ʻಧುರಂಧರ್ʼ ರೀತಿಯ ಸಕ್ಸಸ್ ಸಿಕ್ಕರೂ ನಟ ರಣವೀರ್ ಸಿಂಗ್ ಅದನ್ನು ಮುಕ್ತವಾಗಿ ಸಂಭ್ರಮಿಸಲು ಸಾಧ್ಯವಾಗಲಿಲ್ಲ. ಕಾರಣ, ʻಡಾನ್ 3ʼ ವಿವಾದ. ಹೌದು, ಫರ್ಹಾನ್ ಆಖ್ತರ್ ನಿರ್ಮಾಣದ ʻಡಾನ್ 3ʼ ಸಿನಿಮಾದಿಂದ ರಣವೀರ್ ಹೊರಬಂದಿದ್ದರಿಂದ ದೊಡ್ಡ ವಿವಾದವೇ ಎದುರಾಯ್ತು. ಕೊನೆಗೆ ಬ್ಯಾನ್ ವಿಚಾರವೂ ಚರ್ಚೆಗೆ ಬಂದಿತ್ತು. ಇದೆಲ್ಲದರಿಂದ ರಣವೀರ್ ಬೇಸರಗೊಂಡಿದ್ದಾರಾ ಎಂಬ ಅನುಮಾನವೊಂದು ಮೂಡಿದೆ. ಏಕೆಂದರೆ, ಸದ್ಯ ರಣವೀರ್ ಸಿಂಗ್ ತೆಗೆದುಕೊಂಡಿರುವ ಒಂದು ನಿರ್ಧಾರ ಇಂಥದ್ದೊಂದು ಅನುಮಾನಕ್ಕೆ ಕಾರಣವಾಗಿದೆ.
ಮೌನಿ ಆಗಲಿದ್ದಾರೆ ರಣವೀರ್ ಸಿಂಗ್!
ಹೌದು, ಡಾನ್ 3 ವಿವಾದಿದಂದ ಬೇಸರಗೊಂಡಿರುವ ರಣವೀರ್ ಸಿಂಗ್, ಸಾರ್ವಜನಿಕವಾಗಿ ಮಾತನಾಡುವುದಕ್ಕೆ ಬ್ರೇಕ್ ಹಾಕದ್ದಾರೆ ಎಂದು ಅವರ ಆಪ್ತಮೂಲಗಳು ತಿಳಿಸಿವೆ. "ನಾನು ರಣವೀರ್ ಸಿಂಗ್ ಅವರನ್ನು ವೈಯಕ್ತಿಕವಾಗಿ ಭೇಟಿಯಾಗಿದ್ದೆ. ಆಗ ಅವರು ಡಾನ್ 3 ವಿವಾದದ ಬಗ್ಗೆ ನಾನು ಮಾತನಾಡುವುದಿಲ್ಲ, ಕನಿಷ್ಠ 18 ತಿಂಗಳುಗಳ ಕಾಲ ಯಾವುದೇ ಸಂದರ್ಶನಗಳನ್ನು ನೀಡುವುದಿಲ್ಲ ಎಂದು ನನಗೆ ತಿಳಿಸಿದರು. ಅವರ ಈ ನಿರ್ಧಾರವು ಎಲ್ಲಾ ಮಾಧ್ಯಮ ಸಂವಾದಗಳಿಗೆ, ಪತ್ರಕರ್ತರಿಗೆ ನೀಡುವ ಸಂದರ್ಶನಗಳಿಗೂ ಇದು ಅನ್ವಯಿಸಲಿದೆ" ಎಂದು ಈಚೆಗೆ ರಣವೀರ್ ಸಿಂಗ್ ಅವರನ್ನು ಭೇಟಿ ಮಾಡಿದ್ದ ಹಿರಿಯ ಪತ್ರಕರ್ತರೊಬ್ಬರು ಹೇಳಿದ್ದಾರೆ.
'ಪ್ರಳಯ್' ರಿಲೀಸ್ ತನಕ ಯಾವುದೇ ಸಂದರ್ಶನ ಇಲ್ಲ!
