ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿರುವ ʻಧುರಂಧರ್ 2ʼ ಚಿತ್ರವು ಹಲವು ದಾಖಲೆಗಳನ್ನು ಉಡೀಸ್ ಮಾಡುತ್ತಿದೆ. ಈವರೆಗೂ ಯಾವ ಬಾಲಿವುಡ್ ಸಿನಿಮಾವೂ ಮಾಡಿರದಂತಹ ಗಳಿಕೆಯನ್ನು ʻಧುರಂಧರ್ 2ʼ ಸಿನಿಮಾ ಮಾಡುತ್ತಿದೆ. ರಣವೀರ್ ಸಿಂಗ್ ಕರಿಯರ್‌ನಲ್ಲೇ ಹೊಸ ಇತಿಹಾಸವನ್ನು ಸೃಷ್ಟಿ ಮಾಡಿದೆ. ʻಧುರಂಧರ್ 2ʼ ಸಿನಿಮಾವು ದೊಡ್ಡಮಟ್ಟದಲ್ಲಿ ಹಣವನ್ನು ಬಾಚಿಕೊಳ್ಳುತ್ತಿದ್ದರೂ, ನಿರ್ಮಾಪಕರು ಮಾತ್ರ ಅಧಿಕೃತ ಕಲೆಕ್ಷನ್ ಮಾಹಿತಿಯನ್ನ ನೀಡಿರಲಿಲ್ಲ. ಇದೀಗ ಅದು ಕೂಡ ಹೊರಬಿದ್ದಿದೆ.
ನಾಲ್ಕು ದಿನಗಳಿಗೆ 761 ಕೋಟಿ ರೂ. ಕಲೆಕ್ಷನ್
ಸಾಮಾನ್ಯವಾಗಿ ಯಾವುದೇ ಪ್ಯಾನ್ ಇಂಡಿಯಾ ಸಿನಿಮಾ ತೆರೆಕಂಡರೂ, ಮೊದಲ ದಿನದಿಂದಲೇ ಅಧಿಕೃತ ಗಳಿಕೆಯನ್ನು ಚಿತ್ರತಂಡ ಹಂಚಿಕೊಳ್ಳುತ್ತಿರುತ್ತದೆ. ಆದರೆ ಧುರಂಧರ್ 2 ತೆರೆಕಂಡು ಐದು ದಿನಗಳಾದರೂ ನಿರ್ಮಾಪಕರು ಮಾತ್ರ ಕಲೆಕ್ಷನ್ ಬಗ್ಗೆ ಗಪ್ ಚುಪ್ ಆಗಿದ್ದರು. ಆದರೆ ಇದೀಗ ನಾಲ್ಕು ದಿನಗಳಿಗೆ ಆಗಿರುವ ಒಟ್ಟಾರೆ ಗಳಿಕೆಯ ಇಂಚಿಂಚೂ ಮಾಹಿತಿಯನ್ನು ತಿಳಿಸಿದ್ದಾರೆ. ಕಳೆದ ನಾಲ್ಕು ದಿನಗಳಲ್ಲಿ ವಿಶ್ವಾದ್ಯಂತ ಈ ಸಿನಿಮಾವು 761 ಕೋಟಿ ರೂ. ಹಣವನ್ನು ಬಾಚಿಕೊಂಡಿದೆ ಎಂದು ಅಧಿಕೃತವಾಗಿ ಚಿತ್ರತಂಡ ತಿಳಿಸಿದೆ. ಈ ಪ್ರಮಾಣದ ಗಳಿಕೆಯನ್ನು ಈ ಹಿಂದೆ ಭಾರತದ ಯಾವ ಸಿನಿಮಾವೂ ಮಾಡಿರಲಿಲ್ಲ ಎಂಬುದು ವಿಶೇಷ.
Dhurandhar 2 Review: ಆದಿತ್ಯ ಧರ್ ಸೃಷ್ಟಿಸಿದ ಧುರಂಧರ್‌ನ ರಿವೆಂಜ್ ಹಾದಿಯಲ್ಲಿ ಬೆಂಕಿಯ ಬೇಲಿಗಳು!
