ನಮಿತ್ ಮಲ್ಹೋತ್ರಾ ( Namit Malhotra ಅವರ ರಾಮಾಯಣ: ರೈಸ್ ಆಫ್ ದಿ ಲೆಜೆಂಡ್ ಚಿತ್ರ ಥಿಯೇಟರ್ಗಳನ್ನು ಮೀರಿ ಪ್ರೇಕ್ಷಕರನ್ನು ತಲುಪಲಿದೆ. ಜಿಯೋಹಾಟ್ಸ್ಟಾರ್ ಮತ್ತು ಪ್ರೈಮ್ ಫೋಕಸ್ ಸ್ಟುಡಿಯೋಸ್ ಜೊತೆಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಚಿತ್ರದ ಥಿಯೇಟರ್ ಪ್ರದರ್ಶನ ಮುಗಿದ ನಂತರ ಭಾರತದ ಮನೆಗಳಿಗೆ ತರಲು. ಸಾಮಾನ್ಯ ಸ್ಟ್ರೀಮಿಂಗ್ ಸಬ್ಸ್ಕ್ರಿಪ್ಷನ್ನಲ್ಲಿ ಬರುವುದಿಲ್ಲ. ಪೇ-ಪರ್-ವ್ಯೂ (ಪ್ರತ್ಯೇಕವಾಗಿ ಹಣ ಕೊಟ್ಟು ನೋಡುವ) ಆಯ್ಕೆಯ ಮೂಲಕ ಲಭ್ಯವಾಗುತ್ತದೆ.
ಚಿತ್ರ ವಿಶ್ವಾದ್ಯಂತ ಥಿಯೇಟರ್ಗಳಲ್ಲಿ ನವೆಂಬರ್ 5, 2026 ರಂದು (ದೀಪಾವಳಿ ಸಂದರ್ಭದಲ್ಲಿ) ಬಿಡುಗಡೆಯಾಗಲಿದೆ. ಐಮ್ಯಾಕ್ಸ್ 3ಡಿ ಯಲ್ಲೂ ತೋರಿಸಲಾಗುತ್ತದೆ. ಥಿಯೇಟರ್ ವಿಂಡೋ ಮುಗಿದ ನಂತರ ಭಾರತದಲ್ಲಿ ಜಿಯೋಹಾಟ್ಸ್ಟಾರ್ನಲ್ಲಿ ಆನ್-ಡಿಮಾಂಡ್ ಖರೀದಿ ಆಯ್ಕೆಯ ಮೂಲಕ ನೋಡಬಹುದು. ಥಿಯೇಟರ್ಗೆ ಹೋಗಲು ಅವಕಾಶವಿಲ್ಲದವರಿಗೆ ತಲುಪಿಸುವುದು ಮತ್ತು ಉತ್ತಮ ಗುಣಮಟ್ಟದಲ್ಲಿ ನೋಡುವುದು ಗುರಿ ಎಂದು ಜಿಯೋಸ್ಟಾರ್ ಅಧ್ಯಕ್ಷೆ ನೀತಾ ಎಂ. ಅಂಬಾನಿ ಹೇಳಿದ್ದಾರೆ.
ಇದನ್ನೂ ಓದಿ: Bigg Boss Kannada 13: ಕುಮಾರಿಗೆ ಸುದೀಪ್ ಕೊಟ್ರು ತಕ್ಕ ತಿರುಗೇಟು; ಸ್ಪರ್ಧಿ ಗಪ್ ಚುಪ್!
