು, ಆದರೆ ಇತ್ತೀಚಿನ ತಿಂಗಳುಗಳಲ್ಲಿ ಈ ನಿಟ್ಟಿನಲ್ಲಿ ಹೊಸ ಕೆಲಸಗಳು ಆರಂಭವಾಗಿವೆ. ಸದ್ಯಕ್ಕೆ ಚಿತ್ರಕಥೆಯನ್ನು ಉತ್ತಮವಾಗಿ ರೂಪಿಸುವುದು ಮತ್ತು ದಯಾ ನಾಯಕ್ ಅವರ ಕಥೆಯನ್ನು ಯಾವ ದೃಷ್ಟಿಕೋನದಿಂದ ಹೇಳಬೇಕು ಎಂಬುದನ್ನು ನಿರ್ಧರಿಸುವುದೇ ನಮ್ಮ ಮೊದಲ ಆದ್ಯತೆಯಾಗಿದೆ" ಎಂದು ಮೂಲಗಳು ತಿಳಿಸಿವೆ.
'ಕಂಪನಿ' ಯೂನಿವರ್ಸ್ ಜೊತೆ ದಯಾ ನಾಯಕ್ ಸಿನಿಮಾ?
ಮುಂಬೈ ಪೊಲೀಸ್ ಇತಿಹಾಸದಲ್ಲೇ ಅತ್ಯಂತ ಹೆಚ್ಚು ಚರ್ಚಿಸಲ್ಪಟ್ಟ ಕಥೆಗಳಲ್ಲಿ ಒಂದಾದ ದಯಾ ನಾಯಕ್ ಅವರ ಪ್ರಯಾಣವನ್ನು ಬೆಳ್ಳಿತೆರೆ ಮೇಲೆ ಹೇಗೆ ಹೇಳಬೇಕು ಎಂಬ ಬಗ್ಗೆ ಚಿತ್ರತಂಡ ಸಾಕಷ್ಟು ಚರ್ಚೆ ಮಾಡುತ್ತಿದೆಯಂತೆ. ಕುತೂಹಲಕಾರಿ ಸಂಗತಿಯೆಂದರೆ, ಈ ಚಿತ್ರವನ್ನು ರಾಮ್ ಗೋಪಾಲ್ ವರ್ಮಾ ಅವರ ಸೂಪರ್ ಹಿಟ್ 'ಕಂಪನಿ' ಸಿನಿಮಾದ ಯೂನಿವರ್ಸ್ ಜೊತೆ ಮಿಕ್ಸ್ ಮಾಡುವ ಸಾಧ್ಯತೆಯಿದೆ ಎನ್ನಲಾಗಿದೆ.
Ram Gopal Varma : ಧುರಂಧರ್ ಮತ್ತು ಟಾಕ್ಸಿಕ್ ನಡುವಿನ ವ್ಯತ್ಯಾಸ ತಿಳಿಸಿದ ಆರ್‌ಜಿವಿ
2002ರ ತಮ್ಮ ಗ್ಯಾಂಗ್‌ಸ್ಟರ್ ಡ್ರಾಮಾ 'ಕಂಪನಿ' ಚಿತ್ರದ ಸೀಕ್ವೆಲ್ ಆಗಿ ದಯಾ ನಾಯಕ್ ಸಿನಿಮಾವನ್ನು ಮಾಡುವ ಆಲೋಚನೆಯನ್ನು ಆರ್‌ಜಿವಿ ಹೊಂದಿದ್ದರು. ಅದಕ್ಕೆ 'ಕಂಪನಿ 2' ಎಂದು ತಾತ್ಕಾಲಿಕವಾಗಿ ಹೆಸರಿಡಲಾಗಿತ್ತು. ಆದರೆ, ಆ ಪ್ರಾಜೆಕ್ಟ್‌ನಲ್ಲಿ ಬದಲಾವಣೆ ಮಾಡಿಕೊಂಡು, ಗ್ಯಾಂಗ್‌ಸ್ಟರ್‌ಗಳ ಬದಲಿಗೆ ಎನ್‌ಕೌಂಟರ್ ಸ್ಪೆಷಲಿಸ್ಟ್ ದಯಾ ನಾಯಕ್ ಮೇಲೆ ಕಥೆಯನ್ನು ಕೇಂದ್ರೀಕರಿಸಲು ನಿರ್ಧರಿಸಲಾಯಿತು. ಸದ್ಯ ಈ ಬಯೋಪಿಕ್ ಸ್ವತಂತ್ರ ಚಿತ್ರವಾಗಿ ಹೊರಬರಲಿದೆಯೇ ಅಥವಾ 'ಕಂಪನಿ' ಚಿತ್ರದ ಸಿನಿಮ್ಯಾಟಿಕ್ ಯೂನಿವರ್ಸ್‌ನ ಭಾಗವಾಗಲಿದೆಯೇ ಎಂಬ ಬಗ್ಗೆ ಯಾವುದೇ ಅಂತಿಮ ನಿರ್ಧಾರವಾಗಿಲ್ಲ.
ಸಾಲು ಸಾಲು ಸಿನಿಮಾಗಳಲ್ಲಿ ವರ್ಮಾ ಬ್ಯುಸಿ
ಸದ್ಯ ಆರ್‌ಜಿವಿ ಅವರು 'ಸಿಂಡಿಕೇಟ್' ಹೆಸರಿನ ಸಿನಿಮಾವೊಂದನ್ನು ಕೈಗೆತ್ತಿಕೊಂಡಿದ್ದಾರೆ. ಇದರ ಜೊತೆಗೆ 'ಸರ್ಕಾರ್ 4' ಚಿತ್ರವನ್ನೂ ಅಧಿಕೃತವಾಗಿ ಘೋಷಿಸಿದ್ದಾರೆ. ಈ ರಾಜಕೀಯ ಕ್ರೈಮ್ ಡ್ರಾಮಾದಲ್ಲಿ ಅಮಿತಾಭ್ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ಅವರು ಕ್ರಮವಾಗಿ ಸುಭಾಷ್ ನಾಗ್ರೆ ಮತ್ತು ಶಂಕರ್ ನಾಗ್ರೆ ಪಾತ್ರಗಳಲ್ಲಿ ಮರಳಲಿದ್ದಾರೆ. ಈ ಚಿತ್ರದ ಸ್ಕ್ರಿಪ್ಟ್ ಈಗಾಗಲೇ ಲಾಕ್ ಆಗಿದ್ದು, 'ಸಿಂಡಿಕೇಟ್' ಚಿತ್ರದ ಕೆಲಸಗಳ ನಂತರ ಇದರ ಚಿತ್ರೀಕರಣ ಪ್ರಾರಂಭವಾಗುವ ನಿರೀಕ್ಷೆಯಿದೆ. ಈ ಎಲ್ಲಾ ಸಿನಿಮಾಗಳ ನಂತರ ದಯಾ ನಾಯಕ್ ಸಿನಿಮಾ ಸೆಟ್ಟೇರಲಿದೆ ಎನ್ನಲಾಗಿದೆ.