ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ದೆಹಲಿಯಲ್ಲಿ ನಡೆದ ‘ರಾಮಾಯಣ’ ಸಿನಿಮಾದ ಅದ್ದೂರಿ ಕಾರ್ಯಕ್ರಮ; ಜುಲೈ 24ರಂದು ಬರಲಿದೆ ಪ್ಯಾನ್‌ ವರ್ಲ್ಡ್‌ ಟ್ರೇಲರ್!‌

ಭಾರತೀಯ ಸಂಸ್ಕೃತಿಯ ಮಹಾಕಾವ್ಯ ‘ರಾಮಾಯಣ’ ಚಿತ್ರದ ಜಾಗತಿಕ ಪಯಣಕ್ಕೆ ದೆಹಲಿಯ ‘ಪ್ರಥಮ ಸಂಕಲ್ಪ’ ಇವೆಂಟ್ ಮೂಲಕ ಅಧಿಕೃತ ಚಾಲನೆ ಸಿಕ್ಕಿದೆ. ನಿತೇಶ್ ತಿವಾರಿ ನಿರ್ದೇಶನದ ಈ ಸಿನಿಮಾದಲ್ಲಿ ರಣಬೀರ್ ಕಪೂರ್, ಸಾಯಿ ಪಲ್ಲವಿ ಹಾಗೂ ರಾಕಿಂಗ್ ಸ್ಟಾರ್ ಯಶ್ ಪ್ರಮುಖ ಪಾತ್ರಗಳಲ್ಲಿದ್ದಾರೆ.

'ರಾಮಾಯಣ' ಸಿನಿಮಾವನ್ನು ಜಾಗತಿಕ ವೇದಿಕೆಗೆ ಪರಿಚಯಿಸುವ ಐತಿಹಾಸಿಕ ಪ್ರಯಾಣಕ್ಕೆ ರಾಜಧಾನಿ ದೆಹಲಿಯಲ್ಲಿ ಅಧಿಕೃತವಾಗಿ ಚಾಲನೆ ನೀಡಲಾಗಿದೆ. ಜುಲೈ 18ರಂದು ನಡೆದ ಈ ಅದ್ಧೂರಿ ಕಾರ್ಯಕ್ರಮವನ್ನು 'ಪ್ರಥಮ ಸಂಕಲ್ಪ' ಎಂದು ಕರೆಯಲಾಗಿದ್ದು, ಇದು ಭಾರತೀಯ ಸಂಪ್ರದಾಯದಂತೆ ಮಹತ್ಕಾರ್ಯಕ್ಕೆ ಕೈಹಾಕುವ ಮುನ್ನ ಕೈಗೊಳ್ಳುವ ದೃಢ ನಿರ್ಧಾರವಾಗಿದೆ. ಜುಲೈ 24ರಂದು ನಡೆಯಲಿರುವ ಚಿತ್ರದ ಟ್ರೇಲರ್ ಬಿಡುಗಡೆಗೂ ಮುನ್ನ ನಡೆದ ಈ ವಿಶೇಷ ಪ್ರದರ್ಶನವು ರಾಮಾಯಣ ಸಿನಿಮಾದ ಭವ್ಯತೆಗೆ ಸಾಕ್ಷಿಯಾಯಿತು.

ದೇಶದಾದ್ಯಂತ ತಲುಪಿದ ರಾಮಾಯಣದ ಮೌಲ್ಯಗಳು

ಈ ಪಯಣವು ಕೇವಲ ದೆಹಲಿಗೆ ಸೀಮಿತವಾಗದೆ, 'Ramayana Schools Programme' ಮೂಲಕ ದೇಶದ ಸುಮಾರು 500ಕ್ಕೂ ಹೆಚ್ಚು ಶಾಲೆಗಳ ಲಕ್ಷಾಂತರ ವಿದ್ಯಾರ್ಥಿಗಳನ್ನು ತಲುಪಿದೆ. ಈ ಕಾರ್ಯಕ್ರಮದಲ್ಲಿ ಆಯ್ಕೆಯಾದ ಪ್ರತಿಭಾವಂತ ವಿಜೇತ ವಿದ್ಯಾರ್ಥಿಗಳು ಸಂಕಲ್ಪ ಸಮಾರಂಭದಲ್ಲಿ ಭಾಗವಹಿಸಿದ್ದರು. ಇದರ ಮುಂದುವರಿದ ಭಾಗವಾಗಿ ದೇಶದ 20 ಪ್ರಮುಖ ನಗರಗಳಲ್ಲಿ ಸಾವಿರಾರು ಅಭಿಮಾನಿಗಳು ಮತ್ತು ಕ್ರಿಯೇಟರ್‌ಗಳು ಚಿತ್ರದ ಟ್ರೇಲರ್‌ನ ವಿಶೇಷ ಮುನ್ನೋಟವನ್ನು ವೀಕ್ಷಿಸಲಿದ್ದಾರೆ.

