ನಿತೇಶ್ ತಿವಾರಿ ಅವರ ರಾಮಾಯಣ ಟ್ರೈಲರ್ (Ramayana trailer) ಔಟ್ ಆಗಿದೆ. ಜುಲೈ 30 ರಂದು ಚಿತ್ರದ ಮೊದಲ ಟ್ರೇಲರ್ ಅನ್ನು ತಯಾರಕರು ಬಿಡುಗಡೆ ಮಾಡಿದರು, ಇದರಲ್ಲಿ ರಣಬೀರ್ ಕಪೂರ್ ಭಗವಾನ್ ರಾಮನಾಗಿ, ಯಶ್ ರಾವಣನಾಗಿ ಮತ್ತು ಸಾಯಿ ಪಲ್ಲವಿ (Sai pallavi) ಸೀತೆಯಾಗಿ ಕಾಣಿಸಿಕೊಂಡಿದ್ದಾರೆ. 4.15ಕ್ಕೆ ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ. ಟ್ರೇಲರ್‌ನ ಪ್ರತಿಯೊಂದು ಫ್ರೇಮ್ ಕೂಡ ಕಲಾತ್ಮಕವಾಗಿ ಮೂಡಿಬಂದಿದ್ದು, ಪ್ರೇಕ್ಷಕರನ್ನು ತ್ರೇತಾಯುಗದ ಕಾಲಕ್ಕೆ ಕರೆದೊಯ್ಯುತ್ತದೆ. ಪ್ರಭು ಶ್ರೀರಾಮನ ಪಾತ್ರದಲ್ಲಿ ರಣಬೀರ್ ಕಪೂರ್ ಅವರ ಶಾಂತ, ದಿವ್ಯ ಹಾಗೂ ಗಂಭೀರ ನೋಟ ಪ್ರೇಕ್ಷಕರ ಮನ ಗೆದ್ದಿದ್ದರೆ, ಸೀತೆಯಾಗಿ ಸಾಯಿ ಪಲ್ಲವಿ ಅವರ ಸೌಮ್ಯತೆ ಕಣ್ಣು ತುಂಬಿಕೊಳ್ಳುವಂತಿದೆ. ಇನ್ನು ಲಂಕಾಧಿಪತಿ ರಾವಣನಾಗಿ ರಾಕಿಂಗ್ ಸ್ಟಾರ್ (Rocking star yash) ಯಶ್ ಅವರ ರೌದ್ರಾವತಾರ ಇಡೀ ಟ್ರೇಲರ್‌ನ ಹೈಲೈಟ್ ಆಗಿದೆ.
ಇಂದು ಬೆಳಗ್ಗೆ 4.15 ರ ಬ್ರಾಹ್ಮಿ ಮುಹೂರ್ತದಲ್ಲಿ ನಿರ್ಮಾಣ ಸಂಸ್ಥೆ ಟ್ರೈಲರ್ ಬಿಡುಗಡೆ ಮಾಡಿದೆ. ʻThe Ramayana Trailer. This is where the EPIC BEGINSʼ ಎಂಬ ಟ್ಯಾಗ್‌ಲೈನ್‌ನೊಂದಿಗೆ ಬಿಡುಗಡೆಯಾದ ಟ್ರೈಲರ್ ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸಿದೆ.. ಅತ್ಯದ್ಭುತ ವಿಎಫ್‌ಎಕ್ಸ್ ಹಾಗೂ ಯುದ್ಧದ ಭವ್ಯ ದೃಶಗಳು ಸಿನಿಮಾದ ಪ್ರಮುಖ ಆಕರ್ಷಣೆಯಾಗಿದೆ. . ಚಿನ್ನದ ಕವಚ, ಅದ್ಧೂರಿ ವೇಷಭೂಷಣ ಹಾಗೂ ಭಯಾನಕ ಅಭಿವ್ಯಕ್ತಿಗಳೊಂದಿಗೆ ಯಶ್ ವಿವಿಧ ಭಂಗಿಗಳಲ್ಲಿ ಕಾಣಿಸಿಕೊಂಡಿರೋದು ಫ್ಯಾನ್ಸ್ ಖುಷಿ ಪಟ್ಟಿದ್ದಾರೆ.
