ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

IFFI 2026 : 57ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ‘ಧುರಂಧರ್’, ‘ರಾಮಾಯಣ’ ಪ್ರೀಮಿಯರ್

IFFI 2026 :ಬಾಲಿವುಡ್ ನಟ ರಣಬೀರ್ ಕಪೂರ್ (Ranbir Kapoor) ಅಭಿನಯದ ಬಹುನಿರೀಕ್ಷಿತ 'ರಾಮಾಯಣ' ಸಿನಿಮಾ (Ramayana Movie) ಇದೀಗ ಮತ್ತೊಂದು ವಿಶೇಷ ಗೌರವಕ್ಕೆ ಪಾತ್ರವಾಗಿದೆ. 57ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (IFFI) 2026ರ BRICS ವಿಭಾಗದ ಉದ್ಘಾಟನಾ ಚಿತ್ರವಾಗಿ 'ರಾಮಾಯಣ' ಆಯ್ಕೆಯಾಗಿದೆ. ನವೆಂಬರ್ 20ರಿಂದ 28ರವರೆಗೆ ಗೋವಾದಲ್ಲಿ ನಡೆಯಲಿರುವ ಈ ಚಲನಚಿತ್ರೋತ್ಸವದಲ್ಲಿ 86 ದೇಶಗಳ 150ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಸಿನಿಮಾಗಳು ಪ್ರದರ್ಶನಗೊಳ್ಳಲಿವೆ.

ರಾಮಾಯಣ ಸಿನಿಮಾ

ಬಾಲಿವುಡ್ ನಟ ರಣಬೀರ್ ಕಪೂರ್ (Ranbir Kapoor) ಅಭಿನಯದ ಬಹುನಿರೀಕ್ಷಿತ 'ರಾಮಾಯಣ' ಸಿನಿಮಾ (Ramayana Movie) ಇದೀಗ ಮತ್ತೊಂದು ವಿಶೇಷ ಗೌರವಕ್ಕೆ ಪಾತ್ರವಾಗಿದೆ. 57ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (IFFI) 2026ರ BRICS ವಿಭಾಗದ ಉದ್ಘಾಟನಾ ಚಿತ್ರವಾಗಿ 'ರಾಮಾಯಣ' ಆಯ್ಕೆಯಾಗಿದೆ. ನವೆಂಬರ್ 20ರಿಂದ 28ರವರೆಗೆ ಗೋವಾದಲ್ಲಿ ನಡೆಯಲಿರುವ ಈ ಚಲನಚಿತ್ರೋತ್ಸವದಲ್ಲಿ 86 ದೇಶಗಳ 150ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಸಿನಿಮಾಗಳು ಪ್ರದರ್ಶನಗೊಳ್ಳಲಿವೆ.

ಈ ವರ್ಷದ IFFI ಚಲನಚಿತ್ರೋತ್ಸವಕ್ಕೆ 'Stories Without Borders' (ಗಡಿಗಳಿಲ್ಲದ ಕಥೆಗಳು) ಎಂಬ ಥೀಮ್ ನೀಡಲಾಗಿದೆ. ಭಾಷೆ, ಸಂಸ್ಕೃತಿ ಮತ್ತು ಭೌಗೋಳಿಕ ಗಡಿಗಳನ್ನು ಮೀರಿ ಸಿನಿಮಾ ಹೇಗೆ ಜನರನ್ನು ಸಂಪರ್ಕಿಸುತ್ತದೆ ಎಂಬುದನ್ನು ಈ ಥೀಮ್ ಪ್ರತಿಬಿಂಬಿಸಲಿದೆ.

ವಿಶ್ವದ ವಿವಿಧ ಭಾಗಗಳ ಚಿತ್ರ ನಿರ್ಮಾಪಕರು, ನಿರ್ದೇಶಕರು ಹಾಗೂ ಸಿನಿಮಾ ಪ್ರೇಮಿಗಳು ಈ ಉತ್ಸವದಲ್ಲಿ ಭಾಗವಹಿಸಲಿದ್ದಾರೆ. ಈ ಬಾರಿ 137 ದೇಶಗಳಿಂದ 1,900ಕ್ಕೂ ಹೆಚ್ಚು ಸಿನಿಮಾಗಳು IFFIಗೆ ಸಲ್ಲಿಕೆಯಾಗಿವೆ. ಭಾರತೀಯ ಸಿನಿಮಾಗಳ ವಿಭಾಗದಲ್ಲಿ 18 ಭಾಷೆಗಳ ಒಟ್ಟು 76 ಚಿತ್ರಗಳು ಪ್ರದರ್ಶನಗೊಳ್ಳಲಿವೆ.

