ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

‘ರಾಮಾಯಣ: ಪಾರ್ಟ್ 2’ ಸಿನಿಮಾ ಮುಂದಿನ ವರ್ಷ ತೆರೆಗೆ ಬರೋದಿಲ್ಲ; ಕೊನೇ ಕ್ಷಣದಲ್ಲಿ ಸಿಕ್ತು ಎರಡು ಅಚ್ಚರಿಯ ಮಾಹಿತಿ!

ರಣಬೀರ್‌ ಕಪೂರ್‌, ಯಶ್‌ ನಟನೆಯ ʻರಾಮಾಯಣ: ಪಾರ್ಟ್‌ 2ʼ ಚಿತ್ರದ ಬಿಡುಗಡೆ ದಿನಾಂಕದಲ್ಲಿ ಮಹತ್ವದ ಬದಲಾವಣೆಯಾಗಿದ್ದು, ಸಿನಿಮಾ 2027ರ ಬದಲಿಗೆ 2028ಕ್ಕೆ ಮುಂದೂಡಲ್ಪಟ್ಟಿದೆ ಎಂಬ ಮಾಹಿತಿ ಸಿಕ್ಚಿಕಿದೆ. ಈ ಬಗ್ಗೆ ಸ್ವತಃ ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರೇ ಮಾಹಿತಿ ಹಂಚಿಕೊಂಡಿದ್ದಾರೆ.

ರಣಬೀರ್‌ ಕಪೂರ್‌, ಯಶ್‌ ನಟನೆಯ ʻರಾಮಾಯಣʼ ಸಿನಿಮಾ ತೆರೆಗೆ ಬರಲು ಕ್ಷಣಗಣನೆ ಆರಂಭವಾಗಿದೆ. ಆದರೆ, ಈ ಮಧ್ಯೆ ಎರಡು ಅಚ್ಚರಿಯ ವಿಚಾರಗಳು ಹೊರಬಿದ್ದಿವೆ. ಹೌದು, ‘ರಾಮಾಯಣ: ಪಾರ್ಟ್‌ 2ʼ ಸಿನಿಮಾವು 2027ರ ದೀಪಾವಳಿಗೆ ತೆರೆಗೆ ಬರಲಿದೆ ಎಂಬ ಮಾಹಿತಿ ಇತ್ತು. ಆದರೆ ಅದರಲ್ಲೀಗ ಬದಲಾವಣೆ ಆಗಿದೆ. ಎರಡನೇ ಭಾಗವನ್ನು 2028ಕ್ಕೆ ಮುಂದೂಡಲಾಗಿದೆ. ಈ ಹಿಂದೆ ನಿಗದಿಯಾಗಿದ್ದ ದಿನಾಂಕಕ್ಕಿಂತ ಒಂದು ವರ್ಷ ತಡವಾಗಿ ಪಾರ್ಟ್‌ 2 ಸಿನಿಮಾ ತೆರೆಕಾಣಲಿದೆ

"ಚಿತ್ರದ ಭವ್ಯತೆಗೆ ಮತ್ತು ಕಥೆಗೆ ಪೂರ್ಣ ನ್ಯಾಯ ಒದಗಿಸುವ ದೃಷ್ಟಿಯಿಂದಲೇ ಈ ನಿರ್ಧಾರ ಕೈಗೊಳ್ಳಲಾಗಿದೆ" ಎಂದು ಚಿತ್ರದ ನಿರ್ಮಾಪಕ ನಮಿತ್ ಮಲ್ಹೋತ್ರಾ ಸ್ಪಷ್ಟಪಡಿಸಿದ್ದಾರೆ. ಇದೇ ವೇಳೆ, ಈ ಸಿನಿಮಾ ಮೂರು ಭಾಗಗಳ ಸರಣಿಯಾಗಿ ಮೂಡಿಬರುವ ಸಾಧ್ಯತೆಯಿದೆ ಎಂಬ ಸುಳಿವನ್ನು ಅವರು ನೀಡಿದ್ದಾರೆ.