ಇದನ್ನೂ ಓದಿ: Reba Monica: ಮಗಳು ಹುಟ್ಟಿದ ಸಿಹಿ ಸುದ್ದಿ ಹಂಚಿಕೊಂಡ 'ರತ್ನನ್ ಪ್ರಪಂಚ' ನಟಿ ರೆಬಾ
ರಾಮ-ಸೀತೆಯ ಮನಮುಟ್ಟುವ ಕ್ಷಣಗಳ ಜೊತೆಗೆ, ವನವಾಸದ ಪಯಣ ಮತ್ತು ಲಕ್ಷ್ಮಣನಾಗಿ ರವಿ ದುಬೆ ಅವರ ಪಾತ್ರವೂ ಟ್ರೈಲರ್‌ನಲ್ಲಿ ಪ್ರಮುಖವಾಗಿ ಮೂಡಿಬಂದಿದೆ. ಕಥೆಯ ಪ್ರಮುಖ ಘಟ್ಟಗಳನ್ನ ಮಾತ್ರ ತೋರಿಸಿರುವ ಚಿತ್ರತಂಡ, ಚಿತ್ರದ ಕಥೆಯನ್ನು ಸಂಪೂರ್ಣವಾಗಿ ಬಹಿರಂಗಪಡಿಸದೇ ಸಸ್ಪೆನ್ಸ್‌ಗಳನ್ನ ಹಾಗೆಯೇ ಉಳಿಸಿಕೊಂಡಿದೆ. ಒಟ್ಟಿನಲ್ಲಿ ಸುಮಾರು 4,000 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ‘ರಾಮಾಯಣ’ ಭಾರತೀಯ ಚಿತ್ರರಂಗದ ಅತ್ಯಂತ ದುಬಾರಿ ಹಾಗೂ ಮಹತ್ವಾಕಾಂಕ್ಷೆಯ ಚಿತ್ರಗಳಲ್ಲಿ ಒಂದಾಗಿದೆ. ಚಿತ್ರಕ್ಕೆ ಆಸ್ಕರ್ ವಿಜೇತರಾದ ಎ.ಆರ್. ರೆಹಮಾನ್ ಮತ್ತು ಹಾಲಿವುಡ್‌ನ ಖ್ಯಾತ ಸಂಗೀತ ನಿರ್ದೇಶಕ ಹ್ಯಾನ್ಸ್ ಝಿಮ್ಮರ್ ಜಂಟಿಯಾಗಿ ಸಂಗೀತ ನೀಡಿದ್ದು, ಟ್ರೇಲರ್‌ನ ಬ್ಯಾಕ್‌ಗ್ರೌಂಡ್ ಸ್ಕೋರ್ ಪ್ರತಿ ದೃಶ್ಯದ ತೀವ್ರತೆಯನ್ನು ದುಪ್ಪಟ್ಟು ಮಾಡಿದೆ.
ಇದನ್ನೂ ಓದಿ: Rao Bahadur OTT Release: ಸತ್ಯದೇವ್ ಅವರ 'ರಾವ್ ಬಹದ್ದೂರ್' ಈ ಒಟಿಟಿಯಲ್ಲಿ ಬಿಡುಗಡೆ
ಈ ಚಿತ್ರದ ಮೊದಲ ಭಾಗವು 2026ರ ದೀಪಾವಳಿ ಹಬ್ಬದ ಸಂಭ್ರಮದಲ್ಲಿ ವಿಶ್ವಾದ್ಯಂತ ತೆರೆಕಾಣಲಿದೆ. ಪ್ರೇಕ್ಷಕರು ಈಗಾಗಲೇ ಚಿತ್ರಮಂದಿರದಲ್ಲಿ ಈ ದೃಶ್ಯ ವೈಭವವನ್ನು ಕಣ್ತುಂಬಿಕೊಳ್ಳಲು ಕಾತರದಿಂದ ಕಾಯುತ್ತಿದ್ದಾರೆ. 2026ರ ದೀಪಾವಳಿಗೆ ಜಾಗತಿಕವಾಗಿ ಸಿನಿಮಾ ತೆರೆಕಾಣಲು ಸಜ್ಜಾಗಿದೆ.