BRICS ವಿಭಾಗದಲ್ಲಿ 'ರಾಮಾಯಣ'ಗೆ ವಿಶೇಷ ಸ್ಥಾನ

ಈ ಬಾರಿಯ ಚಲನಚಿತ್ರೋತ್ಸವದಲ್ಲಿ BRICS ರಾಷ್ಟ್ರಗಳ ಸಿನಿಮಾಗಳಿಗೆ ವಿಶೇಷ ಆದ್ಯತೆ ನೀಡಲಾಗಿದೆ. BRICSನ ಎಲ್ಲಾ 11 ಸದಸ್ಯ ರಾಷ್ಟ್ರಗಳ ಚಿತ್ರಗಳನ್ನು ಈ ವಿಭಾಗದಲ್ಲಿ ಪ್ರದರ್ಶಿಸಲಾಗುತ್ತದೆ. ಈ ವಿಭಾಗದ ಉದ್ಘಾಟನಾ ಚಿತ್ರವಾಗಿ ರಣಬೀರ್ ಕಪೂರ್ ಅಭಿನಯದ 'ರಾಮಾಯಣ' ಆಯ್ಕೆಯಾಗಿದೆ.

ಯಶ್, ರಣಬೀರ್ ಕಪೂರ್ ಮತ್ತು ಸಾಯಿ ಪಲ್ಲವಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಸಿನಿಮಾ ಭಗವಾನ್ ಶ್ರೀರಾಮನ ಜೀವನಗಾಥೆ ಹಾಗೂ ಅವರು 14 ವರ್ಷಗಳ ಕಾಲ ನಡೆಸಿದ ವನವಾಸದ ಕಥೆಯನ್ನು ತೆರೆಮೇಲೆ ಕಟ್ಟಿಕೊಡಲಿದೆ.

ಚಿತ್ರ ಬಿಡುಗಡೆಯ ನಂತರ ನಡೆಯಲಿರುವ ಚಲನಚಿತ್ರೋತ್ಸವದಲ್ಲಿ 'ರಾಮಾಯಣ' ಪ್ರದರ್ಶನಗೊಳ್ಳುತ್ತಿರುವುದು ವಿಶೇಷವಾಗಿದೆ. ಭಾರತೀಯ ಪೌರಾಣಿಕ ಕಥೆಯನ್ನು ಜಾಗತಿಕ ವೇದಿಕೆಯಲ್ಲಿ ಪರಿಚಯಿಸಲು ಇದೊಂದು ಮಹತ್ವದ ಅವಕಾಶವಾಗಲಿದೆ.

57ನೇ IFFI ಚಲನಚಿತ್ರೋತ್ಸವದ ಅಧಿಕೃತ ಉದ್ಘಾಟನಾ ಚಿತ್ರವಾಗಿ ಪಾವೆಲ್ ಪಾವ್ಲಿಕೋವ್ಸ್ಕಿ ನಿರ್ದೇಶನದ 'Fatherland' ಆಯ್ಕೆಯಾಗಿದೆ.

1949ರ ಯುದ್ಧೋತ್ತರ ವಿಭಜಿತ ಜರ್ಮನಿಯ ಹಿನ್ನೆಲೆಯಲ್ಲಿರುವ ಈ ಸಿನಿಮಾ ನೋಬೆಲ್ ಪ್ರಶಸ್ತಿ ಪುರಸ್ಕೃತ ಥಾಮಸ್ ಮನ್ ಮತ್ತು ಅವರ ಪುತ್ರಿ ಎರಿಕಾ ಅವರ ಪ್ರಯಾಣದ ಕಥೆಯನ್ನು ಒಳಗೊಂಡಿದೆ. 2026ರ ಕಾನ್ಸ್ ಚಲನಚಿತ್ರೋತ್ಸವದಲ್ಲಿ ಈ ಚಿತ್ರಕ್ಕೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಲಭಿಸಿದೆ.

ಸಿಂಗಾಪುರದ ಖ್ಯಾತ ನಿರ್ದೇಶಕ ಆಂಥನಿ ಚೆನ್ ನಿರ್ದೇಶನದ 'We Are All Strangers' ಚಿತ್ರ ಈ ಬಾರಿಯ IFFI ಸಮಾರೋಪ ಚಿತ್ರವಾಗಿರಲಿದೆ.

ಭಾರತೀಯ ಸಿನಿಮಾಗಳಿಗೆ ಮೀಸಲಾಗಿರುವ Indian Panorama ವಿಭಾಗದಲ್ಲಿಯೂ ವಿಶೇಷ ಚಿತ್ರಗಳು ಸ್ಥಾನ ಪಡೆದಿವೆ.

ರಣವೀರ್ ಸಿಂಗ್ ಅಭಿನಯದ 'Dhurandhar' ಸಿನಿಮಾ ಭಾರತೀಯ ಪನೋರಮಾ ವಿಭಾಗದ ಉದ್ಘಾಟನಾ ಚಿತ್ರವಾಗಲಿದೆ. ಇದರ ಜೊತೆಗೆ ಲಡಾಖಿ ಭಾಷೆಯ ಸಾಕ್ಷ್ಯೇತರ ಚಿತ್ರ 'Becoming' ಕೂಡ ಈ ವಿಭಾಗವನ್ನು ಆರಂಭಿಸಲಿದೆ.