ಸದ್ಯ ಹನ್ಸಲ್ ಮೆಹ್ತಾ ಅವರ ಪುತ್ರ ಜೈ ಮೆಹ್ತಾ ನಿರ್ದೇಶನದ 'ಪ್ರಳಯ್' ಚಿತ್ರದಲ್ಲಿ ರಣವೀರ್ ನಟಿಸುತ್ತಿದ್ದು, ಅದು ಬಿಡುಗಡೆ ಆಗುವವರೆಗೂ ಮಾಧ್ಯಮಗಳೊಂದಿಗೆ ಮಾತನಾಡದಿರಲು ರಣವೀರ್ ನಿರ್ಧರಿಸಿದ್ದಾರೆ. ಎನ್ನಲಾಗಿದೆ. ಕೋವಿಡ್-19 ಸಾಂಕ್ರಾಮಿಕ ರೋಗದ ಹಿನ್ನೆಲೆಯನ್ನು ಹೊಂದಿರುವ, ಜಾಂಬಿ ಜಾನರ್‌ನ ಪ್ರಳಯ್ ಚಿತ್ರದ ರಣವೀರ್ ಸಿಂಗ್ ತುಂಬಾ ಉತ್ಸುಕರಾಗಿದ್ದಾರೆ. ಇದರಲ್ಲಿ ವಿನಾಶದ ಅಂಚಿನಲ್ಲಿರುವ ಮುಂಬೈ ನಗರವನ್ನು ತೋರಿಸಲು ಎಐ (AI) ಆಧಾರಿತ ದೃಶ್ಯಗಳನ್ನು ಬಳಸಲಾಗುತ್ತದೆ.
Deepika Padukone: ಹೀಗಿದ್ದಾಳೆ ನೋಡಿ ರಣವೀರ್ ಸಿಂಗ್-ದೀಪಿಕಾ ಪಡುಕೋಣೆ ಪುತ್ರಿ ದುವಾ; ಮೊದಲ ಬಾರಿ ಫೋಟೊ ರಿವೀಲ್
ಶೀಘ್ರದಲ್ಲೇ ಪ್ರಳಯ್ ಶೂಟಿಂಗ್
ಜೈ ಮೆಹ್ತಾ ಅವರು ಈ ಹಿಂದೆ ‘ಸ್ಕ್ಯಾಮ್ 1992: ದಿ ಹರ್ಷದ್ ಮೆಹ್ತಾ ಸ್ಟೋರಿ’ ಮತ್ತು ‘ಲೂಟೇರೆ’ ವೆಬ್ ಸರಣಿಗಳಿಗೆ ಸಹ ನಿರ್ದೇಶನ ಮಾಡಿದ್ದರು. ಈ ಚಿತ್ರವನ್ನು ಹನ್ಸಲ್ ಮೆಹ್ತಾ ಮತ್ತು ಸಮೀರ್ ನಾಯರ್ ಅವರ ‘ಅಪ್ಲಾಸ್ ಎಂಟರ್‌ಟೈನ್‌ಮೆಂಟ್’ ಜಂಟಿಯಾಗಿ ನಿರ್ಮಿಸುತ್ತಿವೆ. ಮೂಲಗಳ ಪ್ರಕಾರ, ‘ಪ್ರಳಯ್’ ಚಿತ್ರದ ಚಿತ್ರಕಥೆ ಅಂತಿಮಗೊಂಡಿದ್ದು, ಶೀಘ್ರದಲ್ಲೇ ಚಿತ್ರೀಕರಣ ಪ್ರಾರಂಭವಾಗುವ ಸಾಧ್ಯತೆಯಿದೆ. ಈ ಸಿನಿಮಾ ಯಾವಾಗ ತೆರೆಗೆ ಬರಲಿದೆ ಎಂಬುದರ ಬಗ್ಗೆ ಮಾಹಿತಿ ಇಲ್ಲ.
ಇನ್ನು, ಡಾನ್ 3 ವಿವಾದಕ್ಕೆ ಸಂಬಂಧಿಸಿದಂತೆ ಫರ್ಹಾನ್ ಅಖ್ತರ್ ಅವರ ‘ಎಕ್ಸೆಲ್ ಎಂಟರ್‌ಟೈನ್‌ಮೆಂಟ್’ ಸಂಸ್ಥೆಯು 45 ಕೋಟಿ ಪರಿಹಾರಕ್ಕೆ ಒತ್ತಾಯಿಸಿದ್ದರು. ಫೆಡರೇಶನ್ ಆಫ್ ವೆಸ್ಟರ್ನ್ ಇಂಡಿಯಾ ಸಿನಿ ಎಂಪ್ಲಾಯ್ಸ್ (FWICE) ಸಂಸ್ಥೆಯು ರಣವೀರ್ ವಿರುದ್ಧ ಅಸಹಕಾರ ನಿರ್ದೇಶನವನ್ನು ಹೊರಡಿಸಿತ್ತು. ಆದರೆ, ಈ ನಿರ್ದೇಶನವನ್ನು ಈಗ ಹಿಂಪಡೆಯಲಾಗಿದೆ.