ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ʻಧುರಂಧರ್‌ 2 ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ 2 ಸಾವಿರ ಕೋಟಿ ರೂ. ಕೊಳ್ಳೆ ಹೊಡೆಯಲಿದೆʼ; ಭವಿಷ್ಯ ನುಡಿದ ರಾಮ್‌ ಗೋಪಾಲ್‌ ವರ್ಮಾ

Dhurandhar 2 Movie: ನಟ ರಣವೀರ್ ಸಿಂಗ್ ಅಭಿನಯದ ʻಧುರಂಧರ್‌ 2ʼ ಚಿತ್ರ ಮಾರ್ಚ್ 19ರಂದು ತೆರೆಗೆ ಬರಲಿದ್ದು, ಮಾರ್ಚ್ 18ರಂದೇ ದೇಶಾದ್ಯಂತ 4,000 ಪೇಯ್ಡ್ ಪ್ರೀಮಿಯರ್ ಶೋಗಳು ನಡೆಯಲಿವೆ. ಈ ಚಿತ್ರ 2,000 ಕೋಟಿ ರೂ. ಗಳಿಸಲಿದೆ ಎಂದು ರಾಮ್ ಗೋಪಾಲ್ ವರ್ಮಾ ಭವಿಷ್ಯ ನುಡಿದಿದ್ದಾರೆ.

ರಣವೀರ್‌ ಸಿಂಗ್‌ ನಟನೆಯ ʻಧುರಂಧರ್‌ 2ʼ ಸಿನಿಮಾವು ಮಾರ್ಚ್‌ 19ರಂದು ಅಬ್ಬರಿಸೋಕೆ ರೆಡಿಯಾಗಿದೆ. ಅದಕ್ಕೂ ಮುನ್ನ ಈ ಚಿತ್ರದ ಪೇಯ್ಡ್‌ ಪ್ರೀಮಿಯರ್‌ ಶೋವನ್ನು ಮಾರ್ಚ್‌ 18ರಂದೇ ಮಾಡಲು ಚಿತ್ರತಂಡ ನಿರ್ಧರಿಸಿದ್ದು, ಈಗಾಗಲೇ ದೇಶಾದ್ಯಂತ 4 ಸಾವಿರ ಶೋಗಳು ಆಗಲೇ ನಿಗದಿಯಾಗಿವೆ. ಈ ಮಧ್ಯೆ ʻಧುರಂಧರ್‌ 2ʼ ಸಿನಿಮಾದ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ಬಗ್ಗೆ ನಿರ್ದೇಶಕ ರಾಮ್‌ ಗೋಪಾಲ್‌ ವರ್ಮಾ ಅವರು ಭವಿಷ್ಯ ನುಡಿದಿದ್ದಾರೆ.

2000 ಕೋಟಿ ರೂ. ಕಲೆಕ್ಷನ್‌ ಗ್ಯಾರಂಟಿ!

ನಿರ್ದೆಶಕ ರಾಮ್ ಗೋಪಾಲ್ ವರ್ಮಾ ಅವರ ಪ್ರಕಾರ, ರಣವೀರ್ ಸಿಂಗ್ ನಟನೆಯ 'ಧುರಂಧರ್ : ದಿ ರಿವೇಂಜ್' ಸಿನಿಮಾವು ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ಬರೆಯಲಿದೆಯಂತೆ. ಭಾರತೀಯ ಚಿತ್ರರಂಗದಲ್ಲಿ ದೊಡ್ಡ ಸಂಚಲನ ಮೂಡಿಸಲಿದ್ದು, ಈ ಚಿತ್ರವು ವಿಶ್ವಾದ್ಯಂತ 1500 - 2000 ಕೋಟಿ ರೂ. ಗಳಿಕೆ ಮಾಡಲಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Deepika Padukone: ಹೀಗಿದ್ದಾಳೆ ನೋಡಿ ರಣವೀರ್‌ ಸಿಂಗ್‌-ದೀಪಿಕಾ ಪಡುಕೋಣೆ ಪುತ್ರಿ ದುವಾ; ಮೊದಲ ಬಾರಿ ಫೋಟೊ ರಿವೀಲ್‌

ಈಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ರಾಮ್‌ ಗೋಪಾಲ್‌ ವರ್ಮಾ ಅವರು, "ಧುರಂಧರ್ 2 ಚಿತ್ರವು 1,500 - 2,000 ಕೋಟಿ ರೂಪಾಯಿಗಳಷ್ಟು ಕಲೆಕ್ಷನ್ ಮಾಡಲಿದ್ದು, ಇದರ ಮುಂದೆ ದಕ್ಷಿಣ ಭಾರತದ ಎಲ್ಲಾ ಸಿನಿಮಾಗಳು ಮಂಕಾಗಲಿವೆ. ದಕ್ಷಿಣದ ಅನೇಕ ಆಕ್ಷನ್ ಸಿನಿಮಾಗಳು ಇನ್ನೂ ಹಳೆಯ ಶೈಲಿಯ ಕಥೆ ಮತ್ತು ಅಬ್ಬರವನ್ನೇ ಅವಲಂಬಿಸಿವೆ" ಎಂದು ಟಾಂಗ್‌ ನೀಡಿದ್ದಾರೆ ರಾಮ್‌ ಗೋಪಾಲ್‌ ವರ್ಮಾ.

ಆದಿತ್ಯ ಧರ್ ನಿರ್ದೇಶನದ ಈ ಸ್ಪೈ ಥ್ರಿಲ್ಲರ್‌ನಲ್ಲಿ ರಣವೀರ್ ಸಿಂಗ್, ಪಾಕಿಸ್ತಾನದಲ್ಲಿ ಕೆಲಸ ಮಾಡುವ ಭಾರತೀಯ ಏಜೆಂಟ್ 'ಹಮ್ಜಾ' (ಜಸ್ಕಿರತ್) ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. "ಮೊದಲ ಭಾಗದ ಕಥೆ ಮತ್ತು ಪಾತ್ರಗಳೊಂದಿಗೆ ಪ್ರೇಕ್ಷಕರು ಈಗಾಗಲೇ ಭಾವನಾತ್ಮಕವಾಗಿ ಕನೆಕ್ಟ್ ಆಗಿರುವುದು ಈ ಚಿತ್ರಕ್ಕೆ ದೊಡ್ಡ ಪ್ಲಸ್ ಪಾಯಿಂಟ್ ಆಗಲಿದೆ" ಎಂದು ರಾಮ್‌ ಗೋಪಾಲ್ ವರ್ಮಾ ತಿಳಿಸಿದ್ದಾರೆ.

ʻಧುರಂಧರ್‌ 2ʼ ಟ್ರೇಲರ್ ಬಿಚ್ಚಿಟ್ಟ ಅಸಲಿ ರಹಸ್ಯವೇನು?‌ ಈ ಬಾರಿ ರಣವೀರ್‌ ಸಿಂಗ್‌ ಫ್ಯಾನ್ಸ್‌ ಸಿಕ್ಕಾಪಟ್ಟೆ ಖುಷಿಯಾಗಿದ್ದೇಕೆ?

ರಾಮ್‌ ಗೋಪಾಲ್‌ ವರ್ಮಾ ಮೆಚ್ಚುಗೆ

"ಬಾಹುಬಲಿ ಮಾದರಿಯಲ್ಲೇ ಧುರಂಧರ್ ಚಿತ್ರದ ಎರಡೂ ಭಾಗಗಳನ್ನು ಏಕಕಾಲದಲ್ಲಿ ಚಿತ್ರೀಕರಿಸಲಾಗಿದೆ. ಹಾಗಾಗಿ ಕಥೆಯ ಓಟವು ಒಂದು ಸಿನಿಮಾವನ್ನು ಎರಡು ಭಾಗ ಮಾಡಿದಂತೆ ಅಚ್ಚುಕಟ್ಟಾಗಿ ಮೂಡಿಬಂದಿದೆ.‌ ಈ ಸಿನಿಮಾದ ಆಕ್ಷನ್ ದೃಶ್ಯಗಳು ಅತಿರಂಜಿತವಾಗಿರದೆ ವಾಸ್ತವಕ್ಕೆ ಹತ್ತಿರವಾಗಿವೆ. ಜನರು ಗಾಳಿಯಲ್ಲಿ ಹಾರುವುದು, ಎಗರವುದು ಇಲ್ಲಿ ಇಲ್ಲ, ಎಲ್ಲವೂ ನೈಜವಾಗಿ ಮೂಡಿಬಂದಿದೆ" ಎಂದು ರಾಮ್‌ ಗೋಪಾಲ್‌ ವರ್ಮಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ʻಧುರಂಧರ್‌ 2ʼ ಸಿನಿಮಾದಲ್ಲಿ ರಣವೀರ್ ಸಿಂಗ್ ಜೊತೆಗೆ ಆರ್. ಮಾಧವನ್, ಅರ್ಜುನ್ ರಾಂಪಾಲ್, ಸಂಜಯ್ ದತ್, ರಾಕೇಶ್ ಬೇಡಿ ಮತ್ತು ಸಾರಾ ಅರ್ಜುನ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.