ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʻರಾಮಾಯಣʼ ಚಿತ್ರದಲ್ಲಿ ಯಶ್‌ಗೆ ರಾವಣನ ಪಾತ್ರ ಮಾಡುವ ಮನಸ್ಸಾಗಿದ್ದೇಕೆ? ಅಸಲಿ ವಿಷ್ಯ ಬಿಚ್ಚಿಟ್ಟ ನಿರ್ದೇಶಕ ನಿತೇಶ್‌ ತಿವಾರಿ

Ramayana Movie: ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ' ಚಿತ್ರದಲ್ಲಿ ನಟ ಯಶ್ ರಾವಣನ ಪಾತ್ರ ಒಪ್ಪಿಕೊಂಡಿದ್ದು ಸಿನಿಮಾ ಲೋಕದಲ್ಲಿ ಸಂಚಲನ ಮೂಡಿಸಿದೆ. ರಾವಣನನ್ನು ಕೇವಲ ಸಾಂಪ್ರದಾಯಿಕ ಖಳನಾಯಕನಾಗಿ ತೋರಿಸದೆ, ಒಬ್ಬ ಮಹಾನ್ ಪಂಡಿತ, ಶಿವಭಕ್ತ ಮತ್ತು ಸಂಗೀತಗಾರನಾಗಿ ಆತನ ಸಂಕೀರ್ಣ ವ್ಯಕ್ತಿತ್ವವನ್ನು ಅನಾವರಣಗೊಳಿಸುತ್ತಿರುವುದು ಯಶ್ ಈ ಪಾತ್ರ ಒಪ್ಪಲು ಮುಖ್ಯ ಕಾರಣ ಎಂದು ನಿರ್ದೇಶಕರು ತಿಳಿಸಿದ್ದಾರೆ.

ಈಚೆಗಷ್ಟೇ ನಿತೇಶ್ ತಿವಾರಿ ನಿರ್ದೇಶನದ ರಾಮಾಯಣ ಪಾರ್ಟ್‌ 1 ಟೀಸರ್‌ ರಿಲೀಸ್‌ ಆಗಿ, ಭಾರಿ ಮೆಚ್ಚುಗೆಯನ್ನು ಪಡೆದುಕೊಂಡಿದೆ. ರಾಮನ ಪಾತ್ರದಲ್ಲಿ ರಣಬೀರ್ ಕಪೂರ್ ಮಿಂಚಿದ್ದಾರೆ. ಆದರೆ 'ಕೆಜಿಎಫ್' ಮತ್ತು 'ಕೆಜಿಎಫ್ 2' ನಂತಹ ಎರಡು ಪ್ಯಾನ್-ಇಂಡಿಯಾ ಬ್ಲಾಕ್‌ಬಸ್ಟರ್‌ಗಳನ್ನು ನೀಡಿರುವ ಯಶ್ ಅವರು ಏಕೆ ಖಳನಾಯಕನಂತಿರುವ ರಾವಣನ ಪಾತ್ರ ಮಾಡುವುದಕ್ಕೆ ಒಪ್ಪಿಕೊಂಡರು? ಯಶ್‌ ಅವರ ಈ ನಡೆ ಬಹಳಷ್ಟು ಮಂದಿಗೆ ಅಚ್ಚರಿ ತಂದಿತ್ತು. ಇದೀಗ ನಿರ್ದೇಶಕ ನಿತೇಶ್‌ ತಿವಾರಿ ಅವರಿಂದಲೇ ಇದೆಲ್ಲದಕ್ಕೂ ಉತ್ತರ ಸಿಕ್ಕಿದೆ.

ಇಲ್ಲಿ ರಾವಣ ರೆಗ್ಯುಲರ್‌ ವಿಲನ್‌ ಅಲ್ಲ

ಈ ಚಿತ್ರದ ಬಗ್ಗೆ ಅತಿ ಹೆಚ್ಚು ಚರ್ಚೆಯಾಗುತ್ತಿರುವ ಯಶ್‌ ನಿಭಾಯಿಸುತ್ತಿರುವ ರಾವಣನ ಪಾತ್ರದ ಬಗ್ಗೆ ನಿತೇಶ್‌ ಮಾತನಾಡಿದ್ದು, "ನಮ್ಮ ರಾಮಾಯಣ ಸಿನಿಮಾದಲ್ಲಿ ರಾವಣನ ಪಾತ್ರವು ಕೇವಲ ಸಾಂಪ್ರದಾಯಿಕ ವಿಲನ್ ಆಗಿರುವುದಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.

Ranbir Kapoor: ರಾಮಾಯಣ ಕಥೆ ಹೇಳುವಾಗ ಮಗಳ ಪ್ರತಿಕ್ರಿಯೆ ಏನು? ರಣಬೀರ್ ಹೇಳಿದ್ದೇನು?

ಈಚೆಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ನಿತೇಶ್‌ ತಿವಾರಿ, "ರಾವಣನ ವ್ಯಕ್ತಿತ್ವದ ಹಲವು ಮಗ್ಗುಲುಗಳನ್ನು ಅನಾವರಣಗೊಳಿಸುತ್ತಿದ್ದೇವೆ. ಆತನ ಜೀವನದಲ್ಲಿ ಹಲವಾರು ಆಯಾಮಗಳಿದ್ದವು. ಆತ ಒಬ್ಬ ಮಹಾನ್ ಯೋಧ, ನಿಪುಣ ಸಂಗೀತಗಾರ, ಪಂಡಿತ, ಪ್ರಜಾವತ್ಸಲ ರಾಜ ಮತ್ತು ಪರಮ ಶಿವಭಕ್ತನಾಗಿದ್ದ. ಹೀಗಾಗಿ ಆತನನ್ನು ಕೇವಲ ಒಂದು ನೆಗೆಟಿವ್‌ ಪಾತ್ರವನ್ನಾಗಿ ನೋಡುವುದಕ್ಕಿಂತಲೂ ಹೆಚ್ಚಿನ ವಿಷಯಗಳು ನಮ್ಮ ಸಿನಿಮಾದಲ್ಲಿವೆ" ಎಂದು ಹೇಳಿದ್ದಾರೆ.

ಸಂಕೀರ್ಣವಾದ ರೀತಿಯಲ್ಲಿ ರಾವಣನ ದರ್ಶನ

"ರಾವಣನನ್ನು ಕೇವಲ ಒಬ್ಬ ಭಯಾನಕ ಖಳನಾಯಕನಾಗಿ ತೋರಿಸುವ ಬದಲು, ಅವನ ಸಾಮರ್ಥ್ಯ ಮತ್ತು ದೌರ್ಬಲ್ಯ ಎರಡನ್ನೂ ಈ ಚಿತ್ರದಲ್ಲಿ ತೋರಿಸಲಾಗುತ್ತಿದೆ. ರಾವಣನನ್ನು ಏಕಮುಖವಾಗಿ ತೋರಿಸುವ ಬದಲು ಅತ್ಯಂತ ಸಂಕೀರ್ಣವಾದ ರೀತಿಯಲ್ಲಿ ಪ್ರಸ್ತುತಪಡಿಸಲಾಗುವುದು. ಒಬ್ಬ ವ್ಯಕ್ತಿಯಲ್ಲಿ ಎಷ್ಟೇ ಉನ್ನತ ಗುಣಗಳಿದ್ದರೂ, ಆತ ಸೇಡು ಮತ್ತು ಅಹಂಕಾರಕ್ಕೆ ಬಲಿಯಾದರೆ, ಅವು ಪ್ರಯೋಜನಕ್ಕೆ ಬರುವುದಿಲ್ಲ ಮತ್ತು ಅಂತಿಮವಾಗಿ ಅವನು ರಾವಣನಂತೆ ಅಂತ್ಯಗೊಳ್ಳುತ್ತಾನೆ" ಎಂದು ನಿತೇಶ್‌ ತಿವಾರಿ ಹೇಳಿದ್ದಾರೆ.

Ramayana Movie: ರಾಮಾಯಣ ಬಗ್ಗೆ ತಮ್ಮ ಮನಸ್ಸನ್ನು ಬದಲಾಯಿಸಿದ ನಟಿ ದೀಪಿಕಾ ಚಿಖ್ಲಿಯಾ

ಎರಡು ಭಾಗಗಳಲ್ಲಿ ಬರಲಿದೆ ಈ ಬಿಗ್‌ ಬಜೆಟ್‌ ಸಿನಿಮಾ

ರಾಮಾಯಣ ಸಿನಿಮಾದಲ್ಲಿ ಶ್ರೀರಾಮನಾಗಿ ರಣಬೀರ್ ಕಪೂರ್ ಮತ್ತು ಸೀತೆಯ ಪಾತ್ರದಲ್ಲಿ ಸಾಯಿ ಪಲ್ಲವಿ ನಟಿಸುತ್ತಿದ್ದಾರೆ. ರಾವಣನಾಗಿ ಯಶ್‌ ಅವರನ್ನು ನೋಡಲು ಫ್ಯಾನ್ಸ್‌ ಕಾಯುತ್ತಿದ್ದಾರೆ. ನಟನೆಯ ಜೊತೆಗೆ ಯಶ್ ಈ ಚಿತ್ರದ ಸಹ-ನಿರ್ಮಾಪಕರೂ ಆಗಿದ್ದಾರೆ. ಈ ಚಿತ್ರವು ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದ್ದು, ಮೊದಲ ಭಾಗವು 2026ರ ದೀಪಾವಳಿಗೆ ಮತ್ತು ಎರಡನೇ ಭಾಗವು 2027ರ ದೀಪಾವಳಿಗೆ ತೆರೆಕಾಣಲಿದೆ. ಇದರ ಎರಡೂ ಪಾರ್ಟ್‌ಗಳ ಬಜೆಟ್‌ 4000 ಕೋಟಿ ರೂ. ಎನ್ನಲಾಗಿದೆ.