ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

92 ವರ್ಷಗಳ ಹಿಂದೆ ಮುತ್ತಜ್ಜ ಮಾಡಿದ್ದ ಪಾತ್ರಕ್ಕೆ ಈಗ ಬಣ್ಣ ಹಚ್ಚಿದ ರಣಬೀರ್‌; ಇದು ಕಪೂರ್ ಫ್ಯಾಮಿಲಿಯ ‌ʻರಾಮಾಯಣʼ ಕನೆಕ್ಷನ್

ʻರಾಮಾಯಣʼ ಸಿನಿಮಾದಲ್ಲಿ ಶ್ರೀರಾಮನಾಗಿ ನಟಿಸುತ್ತಿರುವ ರಣಬೀರ್ ಕಪೂರ್ ಅವರಿಗೆ ತಮ್ಮ ಮುತ್ತಜ್ಜ ಪೃಥ್ವಿರಾಜ್ ಕಪೂರ್ ಅವರೊಂದಿಗೆ ಅಪರೂಪದ ಸಿನಿಮಾ ನಂಟಿದೆ. ಭಾರತದ ಮೊದಲ ರಾಮಾಯಣ ಕುರಿತ 'ಸೀತಾ' ಸಿನಿಮಾದಲ್ಲಿ ಪೃಥ್ವಿರಾಜ್ ಕಪೂರ್ ಶ್ರೀರಾಮನ ಪಾತ್ರ ನಿರ್ವಹಿಸಿದ್ದರು. ಬರೋಬ್ಬರಿ 92 ವರ್ಷಗಳ ನಂತರ ಅದೇ ಪಾತ್ರವನ್ನು ಅವರ ಮರಿಮೊಮ್ಮಗ ರಣಬೀರ್ ನಿರ್ವಹಿಸುತ್ತಿರುವುದು ಕಾಕತಾಳೀಯ.

ಸದ್ಯ ಎಲ್ಲಾ ಕಡೆ ಈಗ ರಾಮಾಯಣ ಸಿನಿಮಾದ್ದೇ ಮಾತು. ಬಾಲಿವುಡ್‌ ನಟ ರಣಬೀರ್‌ ಕಪೂರ್‌ ಪ್ರಭು ಶ್ರೀರಾಮನಾಗಿ ತೆರೆಮೇಲೆ ಮೋಡಿ ಮಾಡಲು ರೆಡಿಯಾಗಿದ್ದಾರೆ. ಈಚೆಗೆ ಈ ಚಿತ್ರದ ಟೀಸರ್‌ ಕೂಡ ರಿಲೀಸ್‌ ಆಗಿದ್ದು, ಎಲ್ಲರ ಮೆಚ್ಚುಗೆಯನ್ನು ಪಡೆದುಕೊಂಡಿದೆ. ಆದರೆ ಬಾಲಿವುಡ್‌ನಲ್ಲಿ ಬಂದ ರಾಮಾಯಣ ಕುರಿತ ಮೊದಲ ಸಿನಿಮಾದಲ್ಲಿ ರಾಮನ ಪಾತ್ರ ಮಾಡಿದವರು ಯಾರು ಅಂತ ನಿಮಗೆ ಗೊತ್ತಾ? ಅದಕ್ಕೂ ರಣಬೀರ್‌ ಕಪೂರ್‌ ಕುಟುಂಬಕ್ಕೂ ಒಂದು ದೊಡ್ಡ ಕನೆಕ್ಷನ್‌ ಇದೆ.

ರಾಮನಾಗಿ ಮಿಂಚಿದ್ದ ರಣಬೀರ್‌ ಮುತ್ತಜ್ಜ

ನೂರಾರು ವರ್ಷಗಳ ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ರಾಮಾಯಣದ ಮೇಲೆ ಅನೇಕ ಚಿತ್ರಗಳು ಬಂದಿವೆ. ಆದರೆ, ಭಾರತದ ಮೊದಲ 'ಟಾಕಿ' ರಾಮಾಯಣ ಚಿತ್ರದಲ್ಲಿ ರಾಮನ ಪಾತ್ರವನ್ನು ಮಾಡಿದ್ದು ಕಪೂರ್ ಕುಟುಂಬದವರೇ! 1934ರಲ್ಲಿ ಅಂದರೆ ಭಾರತದಲ್ಲಿ ಟಾಕಿ ಸಿನಿಮಾಗಳು ಆರಂಭವಾದ ಕೇವಲ ಮೂರು ವರ್ಷಗಳಲ್ಲೇ ನಿರ್ದೇಶಕ ದೇವಕಿ ಬೋಸ್ ಅವರು ರಾಮಾಯಣದ ಉತ್ತರ ಕಾಂಡದ ಆಧಾರಿತ 'ಸೀತಾ' ಎಂಬ ಚಿತ್ರವನ್ನು ಮಾಡಿದ್ದರು. ಇದು ಬೆಂಗಾಲಿಯ ಮೊದಲ ಟಾಕಿ ಚಿತ್ರಗಳಲ್ಲಿ ಒಂದಾಗಿದ್ದು, ನಂತರ ಹಿಂದಿಯಲ್ಲೂ ಬಿಡುಗಡೆಯಾಯಿತು.