Yash: ನಟನೆಯ ಜೊತೆಗೆ ಕರ್ನಾಟಕದಲ್ಲಿ ‘ರಾಮಾಯಣ’ ಸಿನಿಮಾ ಹಂಚಿಕೆ ಮಾಡಲು ರೆಡಿ ಆದ ಯಶ್

ಆತುರಾತುರವಾಗಿ ಮುಗಿಸಲು ಸಿದ್ಧರಿಲ್ಲ

ಈ ಕುರಿತು ಸಂದರ್ಶನದಲ್ಲಿ ಮಾತನಾಡಿದ ನಮಿತ್ ಮಲ್ಹೋತ್ರಾ, ಚಿತ್ರವನ್ನು ಅಸಡ್ಡೆಯಿಂದ ಆತುರಾತುರವಾಗಿ ಮುಗಿಸಲು ತಾವು ಸಿದ್ಧರಿಲ್ಲ ಎಂದು ತಿಳಿಸಿದ್ದಾರೆ. "ನಾವು ಆ ಮಹಾ ಗ್ರ್ಯಾಂಡ್ ಫಿನಾಲೆಯನ್ನು ಪ್ರೇಕ್ಷಕರ ಮುಂದಿಡುವಾಗ ಮೊದಲ ಭಾಗಕ್ಕೆ ನೀಡಿದಷ್ಟೇ ಅಚ್ಚುಕಟ್ಟು ಕೆಲಸ ಹಾಗೂ ಶ್ರಮವನ್ನು ಹಾಕಲು ಹೆಚ್ಚಿನ ಸಮಯ ಬೇಕಾಗಿದೆ. ಇಷ್ಟು ಬೃಹತ್ ಪ್ರಮಾಣದ ಚಿತ್ರಕ್ಕೆ ನ್ಯಾಯ ಒದಗಿಸಲು ಈ ಹೆಚ್ಚುವರಿ ಒಂದು ವರ್ಷದ ಸಮಯ ಅತ್ಯಗತ್ಯ. ಯಾವುದನ್ನೂ ಅವಸರದಲ್ಲಿ ಮುಗಿಸಲು ಅಥವಾ ಆತುರದ ನಿರ್ಧಾರಗಳನ್ನು ಕೈಗೊಳ್ಳಲು ನಾವು ಬಯಸಲಿಲ್ಲ; ಈ ಸಮಾರೋಪವು ಎಷ್ಟರಮಟ್ಟಿಗೆ ಅರ್ಹವಾಗಿದೆಯೋ ಅಷ್ಟೇ ವೈಭವದೊಂದಿಗೆ ಪ್ರೇಕ್ಷಕರನ್ನು ತಲುಪಬೇಕು" ಎಂದು ಅವರು ವಿವರಿಸಿದ್ದಾರೆ.

ʻರಾಮಾಯಣ: ಪಾರ್ಟ್‌ 3ʼ ಕೂಡ ಬರಲಿದೆಯೇ?

ಇನ್ನೊಂದೆಡೆ, ಈ ಚಿತ್ರವು 3 ಭಾಗಗಳಲ್ಲಿ ಬರಲಿದೆಯೇ ಎಂಬ ಚರ್ಚೆಗೂ ನಿರ್ಮಾಪಕರು ಪ್ರತಿಕ್ರಿಯಿಸಿದ್ದಾರೆ. "ಆರಂಭದಲ್ಲಿ ರಾಮಾಯಣವನ್ನು ಮೂರು ಭಾಗಗಳ ಸರಣಿಯಾಗಿ ರೂಪಿಸಲು ಯೋಜಿಸಲಾಗಿತ್ತು. ನಂತರ ಚಿತ್ರೀಕರಣದ ವೇಳೆ ಅದನ್ನು ಎರಡು ಭಾಗಗಳಾಗಿ ಮಾಡಲು ನಿರ್ಧರಿಸಲಾಗಿತ್ತು. ಆದರೆ ಸದ್ಯ ಚಿತ್ರೀಕರಣದ ನಡುವಿನ ಹಂತದಲ್ಲಿದ್ದು, ಮೊದಲ ಭಾಗಕ್ಕೆ ಜಾಗತಿಕ ಮಟ್ಟದಲ್ಲಿ ಸಿಗುವ ಪ್ರತಿಕ್ರಿಯೆ ಹಾಗೂ ವಿಮರ್ಶೆಗಳನ್ನು ಗಮನಿಸಿದ ಬಳಿಕವೇ ಮುಂದಿನ ಭಾಗಗಳ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು. ಪ್ರೇಕ್ಷಕರ ಅಭಿರುಚಿಗೆ ತಕ್ಕಂತೆ ವಿಭಿನ್ನ ಆವೃತ್ತಿಗಳನ್ನು ನೀಡಬೇಕೇ ಅಥವಾ ಎಲ್ಲರಿಗೂ ಒಂದೇ ಆವೃತ್ತಿಯನ್ನು ನೀಡಬೇಕೇ ಎಂಬುದನ್ನು ನಿರ್ಧರಿಸಲಿದ್ದೇವೆ" ಎಂದು ಹೇಳಿದ್ದಾರೆ.