ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಬಾಕ್ಸ್ ಆಫೀಸ್‌ನಲ್ಲಿ 'ರಾಮಾಯಣ' ಸುನಾಮಿ, ಮೊದಲ ದಿನವೇ 155 ಕೋಟಿ ಬಾಚಿದ ಯಶ್‌ ಸಿನಿಮಾ! ಯಾವೆಲ್ಲಾ ದಾಖಲೆಗಳು ಉಡೀಸ್?‌

Ramayana Box Office Collection: ನವೆಂಬರ್ 5ರಂದು ತೆರೆಕಂಡ ʻರಾಮಾಯಣʼ ಸಿನಿಮಾ ಮೊದಲ ದಿನವೇ ವಿಶ್ವಾದ್ಯಂತ ಬರೋಬ್ಬರಿ 155 ಕೋಟಿ ರೂ. ಗಳಿಸಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ನಿತೇಶ್ ತಿವಾರಿ ನಿರ್ದೇಶನದ ಈ ಚಿತ್ರವು ಎಲ್ಲಾ ಲೆಕ್ಕಾಚಾರಗಳನ್ನು ಉಲ್ಟಾ ಮಾಡಿದೆ.

'ರಾಮಾಯಣ: ಭಾಗ 1' ಚಿತ್ರವು ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಮಾಯಿ ಮಾಡಿದ್ದು, ಮೊದಲ ದಿನದ ಗಳಿಕೆಯಲ್ಲೇ ಭಾರತೀಯ ಚಿತ್ರರಂಗದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ನವೆಂಬರ್ 5ರಂದು ವಿಶ್ವಾದ್ಯಂತ ತೆರೆಕಂಡ ಈ ಚಿತ್ರವು ಮೊದಲ ದಿನವೇ ವಿಶ್ವಾದ್ಯಂತ ಬರೋಬ್ಬರಿ 155 ಕೋಟಿ ಕಲೆಕ್ಷನ್ ಮಾಡಿದೆ.

ಎಲ್ಲರ ಲೆಕ್ಕಾಚಾರ ಉಲ್ಟಾಪಲ್ಟಾ ಮಾಡಿದೆ

ಸಾಮಾನ್ಯವಾಗಿ ದೀಪಾವಳಿ ಹಬ್ಬಕ್ಕೆ ಮುನ್ನ ಜನರು ಶಾಪಿಂಗ್, ಮನೆ ಕ್ಲೀನಿಂಗ್‌, ಅಲಂಕಾರ ಹಾಗೂ ಪ್ರಯಾಣದ ಸಿದ್ಧತೆಗಳಲ್ಲಿ ಮುಳುಗಿರುವುದರಿಂದ ಚಿತ್ರಮಂದಿರಗಳತ್ತ ಮುಖ ಮಾಡುವುದು ವಿರಳ. ಚಿತ್ರರಂಗದ ದೃಷ್ಟಿಯಿಂದ ಈ ಸಮಯ ಅತ್ಯಂತ ಸವಾಲಿನದ್ದಾಗಿದ್ದರೂ, 'ರಾಮಾಯಣ' ಸಿನಿಮಾ ಆ ಎಲ್ಲಾ ಅಡೆತಡೆಗಳನ್ನು ಮೆಟ್ಟಿನಿಂತು ಮುನ್ನುಗ್ಗಿದೆ. ಬಿಡುಗಡೆಗೂ ಮುನ್ನ ಈ ಸಿನಿಮಾ ಮೊದಲ ದಿನ ವಿಶ್ವಾದ್ಯಂತ ಸುಮಾರು 90 ಕೋಟಿ (ಭಾರತದಲ್ಲಿ 40 ಕೋಟಿ) ಗಳಿಸಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ನಿರ್ದೇಶಕ ನಿತೇಶ್ ತಿವಾರಿ ಅವರ ಈ ದೃಶ್ಯವೈಭವವು ಲೆಕ್ಕಾಚಾರಗಳನ್ನು ಉಡೀಸ್ ಮಾಡಿದೆ.