Ramayana Movie: 15 ವರ್ಷದ ಒಳಗಿನ ಮಕ್ಕಳು ‘ರಾಮಾಯಣ’ ಸಿನಿಮಾ ನೋಡದಂತೆ ಶಿಫಾರಸ್ಸು! ಕಾರಣ ಇದು

ದೈತ್ಯ ತಾರಾಗಣ ಹಾಗೂ ತಾಂತ್ರಿಕ ಸಂಗಮ

ನಿರ್ದೇಶಕ ನಿತೇಶ್ ತಿವಾರಿ ಅವರ ಸಾರಥ್ಯದಲ್ಲಿ ಮೂಡಿಬರುತ್ತಿರುವ ಈ ಚಿತ್ರವು ಭಾರತೀಯ ಚಿತ್ರರಂಗದ ವಿವಿಧ ತಲೆಮಾರಿನ ನಟರು ಮತ್ತು ತಂತ್ರಜ್ಞರ ಸುಂದರ ಸಂಗಮವಾಗಿದೆ. ಚಿತ್ರದಲ್ಲಿ ರಣಬೀರ್ ಕಪೂರ್ (ಶ್ರೀರಾಮ), ಸಾಯಿ ಪಲ್ಲವಿ (ಸೀತಾ ಮಾತೆ) ಮತ್ತು ರಾಕಿಂಗ್ ಸ್ಟಾರ್ ಯಶ್ (ರಾವಣ) ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿರುವುದು ಭಾರಿ ಕುತೂಹಲ ಮೂಡಿಸಿದೆ. ಇವರೊಂದಿಗೆ ಸನ್ನಿ ಡಿಯೋಲ್ (ಹನುಮಂತ), ಅರುಣ್ ಗೋವಿಲ್, ಶೋಭನಾ, ಅಜಿಂಕ್ಯ ದೇವ್, ಕುನಾಲ್ ಕಪೂರ್, ರಕುಲ್ ಪ್ರೀತ್ ಸಿಂಗ್ ಮತ್ತು ರವಿ ದುಬೆ ಅವರಂತಹ ದೈತ್ಯ ತಾರಾಬಳಗವೇ ಈ ಚಿತ್ರದಲ್ಲಿದೆ.

ಈ ಚಿತ್ರಕ್ಕೆ ಮತ್ತೊಂದು ಪ್ರಮುಖ ಆಕರ್ಷಣೆಯೆಂದರೆ ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕರಾದ ಹ್ಯಾನ್ಸ್ ಝಿಮ್ಮರ್ ಮತ್ತು ಎ. ಆರ್. ರೆಹಮಾನ್ ಜಂಟಿಯಾಗಿ ಸಂಗೀತ ನೀಡುತ್ತಿರುವುದು.

Ramayana Movie: ‘ರಾಮಾಯಣ’ ಚಿತ್ರದ ಟ್ರೇಲರ್ ರಿಲೀಸ್‌ ಡೇಟ್‌ ಅನೌನ್ಸ್‌!

ಅಂತರಾಷ್ಟ್ರೀಯ ಮಟ್ಟದ ದೃಷ್ಟಿಕೋನ

ೀ ಚಿತ್ರದ ಬಗ್ಗೆ ಮಾತನಾಡಿದ ನಿರ್ಮಾಪಕ ನಮಿತ್ ಮಲ್ಹೋತ್ರಾ, "ರಾಮಾಯಣವು ತಲೆಮಾರುಗಳಿಂದ ನಾವು ಪಾಲಿಸಿಕೊಂಡು ಬಂದಿರುವ ಮೌಲ್ಯವಾಗಿದೆ. ಇಂದು ನಮ್ಮ ಬಳಿ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಕಲಾತ್ಮಕ ಸಾಮರ್ಥ್ಯವಿರುವುದರಿಂದ, ಈ ಮಹಾಕಾವ್ಯವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಅತ್ಯುತ್ತಮವಾಗಿ ಪ್ರಸ್ತುತಪಡಿಸಲು ಸಾಧ್ಯವಾಗಿದೆ" ಎಂದಿದ್ದಾರೆ. ನಿರ್ದೇಶಕ ನಿತೇಶ್ ತಿವಾರಿ ಮಾತನಾಡಿ, "ತಂತ್ರಜ್ಞಾನದ ಬಳಕೆಯೊಂದಿಗೆ ಈ ಮಹಾಕಾವ್ಯದ ಭಾವನಾತ್ಮಕ ಆಳವನ್ನು ಜಾಗತಿಕ ಪ್ರೇಕ್ಷಕರಿಗೆ ಪ್ರಾಮಾಣಿಕತೆಯಿಂದ ತಲುಪಿಸುವುದು ನಮ್ಮ ಮುಖ್ಯ ಉದ್ದೇಶ" ಎಂದಿದ್ದಾರೆ.

ಪ್ರೈಮ್ ಫೋಕಸ್ ಸ್ಟುಡಿಯೋಸ್, ಜಾಗತಿಕ ತಂತ್ರಜ್ಞಾನ ಸಂಸ್ಥೆ ಡಿ-ನೆಗ್ (DNEG) ಮತ್ತು ನಟ ಯಶ್‌ ಒಡೆತನದ ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಸಹಯೋಗದಲ್ಲಿ ಈ ಬಿಗ್ ಬಜೆಟ್ ಸಿನಿಮಾ ರೂಪುಗೊಳ್ಳುತ್ತಿದೆ. ಜುಲೈ 24 ರಂದು ಬಿಡುಗಡೆಯಾಗಲಿರುವ ಈ ಚಿತ್ರದ ಟ್ರೇಲರ್ ಮೇಲೆ ಎಲ್ಲರ ಗಮನ ಇದೆ. ದೀಪಾವಳಿ ಹಬ್ಬದಂದು ಈ ಸಿನಿಮಾ ತೆರೆಗೆ ಬರಲಿದೆ.