Ramayana Movie: ರಾಮಾಯಣ ಬಗ್ಗೆ ತಮ್ಮ ಮನಸ್ಸನ್ನು ಬದಲಾಯಿಸಿದ ನಟಿ ದೀಪಿಕಾ ಚಿಖ್ಲಿಯಾ

'ಸೀತಾ' ಚಿತ್ರದಲ್ಲಿ 28 ವರ್ಷದ ಪೃಥ್ವಿರಾಜ್ ಕಪೂರ್ (ರಣಬೀರ್‌ ಮುತ್ತಜ್ಜ) ಅವರು ಶ್ರೀರಾಮನ ಪಾತ್ರ ನಿರ್ವಹಿಸಿದ್ದರು. 'ಆಲಂ ಅರಾ' ಚಿತ್ರದ ಮೂಲಕ ಯಶಸ್ಸು ಕಂಡಿದ್ದ ಅವರಿಗೆ ಸೀತಾ ಸಿನಿಮಾ ಭಾರಿ ಜನಪ್ರಿಯತೆಯನ್ನು ತಂದುಕೊಟ್ಟಿತು. ವಿಶೇಷವೆಂದರೆ, ಪೃಥ್ವಿರಾಜ್ ಅವರ ಕಿರಿಯ ಸಹೋದರ ತ್ರಿಲೋಕ್ ಕಪೂರ್ ʻಸೀತಾʼ ಚಿತ್ರದಲ್ಲಿ ಲವನ ಪಾತ್ರ ಮಾಡಿದ್ದರು. 1934ರಲ್ಲಿ ವೆನಿಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಪ್ರದರ್ಶನಗೊಂಡ ಮೊದಲ ಭಾರತೀಯ ಟಾಕಿ ಸಿನಿಮಾ ಎಂಬ ಹೆಗ್ಗಳಿಕೆಯೂ ಸೀತಾ ಚಿತ್ರಕ್ಕಿದೆ.

Ramayana Teaser: ರಾಮಾಯಣದ 'ರಾಮ' ಟೀಸರ್ ಔಟ್‌; ಭಗವಾನ್ ʻಶ್ರೀರಾಮʼನಾಗಿ ಮಿಂಚಿದ ರಣಬೀರ್ ಕಪೂರ್

ಅಂದು ಮುತ್ತಜ್ಜ ಪೃಥ್ವಿರಾಜ್ ಕಪೂರ್ ಮಾಡಿದ ಐತಿಹಾಸಿಕ ಶ್ರೀರಾಮನ ಪಾತ್ರವನ್ನು ಇಂದು ಅವರ ಮರಿಮೊಮ್ಮಗ ರಣಬೀರ್ ನಿರ್ವಹಿಸುತ್ತಿರುವುದು ಕಾಕತಾಳೀಯವೇ ಸರಿ. ಅಂದು ಪೃಥ್ವಿರಾಜ್ ಕಪೂರ್ ಅವರಿಗೆ ಜೋಡಿಯಾಗಿ ಸೀತೆ ಪಾತ್ರದಲ್ಲಿ ನಟಿಸಿದ್ದು ದುರ್ಗಾ ಖೋಟೆ. ಈಗಿನ ರಾಮಾಯಣದಲ್ಲಿ ಸೀತೆಯಾಗಿ ಸಾಯಿ ಪಲ್ಲವಿ ಬಣ್ಣ ಹಚ್ಚಿದ್ದಾರೆ.

ರಾಮನ ಪಾತ್ರದಲ್ಲಿ ಪೃಥ್ವಿರಾಜ್ ಕಪೂರ್ & ರಣಬೀರ್‌ ಕಪೂರ್



ಸಾವಿರಾರು ಕೋಟಿ ಬಜೆಟ್‌ನ ರಾಮಾಯಣ

ಸದ್ಯ ನಮಿತ್ ಮಲ್ಹೋತ್ರಾ ನಿರ್ಮಾಣದ ಈ ಹೊಸ ʻರಾಮಾಯಣʼ ಚಿತ್ರದಲ್ಲಿ ರಣಬೀರ್ ಕಪೂರ್ ರಾಮನಾಗಿ ನಟಿಸಿದರೆ, ಯಶ್ ರಾವಣನಾಗಿ ಬಣ್ಣ ಹಚ್ಚಿದ್ದಾರೆ. ಹನುಮಂತನ ಪಾತ್ರದಲ್ಲಿ ಸನ್ನಿ ಡಿಯೋಲ್ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದ ಮೊದಲ ಭಾಗವು ದೀಪಾವಳಿ ಹಬ್ಬದಂದು ತೆರೆಕಾಣಲಿದ್ದು, ಎರಡನೇ ಭಾಗವು ಮುಂದಿನ ವರ್ಷ ದೀಪಾವಳಿಗೆ ಬರಲಿದೆ. ಇದರ ಬಜೆಟ್‌ 2500 ಕೋಟಿ ರೂ. ಗಳಿಗೂ ಅಧಿಕ ಎನ್ನಲಾಗಿದೆ.