ಭಾರತದ ವಿವಿಧ ಭಾಷೆ, ಸಂಸ್ಕೃತಿ ಮತ್ತು ಕಥನ ಪರಂಪರೆಯನ್ನು ಪ್ರತಿಬಿಂಬಿಸುವ ಉದ್ದೇಶದಿಂದ ಈ ಚಿತ್ರಗಳನ್ನು ಆಯ್ಕೆ ಮಾಡಲಾಗಿದೆ.

ಈ ಬಾರಿ ಎರಡು ಹೊಸ ವಿಭಾಗಗಳ ಪರಿಚಯ

IFFI 2026ರಲ್ಲಿ ಸಿನಿಮಾ ಕಲೆಯ ವಿಭಿನ್ನ ಆಯಾಮಗಳನ್ನು ಪರಿಚಯಿಸಲು ಎರಡು ಹೊಸ ವಿಭಾಗಗಳನ್ನು ಆರಂಭಿಸಲಾಗಿದೆ. ಅನಿಮೇಷನ್ ಸಿನಿಮಾಗಳ ಸೃಜನಶೀಲತೆ ಮತ್ತು ತಾಂತ್ರಿಕ ಹೊಸತನವನ್ನು ಪರಿಚಯಿಸುವ ಐದು ಅತ್ಯುತ್ತಮ ಚಿತ್ರಗಳನ್ನು ಈ ವಿಭಾಗದಲ್ಲಿ ಪ್ರದರ್ಶಿಸಲಾಗುತ್ತದೆ ಸಿನಿಮಾ ನಿರ್ಮಾಣದ ಕಲೆ, ತಂತ್ರ ಮತ್ತು ಹಿಂದಿನ ಸೃಜನಶೀಲ ಪ್ರಕ್ರಿಯೆಗಳನ್ನು ಪರಿಚಯಿಸುವ ಉದ್ದೇಶದಿಂದ ಐದು ಚಿತ್ರಗಳನ್ನು ಈ ವಿಭಾಗದಲ್ಲಿ ಪ್ರದರ್ಶಿಸಲಾಗುತ್ತದೆ.

ಗೌರವಾನ್ವಿತ ದೇಶವಾಗಿ ಸ್ಪೇನ್ ಆಯ್ಕೆ

ಈ ವರ್ಷದ IFFI ಚಲನಚಿತ್ರೋತ್ಸವದಲ್ಲಿ ಸ್ಪೇನ್ ದೇಶಕ್ಕೆ 'Country of Honour' ಗೌರವ ನೀಡಲಾಗಿದೆ. ಇದರ ಅಂಗವಾಗಿ ಸ್ಪೇನ್‌ನ ನಾಲ್ಕು ಸಿನಿಮಾಗಳನ್ನು ಪ್ರದರ್ಶಿಸಲಾಗುತ್ತದೆ.

ಅವುಗಳೆಂದರೆ ಜೈಮ್ ಲೊರೆಂಟೆ ನಿರ್ದೇಶನದ 'The Bad Son', 'Trinidad', ಪೆಡ್ರೊ ಅಲ್ಮೊಡೋವರ್ ಅವರ 'Bitter Christmas' ಹಾಗೂ ಜೈಮ್ ಮಚಿಯಾ ನಿರ್ದೇಶನದ 'Persegiuiendo a Michael'.

ಅತ್ಯುತ್ತಮ ಚೊಚ್ಚಲ ಚಿತ್ರಗಳ ಸ್ಪರ್ಧೆಯಲ್ಲಿ ಏಳು ಸಿನಿಮಾಗಳು

IFFI 2026ರಲ್ಲಿ Best Debut Feature Films Competition ವಿಭಾಗದಡಿ ಏಳು ಚಿತ್ರಗಳು ಸ್ಪರ್ಧಿಸಲಿವೆ. ಈ ವಿಭಾಗದಲ್ಲಿ ಭಾರತದ 'The Sledge', ಬೆಲ್ಜಿಯಂನ 'Paris', ಜರ್ಮನಿಯ 'Fading Man', ಈಜಿಪ್ಟ್‌ನ 'The Black Sea', ಫ್ರಾನ್ಸ್ ಮತ್ತು ಇಟಲಿಯ The Golden Age , ಭಾರತದ 'Birds on Ice' ಹಾಗೂ ಚೀನಾದ 'Atlantic' ಸಿನಿಮಾಗಳು ಸ್ಥಾನ ಪಡೆದಿವೆ.

Yashaswi Devadiga

View all posts by this author