ಹಿಂದಿ ವರ್ಷನ್‌ನಿಂದಲೇ ಹೆಚ್ಚು ಗಳಿಕೆ

ಭಾರತೀಯ ಬಾಕ್ಸ್ ಆಫೀಸ್‌ನಲ್ಲಿ ಮೊದಲ ದಿನ ಒಟ್ಟು 64.85 ಕೋಟಿ ಕಲೆಕ್ಷನ್ ದಾಖಲಾಗಿದೆ. ಇದರಲ್ಲಿ ಹಿಂದಿ ಅವತರಣಿಕೆಯು 20,678 ಪ್ರದರ್ಶನಗಳಿಂದ ಗರಿಷ್ಠ 47.50 ಕೋಟಿ ಇದೆ. ಅಗ್ರಸ್ಥಾನದಲ್ಲಿದೆ. ದಕ್ಷಿಣ ಭಾರತದಲ್ಲೂ ಚಿತ್ರಕ್ಕೆ ಅದ್ಭುತ ಸ್ಪಂದನೆ ವ್ಯಕ್ತವಾಗಿದ್ದು, ಕನ್ನಡ ಅವತರಣಿಕೆಯು 1,197 ಪ್ರದರ್ಶನಗಳಿಂದ 7.25 ಕೋಟಿ ಹಾಗೂ ತೆಲುಗು ಅವತರಣಿಕೆಯು 1,776 ಶೋಗಳಿಂದ 6 ಕೋಟಿ ಸಂಗ್ರಹಿಸಿದೆ. ಉಳಿದಂತೆ ತಮಿಳು ವರ್ಷನ್ 992 ಪ್ರದರ್ಶನಗಳಿಂದ 2.60 ಕೋಟಿ ಮತ್ತು ಮಲಯಾಳಂ ವರ್ಷನ್ 557 ಪ್ರದರ್ಶನಗಳಿಂದ 1.50 ಕೋಟಿ ತಂದುಕೊಟ್ಟಿವೆ.

Ramayana Movie: ರಾವಣನ ಸಿಂಹಾಸನಕ್ಕೆ 1 ಕೋಟಿ, ಶೂರ್ಪನಖಿಯ ರಥಕ್ಕೆ ಎಷ್ಟು ಬೆಲೆ ಗೊತ್ತಾ? ಭವ್ಯ ಸೆಟ್‌ ಸಂಪೂರ್ಣ ಮಾಹಿತಿ ಇಲ್ಲಿದೆ

8ನೇ ಸ್ಥಾನಕ್ಕೇರಿದ ʻರಾಮಾಯಣʼ

ಈ ಐತಿಹಾಸಿಕ ಗಳಿಕೆಯೊಂದಿಗೆ 'ರಾಮಾಯಣ' ಚಿತ್ರವು ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಮೊದಲ ದಿನ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಾರ್ವಕಾಲಿಕ ಟಾಪ್ 10 ಚಿತ್ರಗಳ ಪಟ್ಟಿಯಲ್ಲಿ 8ನೇ ಸ್ಥಾನಕ್ಕೇರಿದೆ. ಮೊದಲ ದಿನ ವಿಶ್ವಾದ್ಯಂತ ಅತಿ ಹೆಚ್ಚು ಗಳಿಕೆ ಕಂಡ ಭಾರತೀಯ ಚಿತ್ರಗಳ ಪಟ್ಟಿಯಲ್ಲಿ 'ಪುಷ್ಪ 2: ದಿ ರೂಲ್' ಬರೋಬ್ಬರಿ 278 ಕೋಟಿ ಕಲೆಕ್ಷನ್ ಮಾಡುವ ಮೂಲಕ ಮೊದಲ ಸ್ಥಾನದಲ್ಲಿದ್ದರೆ, ಎಸ್.ಎಸ್. ರಾಜಮೌಳಿ ಅವರ ನಿರ್ದೇಶನದ 'RRR' ಸಿನಿಮಾ 223.50 ಕೋಟಿ ಗಳಿಸಿ ಎರಡನೇ ಸ್ಥಾನ ಹಾಗೂ 'ಬಾಹುಬಲಿ 2: ದಿ ಕನ್‌ಕ್ಲೂಷನ್' ಚಿತ್ರ 214.5 ರಿಂದ ₹217 ಕೋಟಿ ಕಲೆಕ್ಷನ್‌ನೊಂದಿಗೆ ಮೂರನೇ ಸ್ಥಾನವನ್ನು ಅಲಂಕರಿಸಿವೆ.

