ʻರಿಯಲ್ ಸ್ಟಾರ್ʼ ಉಪೇಂದ್ರ ಮತ್ತು ತೆಲುಗು ನಟ ರಾಮ್ ಪೋತಿನೇನಿ ಅಭಿನಯದ ʻಆಂಧ್ರ ಕಿಂಗ್ ತಾಲೂಕಾʼ ಸಿನಿಮಾವು ನವೆಂಬರ್ 27ರಂದು ತೆರೆಕಂಡಿತ್ತು. ಭಾರಿ ನಿರೀಕ್ಷೆಯೊಂದಿಗೆ ತೆರೆಕಂಡಿರುವ ಈ ಚಿತ್ರಕ್ಕೆ ಆಡಿಯೆನ್ಸ್ ಕಡೆಯಿಂದ ಉತ್ತಮ ರೆಸ್ಪಾನ್ಸೇ ಸಿಕ್ಕಿದೆ. ಅದು ಬಾಕ್ಸ್ ಆಫೀಸ್‌ನಲ್ಲಿ ಯಾವ ರೀತಿ ವರ್ಕ್ ಆಗಿದೆ? ಅಂದುಕೊಂಡ ಮಟ್ಟಕ್ಕೆ ಕಲೆಕ್ಷನ್ ಆಗಿದೆಯೇ? ಮುಂದೆ ಓದಿ.
ʻಆಂಧ್ರ ಕಿಂಗ್ ತಾಲೂಕಾʼ ಚಿತ್ರದ ಫಸ್ಟ್ ಡೇ ಕಲೆಕ್ಷನ್
ಸ್ಟಾರ್ ಹೀರೋ ಪಾತ್ರದಲ್ಲಿ ಉಪೇಂದ್ರ ನಟಿಸಿರುವ ʻಆಂಧ್ರ ಕಿಂಗ್ ತಾಲೂಕಾʼ ಸಿನಿಮಾವು ಮೊದಲ ದಿನ ಭಾರತದಲ್ಲಿ ₹ 4.25 ಕೋಟಿ ರೂ. ಗಳಿಕೆ ಮಾಡಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ವಿದೇಶದಲ್ಲಿನ ಗಳಿಕೆಯನ್ನು ಸೇರಿಸಿದರೆ, ಮೊತ್ತವು 7-8 ಕೋಟಿ ರೂ. ದಾಟುತ್ತದೆ ಎಂಬ ಮಾತುಗಳು ಕೇಳಿಬಂದಿವೆ. ಸತತ ಸೋಲಿನಿಂದ ಕಂಗೆಟ್ಟಿದ್ದ ನಟ ರಾಮ್ ಪೋತಿನೇನಿ ಅವರಿಗೆ ಇದು ಒಂಚೂರು ನಿಟ್ಟುಸಿರುವ ಬಿಡುವಂತಹ ಬೆಳವಣಿಗೆ ಆಗಿದೆ.
Aamir Khan: ಉಪೇಂದ್ರ ಸಿನಿಮಾದ ಟ್ರೇಲರ್ ನೋಡಿ ʼನಾನು ಉಪೇಂದ್ರ ಅಭಿಮಾನಿʼ ಎಂದ ಆಮೀರ್ ಖಾನ್!
ಕನ್ನಡ ವರ್ಷನ್ ಕೂಡ ರಿಲೀಸ್
ʻಆಂಧ್ರ ಕಿಂಗ್ ತಾಲೂಕಾʼ ಚಿತ್ರವನ್ನು ಕೇವಲ ತೆಲುಗು ಭಾಷೆಯಲ್ಲಿ ಮಾತ್ರ ನಿರ್ಮಾಣ ಮಾಡಲಾಗಿತ್ತು. ಆದರೆ ಉಪೇಂದ್ರ ಈ ಸಿನಿಮಾದಲ್ಲಿ ನಟಸಿರುವುದರಿಂದ, ಕನ್ನಡಕ್ಕೂ ಈ ಚಿತ್ರವನ್ನು ಡಬ್ ಮಾಡಲಾಗಿದೆ. ಹಾಗಾಗಿ, ಕರ್ನಾಟಕದಲ್ಲಿ ಕೆಲವು ಕಡೆ ʻಆಂಧ್ರ ಕಿಂಗ್ ತಾಲೂಕಾʼ ಚಿತ್ರದ ಕನ್ನಡ ವರ್ಷನ್ ರಿಲೀಸ್ ಆಗಿದೆ. ರಾಜ್ಯಾದ್ಯಂತ ಸುಮಾರು 40ಕ್ಕೂ ಅಧಿಕ ಶೋಗಳು ಕನ್ನಡ ವರ್ಷನ್‌ಗೆ ಸಿಕ್ಕಿವೆ. ಇನ್ನು, ಬೆಂಗಳೂರಿನಲ್ಲಿ ತೆಲುಗು ವರ್ಷನ್‌ಗೆ 310+ ಶೋಗಳು ಸಿಕ್ಕಿವೆ. ಹೈದರಾಬಾದ್‌ನಲ್ಲಿ ಈ ಚಿತ್ರಕ್ಕೆ 450 ಶೋಗಳು ಸಿಕ್ಕಿವೆ.
ಹೇಗಿದೆ ʻಆಂಧ್ರ ಕಿಂಗ್ ತಾಲೂಕಾʼ ಸಿನಿಮಾ?
ಸ್ಟಾರ್ ನಟ ಮತ್ತು ಅಭಿಮಾನಿ ನಡುವಿನ ಕಥಾಹಂದರ ಹೊಂದಿರುವ ʻಆಂಧ್ರ ಕಿಂಗ್ ತಾಲೂಕಾʼ ಸಿನಿಮಾದಲ್ಲಿ ಎಮೋಷನ್, ಕಾಮಿಡಿ, ಸೆಂಟಿಮೆಂಟ್ ಎಲ್ಲವೂ ಇದೆ. ಸಿನಿಮಾದ ಅವಧಿ ದೀರ್ಘವಾಗಿರುವುದು ಚಿತ್ರಕ್ಕೆ ಹಿನ್ನಡೆ ಎನಿಸುತ್ತದೆ. ಉಪೇಂದ್ರ, ರಾಮ್ ಪೋತಿನೇನಿ, ಭಾಗ್ಯಶ್ರೀ ಬೋರ್ಸ್, ಮುರಳಿ ಶರ್ಮಾ ಪ್ರತಿಯೊಬ್ಬರ ನಟನೆಯು ಅತ್ಯುತ್ತಮವಾಗಿ ಮೂಡಿಬಂದಿದ್ದು, ಸ್ಟಾರ್ ಹೀರೋ ಸೂರ್ಯ ಕುಮಾರ್ ಆಗಿ ಉಪೇಂದ್ರ ಮಿಂಚಿದ್ದಾರೆ. ಈ ಚಿತ್ರವನ್ನು ಮಹೇಶ್ ಬಾಬು. ಪಿ ನಿರ್ದೇಶನ ಮಾಡಿದ್ದು, ಮೈತ್ರಿ ಮೂವೀ ಮೇಕರ್ಸ್ ಸಂಸ್ಥೆ ಹಣ ಹೂಡಿದೆ.