ಈವರೆಗೂ ಭಾರತದಲ್ಲಿ 550 ಕೋಟಿ ರೂ. ಗಳಿಕೆಯಾಗಿದ್ದರೆ, ವಿದೇಶದಿಂದ 211 ಕೋಟಿ ರೂ. ಹರಿದು ಬಂದಿದೆ. ಭಾರತದಲ್ಲಿ ಈ ಚಿತ್ರವು ಮೊದಲ ದಿನ ಪೇಯ್ಡ್ ಪ್ರಿವ್ಯೂಗಳ ಗಳಿಕೆಯೂ ಸೇರಿದಂತೆ 145 ಕೋಟಿ ರೂ. ಬಾಚಿಕೊಂಡಿದೆ. ಎರಡನೇ ದಿನ 83 ಕೋಟಿ ರೂ. ಬಂದರೆ, ಮೂರನೇ ದಿನ 117 ಕೋಟಿ ರೂ. ಹಣ ನಿರ್ಮಾಪಕರಿಗೆ ಸಿಕ್ಕಿದೆ. ನಾಲ್ಕನೇ ದಿನ 121 ಕೋಟಿ ರೂ. ಗಳಿಕೆ ಆಗಿದೆ. 4 ದಿನಗಳಲ್ಲಿ ಬಾಕ್ಸ್ ಆಫೀಸ್‌ನಲ್ಲಿ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರ ಎಂಬ ಖ್ಯಾತಿಗೆ ಧುರಂಧರ್ 2 ಪಾತ್ರವಾಗಿದೆ.
Dhurandhar 2 Twitter Review: ಮಾಸ್ಟರ್ ಪೀಸ್ ಪಕ್ಕಾ! ಯಶಸ್ಸು ಖಚಿತ; ಧುರಂಧರ್ 2 ಸಿನಿಮಾ ನೋಡಿದವರು ಏನಂದ್ರು?
ನಿರ್ಮಾಪಕರು ಹಂಚಿಕೊಂಡ ಅಧಿಕೃತ ಮಾಹಿತಿ
ಶೀಘ್ರದಲ್ಲೇ ಸಾವಿರ ಕೋಟಿ ಪಕ್ಕಾ!
ಬರೀ ನಾಲ್ಕೇ ದಿನಗಳಲ್ಲಿ 761 ಕೋಟಿ ರೂ. ಬಾಚಿಕೊಂಡಿರುವ ಧುರಂಧರ್ 2 ಚಿತ್ರಕ್ಕೆ ಸಾವಿರ ಕೋಟಿ ಗಡಿ ದಾಟಲು ಇನ್ನೂ 240 ಕೋಟಿ ರೂ. ಕಮ್ಮಿ ಇದೆ. ಮೂರು ದಿನಗಳಲ್ಲಿ 240 ಕೋಟಿ ರೂ. ಕಲೆಕ್ಷನ್ ಆಗಿಬಿಟ್ಟರೆ, ಒಂದೇ ವಾರದಲ್ಲಿ 1 ಸಾವಿರ ಕೋಟಿ ಕ್ಲಬ್ ಸೇರಿದ ಮೊದಲ ಸಿನಿಮಾ ಎಂಬ ಖ್ಯಾತಿಯೂ ಧುರಂಧರ್ 2 ಪಾತ್ರವಾಗಲಿದೆ.
ರಣವೀರ್ ಸಿಂಗ್ ನಟನೆಯ ಈ ಸಿನಿಮಾಕ್ಕೆ ಆದಿತ್ಯ ಧರ್ ನಿರ್ದೇಶನ ಮಾಡಿದ್ದು, ಸಾರಾ ಅರ್ಜುನ್, ಸಂಜಯ್ ದತ್, ಅರ್ಜುನ್ ರಾಮ್‌ಪಾಲ್, ರಾಕೇಶ್ ಬೇಡಿ ಮುಂತಾದವರು ನಟಿಸಿದ್ದಾರೆ.