ಭಾರಿ ನಿರೀಕ್ಷೆ ಮೂಡಿಸಿರುವ ʻಧುರಂಧರ್ 2ʼ ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ. ಪಾರ್ಟ್ 2ಗಿಂತಲೂ ಹಲವು ಪಟ್ಟು ಖಡಕ್ ಆಗಿದೆ. ಈ ಬಾರಿ ಹಿಂದಿ ಮಾತ್ರವಲ್ಲದೆ, ವಿವಿಧ ಭಾಷೆಗಳಲ್ಲಿ ಧುರಂಧರ್ 2 ರಿಲೀಸ್ ಆಗುತ್ತಿರುವುದರಿಂದ ಮೊದಲ ದಿನವೇ ದೊಡ್ಡ ಮೊತ್ತದ ಗಳಿಕೆ ಆಗೋದು ನಿಶ್ಚಿತ ಎಂಬ ಮಾತುಗಳು ಕೇಳಿಬರುತ್ತಿವೆ. ಈ ಸಿನಿಮಾದ ಮೇಲೆ ಎಂತಹ ಕ್ರೇಜ್ ಎಂಬುದಕ್ಕೆ ಅಡ್ವಾನ್ಸ್ ಬುಕ್ಕಿಂಗ್‌ನಲ್ಲೇ ಉತ್ತರ ಸಿಗುತ್ತಿದೆ. ಈ ಮಧ್ಯೆ ನಟ ರಣವೀರ್ ಸಿಂಗ್ ಅವರ ಫ್ಯಾನ್ಸ್ ಅಂತೂ ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. ಯಾಕೆ ಅಂತೀರಾ? ಮುಂದೆ ಓದಿ.
ಈ ಬಾರಿ ರೆಹಮಾನ್ ಡಕಾಯಿತ್ ಇಲ್ಲ
ಪಾರ್ಟ್ 1ರಲ್ಲಿ ಅಕ್ಷಯ್ ಖನ್ನಾ ನಿಭಾಯಿಸಿದ್ದ ರೆಹಮಾನ್ ಡಕಾಯಿತ್ ಪಾತ್ರವು ಭಾರಿ ಹೈಲೈಟ್ ಆಗಿತ್ತು. ಅದು ಯಾವಮಟ್ಟಕ್ಕೆಂದರೇ, ಸಿನಿಮಾದ ಹೀರೋ ರಣವೀರ್ ಸಿಂಗ್ ಅವರೇ ಆಗಿದ್ದರೂ, ಸಿನಿಪ್ರಿಯರಿಗೆ ಹೆಚ್ಚು ಕಾಡಿದ್ದು ಮಾತ್ರ ರೆಹಮಾನ್ ಡಕಾಯಿತ್ ಪಾತ್ರ. ವಿಲನ್ ಆಗಿದ್ದರೂ, ಅಕ್ಷಯ್ ಖನ್ನಾ ಸಖತ್ ಹೈಲೈಟ್ ಆಗಿದ್ದರು. ಇದು ರಣವೀರ್ ಫ್ಯಾನ್ಸ್‌ಗೆ ತುಸು ಬೇಸರ ಮೂಡಿಸಿತ್ತು. 'ಹಮ್ಜಾ' ಎಂಬ ಪವರ್‌ಫುಲ್ ಪಾತ್ರವನ್ನು ರಣವೀರ್ ಮಾಡಿದ್ದರೂ, ಹೆಚ್ಚು ಹೈಲೈಟ್ ಆಗಿದ್ದು ಅಕ್ಷಯ್ ಖನ್ನಾ ಅವರ ರೆಹಮಾನ್ ಡಕಾಯಿತ್ ಪಾತ್ರ! ಆದರೆ ಈಗ ಪಾರ್ಟ್ 2 ಟ್ರೇಲರ್ ನೋಡಿದ ರಣವೀರ್ ಫ್ಯಾನ್ಸ್ ಅಂತೂ ಸಖತ್ ಖುಷಿಯಾಗಿದ್ದಾರೆ.
Star Fashion Review 2026: ಸಿಂಪಲ್ ಸಾದಾ ಸೀರೆಯಲ್ಲಿ ಧುರಂಧರ್ ನಟಿ ಸಾರಾ ಅರ್ಜುನ್
ರಣವೀರ್ ಫ್ಯಾನ್ಸ್ ಖುಷಿಗೆ ಕಾರಣವೇನು?