“ರಾಮಾಯಣ ನಮ್ಮ ನಾಗರಿಕತೆಯ ಮಹಾನ್ ನಿಧಿ. ಇದು ನಮ್ಮ ಮನಸ್ಸನ್ನು ರೂಪಿಸಿದೆ, ಕಲ್ಪನೆಯನ್ನು ಪ್ರೇರೇಪಿಸಿದೆ ಮತ್ತು ಶತಮಾನಗಳಿಂದ ನಮ್ಮ ಜೀವನಕ್ಕೆ ಮಾರ್ಗದರ್ಶನ ನೀಡಿದೆ. ಹೊಸ ಯುಗದಲ್ಲಿ ಈ ಕಥೆಯನ್ನು ತಂತ್ರಜ್ಞಾನದ ಮೂಲಕ ಪ್ರತಿ ಭಾರತೀಯರಿಗೆ ತಲುಪಿಸುವುದು ನಮ್ಮ ಗುರಿ. ಕುಟುಂಬಗಳಿಗೆ ಮತ್ತು ಹೊಸ ಪೀಳಿಗೆಗೆ ಧರ್ಮ, ಪ್ರೀತಿ, ಧೈರ್ಯ ಮತ್ತು ಒಳ್ಳೆಯತನದ ಮೌಲ್ಯಗಳನ್ನು ತಲುಪಿಸುವುದು ನಮಗೆ ಹೆಮ್ಮೆಯ ವಿಷಯ ಎಂದು ಮಿತ್ ಮಲ್ಹೋತ್ರಾ ಹೇಳಿದ್ದಾರೆ
“ರಾಮಾಯಣವನ್ನು ಅತಿ ದೊಡ್ಡ ಪರದೆಯಲ್ಲಿ, ವಿಶೇಷವಾಗಿ ಐಮ್ಯಾಕ್ಸ್ 3ಡಿ ಯಲ್ಲಿ ನೋಡಬೇಕು. ಆದರೆ ಎಲ್ಲರಿಗೂ ಥಿಯೇಟರ್ ಅವಕಾಶವಿಲ್ಲ. ರಾಮಾಯಣ ಪ್ರತಿ ಭಾರತೀಯರದ್ದು. ಜಿಯೋಹಾಟ್ಸ್ಟಾರ್ ತಂತ್ರಜ್ಞಾನದಿಂದ ದೇಶವನ್ನು ಒಂದುಗೂಡಿಸುತ್ತದೆ. ಅದಕ್ಕಾಗಿ ಅವರು ನೈಸರ್ಗಿಕ ಪಾಲುದಾರರು.”ಈ ಚಿತ್ರವನ್ನು ನಿತೇಶ್ ತಿವಾರಿ ನಿರ್ದೇಶಿಸುತ್ತಿದ್ದಾರೆ.
ಪ್ರೈಮ್ ಫೋಕಸ್ ಸ್ಟುಡಿಯೋಸ್, ಡಿಎನ್ಇಜಿ ಮತ್ತು ಯಶ್ ಅವರ ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಜೊತೆಗೆ ನಿರ್ಮಿಸುತ್ತಿದೆ. ಸಂಗೀತಕ್ಕೆ ಹ್ಯಾನ್ಸ್ ಜಿಮ್ಮರ್ ಮತ್ತು ಎ.ಆರ್. ರೆಹಮಾನ್. ಪ್ರೊಡಕ್ಷನ್ ಡಿಸೈನ್ಗೆ ರವಿ ಬನ್ಸಾಲ್ ಮತ್ತು ರ್ಯಾಮ್ಸಿ ಅವೆರಿ.
ಇದನ್ನೂ ಓದಿ: Bigg Boss Kannada 13: ಬಿಗ್ ಬಾಸ್ ಮನೆಯಿಂದ ಕಾವ್ಯ ಔಟ್!
ರಣಬೀರ್ ಕಪೂರ್ ರಾಮನಾಗಿ, ಸಾಯಿ ಪಲ್ಲವಿ – ಸೀತೆ, ಯಶ್ – ರಾವಣ , ರವೀ ದೂಬೆ – ಲಕ್ಷ್ಮಣನಾಗಿ ನಟಿಸುತ್ತಿದ್ದಾರೆ. ಅರುಣ್ ಗೋವಿಲ್, ಲಾರಾ ದತ್ತಾ, ರಕುಲ್ ಪ್ರೀತ್ ಸಿಂಗ್, ವಿವೇಕ್ ಒಬೆರಾಯ್, ಕುನಾಲ್ ಕಪೂರ್, ಕಾಜಲ್ ಅಗರ್ವಾಲ್ ಇತರರು ಇದ್ದಾರೆ.ಚಿತ್ರ ಹಿಂದಿ, ತಮಿಳು, ತೆಲುಗು, ಕನ್ನಡ, ಮಲಯಾಳಂ ಮತ್ತು ಇಂಗ್ಲಿಷ್ನಲ್ಲಿ ನವೆಂಬರ್ 5, 2026 ರಂದು ಬಿಡುಗಡೆ ಆಗಲಿದೆ. ಮುಂದಿನ ಭಾಗ 2027 ರಲ್ಲಿ ಬರಲಿದೆ.