ʻರಾಮಾಯಣʼ ಚಿತ್ರದ ಅಧಿಕೃತ ಗಳಿಕೆಯ ಮಾಹಿತಿ



ನಾಲ್ಕನೇ ಸ್ಥಾನದಲ್ಲಿ 'ಧುರಂಧರ್: ದಿ ರಿವೆಂಜ್' ಚಿತ್ರವು (236.60 ಕೋಟಿ), ಐದನೇ ಸ್ಥಾನದಲ್ಲಿ 'ಕಲ್ಕಿ 2898 ಎಡಿ' (176.80 ಕೋಟಿ), ಆರನೇ ಸ್ಥಾನದಲ್ಲಿ ಕನ್ನಡದ ಹೆಮ್ಮೆಯ 'ಕೆ.ಜಿ.ಎಫ್: ಚಾಪ್ಟರ್ 2' (159.20 ಕೋಟಿ), ಏಳನೇ ಸ್ಥಾನದಲ್ಲಿ ಪ್ರಭಾಸ್ ಅಭಿನಯದ 'ಸಲಾರ್: ಪಾರ್ಟ್ 1 – ಸೀಸ್‌ಫೈರ್' (158.80 ಕೋಟಿ) ಹಾಗೂ 9 ಮತ್ತು 10ನೇ ಸ್ಥಾನದಲ್ಲಿ ರಜನಿಕಾಂತ್ ಅಭಿನಯದ 'ಕೂಲಿ' ಚಿತ್ರವು (153.20 ಕೋಟಿ) ಮತ್ತು ಪವನ್ ಕಲ್ಯಾಣ್ ಅವರ 'OG' (144.20 ಕೋಟಿ) ಚಿತ್ರಗಳು ಇವೆ.

ಮುಂದಿನ ದಿನಗಳಲ್ಲಿ ಹೆಚ್ಚಾಗಲಿದ ಗಳಿಕೆ

ಈ ಚಿತ್ರದಲ್ಲಿ ರಣಬೀರ್ ಕಪೂರ್ ಶ್ರೀರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ, ರಾಕಿಂಗ್ ಸ್ಟಾರ್ ಯಶ್ ರಾವಣನಾಗಿ ಹಾಗೂ ರವಿ ದುಬೆ ಲಕ್ಷ್ಮಣನಾಗಿ ಬಣ್ಣಹಚ್ಚಿದ್ದಾರೆ. ನಮಿತ್ ಮಲ್ಹೋತ್ರಾ ಅವರ ಪ್ರೈಮ್ ಫೋಕಸ್ ಸ್ಟುಡಿಯೋಸ್ ಮತ್ತು ಯಶ್ ಅವರ ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಜಂಟಿಯಾಗಿ ಈ ಮಹಾಚಿತ್ರವನ್ನು ಅದ್ದೂರಿಯಾಗಿ ನಿರ್ಮಿಸಿವೆ. ಮೊದಲ ದಿನವೇ 155 ಕೋಟಿ ಬಾಚಿರುವ 'ರಾಮಾಯಣ', ಹಬ್ಬದ ರಜೆಗಳಲ್ಲಿ ಬಾಕ್ಸ್ ಆಫೀಸ್ ದಾಖಲೆಗಳನ್ನು ಪುಡಿಗಟ್ಟುವ ಎಲ್ಲಾ ಲಕ್ಷಣಗಳನ್ನು ಸ್ಪಷ್ಟವಾಗಿ ತೋರಿಸಿದೆ.