Dhurandhar: The Revenge ಸಿನಿಮಾದಲ್ಲಿ ಅಕ್ಷಯ್ ಖನ್ನಾ ಕಾಣಿಸಿಕೊಳ್ಳುವುದಿಲ್ಲ. 'ಧುರಂಧರ್' ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ಅವರ ಪಾತ್ರವು ಮರಣಹೊಂದಿದೆ. ಇನ್ನು, ಈಗ ರಿಲೀಸ್ ಆಗಿರುವ ಟ್ರೇಲರ್‌ನಲ್ಲಿ ಸಂಪೂರ್ಣ ಗಮನ ರಣವೀರ್ ಸಿಂಗ್ ನೀಡಲಾಗಿದೆ. ಹಮ್ಜಾ ಅಲಿ ಮಜಾರಿ ಎಂಬ ಖಡಕ್ ಪಾತ್ರದ ಜೊತೆಗೆ ಜಸ್ಕಿರತ್ ಸಿಂಗ್ ರಂಗಿ ಎಂಬ ಪಾತ್ರವನ್ನು ಕೂಡ ರಣವೀರ್ ಸಿಂಗ್ ನಿಭಾಯಿಸುತ್ತಿದ್ಧಾರೆ. ಟ್ರೇಲರ್‌ನಲ್ಲಿ ರಣವೀರ್ ಸಿಂಗ್ ಅವರ ತೀವ್ರವಾದ ನಟನೆ, ಪವರ್‌ಫುಲ್ ಸಂಭಾಷಣೆಗಳು ಮತ್ತು ಹೈ-ಎನರ್ಜಿ ಸಾಹಸ ದೃಶ್ಯಗಳು ವೀಕ್ಷಕರನ್ನು ಬೆರಗುಗೊಳಿಸಿದ್ದು, ಅವರ ಪಾತ್ರದ ಬಗ್ಗೆ ಭಾರಿ ಹೈಪ್ ಸೃಷ್ಟಿಯಾಗಿದೆ.
Dhurandhar OTT: ಬ್ಯಾನ್ ಆದ್ರೂ ಪಾಕಿಸ್ತಾನದಲ್ಲಿ ನೆಟ್‌ಫ್ಲಿಕ್ಸ್ ಟ್ರೆಂಡಿಂಗ್‌ನಲ್ಲಿ ಧುರಂಧರ್ ನಂಬರ್ 1!
ರಣವೀರ್ ಸಿಂಗ್ ಅವರು ತಮ್ಮ ಪ್ರಭಾವಶಾಲಿ ಅಭಿನಯದ ಮೂಲಕ Dhurandhar: The Revenge ಚಿತ್ರವನ್ನು ಕೂಡ ಯಶಸ್ವಿಯಾಗಿ ಮುನ್ನಡೆಸಲಿದ್ದಾರೆ ಎಂದು ಅಭಿಮಾನಿಗಳು ಭಾವಿಸುತ್ತಿದ್ದಾರೆ. ಮೊದಲ ಭಾಗದಲ್ಲಿ ಅಕ್ಷಯ್ ಖನ್ನಾ ಅವರ ಪಾತ್ರ ನೆನಪಿನಲ್ಲಿ ಉಳಿಯುವಂತಿದ್ದರೂ, ಎರಡನೇ ಭಾಗವು ಸಂಪೂರ್ಣವಾಗಿ ರಣವೀರ್ ಸಿಂಗ್ ಆವರಿಸಿಕೊಳ್ಳುವುದು ಪಕ್ಕಾ ಎನ್ನಲಾಗಿದೆ. ಈಗಾಗಲೇ ಅದ್ಭುತವಾಗಿ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಆಗುತ್ತಿದ್ದು, ಮಾರ್ಚ್ 19ರಂದು ಚಿತ್ರಮಂದಿರಗಳಲ್ಲಿ ರಣವೀರ್ ಸಿಂಗ್ ಮ್ಯಾಜಿಕ್ ಸೃಷ್ಟಿಸೋದು ಪಕ್ಕಾ ಎನ್ನಲಾಗಿದೆ.