ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Ranveer Singh: 18 ದಿನಗಳಿಗೆ 1600+ ಕೋಟಿ ರೂ. ಕಲೆಕ್ಷನ್‌; ʻಧುರಂಧರ್‌ 2ʼ ಆರ್ಭಟಕ್ಕೆ ದಾಖಲೆಗಳೆಲ್ಲಾ ಪುಡಿ ಪುಡಿ!

ಧುರಂಧರ್ 2 ಸಿನಿಮಾ ಭಾರತೀಯ ಚಿತ್ರರಂಗದಲ್ಲಿ ಹೊಸ ಇತಿಹಾಸ ಬರೆದಿದೆ. ಕೇವಲ 18 ದಿನಗಳಲ್ಲಿ ವಿಶ್ವಾದ್ಯಂತ 1,622 ಕೋಟಿ ರೂಪಾಯಿ ಗಳಿಸುವ ಮೂಲಕ ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಭಾರತದ ಮಾರುಕಟ್ಟೆಯೊಂದರಲ್ಲೇ 1,000 ಕೋಟಿ ರೂ. ಗಡಿ ದಾಟಿದ ಮೊದಲ ಹಿಂದಿ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಧುರಂಧರ್ 2 ಚಿತ್ರವು ಕಳೆದ 18 ದಿನಗಳಲ್ಲಿ ಎಷ್ಟು ಗಳಿಕೆ ಮಾಡಿದೆ ಎಂಬುದರ ಮಾಹಿತಿಯನ್ನು ಜಿಯೋ ಸ್ಟುಡಿಯೋಸ್‌ ಸಂಸ್ಥೆಯು ಅಧಿಕೃತವಾಗಿ ಹಂಚಿಕೊಂಡಿದೆ. ವಿಶ್ವಾದ್ಯಂತ ಈ ಸಿನಿಮಾವು 1,622 ಕೋಟಿ ರೂಪಾಯಿ ಗಳಿಕೆ ಮಾಡಿದ್ದು, ಹೊಸ ದಾಖಲೆಯಾಗಿದೆ. ಈ ಚಿತ್ರವು ವಿದೇಶಗಳಲ್ಲಿ 394 ಕೋಟಿ ರೂ. ಗಳಿಸಿದ್ದರೆ, ಭಾರತದ ದೇಶೀಯ ಮಾರುಕಟ್ಟೆಯಲ್ಲಿ ಒಟ್ಟು 1,228 ಕೋಟಿ ರೂ. (ಗ್ರಾಸ್) ಸಂಗ್ರಹವಾಗಿದೆ. ಒಟ್ಟಾರೆ ಈ ಮೊತ್ತ ಈಗ 1622 ಕೋಟಿ ರೂ. ತಲುಪಿದೆ.

ಮೂರನೇ ವಾರವೂ ತಗ್ಗಲಿಲ್ಲ ಗಳಿಕೆ

'ಧುರಂಧರ್: ದಿ ರಿವೆಂಜ್' ಬಿಡುಗಡೆ 18ನೇ ದಿನದಂದು, ಅಂದರೆ, ಏ.5ರಂದು ಭಾರತದಾದ್ಯಂತ 14,229 ಪ್ರದರ್ಶನಗಳಿಂದ ಒಟ್ಟು 28.75 ಕೋಟಿ ರೂ. ಗಳಿಸಿದೆ. ಇನ್ನೂ ಭಾರತದಲ್ಲೇ 1000 ಕೋಟಿ ರೂ. ಗಳಿಸಿರುವುದು ಧುರಂಧರ್‌ 2 ಸಿನಿಮಾದ ಹೊಸ ದಾಖಲೆಯಾಗಿದೆ. ಭಾರತದಲ್ಲಿಯೇ ಇಷ್ಟೊಂದು ದೊಡ್ಡಮೊತ್ತವನ್ನು ಯಾವ ಹಿಂದಿ ಸಿನಿಮಾವೂ ಗಳಿಸಿರಲಿಲ್ಲ.

Dhurandhar 2: ‘ಬಾಹುಬಲಿ 2’ ದಾಖಲೆ ಮುರಿದ ‘ಧುರಂಧರ್ 2’ ; ಕಲೆಕ್ಷನ್‌ ಏನು?

2026ರಲ್ಲಿ ಭಾರತದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರ

ಧುರಂಧರ್ ಮೊದಲ ಭಾಗವು ಭಾರತದಲ್ಲಿ ತನ್ನ ಜೀವಮಾನದ ಗಳಿಕೆಯಲ್ಲಿ ಒಟ್ಟು 800 ಕೋಟಿ ರೂ. ಸಂಗ್ರಹಿಸಿತ್ತು. ಈಗ 'ಧುರಂಧರ್ 2' ಆ ದಾಖಲೆಯನ್ನ ಮುರಿದು ಹಾಕಿದೆ. ಅಷ್ಟೇ ಅಲ್ಲದೆ, 2026ರ ಭಾರತದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರವಾಗಿ 'ಧುರಂಧರ್ 2' ಹೊರಹೊಮ್ಮಿದೆ. 2026ರ ಅತಿ ಹೆಚ್ಚು ಗಳಿಕೆ ಮಾಡಿದ ಟಾಪ್ 10 ಚಿತ್ರಗಳ ಪಟ್ಟಿ ಇಲ್ಲಿದೆ.

ಧುರಂಧರ್ 2: ದಿ ರಿವೆಂಜ್: 1,013.77 ಕೋಟಿ ರೂ.

ಬಾರ್ಡರ್ 2: 329.43 ಕೋಟಿ ರೂ.

ಮನ ಶಂಕರವರಪ್ರಸಾದ್ ಗಾರು: 218.44 ಕೋಟಿ ರೂ.

ದಿ ರಾಜಾ ಸಾಬ್: 146.04 ಕೋಟಿ ರೂ.

ಓ ರೋಮಿಯೋ: 72.94 ಕೋಟಿ ರೂ.

ಉಸ್ತಾದ್ ಭಗತ್ ಸಿಂಗ್: 71.66 ಕೋಟಿ ರೂ.

ತಾಯಿ ಕಿಳವಿ: 62.21 ಕೋಟಿ ರೂ.

ಅನಗನಗ ಒಕ ರಾಜು: 53.94 ಕೋಟಿ ರೂ.

ಪರಾಶಕ್ತಿ: 52.50 ಕೋಟಿ ರೂ.

ದಿ ಕೇರಳ ಸ್ಟೋರಿ 2: ಗೋಸ್ ಬಿಯಾಂಡ್: 52.68 ಕೋಟಿ ರೂ.

(ಇದು ಭಾರತದಲ್ಲಿನ ಒಟ್ಟಾರೆ ಗಳಿಕೆಯಾಗಿದ್ದು, ವಿದೇಶದ ಗಳಿಕೆಯನ್ನು ಸೇರಿಸಿಲ್ಲ)

Dhurandhar 2: 'ಧುರಂಧರ್ 2' ಚಿತ್ರದ ಶೂಟಿಂಗ್‌ ವೇಳೆ ಗರ್ಭಿಣಿ ದೀಪಿಕಾರನ್ನ ಹೇಗೆ ಕೇರ್‌ ಮಾಡಿದ್ರು ಗೊತ್ತಾ ರಣವೀರ್‌?

ಧುರಂಧರ್‌ 2 ಈಗ ಭಾರತದ ಟಾಪ್ ‌4ನೇ ಸಿನಿಮಾ

ಸಾರ್ವಕಾಲಿಕವಾಗಿ ಅತಿ ಹೆಚ್ಚು ಗಳಿಕೆ ಮಾಡಿದ ಭಾರತೀಯ ಚಲನಚಿತ್ರಗಳ ಪಟ್ಟಿಯಲ್ಲಿ ʻಧುರಂಧರ್‌ 2ʼ ಸಿನಿಮಾಕ್ಕೆ ಈಗ 4ನೇ ಸ್ಥಾನ ಸಿಕ್ಕಿದೆ. ಮೊದಲ ಸ್ಥಾನದಲ್ಲಿ ʻದಂಗಲ್‌ʼ ಚಿತ್ರವಿದೆ. ಇಲ್ಲಿದೆ ನೋಡಿ ಆ ಕುರಿತ ಪಟ್ಟಿ.

ದಂಗಲ್ - 2,070 ಕೋಟಿ ರೂ.

ಬಾಹುಬಲಿ 2 ದಿ ಕನ್ ಕ್ಲೂಷನ್ - 1,810.60 ಕೋಟಿ ರೂ.

ಪುಷ್ಪ 2 ದಿ ರೂಲ್ - 1,742.10 ಕೋಟಿ ರೂ.

ಧುರಂಧರ್ 2 - 1,622 ಕೋಟಿ ರೂ. (ಇನ್ನೂ ಪ್ರದರ್ಶನ ಕಾಣುತ್ತಿದೆ)

ಧುರಂಧರ್ 1 - 1,354.84 ಕೋಟಿ ರೂ.

ಆರ್.ಆರ್.ಆರ್ (RRR) - 1,230 ಕೋಟಿ ರೂ.

ಕೆ.ಜಿ.ಎಫ್ ಚಾಪ್ಟರ್ 2 - 1,215 ಕೋಟಿ ರೂ.

ಜವಾನ್ - 1,160 ಕೋಟಿ ರೂ.

ಪಠಾಣ್ - 1,055 ಕೋಟಿ ರೂ.

ಕಲ್ಕಿ 2898 ಎಡಿ - 1,042.25 ಕೋಟಿ ರೂ.